Tag: nda

  • ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    – ಎನ್‌ಡಿಎ, ಇಂಡಿಯಾ ಒಕ್ಕೂಟಗಳ ನಡುವೆ ವಾಕ್ಸಮರ, ಜಟಾಪಟಿಗೆ ವೇದಿಕೆ ಸಜ್ಜು

    ನವದೆಹಲಿ: ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ (Parliament Mansoon Session) ಆರಂಭವಾಗಲಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ನಡೆಯಲಿರುವ ಈ ಸಂಸತ್ ಅಧಿವೇಶನ ರಾಜಕೀಯ ಸಭೆಗೆ ವೇದಿಕೆಯಾಗಲಿದೆ.

    ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅಧಿವೇಶನವು ರಾಜಕೀಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇಂಡಿಯಾ ಒಕ್ಕೂಟದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆರ್‌ಜೆಡಿ, ಮತ್ತು ಟಿಎಂಸಿ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಆಪರೇಷನ್ ಸಿಂಧೂರ, ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತ, ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಸ್ಥಿಕೆಯ ಬಗ್ಗೆ ಆಡಳಿತ ಪಕ್ಷವನ್ನು ತೀವ್ರವಾಗಿ ಪ್ರಶ್ನಿಸಲು ಸಿದ್ಧವಾಗಿವೆ. ಇದರ ಜೊತೆಗೆ, ಪಹಲ್ಗಾಮ್‌ನ ಭಯೋತ್ಪಾದಕ ದಾಳಿ ಮತ್ತು ವಿದೇಶಾಂಗ ನೀತಿಯಂತಹ ವಿಷಯಗಳನ್ನು ಎತ್ತಿಹಿಡಿಯಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು

    ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಈ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದು, ತನ್ನ ಸಾಧನೆಗಳನ್ನು ಮಂಡಿಸಿ ವಿರೋಧ ಪಕ್ಷಗಳ ವಿಮರ್ಶೆಗೆ ಉತ್ತರ ನೀಡಲು ಕಾರ್ಯತಂತ್ರ ರೂಪಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಎಂಟು ಮಸೂದೆಗಳನ್ನು ಮಂಡಿಸುವ ಲೆಕ್ಕಚಾರದಲ್ಲಿದೆ. ಆದಾಯ ತೆರಿಗೆ ಮಸೂದೆ 2025 ಕೂಡ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಇದನ್ನು ಫೆಬ್ರವರಿಯಲ್ಲಿ ಲೋಕಸಭೆಯ ಆಯ್ದ ಸಮಿತಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಆಪರೇಷನ್‌ ಸಿಂಧೂರ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ: ಕಿರಣ್‌ ರಿಜಿಜು

    ಮಣಿಪುರದಲ್ಲಿ ಫೆಬ್ರವರಿ 13ರಂದು ಜಾರಿಗೊಂಡ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆಗೆ ಸಂಸತ್‌ನ ಅನುಮೋದನೆಯನ್ನು ಸರ್ಕಾರ ಕೋರಲಿದೆ. ಈ ವಿಷಯವು ವಿರೋಧ ಪಕ್ಷಗಳಿಂದ ತೀವ್ರ ಚರ್ಚೆಗೆ ಕಾರಣವಾಗಲಿದೆ. ಸಂಸತ್‌ನ ಈ ಮುಂಗಾರು ಅಧಿವೇಶನವು ಒಟ್ಟು 21 ಕಲಾಪಗಳನ್ನು ಒಳಗೊಂಡಿದ್ದು, ಆಗಸ್ಟ್ 12ರಿಂದ 18ರವರೆಗೆ ರಕ್ಷಾಬಂಧನ ಮತ್ತು ಸ್ವಾತಂತ್ರ‍್ಯ ದಿನಾಚರಣೆಗಾಗಿ ವಿರಾಮ ಘೋಷಿಸಲಾಗಿದೆ. ಈ ಅವಧಿಯಲ್ಲಿ, ಗೋವಾದ ಶಾಸಕಾಂಗ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2024, ವಾಣಿಜ್ಯ ನೌಕಾಯಾನ ಮಸೂದೆ 2024, ಮತ್ತು ಭಾರತೀಯ ಬಂದರು ಮಸೂದೆ 2025 ಕೂಡ ಲೋಕಸಭೆಯಲ್ಲಿ ಅನುಮೋದನೆಗೆ ಕಾಯುತ್ತಿವೆ. ಇದನ್ನೂ ಓದಿ: ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

    ಪ್ರಮುಖ ಮಸೂದೆಗಳು:
    *ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2025: ರಾಜ್ಯದ ಜಿಎಸ್‌ಟಿ ಕಾನೂನನ್ನು ಕೇಂದ್ರ ಕಾನೂನಿಗೆ ಸಮನ್ವಯಗೊಳಿಸುವ ಗುರಿ.
    *ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025: ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ ಅನುಸರಣೆಯನ್ನು ಸುಧಾರಿಸುವ ಉದ್ದೇಶ.
    *ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ, 2025: ಐಐಎಂ ಗುವಾಹಟಿಯನ್ನು ಐಐಎಂ ಕಾಯ್ದೆಯ ಅಡಿಯಲ್ಲಿ ಔಪಚಾರಿಕವಾಗಿ ಒಳಗೊಳ್ಳುವ ಗುರಿ.
    *ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025: ತೆರಿಗೆ ಕಾನೂನುಗಳ ಸರಳೀಕರಣಕ್ಕೆ ಒತ್ತು.
    *ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ; ಭೂವೈಜ್ಞಾನಿಕ ತಾಣಗಳ ಸಂರಕ್ಷಣೆ.
    *ಕಲ್ಲುಗಣಿ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ: ಗಣಿಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ.
    *ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ: ಕ್ರೀಡಾ ಆಡಳಿತದಲ್ಲಿ ಸುಧಾರಣೆಗೆ ಒತ್ತು.
    *ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ: ಕ್ರೀಡೆಯಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಕ್ರಮ

  • ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ

    ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ

    ನವದೆಹಲಿ: ನರೇಂದ್ರ ಮೋದಿ (PM Modi) ನೇತೃತ್ವದ ಎನ್‌ಡಿಎ ಸರ್ಕಾರವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿ ಇಂದಿಗೆ ಒಂದು ವರ್ಷ ತುಂಬಿದೆ. ಒಂದು ವರ್ಷದ ಅವಧಿಯಲ್ಲಿ ಮೋದಿ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

    ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ನಿರ್ಣಾಯಕ ಗೆಲುವಿನ ನಂತರ 2024ರ ಜೂನ್ 9 ರಂದು ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದನ್ನೂ ಓದಿ: ಭಾರತದ ವಾಯುನೆಲೆಗಳನ್ನು ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ದೃಶ್ಯ ಹಂಚಿಕೊಂಡು ಮತ್ತೆ ಬೆತ್ತಲಾದ ಪಾಕ್‌

    ದೇಶವನ್ನು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಆಗಿ ಪರಿವರ್ತಿಸುವ ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ಪಾತ್ರವನ್ನು ಪ್ರತಿಪಾದಿಸುವತ್ತ ನಿರಂತರ ಗಮನ ಹರಿಸಲಾಗಿದೆ. ಕಾರ್ಯತಂತ್ರದ ಮಿಲಿಟರಿ ಕ್ರಮ ಮತ್ತು ಸಾಮಾಜಿಕ ಕಲ್ಯಾಣ ಸುಧಾರಣೆಗಳಿಂದ ಹಿಡಿದು ಗಮನಾರ್ಹ ಆರ್ಥಿಕ ಪರಿಹಾರ ಮತ್ತು ಪೂರ್ವಭಾವಿ ಜಾಗತಿಕ ರಾಜತಾಂತ್ರಿಕತೆಯವರೆಗೆ ಗಮನ ಕೇಂದ್ರೀಕರಿಸಲಾಗಿದೆ.

    ಮೋದಿ ಸರ್ಕಾರದ 3.0 ರ ಮೊದಲ ವರ್ಷದ ನಿರ್ಣಾಯಕ ಕ್ಷಣಗಳಲ್ಲಿ ಆಪರೇಷನ್ ಸಿಂಧೂರ ಪ್ರಮುಖವಾದ ಬೆಳವಣಿಗೆ. ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ವಿನಾಶಕಾರಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ 2025ರ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳನ್ನು ಭಾರತ ಧ್ವಂಸಗೊಳಿಸಿತು. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಗಳಲ್ಲಿ ಇದು ಒಂದು. ಇದನ್ನೂ ಓದಿ: ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

    ಬ್ರಿಟಿಷ್‌ ಕಾಲದ ಕಾನೂನಿಗೆ ಇತಿಶ್ರಿ ಹಾಡಿ ಹೊಸ ಮೂರು ಕ್ರಿಮಿನಲ್‌ ಕಾನೂನುಗಳ ಪರಿಚಯ, ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆ ಪರಿಚಯ, ಕಾಶ್ಮೀರದಲ್ಲಿ ಐತಿಹಾಸಿಕ ವಿಧಾನಸಭಾ ಚುನಾವಣೆ, ಆಯುಷ್ಮಾನ್‌ ಅಡಿ 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ, ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ಉಗ್ರ ರಾಣಾ ಭಾರತಕ್ಕೆ ಹಸ್ತಾಂತರ, ಆಡಳಿತದ ಪಾರದರ್ಶಕತೆಗೆ ವಕ್ಫ್‌ ತಿದ್ದುಪಡಿ ಕಾಯ್ದೆ, ವಿಶ್ವದಾಖಲೆಯ ಕುಂಭಮೇಳ ಅಭೂತಪೂರ್ವ ಯಶಸ್ಸು ಮೊದಲಾದ ಸುಧಾರಣಾ ಕ್ರಮಗಳೊಂದಿಗೆ ಮೋದಿ ಸರ್ಕಾರ ಗಮನ ಸೆಳೆದಿದೆ.

    12 ಲಕ್ಷದ ತನಕ ಆದಾಯ ತೆರಿಗೆಯಲ್ಲಿ ವಿನಾಯ್ತಿ ನೀಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಲಾಯಿತು. ದೆಹಲಿ, ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ಅಭೂತಪೂರ್ವ ಜಯವನ್ನು ಎನ್‌ಡಿಎ ಮೈತ್ರಿಕೂಟ ಸಾಧಿಸಿತು.

  • ಮಣಿಪುರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು – 44 ಶಾಸಕರ ಬೆಂಬಲವಿದೆ ಎಂದ ಎನ್‌ಡಿಎ

    ಮಣಿಪುರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು – 44 ಶಾಸಕರ ಬೆಂಬಲವಿದೆ ಎಂದ ಎನ್‌ಡಿಎ

    – ಬಿಜೆಪಿಯ 8 ಶಾಸಕರು ಸೇರಿ 10 ಎನ್‌ಡಿಎ MLAಗಳಿಂದ ರಾಜ್ಯಪಾಲರ ಭೇಟಿ

    ಇಂಪಾಲ್: ಮಣಿಪುರದಲ್ಲಿ (Manipur) ಹೊಸ ಸರ್ಕಾರ ರಚಿಸಲು 44 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ ತಿಳಿಸಿದ್ದಾರೆ.

    ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ (Thockchom Radheshyam Singh) ಸೇರಿದಂತೆ 10 ಶಾಸಕರು ಇಂದು ರಾಜಭವನಕ್ಕೆ ಭೇಟಿ ನೀಡಿ, ಸರ್ಕಾರ ರಚನೆ ಕುರಿತು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ (Ajay Kumar Bhalla) ಅವರೊಂದಿಗೆ ಚರ್ಚಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವಸೂಲಿ ಮಾಡೋ ಉದ್ದೇಶ: ನಿಖಿಲ್

    ಬಳಿಕ ಮಾತನಾಡಿದ ರಾಧೇಶ್ಯಾಮ್, ಜನರ ಇಚ್ಛೆಯಂತೆ ಹೊಸ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಿದೆ. ಇದಕ್ಕೆ 44 ಶಾಸಕರ ಬೆಂಬಲ ಇದೆ. ನಾವು ಇದನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಸರ್ಕಾರ ರಚನೆಯ ಸಮಸ್ಯೆಗೆ ಯಾವ ಪರಿಹಾರಗಳಿವೆ ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ. ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಾರ್ಕಿಂಗ್‌ ವಿಚಾರಕ್ಕೆ ಕಿರಿಕ್‌ – ನೆರೆಮನೆಯವನ ಮೂಗು ಕಚ್ಚಿದ ಭೂಪ!

    ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಕೇಂದ್ರ ನಾಯಕತ್ವ ನಿರ್ಧಾರ ತೆಗೆದುಕೊಳ್ಳಲಿದೆ. ವಿಧಾನಸಭಾಧ್ಯಕ್ಷ ಸತ್ಯಬ್ರತಾ ಅವರು 44 ಶಾಸಕರನ್ನು ಒಟ್ಟಿಗೆ ಕೂರಿಸಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸರ್ಕಾರ ರಚನೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ ಎಂದರು. ಇದನ್ನೂ ಓದಿ: ರಾಯಚೂರು | ಭಾವಚಿತ್ರ ಸುಟ್ಟು ಕಮಲ್ ಹಾಸನ್ ವಿರುದ್ಧ ಆಕ್ರೋಶ

  • ಎನ್‌ಡಿಎ ಅವಧಿಯಲ್ಲೇ ತಮಿಳುನಾಡಿಗೆ 3 ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ – ಮೋದಿ

    ಎನ್‌ಡಿಎ ಅವಧಿಯಲ್ಲೇ ತಮಿಳುನಾಡಿಗೆ 3 ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ – ಮೋದಿ

    – ತಮಿಳುನಾಡಿನ ಮೂಲಸೌಕರ್ಯ ಕೇಂದ್ರದ ಪ್ರಮುಖ ಆದ್ಯತೆ
    – ರಾಜ್ಯದಾದ್ಯಂತ 77 ರೈಲು ನಿಲ್ದಾಣ ಆಧುನೀಕರಿಸಲು ಒತ್ತು

    ಚೆನ್ನೈ: 2014ರ ನಂತರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ತಮಿಳುನಾಡಿಗೆ (Tamil Nadu) ಮೂರು ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ. ಆದರೂ ಕೆಲವರು ಸಮರ್ಥನೆಯಿಲ್ಲದೇ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿ ಕಾರಿದರು.

    ತಮಿಳುನಾಡಿನ ರಾಮೇಶ್ವರಂನಲ್ಲಿ ʻಪಂಬನ್ʼ ದೇಶದ ಮೊದಲ ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌ ಲೋಕಾರ್ಪಣೆಗೊಳಿಸಿದ್ರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಇತರೇ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ಎಂ.ಕೆ ಸ್ಟಾಲಿನ್‌ (MK Stalin) ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 2014ರಿಂದ ತಮಿಳುನಾಡಿಗೆ ಕೇಂದ್ರದ ಅನುದಾನ 3 ಪಟ್ಟು ಹೆಚ್ಚಾಗಿ ಸಿಕ್ಕಿದೆ. ಆದರೂ ಕೆಲವರಿಗೆ ಯಾವಾಗಲೂ ಅಳುವ ಅಭ್ಯಾಸ ಇರುತ್ತದೆ ಎಂದು ಕುಟುಕಿದರು. ಇದನ್ನೂ ಓದಿ: PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ತಮಿಳುನಾಡಿನ ಮೂಲಸೌಕರ್ಯವು (Infrastructure of Tamil Nadu )ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಳೆದ ದಶಕಗಳಲ್ಲಿ ರಾಜ್ಯದ ರೈಲ್ವೆ ಬಜೆಟ್‌ 7 ಪಟ್ಟು ಹೆಚ್ಚಾಗಿದೆ. ಇಂತಹ ಗಮನಾರ್ಹ ಬೆಳವಣಿಗೆ ಆಗಿದ್ದರೂ ಕೆಲವರು ಸಮರ್ಥನೆಗಳಿಲ್ಲದೇ ದೂರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್‌ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ

    ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪ್ರಯಾಣದಲ್ಲಿ ತಮಿಳುನಾಡು ನಿರ್ಣಾಯಕ ಸ್ಥಾನವನ್ನು ಹೊಂದಿದೆ. ರಾಜ್ಯವು ಸಂಪೂರ್ಣ ಸಾಮರ್ಥ್ಯವನ್ನು ಸಾಬೀತುಪಡಿಸಿದಂತೆ ದೇಶದ ಒಟ್ಟಾರೆ ಅಭಿವೃದ್ಧಿಯ ಪ್ರಗತಿ ಮತ್ತಷ್ಟು ವೇಗವಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ತಮಿಳುನಾಡಿಗೆ ಆದ್ಯತೆ ನೀಡುತ್ತದೆ. 2014ಕ್ಕಿಂತ ಹಿಂದಿನ ಅವಧಿಗೆ ಹೋಲಿಸಿದ್ರೆ ತಮಿಳುನಾಡಿಗೆ ಮೂರು ಪಟ್ಟು ಹೆಚ್ಚು ಅನುದಾನ ಎನ್‌ಡಿಎ ಅವಧಿಯಲ್ಲಿ ಹಂಚಿಕೆಯಾಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?

    2014ಕ್ಕಿಂತ ಮೊದಲು ತಮಿಳುನಾಡಿಗೆ ವಾರ್ಷಿಕ ಕೇವಲ 900 ಕೋಟಿ ರೂ.ಗಳ ಹಂಚಿಕೆಯಾಗಿತ್ತು, ಆದರೆ ಈ ವರ್ಷ ರಾಜ್ಯದ ರೈಲ್ವೆ ಬಜೆಟ್ 6,000 ಕೋಟಿ ರೂ.ಗಳನ್ನು ಮೀರಿದೆ. ಕೇಂದ್ರ ಸರ್ಕಾರವು ರಾಮೇಶ್ವರಂ ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌ ಸೇರಿದಂತೆ ತಮಿಳುನಾಡಿನಾದ್ಯಂತ 77 ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಆದ್ಯತೆ ನೀಡಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

  • ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    – ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಬಡವರಿಗೆ ಆಗೋ ಪ್ರಯೋಜನಗಳೇನು?
    – ಪರ-ವಿರೋಧದ ಚರ್ಚೆ ಏನು?

    ದೇಶಾದ್ಯಂತ ವಕ್ಫ್ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರವು ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು ಎಂದಿದೆ. ಸುದೀರ್ಘ ಚರ್ಚೆ, ವಾಕ್ಸಮರದ ನಡುವೆ ಮಸೂದೆ ಅಂಗೀಕಾರಗೊಂಡಿದೆ. ಸಂಸತ್‌ನ ಹೊರಗೂ ವಕ್ಫ್ ಬಗೆಗಿನ ಪರ-ವಿರೋಧದ ಚರ್ಚೆ ಜೋರಾಗಿದೆ. ಕೇಂದ್ರದ ಈ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮುಸ್ಲಿಂ ಸಂಘಟನೆಗಳಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಬೆಂಬಲ ಸೂಚಿಸಿವೆ.

    ತಿದ್ದುಪಡಿಯಾದ ವಕ್ಫ್ ಕಾಯ್ದೆಯು ಹಿಂದಿನ ಕಾಯ್ದೆಯ ನ್ಯೂನತೆಗಳನ್ನು ಸರಿಪಡಿಸುವುದು, ನೋಂದಣಿ ಪ್ರಕ್ರಿಯೆ ಸುಧಾರಿಸುವುದು, ವಕ್ಫ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ, ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು, ಬಡವರ ಹಿತಕ್ಕಾಗಿ ಮಹತ್ವದ ಬದಲಾವಣೆ ತರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ. ಇದು ಅಸಾಂವಿಧಾನಿಕ, ಮುಸ್ಲಿಮರ ಹಕ್ಕು ಕಸಿಯುವ ಯತ್ನ, ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಟೀಕಿಸಿವೆ.

    ಏನಿದು ವಕ್ಫ್ ವಿವಾದ? ಹೊಸ ತಿದ್ದುಪಡಿ ಮಸೂದೆಯಲ್ಲೇನಿದೆ? ಕೇಂದ್ರದ ಸಮರ್ಥನೆ ಏನು? ವಿಪಕ್ಷಗಳ ವಿರೋಧ ಯಾಕೆ? ಸಂಸತ್‌ನಲ್ಲಿ ಮಸೂದೆ ಅಂಗೀಕಾರವಾದರೆ ಆಗುವ ಬದಲಾವಣೆಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ವಕ್ಫ್ ಎಂದರೇನು?
    ವಕ್ಫ್ ಎನ್ನುವುದು ಮುಸ್ಲಿಮರು ಆಸ್ತಿ ರೂಪದಲ್ಲಿ ನೀಡುವ ದತ್ತಿ ಅಥವಾ ಧಾರ್ಮಿಕ ದೇಣಿಗೆಯಾಗಿದೆ. ಮಸೀದಿ, ದರ್ಗಾ, ಸ್ಮಶಾನಗಳು, ಆಶ್ರಯ ಮನೆಗಳು, ಶಿಕ್ಷಣ ಸಂಸ್ಥೆಗಳು ಮುಂತಾದ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಸಮರ್ಪಿಸಲಾದ ಆಸ್ತಿಯಾಗಿದೆ. 1954ರಲ್ಲಿ ವಕ್ಫ್ ಕಾಯ್ದೆ ಜಾರಿಗೆ ಬಂದಿತು. ಈ ಕಾನೂನಿನ ಅನ್ವಯ, ಇಸ್ಲಾಂ ಅನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕಾಗಿ ಆಸ್ತಿಯನ್ನು ದಾನ ಮಾಡಿದರೆ, ಅದು ವಕ್ಫ್ ಆಸ್ತಿಯಾಗಿ ವಕ್ಫ್ ಮಂಡಳಿಯ ಸ್ವಾಧೀನಕ್ಕೆ ಒಳಪಡುತ್ತದೆ. ವಕ್ಫ್ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸವೋಚ್ಛ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿದೆ.

    ವಕ್ಫ್ ಆಸ್ತಿ ಆಗುವುದು ಹೇಗೆ?
    ಪತ್ರ ಅಥವಾ ಉಪಕರಣದ ಮೂಲಕ ಆಸ್ತಿಯನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಬಳಸಿದರೆ ವಕ್ಫ್ ಆಗಬಹುದು. ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವ ಮುಸ್ಲಿಮೇತರನು ಕೂಡ ವಕ್ಫ್ ರಚಿಸಬಹುದು. ಆದರೆ, ವಕ್ಫ್ ಅನ್ನು ರಚಿಸುವ ಉದ್ದೇಶ ಇಸ್ಲಾಮಿಕ್ ಆಗಿರಬೇಕು. ಆಸ್ತಿಯನ್ನು ವಕ್ಫ್ ಎಂದು ಗೊತ್ತುಪಡಿಸಿದರೆ, ಅದನ್ನು ಬೇರೆ ಕಡೆ ವರ್ಗಾಯಿಸಲು ಸಾಧ್ಯವಿಲ್ಲ. ದೇವರ ಹೆಸರಲ್ಲಿ ದತ್ತಿ ಕಾರ್ಯವಾಗಿ ಶಾಶ್ವತವಾಗಿ ಉಳಿಯುತ್ತದೆ. 1955ರ ಕಾಯ್ದೆ ಅಡಿಯಲ್ಲಿ ಸರ್ವೇ ಕಮಿಷನರ್ ಸ್ಥಳೀಯ ತನಿಖೆಯನ್ನು ನಡೆಸುತ್ತಾರೆ. ಸಾಕ್ಷಿಗಳನ್ನು ಕರೆಯುವುದು, ಸಾರ್ವಜನಿಕ ದಾಖಲೆಗಳನ್ನು ಕೇಳುವುದನ್ನು ಇದು ಒಳಗೊಂಡಿರುತ್ತದೆ. ಬಳಿಕ ವಕ್ಫ್ ಎಂದು ಘೋಷಿಸಲಾದ ಎಲ್ಲಾ ಆಸ್ತಿಗಳನ್ನು ಪಟ್ಟಿ ಮಾಡುತ್ತಾರೆ.

    ವಕ್ಫ್ ಆಸ್ತಿ ಎಷ್ಟಿದೆ?
    ಭಾರತದಲ್ಲಿ ಒಟ್ಟು 8.72 ಲಕ್ಷ ವಕ್ಫ್ ಆಸ್ತಿಗಳಿವೆ. 8 ಲಕ್ಷ ಎಕರೆ ವಕ್ಫ್ ಆಸ್ತಿ ವಿಸ್ತೀರ್ಣ ಆಗಿದೆ. ಆಸ್ತಿಯ ಅಂದಾಜು ಮೌಲ್ಯ 1 ಲಕ್ಷ ಕೋಟಿ ರೂ.. ಆಸ್ತಿಯಲ್ಲಿ ಒಟ್ಟು 1,50,569 ಸ್ಮಶಾನಗಳಿವೆ. 1,19,200 ಮಸೀದಿಗಳಿವೆ. 1,13,187 ಅಂಗಡಿ ಮತ್ತು 92,505 ಮನೆಗಳಿವೆ. 1,40,788 ಕೃಷಿ ಭೂಮಿಗಳಿವೆ. ವಕ್ಫ್‌ ಆಸ್ತಿಯ ವ್ಯಾಪ್ತಿಯಲ್ಲಿ 33,492 ಧಾರ್ಮಿಕ ಸ್ಥಳಗಳಿವೆ. ದೇಶದಲ್ಲಿ 32 ವಕ್ಫ್ ಮಂಡಳಿಗಳಿವೆ.

    ವಕ್ಫ್ ಕಾಯ್ದೆಗೆ ಎಷ್ಟು ತಿದ್ದುಪಡಿಯಾಗಿವೆ?
    1995ರಲ್ಲಿ ವಕ್ಫ್ ಕಾಯ್ದೆಗೆ ಮೊದಲ ತಿದ್ದುಪಡಿ ಮಾಡಲಾಯಿತು. 2013ರಲ್ಲಿ ಕಾಯ್ದೆಗೆ 2ನೇ ತಿದ್ದುಪಡಿ ತರಲಾಯಿತು. 2024ರಲ್ಲಿ 2 ಬಾರಿ ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಈಗ ಹೊಸ ಮಸೂದೆಯಲ್ಲಿ 44 ತಿದ್ದುಪಡಿಗಳಿವೆ.

    ಹೊಸ ಮಸೂದೆ ಯಾಕೆ?
    ವಕ್ಫ್ ವ್ಯಾಖ್ಯಾನ, ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರ, ನೋಂದಣಿ, ವಕ್ಫ್ ಆಸ್ತಿಗಳ ಸರ್ವೆ, ಒತ್ತುವರಿ ತೆರವು ಸೇರಿದಂತೆ ಹಲವು ವಿಚಾರಗಳಿಗೆ ಕಾಯ್ದೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಇರುವ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.

    ವಕ್ಫ್ ಮಂಡಳಿ ಬಗೆಗಿನ ವಿವಾದ ಏನು?
    ವಕ್ಫ್ ಮಂಡಳಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಮ್ಮೆ ವಕ್ಫ್ ಆಸ್ತಿಯಾಗಿದ್ದರೆ, ಅದು ಯಾವಾಗಲೂ ವಕ್ಫ್ ಆಸ್ತಿಯೇ ಆಗಿರುತ್ತದೆ. ಇದರಿಂದ ವಕ್ಫ್ ಆಸ್ತಿ ರದ್ದತಿ ಅಸಾಧ್ಯ. ಈ ನಿಯಮ ವಿವಾದಗಳನ್ನು ಹುಟ್ಟುಹಾಕಿದೆ. ವಕ್ಫ್ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ಪರಿಣಾಮಕಾರಿಯಾಗಿಲ್ಲ. ಅಕ್ರಮ ಭೂ ಸ್ವಾಧೀನ, ದುರುಪಯೋಗ, ಮಾಲೀಕತ್ವದ ವಿವಾದಗಳು, ನೋಂದಣಿ ಮತ್ತು ಸಮೀಕ್ಷೆಗಳಲ್ಲಿನ ವಿಳಂಬ, ದೂರುಗಳ ಹೆಚ್ಚಳದಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ವಕ್ಫ್ ನ್ಯಾಯಮಂಡಳಿ ನೀಡಿದ ತೀರ್ಪುಗಳನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಆಗುವುದಿಲ್ಲ. ಇದು ವಕ್ಫ್ ನಿರ್ವಹಣೆಯಲ್ಲಿನ ಪಾರದರ್ಶಕತೆ ಮೇಲೆ ಪ್ರಶ್ನೆ ಹುಟ್ಟುಹಾಕಿದೆ. ಕೆಲವು ರಾಜ್ಯ ವಕ್ಫ್ ಮಂಡಳಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸಿವೆ. ಇದು ಕಾನೂನು ವಿವಾದಕ್ಕೆ ಕಾರಣವಾಗಿದೆ.

    ವಕ್ಫ್ ಕಾಯ್ದೆ ಒಂದು ಧರ್ಮಕ್ಕಷ್ಟೇ ಸೀಮಿತವಾಗಿದೆ. ಇತರೆ ಧರ್ಮಗಳಿಗೆ ಈ ರೀತಿಯ ಕಾನೂನು ಇಲ್ಲ. ವಕ್ಫ್ ಕಾಯ್ದೆ ಸಾಂವಿಧಾನಿಕವೇ ಎಂಬ ಪ್ರಶ್ನೆಯೊಂದಿಗೆ ದೆಹಲಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಕೇಳಿದೆ.

    ತಿದ್ದುಪಡಿ ಮಸೂದೆಯಲ್ಲೇನಿದೆ?
    * ತಿದ್ದುಪಡಿ ಮಸೂದೆಯು 1995ರ ವಕ್ಫ್ ಕಾಯ್ದೆಯನ್ನು ‘ಏಕೀಕೃತ ವಕ್ಫ್ ನಿರ್ವಹಣೆ, ಮೌಲ್ಯವರ್ಧನೆ, ಕಾರ್ಯದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ-1995’ ಎಂದು ಮರುನಾಮಕರಣ ಮಾಡುತ್ತದೆ. ಅದರಂತೆ, ಕನಿಷ್ಠ 5 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವ ವ್ಯಕ್ತಿ ತನ್ನ ಒಡೆತನದಲ್ಲಿರುವ ಆಸ್ತಿಯನ್ನು ವಕ್ಫ್ಗೆ ನೀಡಬಹುದು. ದಾನ ನೀಡುವವರೊಂದಿಗೆ ‘ವಕ್ಫ್-ಅಲಲ್-ಔಲಾದ್’ (ದತ್ತಿ ಒಪ್ಪಂದ) ಮಾಡಿಕೊಳ್ಳುವಾಗ, ಕುಟುಂಬದ ಮಹಿಳೆಯರಿಗೆ ಪಿತ್ರಾರ್ಜಿತವಾಗಿ ಸಿಗುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ.

    * ಮೂಲ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸರ್ವೆ ನಡೆಸಲು ರಾಜ್ಯ ಸರ್ಕಾರ ಸರ್ವೆ ಆಯುಕ್ತರನ್ನು ನೇಮಕ ಮಾಡುವಂತಿತ್ತು. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಜವಾಬ್ದಾರಿಯನ್ನು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿಗೆ ನೀಡಲಾಗಿದೆ.

    * 1995ರ ವಕ್ಫ್ ಮಸೂದೆ ಪ್ರಕಾರ, ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿತ್ತು. ಹೊಸ ತಿದ್ದುಪಡಿ ಮಸೂದೆಯಲ್ಲಿ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದರೂ, ಜಿಲ್ಲಾಧಿಕಾರಿ ವಿವಾದವನ್ನು ಪರಿಹರಿಸಬಹುದು.

    * ಹಿಂದಿನ ಕಾಯ್ದೆಯಲ್ಲಿ ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಇರಬೇಕು ಎಂದಿತ್ತು. ಈಗಿನ ತಿದ್ದುಪಡಿ ಮಸೂದೆಯಲ್ಲಿ ಇಬ್ಬರು ಮುಸ್ಲಿಮೇತರರು ಮತ್ತು ಇಬ್ಬರು ಮುಸ್ಲಿಂ ಮಹಿಳೆಯರು ಇರಬೇಕು ಎಂದು ಬದಲಾಯಿಸಲಾಗಿದೆ. (ಶಿಯಾ, ಸುನ್ನಿ ಮತ್ತು ಮುಸ್ಲಿಮರ ಹಿಂದುಳಿದ ವರ್ಗಗಳಿಂದ ಕನಿಷ್ಠ ಒಬ್ಬರು ಸದಸ್ಯರು ಇರಬೇಕು).

    * ಮೂಲ ಕಾಯ್ದೆಯಡಿ ವಕ್ಫ್ ನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂದಿತ್ತು. ತಿದ್ದುಪಡಿ ಮಸೂದೆಯಲ್ಲಿ, ಆದೇಶದ ಮೇಲೆ 90 ದಿನಗಳ ಒಳಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

    * 1995 ಕಾಯ್ದೆಯಲ್ಲಿ ವಕ್ಫ್ ಮಂಡಳಿಗೆ ಕೆಲವು ನಿರ್ದೇಶನ ನೀಡುವ ಅಧಿಕಾರವಷ್ಟೇ ಕೇಂದ್ರ ಸರ್ಕಾರಕ್ಕಿತ್ತು. ಆದರೆ, ಕಾನೂನು ರಚಿಸುವ ಅಧಿಕಾರ ಇರಲಿಲ್ಲ. ಆದರೆ, ಹೊಸ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆ, ನೋಂದಣಿ, ಲೆಕ್ಕಪರಿಶೋಧನೆಯಲ್ಲಿ ಕೇಂದ್ರದ ಪಾತ್ರವನ್ನು ಹೆಚ್ಚಿಸಿದೆ.

    ವಕ್ಫ್‌ ಕಾಯ್ದೆಗೆ ಪರಮಾಧಿಕಾರ ನೀಡಿದ್ದ ಸೆಕ್ಷನ್‌ 40 ರದ್ದು
    ಯಾವುದೇ ಭೂಮಿ ವಕ್ಫ್‌ ಆಸ್ತಿ ಎಂದು ಘೋಷಿಸಲು ವಕ್ಫ್‌ ಮಂಡಳಿಗಳು ಮತ್ತು ನ್ಯಾಯಾಧೀಕರಣಕ್ಕೆ ಈ ಹಿಂದಿನ ವಕ್ಫ್‌ ಕಾಯ್ದೆಯಲ್ಲಿದ್ದ ಸೆಕ್ಷನ್‌ 40 ಅವಕಾಶ ನೀಡಿತ್ತು. ಈ ನಿಯಮ ಬಳಸಿಕೊಂಡು ಸಾಮೂಹಿಕ ಭೂ ಪರಿವರ್ತನೆ ಮಾಡಿಕೊಳ್ಳಲಾಗುತ್ತಿತ್ತು. ನ್ಯಾಯಾಲಯದ ಮೊರೆ ಹೋಗಲು ಅವಕಾಶ ಇರಲಿಲ್ಲ. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಸೆಕ್ಷನ್‌ ಕೈಬಿಡಲಾಗಿದ್ದು, ವಕ್ಫ್‌ ಹಕ್ಕು ಸಾಧಿಸುವ ಆಸ್ತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಕಲ್ಪಿಸಿದೆ.

    ಮುಸ್ಲಿಮೇತರ ಆಸ್ತಿಗಳ ಕಥೆ ಏನು?
    2024ರ ಸೆಪ್ಟೆಂಬರ್ ತಿಂಗಳಲ್ಲಿ 25 ರಾಜ್ಯಗಳ 5,973 ಸರ್ಕಾರಿ ಆಸ್ತಿಗಳನ್ನು ವಕ್ಫ್ ಎಂದು ಮಂಡಳಿಗಳು ಘೋಷಿಸಿದ್ದವು. ಕರ್ನಾಟಕದಲ್ಲೂ ಕೃಷಿ ಜಮೀನು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಾಗ, ಸ್ಮಶಾನ, ಕೆರೆ ಹಾಗೂ ದೇವಾಲಯಗಳನ್ನೂ ವಕ್ಫ್ ಆಸ್ತಿಗಳು ಎಂದು ಗುರುತಿಸಲಾಗಿತ್ತು. ಕರ್ನಾಟಕದ ನೆರೆ ರಾಜ್ಯಗಳಲ್ಲೂ ವಕ್ಫ್ ಆಸ್ತಿ ವಿಚಾರವಾಗಿ ವಿವಾದ ಹುಟ್ಟುಕೊಂಡಿದೆ. ಕರ್ನಾಟಕದಲ್ಲೂ ಹಲವೆಡೆ ಇಂಥ ಘಟನೆಗಳು ನಡೆದಿವೆ. ಇವುಗಳ ಕಥೆ ಏನು ಎಂಬುದು ಪ್ರಶ್ನೆಯಾಗಿದೆ.

    ತಿದ್ದುಪಡಿ ಮಸೂದೆಯಿಂದ ಬಡವರಿಗೆ ಪ್ರಯೋಜನ ಆಗುತ್ತಾ?
    ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ವಕ್ಫ್ ಆಸ್ತಿ ನಿರ್ವಹಣೆಯ ಡಿಜಿಟಲೀಕರಣವು ಟ್ರಾö್ಯಕಿಂಗ್, ಗುರುತಿಸುವಿಕೆ, ಮೇಲ್ವಿಚಾರಣೆಯನ್ನು ಸುಧಾರಿಸುತ್ತದೆ. ಪಾರದರ್ಶಕತೆ, ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಜಾಗ ಒತ್ತುವರಿ, ಪಾರದರ್ಶಕ ಕೊರತೆ ನೀಗಿಸುತ್ತದೆ. ಜೊತೆಗೆ, ಆರ್ಥಿಕವಾಗಿ ಪಾರದರ್ಶಕತೆ ತರುವುದರಿಂದ ಹಣದ ಸೋರಿಕೆಯಾಗದೇ, ಹಣವನ್ನು ಕಲ್ಯಾಣ ಉದ್ದೇಶಗಳಿಗಾಗಿ ಬಳಸುವುದನ್ನು ಖಾತ್ರಿಪಡಿಸುತ್ತದೆ. ವಕ್ಫ್ ಭೂಮಿಗಳ ದುರುಪಯೋಗ, ಅಕ್ರಮ ಸ್ವಾಧೀನ ತಡೆಗಟ್ಟಿ ಆದಾಯ ಹೆಚ್ಚಿಸುತ್ತದೆ. ಹಣ ನೇರವಾಗಿ ಬಡವರ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದು ಅಲ್ಪಸಂಖ್ಯಾತರ ಸಚಿವಾಲಯ ತಿಳಿಸಿದೆ.

  • ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು – ತಡರಾತ್ರಿ 2 ಗಂಟೆಗೆ ಅಂಗೀಕಾರ

    ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು – ತಡರಾತ್ರಿ 2 ಗಂಟೆಗೆ ಅಂಗೀಕಾರ

    ನವದೆಹಲಿ: 14 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ವಕ್ಫ್‌ ತಿದ್ದುಪಡಿ ಮಸೂದೆಯನ್ನು (Waqf Amendment Bill) ಬುಧವಾರ ಮಧ್ಯರಾತ್ರಿ 1:43 ಗಂಟೆಗೆ ಲೋಕಸಭೆ ಅಂಗೀಕರಿಸಿದೆ.

    ವಿವಾದಿತ ಮಸೂದೆ ಕುರಿತು ಸಂಸತ್‌ನಲ್ಲಿ 12 ಗಂಟೆಗಳ ಕಾಲ ಚರ್ಚೆ ನಡೆಯಿತು. ನಂತರ 2 ತಾಸುಗಳ ಕಾಲ ಮತದಾನ ನಡೆಯಿತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಸೂದೆಗೆ ಸದನ ಅಸ್ತು ಎಂದಿದೆ. ಮಸೂದೆ ಪರ 288 ಹಾಗೂ ಮಸೂದೆ ವಿರುದ್ಧ 232 ಮತ ಬಿದ್ದವು. ಇದನ್ನೂ ಓದಿ: ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ

    ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ದಿನವಿಡೀ ಚರ್ಚೆ ನಡೆಯಿತು. ಮಸೂದೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಮುಸ್ಲಿಮರ ಹಕ್ಕು ಕಸಿಯುವ ಯತ್ನ ಎಂದು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.

    ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಗುರುವಾರ ರಾಜ್ಯಸಭೆಯಲ್ಲೂ ಮಂಡನೆಯಾಗಲಿದೆ. ಇಲ್ಲೂ ಕೂಡ ಸುದೀರ್ಘ ಚರ್ಚೆ ಬಳಿಕ ಮತದಾನ ನಡೆಯಲಿದೆ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡರೆ ರಾಷ್ಟ್ರಪತಿಗಳ ಸಹಿಗೆ ರವಾನೆಯಾಗಲಿದೆ. ರಾಷ್ಟ್ರಪತಿಗಳು ಸಹಿ ಮಾಡಿದಾಗ ಮಸೂದೆ ಕಾನೂನಾಗಲಿದೆ. 236 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 119 ಮತಗಳು ಬೇಕು. ಎನ್‌ಡಿಎ 125 ಸದಸ್ಯರನ್ನು ಹೊಂದಿದೆ. ಹೀಗಾಗಿ, ಅಲ್ಲಿಯೂ ಮಸೂದೆ ಅಂಗೀಕಾರವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್‌ ವಿರುದ್ಧ ರಿಜಿಜು ಕಿಡಿ

  • ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎಗೆ 343 ಸೀಟು – ಹೊಸ ಸಮೀಕ್ಷೆಯಲ್ಲಿ ಜನರ ಮನದ ಮಾತು ಏನು?

    ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎಗೆ 343 ಸೀಟು – ಹೊಸ ಸಮೀಕ್ಷೆಯಲ್ಲಿ ಜನರ ಮನದ ಮಾತು ಏನು?

    – ಇಂಡಿಯಾ ಒಕ್ಕೂಟಕ್ಕೆ ಶಾಕ್

    ನವದೆಹಲಿ: ಈಗ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ 343 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಬಿಜೆಪಿ ಸ್ವಂತವಾಗಿ ಸರಳ ಬಹುಮತವನ್ನು ಪಡೆಯಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಅಭಿಪ್ರಾಯ ಸಮೀಕ್ಷೆ ತಿಳಿಸಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಬಣವು 188 ಸ್ಥಾನಗಳಿಗೆ ಇಳಿಯಲಿದೆ ಎಂದು ಸಮೀಕ್ಷೆ ಹೇಳಿದೆ.

    ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು 2025 ರ ಜ.2 ರಿಂದ ಫೆ.9 ನಡುವೆ ನಡೆಸಲಾಯಿತು. ಎಲ್ಲಾ ಲೋಕಸಭಾ ಕ್ಷೇತ್ರಗಳಿಂದ 125, 123 ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಯಿತು. ಈ ಸಮೀಕ್ಷೆಯಲ್ಲಿ ಹೊಸ ಸಂದರ್ಶನಗಳು ಮತ್ತು ದೀರ್ಘಕಾಲೀನ ಟ್ರ್ಯಾಕಿಂಗ್ ಡೇಟಾ ಸೇರಿವೆ.

    ಮತ ಹಂಚಿಕೆಯ ವಿಷಯದಲ್ಲಿ 292 ಸ್ಥಾನಗಳನ್ನು ಗೆದ್ದಿರುವ ಎನ್‌ಡಿಎ ಒಕ್ಕೂಟ ಶೇ. 3 ರಷ್ಟು ಮತ ಪ್ರಮಾಣ ಏರಿಕೆಯಾಗಿ 47% ತಲುಪುವ ನಿರೀಕ್ಷೆಯಿದೆ. ಇಂಡಿಯಾ ಒಕ್ಕೂಟದ ಮತ ಹಂಚಿಕೆಯಲ್ಲಿ ಕೇವಲ 1% ಏರಿಕೆಯನ್ನು ಮಾತ್ರ ನಿರೀಕ್ಷಿಸಲಾಗಿದೆ. ಲೋಕಸಭಾ ಚುನಾವಣೆಯ ನಂತರ ಒಕ್ಕೂಟದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಅದರ ಮತ ಪ್ರಮಾಣ ಕುಸಿತವನ್ನು ಪ್ರತಿಬಿಂಬಿಸುತ್ತದೆ.

    ಸಮೀಕ್ಷೆಯಲ್ಲಿ ಬಿಜೆಪಿ ಭಾರಿ ಲಾಭವನ್ನು ಕಂಡುಕೊಂಡಿದೆ. ಇಂದು ಚುನಾವಣೆ ನಡೆದರೆ ಅದು 281 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳುತ್ತದೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿದ್ದ 99 ಸ್ಥಾನಗಳಿಂದ 78 ಸ್ಥಾನಗಳಿಗೆ ಇಳಿಯುವ ಸಾಧ್ಯತೆಯಿದೆ. ವೈಯಕ್ತಿಕವಾಗಿ, ಬಿಜೆಪಿ ತನ್ನ ಮತ ಹಂಚಿಕೆ 41% ಕ್ಕೆ ಏರಿಕೆಯಾಗಲಿದೆ. ಇದು ಶೇಕಡಾ 3 ರಷ್ಟು ಹೆಚ್ಚಳವಾಗಿದ್ದರೆ, ಕಾಂಗ್ರೆಸ್ ಪಾಲು 20% ಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

    10 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಇಮೇಜ್ ಸಾಟಿಯಿಲ್ಲ ಎಂದು ಸಮೀಕ್ಷೆ ಸೂಚಿಸುತ್ತದೆ. ಕಾಂಗ್ರೆಸ್ ತನ್ನ ಮೂಲಭೂತ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಅದು ಅದರ ಸಾಂಸ್ಥಿಕ ರಚನೆ ಮತ್ತು ನಾಯಕರಲ್ಲಿ ಗೊಂದಲಗಳಿವೆ ಎಂದು ಸಮೀಕ್ಷೆ ಹೇಳುತ್ತದೆ.

  • ಯುಪಿಎಗೆ ಹೋಲಿಸಿದ್ರೆ ಕರ್ನಾಟಕಕ್ಕೆ 9 ಪಟ್ಟು ಅಧಿಕ ಅನುದಾನ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

    ಯುಪಿಎಗೆ ಹೋಲಿಸಿದ್ರೆ ಕರ್ನಾಟಕಕ್ಕೆ 9 ಪಟ್ಟು ಅಧಿಕ ಅನುದಾನ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

    ನವದೆಹಲಿ: 2009 ರಿಂದ 2014ರ ವರೆಗೂ ಯುಪಿಎ ಸರ್ಕಾರ (UPA Government) ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರತಿವರ್ಷ ಸರಾಸರಿ 835 ಕೋಟಿ ಬಿಡುಗಡೆ ಮಾಡಿದೆ. ಆದ್ರೆ ಎನ್‌ಡಿಎ ಸರ್ಕಾರ (NDA Government) 2025-26ರ ಅವಧಿಗೆ 7,564 ಕೋಟಿ ರೂ. ಬಿಡುಗಡೆ ಮಾಡಿದ್ದು ಇದು ಯುಪಿಎ ಸರ್ಕಾರಕ್ಕೆ ಹೋಲಿಸಿದ್ರೆ, 9 ಪಟ್ಟು ಅಧಿಕ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಮಾಹಿತಿ ನೀಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2009 ರಿಂದ 2014ರ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 113 ಹೊಸ ಟ್ರ‍್ಯಾಕ್ ನೀಡಲಾಗಿದೆ. 2014 ರಿಂದ 2025 ರಲ್ಲಿ ಪ್ರತಿವರ್ಷ ಸರಾಸರಿ 150 ಹೊಸ ಅಧಿಕ ಟ್ರ‍್ಯಾಕ್‌ಗೆ (Railway Track) ಅನುಮತಿ ನೀಡಿದೆ. ಯುಪಿಎ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 18 ಕಿಮೀ ವಿದ್ಯುದೀಕರಣ ಆಗಿದೆ. 2014 ರಿಂದ 2025ರ ಅವಧಿಯಲ್ಲಿ ಪ್ರತಿ ವರ್ಷ 294 ಕಿಮೀ ವಿದ್ಯುಧೀಕರಣವಾಗಿದೆ. ರಾಜ್ಯದಲ್ಲಿ 96.5% ವಿದ್ಯುಧಿಕರಣ ಕೆಲಸ ಮುಗಿಸಿದೆ ಎಂದು ವಿವರಿಸಿದ್ದಾರೆ.

    ಕರ್ನಾಟಕದಲ್ಲಿ 2014 ರಿಂದ 1,652 ಕಿಲೋ ಮೀಟರ್ ಹೊಸ ಟ್ರ‍್ಯಾಕ್ ಹಾಕಿದೆ. ಇದು ಶ್ರೀಲಂಕಾದ ಇಡೀ ರೈಲ್ವೆ ಟ್ರ‍್ಯಾಕ್ ಗಿಂತಲೂ ಅಧಿಕವಾಗಿದೆ. 2014 ರಿಂದ ಈವರೆಗೂ 3,233 ಕಿಲೋ ಮೀಟರ್ ವಿದ್ಯುಧೀಕರಣ ಆಗಿದೆ. ಪ್ರಸುತ್ತ 31 ಯೋಜನೆಗಳ ಅಡಿಯಲ್ಲಿ 3,840 ಕಿಮೀ ಕಾಮಗಾರಿ ನಡೆಯುತ್ತಿದೆ. 47,016 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    1,681 ಕೋಟಿ ವೆಚ್ಚದಲ್ಲಿ 61 ಅಮೃತ್ ಸ್ಟೇಷನ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಆಲಮಟ್ಟಿ, ಅಳ್ನಾವರ, ಅರಸೀಕೆರೆ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಕ್ಯಾಂಟ್, ಬಂಗಾರಪೇಟೆ, ಬಂಟವಾಳ, ಬೆಳಗಾವಿ, ಬೀದರ್, ಬಿಜಾಪುರ, ಚಾಮರಾಜ ನಗರ, ಚನ್ನಪಟ್ಟಣ, ಚನ್ನಸಂದ್ರ, ಚಿಕ್ಕಮಗಳೂರು, ಚಿಕ್ಕೋಡಿ ರಸ್ತೆ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರಸ್ತೆ, ಗಂಗಾವತಿ, ಘಟಪ್ರಭಾ, ಗೋಕಾಕ್ ರಸ್ತೆ, ಗುಬ್ಬಿ, ಹರಿಹರ, ಹಾಸನ ಹೊಸಪೇಟೆ, ಕಲಬುರಗಿ (ಗುಲ್ಬರ್ಗ), ಕೆಂಗೇರಿ, ಕೊಪ್ಪಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ಠಾಣೆ), ಕೃಷ್ಣರಾಜಪುರಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್‌, ಮುನಿರಾಬಾದ್, ಮೈಸೂರು ಜಂಕ್ಷನ್‌ (ಮೈಸೂರು), ರಾಯಬಾಗ, ರಾಯಚೂರು ಜಂಕ್ಷನ್‌, ರಾಮನಗರ, ರಾಣಿಬೆನ್ನೂರು, ಸಾಗರ್ ಜಂಬಗಾರು, ಸಕಲೇಶಪುರ, ಶಹಾಬಾದ್, ಶಿವಮೊಗ್ಗ ಪಟ್ಟಣ, ಶ್ರವಣಬೆಳಗೊಳ, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜೂ. ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ತುಮಕೂರು, ಉಡುಪಿ, ವಾಡಿ, ವೈಟ್‌ಫೀಲ್ಡ್, ಯಾದಗಿರಿ, ಯಶವಂತಪುರ ರೈಲ್ವೆ ನಿಲ್ದಾಣ ಅಭಿವೃದ್ದಿಯಾಗಿದೆ ಎಂದು ಇಂಚಿಂಚೂ ಮಾಹಿತಿಯನ್ನು ಮುಂದಿಟ್ಟಿದ್ದಾರೆ.

    ಕೇಂದ್ರ ಸರ್ಕಾರ 2014 ರಿಂದ 644 ರೈಲ್ವೆ ಸೇತುವೆಗಳನ್ನ ನಿರ್ಮಾಣ ಮಾಡಿದೆ. 10 ವಂದೇ ಭಾರತ್‌ ರೈಲು 12 ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ ಒಂದು ಅಮೃತ್ ಭಾರತ್ ಸಂಚಾರ ಮಾಡುತ್ತಿದೆ ಎಂದು ತಿಳಿಸಿದರು.

  • Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ

    Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ

    ನವದೆಹಲಿ: ಪ್ರತಿ ಬಜೆಟ್‌ನಲ್ಲಿ (Budget) ಮಧ್ಯಮ ವರ್ಗದವರಿಗೆ (Middle Class) ಭಾರೀ ನಿರಾಸೆ ಆಗುತ್ತಿತ್ತು. ಆದರೆ ಈ ಬಾರಿ ಮಧ್ಯಮ ವರ್ಗದರನ್ನು ಮೋದಿ ಸರ್ಕಾರ ಕೈಹಿಡಿದಿದೆ.

    ಮುಖ್ಯವಾಗಿ 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಣೆ ಮಾಡಿದ್ದಾರೆ. ಈ ವಿನಾಯಿತಿ ವೇತನ ಪಡೆಯುವ ತೆರಿಗೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ತಮ್ಮ ಭಾಷಣದಲ್ಲಿ ಸೀತಾರಾಮನ್‌ ಅವರು ಒಟ್ಟು 12.75 ಲಕ್ಷ ರೂ.ಗಳಿಗೆ ವೇತನ ಪಡೆಯುವ ತೆರಿಗೆದಾರರಿಗೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದರು.

    ಯಾವ ವರ್ಷ ಎಷ್ಟು ಲಕ್ಷ ರೂ. ವಿನಾಯಿತಿ?
    2005 – 1 ಲಕ್ಷ
    2012 – 2 ಲಕ್ಷ
    2014 – 2.5 ಲಕ್ಷ
    2019 – 5 ಲಕ್ಷ
    2023 – 7 ಲಕ್ಷ
    2025 – 12 ಲಕ್ಷ ಇದನ್ನೂ ಓದಿ: Budget 2025: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ?

     

    ಯುಪಿಎ (UPA) ಮೊದಲ ಅವಧಿಯಲ್ಲಿ ಚಿದಂಬರಂ ಅವರು 2005 ರಲ್ಲಿ 1 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದರೆ, ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ 2012 ರಲ್ಲಿ ಪ್ರಣಬ್‌ ಮುಖರ್ಜಿ ಅವರು ಈ ಮಿತಿಯನ್ನು 2 ಲಕ್ಷ ರೂ.ಗೆ ಏರಿಸಿದ್ದರು. ಇದನ್ನೂ ಓದಿ: Budget 2025: ಒಂದು ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ?

    2014 ರಲ್ಲಿ ಮೋದಿ ಸರ್ಕಾರ ಬಂದಾಗ ಅರಣ್‌ ಜೇಟ್ಲಿ ಅವರು ಈ ಮಿತಿಯನ್ನು 2.5 ಲಕ್ಷಕ್ಕೆ ಏರಿಕೆ ಮಾಡಿದ್ದರು. 2019 ರಲ್ಲಿ ಪಿಯೂಶ್‌ ಗೋಯಲ್‌ ಅವರು ಈ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಿದ್ದರು.

    2023 ರಲ್ಲಿ ನಿರ್ಮಲಾ ಸೀತಾರಾಮನ್‌ ಅವರು 7 ಲಕ್ಷ ರೂ.ಗೆ ಏರಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ವಿನಾಯಿತಿಯನ್ನು 12 ಲಕ್ಷ ರೂ.ಗೆ(ವೇತನ ಪಡೆಯುವ ತೆರಿಗೆದಾರರು) ಏರಿಕೆ ಮಾಡಿ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದ್ದಾರೆ.

     

  • ಸಿಂಗ್‌ ಅವಧಿಯಲ್ಲಿ 2.9 ಕೋಟಿ, ಮೋದಿ ಕಾಲದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ

    ಸಿಂಗ್‌ ಅವಧಿಯಲ್ಲಿ 2.9 ಕೋಟಿ, ಮೋದಿ ಕಾಲದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ

    – UPAಗಿಂತ NDA ಕಾಲದಲ್ಲೇ ಅಧಿಕ ಉದ್ಯೋಗ: ಕೇಂದ್ರ ಸಚಿವ ಮಾಂಡವಿಯಾ

    ನವದೆಹಲಿ: ಯುಪಿಎ (UPA) ಅವಧಿಗಿಂತ ಎನ್‌ಡಿಎ (NDA) ಆಡಳಿತದಲ್ಲಿ 5 ಪಟ್ಟು ಅಧಿಕ ಉದ್ಯೋಗ ಸೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    2014-15ರಲ್ಲಿ 47.15 ಕೋಟಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಎನ್‌ಡಿಎ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ತಿಳಿಸಿದ್ದಾರೆ.‌ ಇದನ್ನೂ ಓದಿ: ಬಾಂಗ್ಲಾ ಭಯೋತ್ಪಾದಕರು ಒಳನುಸುಳಲು BSF ಸಹಕಾರ: ದೀದಿ ಆರೋಪ

    2004-2014ರ ನಡುವಿನ ಕಾಂಗ್ರೆಸ್ ನೇತೃತ್ವದ ಆಡಳಿತದೊಂದಿಗೆ ದತ್ತಾಂಶವನ್ನು ಹೋಲಿಸಿದ ಸಚಿವರು, ಯುಪಿಎ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಉದ್ಯೋಗವು ಕೇವಲ 7 ಪ್ರತಿಶತದಷ್ಟು ಬೆಳೆದಿದೆ. 2.9 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೋದಿ ಸರ್ಕಾರದ ಅಡಿಯಲ್ಲಿ, 2014-24 ರ ನಡುವೆ 17.19 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದಲ್ಲಿ ಸುಮಾರು 4.6 ಕೋಟಿ ಉದ್ಯೋಗಗಳು ಇವೆ ಎಂದು ಮಾಂಡವಿಯಾ ಹೇಳಿದ್ದಾರೆ. ಇದನ್ನೂ ಓದಿ: ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ನೀಡಿರುವ ಈ ಮಾಹಿತಿಯು ಮಹತ್ವದ್ದಾಗಿದೆ.