Tag: nda meeting

  • ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ – ʻಜೈ ಶ್ರೀರಾಮ್‌, ಹರಹರ ಮಹದೇವ್ʼ ಘೋಷಣೆ ನಡ್ವೆ ಮೋದಿಗೆ ಗೌರವ

    ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ – ʻಜೈ ಶ್ರೀರಾಮ್‌, ಹರಹರ ಮಹದೇವ್ʼ ಘೋಷಣೆ ನಡ್ವೆ ಮೋದಿಗೆ ಗೌರವ

    – ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ

    ನವದೆಹಲಿ: ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ನಿಯೋಗ ನಡೆಸಿದ ಮೊದಲ ಸಂಸದೀಯ ಸಭೆಯಲ್ಲಿ (NDA Meeting) ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಸನ್ಮಾನಿಸಲಾಯಿತು.

    ಸಂಸತ್‌ ಭವನದಲ್ಲಿ ಇಂದು ನಡೆದ ಸಂಸದೀಯ ಸಭೆಯಲ್ಲಿ, ಆಪರೇಷನ್‌ ಸಿಂಧೂರ (Operation Sindoor) ಯಶಸ್ಸಿಗಾಗಿ ʻಜೈ ಶ್ರೀರಾಮ್‌, ಹರಹರ ಮಹದೇವ್ (Operation Mahadev), ಭಾರತ್‌ ಮಾತಾಕಿ ಜೈʼ ಎಂಬಿತ್ಯಾದಿ ಘೋಷಣೆಗಳ ನಡುವೆ ಪ್ರಧಾನಿ ಮೋದಿ ಅವರನ್ನ ಸನ್ಮಾನಿಸಲಾಯಿತು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಪ್ರಧಾನಿಗಳಿಗೆ ಹಾರ ಹಾಕಿ ಗೌರವಿಸಿದರು. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸೇರಿದಂತೆ ಎನ್‌ಡಿಎ ಸಂಸದರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ:  ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ

    ನಂತರ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ, ʻಆಪರೇಷನ್ ಸಿಂಧೂರ ಹಾಗೂ ಆಪರೇಷನ್ ಮಹಾದೇವ್‌ʼ ಯಶಸ್ಸಿನ ಕುರಿತು ನಿರ್ಣಯ ಅಂಗೀಕರಿಸಲಾಯಿತು. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳ ಪತ್ತೆಗೆ ನೆರವಾಯ್ತು ಬುಲೆಟ್‌ ಶೆಲ್‌ ಟೆಸ್ಟಿಂಗ್‌ – ಬ್ಯಾಲಿಸ್ಟಿಕ್ಸ್‌ ಮ್ಯಾಚಿಂಗ್‌ ಹೇಗೆ ನಡೆಯುತ್ತೆ?

    ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: ಮೈಸೂರು ಮಹಾರಾಜರ ಕೊಡುಗೆಗೆ ಕಾಂಗ್ರೆಸ್ ಅಪಸ್ವರ – ಮಹದೇವಪ್ಪ ಮೊದ್ಲು ಇತಿಹಾಸ ಅರಿಯಲಿ: ಜೋಶಿ ಕಿಡಿ

    ಇನ್ನೂ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಆಗಸ್ಟ್‌ 15ರಂದು ನಡೆಯಲಿರುವ ತಿರಂಗಾ ಯಾತ್ರೆ, ವಿಪಕ್ಷಗಳ ವಿರುದ್ಧದ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸುವ ಸಾಧ್ಯತೆಗಳಿವೆ. ಅಲ್ಲದೇ ಆಗಸ್ಟ್‌ 7ರಿಂದಲೇ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಎನ್‌ಡಿಎ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

  • ಪ್ರಧಾನಿ ಸ್ಥಾನಕ್ಕೆ ಘಟಾನುಘಟಿ ನಾಯಕರಿಂದ ಮೋದಿ ಹೆಸರು ಅನುಮೋದನೆ

    ಪ್ರಧಾನಿ ಸ್ಥಾನಕ್ಕೆ ಘಟಾನುಘಟಿ ನಾಯಕರಿಂದ ಮೋದಿ ಹೆಸರು ಅನುಮೋದನೆ

    – ಇದು 140 ಕೋಟಿ ಜನರ ಮನದಾಸೆ ಎಂದ ಅಮಿತ್ ಶಾ

    ನವದೆಹಲಿ: ದೆಹಲಿಯಲ್ಲಿಂದು ನಡೆದ ಎನ್‌ಡಿಎ ಸಂಸದರ (NDA MPs) ಸಭೆಯಲ್ಲಿ ಚಂದ್ರಬಾಬು ನಾಯ್ಡು, ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಹೆಚ್.ಡಿ ಕುಮಾರಸ್ವಾಮಿ, ಪವನ್ ಕಲ್ಯಾಣ್, ಚಿರಾಗ್ ಪಾಸ್ವಾನ್, ಅಜಿತ್ ಪವಾರ್, ನಿತೀಶ್ ಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ (Narendra Modi) ಅವರ ಹೆಸರನ್ನು ಅನುಮೋದಿಸಿದರು. ಇದೇ ವೇಳೆ ನೂತನ ಸಂಸದರಿಗೆ ಅಭಿನಂದಿಸಿದ ನಾಯಕರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಾರು ಏನು ಹೇಳಿದರು ಎಂಬುದನ್ನಿಲ್ಲಿ ತಿಳಿಯಬಹುದು.

    ಅಮಿತ್ ಶಾ:
    ಮೋದಿ ಪ್ರಧಾನಿ ಆಗಬೇಕು ಎನ್ನುವುದು 140 ಕೋಟಿ ಜನರ ಬಯಕೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರ ಮನದ ಆಸೆ. ಕಳೆದ 10 ವರ್ಷಗಳಲ್ಲಿ ಮೋದಿ ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ಸಿಕ್ಕಿದೆ. ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ದೇಶ ಮಾತ್ರವಲ್ಲ ವಿಶ್ವದಲ್ಲಿ ಅವರ ಕಾರ್ಯಗಳಿಂದ ಪ್ರಭಾವಿತಗೊಳಿಸಿದ್ದಾರೆ. ಮುಂದಿನ 5 ವರ್ಷದಲ್ಲಿ ಭಾರತ ವಿಶ್ವದ ಬಲಿಷ್ಠ ದೇಶವಾಗಲಿದೆ.

    ಹೆಚ್.ಡಿ ಕುಮಾರಸ್ವಾಮಿ:
    ಮೋದಿ ಅವರ ಹೆಸರನ್ನು ಅನುಮೋದಿಸಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ನಾನು ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.

    ಚಂದ್ರಬಾಬು ನಾಯ್ಡು:

    ಮೋದಿ 3 ತಿಂಗಳಿಂದ ವಿಶ್ರಾಂತಿ ಪಡೆದಿಲ್ಲ. ಅದೇ ಉತ್ಸಾಹದಲ್ಲಿ ಆಂಧ್ರಪ್ರದೇಶದಲ್ಲೂ ಪ್ರಚಾರ ಮಾಡಿದರು. ಅದರ ಪರಿಣಾಮ ಆಂಧ್ರಪ್ರದೇಶದ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅಮಿತ್ ಶಾ, ರಾಜನಾಥ್ ಸಿಂಗ್, ನಡ್ಡಾ, ಗಡ್ಕರಿ ಎಲ್ಲರೂ ನಮ್ಮ ಜೊತೆಗೆ ಇದ್ದಾರೆ ಎನ್ನುವ ಸಂದೇಶ ನೀಡಿದ್ದಾರೆ. ಈ ಕಾರಣದಿಂದಾಗಿ ನಾವು ಇಲ್ಲಿದ್ದೇವೆ. ಕಳೆದ ಹತ್ತು ವರ್ಷದಲ್ಲಿ ಮೋದಿ ಮಹತ್ವದ ಕಾರ್ಯ ಮಾಡಿದ್ದಾರೆ. ಮೈಲುಗಲ್ಲು, ಬದಲಾವಣೆಗೆ ದೇಶ ಸಾಕ್ಷಿಯಾಗಿದೆ. ದೇಶವೂ ವಿಶ್ವದಲ್ಲಿ ಶಕ್ತಿ ಕೇಂದ್ರವಾಗಿ ಬದಲಾಗಿದೆ. ಮೇಕ್ ಇನ್ ಇಂಡಿಯಾ ನಮ್ಮ ಹೆಮ್ಮೆ, ಈಗ 5ನೇ ಬಲಿಷ್ಠ ಆರ್ಥಿಕತೆಯ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಮುಂದಿನ ಅವಧಿಯಲ್ಲಿ 3ನೇ ಸ್ಥಾನಕ್ಕೆ ಏರಲಿದೆ. ದೇಶ ಮತ್ತಷ್ಟು ಅಭಿವೃದ್ಧಿಯಾಗಹುವ ನಂಬಿಕೆ ನನಗಿದೆ ಎಂದು.

    ನಿತೀಶ್ ಕುಮಾರ್:
    ಬೆಳೆಯುತ್ತಿರುವ ಭಾರತಕ್ಕೆ ಮೋದಿಯಂತಹ ಉತ್ತಮ ನಾಯಕ ಮತ್ತೆ ಸಿಗೋದಿಲ್ಲ. ಇದು ನಮಗೆ ಉತ್ತಮ ಅವಕಾಶ. ಈಗ ಕಳೆದು ಕೊಂಡರೆ ಮತ್ತೆ ಸಿಗುವುದಿಲ್ಲ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಹೆಸರಿಗೆ ಜೆಡಿಯು ಅನುಮೋದಿಸುತ್ತದೆ. ಈಗಾಗಲೇ ಮೋದಿ ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಇಲ್ಲಿ ನಿಂತು ಗೆದ್ದ ಕೆಲವರು ಮುಂದಿನ ಬಾರಿ ಸೋಲುತ್ತಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ. ಬಿಹಾರವನ್ನೂ ಅಭಿವೃದ್ಧಿ ಮಾಡಲಿದ್ದಾರೆ, ಅದಕ್ಕಾಗಿ ನಾವು ಎಲ್ಲ ಬೆಂಬಲ ನೀಡಿದ್ದೇವೆ.

    ಅಜಿತ್ ಪವಾರ್:
    ಪ್ರಧಾನಿಮಂತ್ರಿಯಾಗಿ ಮೋದಿ ಹೆಸರನ್ನು ಅನುಮೋದಿಸಿದ ಅಜಿತ್ ಪವಾರ್, ಎನ್‌ಸಿಪಿ ಪಕ್ಷದಿಂದ ಮೋದಿ ಹೆಸರನ್ನು ಅನುಮೋದಿಸತ್ತೇವೆ. 3ನೇ ಬಾರಿಗೆ ಎನ್‌ಡಿಎಗೆ ಗೆಲುವು ಸಿಗುವುದು ಸಾಮಾನ್ಯವಲ್ಲ. ಮೋದಿ ಅವರ ಮೇಲೆ ಜನರಿಗೆ ವಿಶ್ವಾಸವಿದೆ. ಶ್ರೀಮಂತ ಬಡವರ ಬಡವರು ನಡುವೆ ಅಂತರ ತೆಗೆಯಲು, ವಿಕಸತ್ ಭಾರತ್ ಮಾಡುವ ಗುರಿ ಮೋದಿ ಅವರಿಂದ ಮಾತ್ರ ಸಾಧ್ಯ. ಈ ಕಾರಣಕ್ಕೆ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು.

  • ಉತ್ತಮ ಸಮಯ ಕಳೆದುಕೊಂಡ್ರೆ ಮತ್ತೆ ಸಿಗಲ್ಲ- ಮೋದಿ ಹೆಸರು ಅನುಮೋದಿಸಿದ ನಿತೀಶ್

    ಉತ್ತಮ ಸಮಯ ಕಳೆದುಕೊಂಡ್ರೆ ಮತ್ತೆ ಸಿಗಲ್ಲ- ಮೋದಿ ಹೆಸರು ಅನುಮೋದಿಸಿದ ನಿತೀಶ್

    ನವದೆಹಲಿ: ಇಂತಹ ಉತ್ತಮ ಸಮಯ ಕಳೆದುಕೊಂಡರೆ ಮತ್ತೆ ಸಿಗಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿಯವರ (Narendra Modi) ಹೆಸರನ್ನು ಅನುಮೋದಿಸಿದ್ದಾರೆ.

    ಇಂದು ದೆಹಲಿಯಲ್ಲಿ ನಡೆದ ಎನ್‍ಡಿಎ ಒಕ್ಕೂಟ ಸಂಸದರ ಸಭೆಯಲ್ಲಿ ಎಲ್ಲಾ ನಾಯಕರು ಮೋದಿ ಹೆಸರನ್ನೇ ಪ್ರಧಾನಿ ಸ್ಥಾನಕ್ಕೆ ಸೂಚಿಸಿದ್ದಾರೆ. ಬಳಿಕ ಮಾತನಾಡಿದ ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar), ಇಂಡಿಯಾ ಬೆಳೆಯುತ್ತಿದೆ. ಉತ್ತಮ ನಾಯಕ, ಉತ್ತಮ ಸಮಯ ಮತ್ತೆ ಸಿಗುವುದಿಲ್ಲ. ಇದು ನಮಗೆ ಉತ್ತಮ ಅವಕಾಶ. ಈಗ ಇದನ್ನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ ಎಂದು ಹೇಳಿದರು.

    ಮೋದಿಯವರು ದೇಶದ ಸೇವೆ ಮಾಡಿದ್ದಾರೆ, ಮುಂದಿನ ಅವಧಿಯಲ್ಲಿ ಏನು ಬಾಕಿ ಉಳಿದಿದೆಯೋ ಅದನ್ನೂ ಮಾಡಲಿದ್ದಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ. ಅಲ್ಲೂ ಇಲ್ಲೂ ಕೆಲವರು ಗೆದ್ದಿದ್ದಾರೆ. ಆದರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ  ಎಂದು ನಿತೀಶ್‌ ಕುಮಾರ್‌ ಹೇಳಿದರು. ಈ ವೇಳೆ ಮೋದಿ ಸಹಿತ ಇಡೀ ಸಭೆ ನಗೆಗಡಲಲ್ಲಿ ತೇಲಿತು.  ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ನಾವು ಸಾಧನೆ ಮಾಡಿದ್ದೇವೆ: ಎನ್‌ಡಿಎ ಕೊಂಡಾಡಿದ ಮೋದಿ

    ಬಿಹಾರದಲ್ಲಿ ಏನು ಬಾಕಿ ಉಳಿದಿದೆ ಅದನ್ನು ಕೂಡ ಮೋದಿಯವರು ಮಾಡಲಿದ್ದಾರೆ. ಅದಕ್ಕಾಗಿ ನಾವು ಎಲ್ಲಾ ಬೆಂಬಲ ನೀಡಿದ್ದೇವೆ. ಆದಷ್ಟು ಬೇಗ ಅವರು ಪ್ರಧಾನಿಯಾಗಲಿ. ಇವತ್ತೆ ಪ್ರಧಾನಿಯಾಗಬೇಕಿತ್ತು. ಆ ಕಡೆ ಈ ಕಡೆ ಹೋಗುವವರಿಗೆ ಯಾವುದೇ ಲಾಭ ಇಲ್ಲ ಎಂದು ಇದೇ ವೇಳೆ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟಕ್ಕೆ ಟಾಂಗ್ ಕೊಟ್ಟರು.

    ಹೆಸರು ಅನುಮೋದನೆ ಬಳಿಕ ನಿತೀಶ್ ಕುಮಾರ್ ಅವರು ಮೋದಿ ಕಾಲಿಗೆ ನಮಸ್ಕರಿಸಲು ಹೋದರು. ಈ ವೇಳೆ ಮೋದಿಯವರು ಕಾಲು ಮುಟ್ಟಿಸಿಕೊಳ್ಳಲು ನಿರಾಕರಿಸಿದ ಪ್ರಸಂಗ ಕೂಡ ನಡೆಯಿತು.