Tag: nda govt

  • ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ನಾವು ಹಠವಾದಿಗಳು: ಅನಂತ್ ಕುಮಾರ್ ಹೆಗ್ಡೆ

    ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ನಾವು ಹಠವಾದಿಗಳು: ಅನಂತ್ ಕುಮಾರ್ ಹೆಗ್ಡೆ

    ಬಳ್ಳಾರಿ: ನಾವು ನಿಜವಾಗಿಯೂ ಹಠವಾದಿಗಳು. ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಮಣ್ಣಿನ ಬಗ್ಗೆ ನಮ್ಮ ಕಮಿಟ್ಮೆಂಟ್ ಇದೆ. ನಾವೂ ಭಾಷಣ ಮಾಡಲು ಬಂದಿಲ್ಲ. ಬಳ್ಳಾರಿಯಲ್ಲಿ ಕೌಶಲ್ಯ ತರಬೇತಿ ವಿಶ್ವವಿದ್ಯಾಲಯ ಸ್ಪಾಪನೆಗೆ ನಾವೂ ಸಿದ್ಧವಿದ್ದೇವೆ. ಜಮೀನು ನೀಡಲು ಯಾರು ಮುಂದೆ ಬರ್ತಾರೋ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ. ನಾವೂ ನಿಜವಾಗಿಯೂ ಹಠವಾದಿಗಳು. ಬೊಗಳುವ ನಾಯಿಗಳಿಗೆ ನಾವೂ ತೆಲೆಕೆಡಿಸಿಕೊಳ್ಳಲ್ಲ ಅಂತ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ರು.

    ಪ್ರತಿ ವರ್ಷ 2 ಕೋಟಿ ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಭಾರತ ಕೌಶಲ್ಯ ತರಬೇತಿಯ ಹಬ್ ಆಗುತ್ತಿದೆ. ನಮ್ಮ ವ್ಯಕ್ತಿತ್ವವನ್ನು, ಬದುಕನ್ನು ನಾವೂ ರೂಪಿಸಿಕೊಳ್ಳಬೇಕಿದೆ ನಾನು ಮತ ಕೇಳಲು ಬಂದಿಲ್ಲ, ಪ್ರಧಾನ ಮಂತ್ರಿಯವರ ಕನಸು ನನಸು ಮಾಡಬೇಕಿದೆ. ಉದ್ಯೋಗ ಯಾರಿಗೆ ಸಿಗಲ್ಲವೋ ಅವರಿಗೆ ಕೌಶಲ್ಯ ತರಬೇತಿ ಅವಶ್ಯವಾಗಿದೆ ಅಂದ್ರು.

    ಕನ್ನಡದವರು ಕನ್ನಡ ಮಾತನಾಡಿ, ತೆಲಗು ಬಂದವರು ತೆಲುಗಿನಲ್ಲಿ ಮಾತನಾಡಿ, ನಮಗೆ ಇಂಗ್ಲಿಷ್ ಅಮ್ಮ ಯಾಕೆ ಬೇಕು. ಭಾಷೆ ಇರೋದು ಸಂಹವನಕ್ಕೆ, ಸ್ಟೈಲ್ ಹೊಡೆಯಲು ಅಲ್ಲ. ನಮಗೆ ಸ್ಟೈಲ್ ಬೇಕಿಲ್ಲ. ನಮಗೆ ಭಾಷೆ ಅರ್ಥ ಆಗಬೇಕು. ಯಾರಿಗೋ ಅರ್ಥ ಮಾಡಿಸಲು ನಾನು ನನ್ನ ತಾಯಿಯನ್ನು ಬೇವರ್ಸಿ ಮಾಡಲು ಸಿದ್ಧನಿಲ್ಲ. ನಾನು ಇದ್ದುದನ್ನು ಇದ್ದ ಹಾಗೆ ಹೇಳುವ ವ್ಯಕ್ತಿ. ಯಾರಾದ್ರೂ ಒಪ್ಪಿಕೊಳ್ಳಲಿ ಬಿಡಲಿ ನಾನು ಇರೋದೆ ಹೀಗೆ ಅನ್ನೋ ವ್ಯಕ್ತಿ ಅಂತ ಹೇಳಿದ್ರು.

  • ಸಂಘ ಪರಿವಾರದ ವಿರುದ್ಧ ಆಕ್ರೋಶ ಹೊರಹಾಕಿದ ಮುತಾಲಿಕ್

    ಸಂಘ ಪರಿವಾರದ ವಿರುದ್ಧ ಆಕ್ರೋಶ ಹೊರಹಾಕಿದ ಮುತಾಲಿಕ್

    ವಿಜಯಪುರ: ಈ ಹಿಂದೆ ಸಂಘ ಪರಿವಾರ ಮಾನಸಿಕ, ದೈಹಿಕ, ಆರ್ಥಿಕವಾಗಿ ನನಗೆ ಸಾಕಷ್ಟು ಹಿಂಸೆ ನೀಡಿದೆ. ನಾನು ಸಂಘ ಪರಿವಾರದ ಮೂಲಕ ಚಿತ್ರಹಿಂಸೆ ಅನುಭವಿಸಿದ್ದೆನೆಂದು ಸಂಘ ಪರಿವಾರದ ವಿರುದ್ಧ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಏಟಾಗಿಲ್ಲ. ಭಾಷೆಗೆ ಯಾವುದೇ ಧಕ್ಕೆಯಾಗಿಲ್ಲ. ಕರ್ನಾಟಕದ ಶಿವಸೇನೆ ಕನ್ನಡಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ರು. ಕನ್ನಡ ಪರ ಸಂಘಟನೆಗಳ ವಿರೋಧ ತಪ್ಪಲ್ಲ. ಅವರನ್ನ ಕನ್ವಿನ್ಸ್ ಮಾಡ್ತೀವಿ. ಅಲ್ಲದೆ ರಾಜ್ಯದಲ್ಲಿ 50 ಕ್ಷೇತ್ರಗಳಲ್ಲಿ ಶಿವಸೇನೆ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ನಾನು ಶೃಂಗೇರಿ, ವಿಜಯಪುರ, ತೇರದಾಳ ಕ್ಷೇತ್ರಗಳಲ್ಲಿ ಯಾವುದಾದರು ಒಂದರಲ್ಲಿ ಸ್ಪರ್ಧೆ ಮಾಡ್ತೀನಿ ಎಂದರು. ಇದನ್ನೂ ಓದಿ: ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ

    ಇದೇ ವೇಳೆ ವಿಹೆಚ್‍ಪಿ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ ಅವರ ಘಟನೆಯನ್ನು ಮುತಾಲಿಕ್ ಖಂಡಸಿದ್ದು, ಇವತ್ತು ಸಂಘ ಪರಿವಾರದ ಒಳಗಡೆಯೇ ಇದ್ದು ಎನ್ ಕೌಂಟರ್ ಮಾಡುವ ಸ್ಥಿತಿಗೆ ಬಂದಿದ್ದು ಆಘಾತಕಾರಿ ವಿಷಯ ಎಂದರು. ಪರಿವಾರದ ಒಳಗಡೆ ಇದ್ದುಕೊಂಡೇ ಅವರ ಮೇಲೆ ಷಡ್ಯಂತ್ರ ನಡೆಸಲಾಗುತ್ತಿದೆ. ಕಳೆದ 14 ವರ್ಷಗಳಲ್ಲಿ ಅವರು ಸಾಕಷ್ಟು ನೋವು, ಕಿರುಕುಳ ಅನುಭವಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಹಿಂದೂ ಮುಖಂಡನ ಕಣ್ಣಲ್ಲಿ ನೀರು ತರಿಸಿದ್ದಾರಲ್ಲಾ. ಇವರಿಗೆ ಮಾನ ಮರ್ಯಾದೆ ಇದೆಯಾ? ತೊಗಾಡಿಯಾ ಏನು ರೇಪಿಸ್ಟಾ? ಡ್ರಗ್ಗಿಸ್ಟಾ? ಉಗ್ರವಾದಿಯಾ? ಕೇಂದ್ರ ಸಾರ್ಕಾರ ಅವರನ್ನು ಹತ್ತಿಕ್ಕಲು ಈ ರೀತಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಅರೋಪ ಮಾಡಿದರು. ಇದನ್ನೂ ಓದಿ: ಕಾಣೆಯಾಗಿದ್ದ ಪ್ರವೀಣ್ ತೊಗಾಡಿಯಾ ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ, ಆಸ್ಪತ್ರೆಗೆ ದಾಖಲು

    ಎನ್ ಕೌಂಟರ್ ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆಯಾಗಬೇಕು. ಪರಿವಾರದ ಒಳಗಡೆಯೇ ಹಿಂದೂವಾದವನ್ನು ಹತ್ತಿಕ್ಕಲಾಗುತ್ತಿದೆ. ತೊಗಾಡಿಯಾ ಅವರ ಕಣ್ಣಲ್ಲಿ ನೀರು ತರಿಸಿದ ಇವರಿಗೆ ಹಿಂದೂಗಳ ಶಾಪ ತಟ್ಟುತ್ತದೆ. 15 ದಿನಗಳ ಹಿಂದೆ ಒಡಿಶಾದ ಭುವನೇಶ್ವರದಲ್ಲಿ ಸಂಘ ಪರಿವಾರದ ಮೀಟಿಂಗ್ ಆಯ್ತು. ಆ ಮೀಟಿಂಗ್ ನಲ್ಲಿ ವಿಹೆಚ್‍ಪಿ ಅಂತರಾಷ್ಟ್ರೀಯ ಅಧ್ಯಕ್ಷ ರಾಘವಲು ಹಾಗೂ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ತೊಗಾಡಿಯಾ ಅವರನ್ನು ಆ ಸ್ಥಾನಗಳಿಂದ ತೆಗೆಯಲು ಷಡ್ಯಂತ್ರ ಮಾಡಲಾಗಿತ್ತು. ಅಧಿಕಾರದ ಮದ, ಅಧಿಕಾರದ ದರ್ಪದಿಂದ ಅವರಿಗೆ ಮಾನಸಿಕ ಕಿರುಕುಳ ಕೊಡಲಾಗುತ್ತಿದೆ. ತೊಗಾಡಿಯಾ ಅವರನ್ನು ಎನ್‍ಕೌಂಟರ್ ಮಾಡುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನ ಪರೋಕ್ಷವಾಗಿ ಕೇಂದ್ರ ಸರ್ಕಾರದ ಮೇಲೆ ಮಾಡಿದರು.

    20 ವರ್ಷದ ಹಳೆಯ ಪ್ರಕರಣಗಳನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಈ ಕೂಡಲೇ ಕೇಂದ್ರ ಸರ್ಕಾರ ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಾಜಸ್ಥಾನದ ಮುಖ್ಯಮಂತ್ರಿ, ಗೃಹಮಂತ್ರಿಯೂ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ತೊಗಾಡಿಯಾ ಅವರ ಜೊತೆಗೆ ಸಮಸ್ತ ಹಿಂದೂ ಸಮುದಾಯ ಇದೆ ಎಂದರು.

  • ಸಂತರ ಸಹಾಯದಿಂದ ರಾಮಮಂದಿರ ನಿರ್ಮಾಣ ಖಚಿತ- ಶೋಭಾ ಕರಂದ್ಲಾಜೆ

    ಸಂತರ ಸಹಾಯದಿಂದ ರಾಮಮಂದಿರ ನಿರ್ಮಾಣ ಖಚಿತ- ಶೋಭಾ ಕರಂದ್ಲಾಜೆ

    ಉಡುಪಿ: ಕೇಂದ್ರ ಸರ್ಕಾರ, ಉತ್ತರಪ್ರದೇಶ ಸರ್ಕಾರ ಮತ್ತು ಎಲ್ಲ ಸಂತರ ಸಹಾಯದಿಂದ ರಾಮಮಂದಿರ ನಿರ್ಮಾಣ ಆಗುವುದು ನಿಶ್ಚಿತ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಧರ್ಮ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡ ಶೋಭಾ ಕರಂದ್ಲಾಜೆ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಸಂತರು ರಾಮಮಂದಿರಕ್ಕೆ ಒತ್ತುಕೊಟ್ಟು ಮಾತನಾಡಿದ್ದಾರೆ. ವರ್ಷದ ಒಳಗೆ ರಾಮ ಮಂದಿರ ದೇಶದಲ್ಲಿ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಬಂದಿದೆ. ರವಿಶಂಕರ್ ಗುರೂಜಿ ಈಗಾಗಲೇ ಸಂಧಾನ ಪ್ರಕ್ರಿಯೆಯನ್ನು ನಡೆಸುತ್ತಿದ್ದು ಇದರಲ್ಲಿ ಅವರು ಯಶಸ್ವಿಯಾಗಲಿದ್ದಾರೆ ಎಂದರು.

    ನಮ್ಮ ಮೇಲೆ ಶ್ರೀರಾಮಚಂದ್ರ, ಆಂಜನೇಯರ ಆಶೀರ್ವಾದ ಇದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ಎರಡು ಸಮುದಾಯದವರು ಸೇರಿ ಕೋರ್ಟ್‍ನಿಂದ ಹೊರಗೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು ಎಂದರು.

  • ಕೇಂದ್ರವೇ ನಮ್ಮ ಫೋನ್ ಕದ್ದಾಲಿಸುತ್ತಿದೆ – ಸಚಿವ ರಾಮಲಿಂಗಾರೆಡ್ಡಿ ಸ್ಫೋಟಕ ಆರೋಪ

    ಕೇಂದ್ರವೇ ನಮ್ಮ ಫೋನ್ ಕದ್ದಾಲಿಸುತ್ತಿದೆ – ಸಚಿವ ರಾಮಲಿಂಗಾರೆಡ್ಡಿ ಸ್ಫೋಟಕ ಆರೋಪ

    ಬೆಂಗಳೂರು: ನಮ್ಮ ಸರ್ಕಾರ ವಿಪಕ್ಷದ ಯಾವ ನಾಯಕರ ದೂರವಾಣಿಯನ್ನು ಕದ್ದಾಲಿಸಿಲ್ಲ. ಕೇಂದ್ರ ಸರ್ಕಾರವೇ ನಮ್ಮ ಸುಮಾರು 35 ಮುಖಂಡರ ಹಾಗೂ ಸಚಿವರ ಫೋನ್ ಕದ್ದಾಲಿಕೆ ಮಾಡುತ್ತಿದೆ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ನೀಡಿರೋ ಹೇಳಿಕೆ ಸುಳ್ಳಾಗಿದೆ. ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ. ಅಲ್ಲದೆ ಐಟಿ, ಇಡಿ, ಸಿಬಿಐ, ರಿಸರ್ವ್ ಬ್ಯಾಂಕ್ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಪಿತೂರಿ ನಡೆಸುತ್ತಿದೆ ಅಂತ ಕಿಡಿಕಾರಿದ್ರು.

    ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತೇವೆಂಬ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ನಮ್ಮ ಸಚಿವರ ವಿರುದ್ಧ ಆರೋಪ ಇದ್ರೆ ಲೋಕಾಯುಕ್ತ ಸಂಸ್ಥೆ ಇದೆ ಅಲ್ಲಿ ಹೊಗಿ ದೂರು ಕೊಡಲಿ. ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಮೊದಲು ತಮ್ಮ ಮೇಲಿರುವ ಪ್ರಕರಣದ ಕುರಿತು ಜನತೆಗೆ ಉತ್ತರ ನೀಡಲಿ. ಆ ಬಳಿಕ ನಮ್ಮ ಬಗ್ಗೆ ಮಾತನಾಡಲಿ ಅಂತ ಹೇಳಿದ್ರು.

    ಇನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಸುಳಿವು ಸಿಕ್ಕಿದೆ. ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದು, ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ರು.