Tag: NDA Government

  • ಬಿಜೆಪಿ, ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತ ವಿರೋಧಿಗಳು – ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಸಿಎಂ ಆಕ್ಷೇಪ

    ಬಿಜೆಪಿ, ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತ ವಿರೋಧಿಗಳು – ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಸಿಎಂ ಆಕ್ಷೇಪ

    ಬೆಂಗಳೂರು: ಬಿಜೆಪಿಯವರು, ಎನ್‌ಡಿಎ ಸರ್ಕಾರ (NDA Government) ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿಗಳು ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaia) ವಾಗ್ದಾಳಿ ನಡೆಸಿದರು.

    ಮಾಜಿ ಸಿಎಂ ಎಸ್‌. ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರೋ ನಿಜಲಿಂಗಪ್ಪ ಪ್ರತಿಮೆಗೆ ಸಿಎಂ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್‌ನಲ್ಲಿ ಕೇಂದ್ರದಿಂದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ (Waqf Act Bill) ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮುಂದೊಂದು ದಿನ ಮೋದಿ ನಿವಾಸಕ್ಕೆ ಜನ ನುಗ್ಗುತ್ತಾರೆ: ನಾಲಗೆ ಹರಿಬಿಟ್ಟ ಕೈ ಹಿರಿಯ ನಾಯಕ

    ಬಿಜೆಪಿಯವರು, ಎನ್‌ಡಿಎ ಸರ್ಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿಗಳು. ಎನ್‌ಡಿಎ ಸರ್ಕಾರ ಜಾತ್ಯಾತೀತ ಸರ್ಕಾರ ಅಲ್ಲ. ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ. ಎನ್‌ಡಿಎ ಕೂಟ ಕಮ್ಯುನಲ್ ಪಾರ್ಟಿಗಳು, ಫ್ಯಾಸಿಸ್ಟ್ ಮನಸ್ಥಿತಿ ಇರೋರು ಎಂದು ವಾಗ್ದಾಳಿ ನಡೆಸಿದರು. ಶುಕ್ರವಾರ (ಆ.9) ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲ ಮಾತಾಡ್ತೀನಿ ಎಂದರು. ಇದನ್ನೂ ಓದಿ: ದೇಶದ ಅತ್ಯದ್ಭುತ ʻನಾಗʼತಾಣಗಳ ಬಗ್ಗೆ ನಿಮಗೆ ಗೊತ್ತೇ? ಇಲ್ಲಿ ನಂಬಿಕೆ ಸುಳ್ಳಾಗಿಲ್ಲ ಅಂತಾರೆ ಭಕ್ತರು!

    ಇದೇ ವೇಳೆ ಬಿ.ಕೆ ಹರಿಪ್ರಸಾದ್‌ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ನಮ್ಮ ಪಕ್ಷದ ನಾಯಕರು. ಅವರು ಭೇಟಿಯಾಗೋದ್ರಲ್ಲಿ ಯಾವುದೇ ವಿಶೇಷ ಇಲ್ಲ. ಬುಧವಾರ 1 ಗಂಟೆಗಳ ಕಾಲ ಮಾತುಕತೆ ನಡೆಸಿದರು. ತುಂಬಾ ದಿನಗಳಿಂದ ಅವರು ಭೇಟಿಯಾಗಿರಲಿಲ್ಲ. ಹೀಗಾಗಿ ನಿನ್ನೆ ಭೇಟಿಯಾಗಿ ಮಾತಾಡಿದ್ದಾರೆ. ಉಭಯ ಕುಶಲೋಪರಿ ಮಾತಾಡಿದ್ದೇವೆ ಅಷ್ಟೆ ಎಂದು ತಿಳಿಸಿದರು. ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಹೂಮಳೆಯ ಸ್ವಾಗತ 

  • 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ – ಮೋದಿ ಆಡಳಿತದಲ್ಲಿ ಭಾರತ ಸಾಲದ ವಿಶ್ವಗುರು: ಗುಂಡೂರಾವ್

    8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ – ಮೋದಿ ಆಡಳಿತದಲ್ಲಿ ಭಾರತ ಸಾಲದ ವಿಶ್ವಗುರು: ಗುಂಡೂರಾವ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಿನೇಶ್ ಗುಂಡೂರಾವ್ (Dinesh Gundu Rao) ಕೇಂದ್ರ ಸರ್ಕಾರದ (Government Of Inadia) ವಿರುದ್ಧ ಹರಿಹಾಯ್ದಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮೂಲಕ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಿಕ್ಸಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್- ಪ್ರೀತಿ ನಿರಾಕರಿಸಿದ್ರಿಂದ ಕೊಲೆಗೆ ನಿರ್ಧರಿಸಿದ್ದೆ ಎಂದ ಆರೋಪಿ

    ಟ್ವೀಟ್‌ನಲ್ಲಿ ಏನಿದೆ?
    ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ. ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ. ಯುಪಿಎ (UPA) ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ಇತ್ತು. ಆದರೆ ಮೋದಿಯವರು ಕೇವಲ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿಗೆ ಏರಿಸಿದ್ದಾರೆ. ಈ ಸಾಲ ಮಾಡಿರುವುದು ಯಾರ ಉದ್ಧಾರಕ್ಕೆ?

    ಸಾಲ ಮಾಡಿ ತುಪ್ಪ ತಿನ್ನುವಂತೆ ಮೋದಿ ಆಡಳಿತದಲ್ಲಿ ಗೊತ್ತು ಗುರಿಯಿಲ್ಲದೆ ಸಾಲ ಮಾಡಲಾಗಿದೆ. ಈ ಸಾಲದಲ್ಲಿ ತುಪ್ಪ ತಿನ್ನುತ್ತಿರುವವರು ಯಾರು ಎಂಬುದೇ ಯಕ್ಷ ಪ್ರಶ್ನೆ? ಜಿಡಿಪಿ ಕುಸಿದಿದೆ. ಅಭಿವೃದ್ಧಿ ಶೂನ್ಯವಾಗಿದೆ. ಹಾಗಾದರೆ ಆ ಸಾಲ ಎಲ್ಲಿಗೆ ಖರ್ಚಾಗುತ್ತಿದೆ. ಪಿಎಂ ಕೇರ್ ನಂತೆ ಯಾವುದಾದರೂ ಉಂಡೆನಾಮದ ಸ್ಕೀಮ್‌ಗೆ ಹಣ ಬಳಕೆಯಾಗುತ್ತಿದೆಯೇ?

    ಮನಮೋಹನ್ ಸಿಂಗ್ (Manmohan Singh) ಸರ್ಕಾರವಿದ್ದಾಗ ಜನರಿಗೆ ಗ್ಯಾಸ್ (LPG) ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ತೈಲಗಳ ಮೇಲೆ ಅತೀ ಕಡಿಮೆ ತೆರಿಗೆ ಹಾಗೂ ಅಬಕಾರಿ ಸುಂಕ ವಿಧಿಸಲಾಗುತಿತ್ತು. ಅಷ್ಟಾದರೂ ದೇಶದ ಸಾಲ 76 ಲಕ್ಷ ಕೋಟಿ ದಾಟಿರಲಿಲ್ಲ. ಈ ಸರ್ಕಾರದಲ್ಲಿ ಬಹುತೇಕ ಸಬ್ಸಿಡಿಗಳು ರದ್ದಾಗಿವೆ. ತೈಲಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ವಿಧಿಸಲಾಗುತ್ತಿದೆ.

    ಮೋದಿಯವರು ಕಾಂಗ್ರೆಸ್ (Congress) ಮಾಡಿದ ಸಾಲ ತೀರಿಸುತ್ತಿದ್ದಾರೆ ಎಂದು ಬಿಜೆಪಿ ಭಕ್ತರು, ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಹರಡುತ್ತಿದ್ದಾರೆ. ವಾಸ್ತವವಾಗಿ 2014 ರವರೆಗೆ ಇದ್ದ ದೇಶದ ಒಟ್ಟು ಸಾಲದ ಮೊತ್ತ 76 ಲಕ್ಷ ಕೋಟಿ. ಆದ್ರೆ ಮೋದಿ 8 ವರ್ಷದಲ್ಲಿ 98 ಲಕ್ಷ ಕೋಟಿ ಹೆಚ್ಚವರಿ ಸಾಲ ಮಾಡಿದ್ದಾರೆ. ಹೀಗಿರುವಾಗ ಮೋದಿ ಯಾರ ಸಾಲ ತೀರಿಸುತ್ತಿದ್ದಾರೆ? ಇದನ್ನೂ ಓದಿ: ಮುತ್ತಿಟ್ಟು ಮದುವೆ ಎಂದ ಪವಿತ್ರಾ ಲೋಕೇಶ್ ವಿಡಿಯೋ ಅಸಲಿ ಅಲ್ಲ ಎನ್ನುವ ಗುಮಾನಿ

    ಮೋದಿ ಆಡಳಿತದಲ್ಲಿ ಆರ್ಥಿಕ ಶಿಸ್ತು ಹಳ್ಳ ಹಿಡಿದಿದೆ ಎಂಬುದಕ್ಕೆ ಈ ಸರ್ಕಾರ ಮಾಡಿರುವ ಸಾಲದ ಪ್ರಮಾಣವೇ ಸಾಕ್ಷಿ. ಮೋದಿಯವರು ಮಾಡಿರುವ ಸಾಲದ ಎಫೆಕ್ಟ್ ಹೇಗಿದೆಯೆಂದರೆ, ಅಸಲು ಹೋಗಲಿ, ಬಡ್ಡಿ ಕಟ್ಟಲೂ ಸಾಧ್ಯವಿಲ್ಲದಷ್ಟು ವಿಪರೀತವಾಗಿದೆ. ಇದು ದೇಶ ದಿವಾಳಿಯಾಗುತ್ತಿರುವ ಪ್ರಾಥಮಿಕ ಲಕ್ಷಣ. ಇನ್ನಾದರೂ ಬಿಜೆಪಿ ಭಕ್ತರು ಮೋದಿ ಭ್ರಮೆಯಿಂದ ಹೊರಬರಲಿ ಎಂದು ತಿಳಿವಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏಕತಾ ಪ್ರತಿಮೆ ಅನಾವರಣವಾದ ಮರುದಿನವೇ ನೇತಾಜಿ ಪ್ರತಿಮೆಗೆ ಬೇಡಿಕೆ ಇಟ್ಟ ಕುಟುಂಬಸ್ಥರು

    ಏಕತಾ ಪ್ರತಿಮೆ ಅನಾವರಣವಾದ ಮರುದಿನವೇ ನೇತಾಜಿ ಪ್ರತಿಮೆಗೆ ಬೇಡಿಕೆ ಇಟ್ಟ ಕುಟುಂಬಸ್ಥರು

    ಕೋಲ್ಕತ್ತಾ: ಗುಜರಾತ್‍ನಲ್ಲಿ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಅನಾವರಣದ ಬೆನ್ನಲ್ಲೇ ನೇತಾಜಿ ಸುಭಾಷ್‍ಚಂದ್ರ ಬೋಸ್ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಬೇಡಿಕೆ ಇಟ್ಟಿದ್ದಾರೆ.

    ಹೌದು, ನವದೆಹಲಿ ಇಂಡಿಯಾ ಗೇಟ್ ಆವರಣದಲ್ಲಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಪ್ರತಿಮೆ ನಿರ್ಮಿಸಿ ಹಾಗೂ ಅವರ ಜನ್ಮದಿನವಾದ ಜನವರಿ 23ರನ್ನು ‘ವಿಮೋಚನಾ ದಿನ’ವೆಂದು ಘೋಷಿಸಬೇಕು ಎಂದು ನೇತಾಜಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಏಕತಾ ಪ್ರತಿಮೆ ನಿರ್ಮಾಣದಲ್ಲಿ ತನ್ನ ದಿಟ್ಟತನವನ್ನು ತೋರಿದೆ. ಹಾಗೇ ಮುಂದಿನ ವರ್ಷ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ವಿಮೋಚನಾ ದಿನವೆಂದು ಘೋಷಿಸಬೇಕು. ಜೊತೆಗೆ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನೇತಾಜಿ ಸೋದರನ ಮೊಮ್ಮಗ ಚಂದ್ರಕುಮಾರ್ ಭೋಸ್ ಅವರು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

    ಇದಕ್ಕೂ ಮುನ್ನ ಸುಭಾಷ್‍ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್ ಸ್ಥಾಪನೆ 75ನೇ ವರ್ಷದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ವಿಶೇಷವಾಗಿ ಕಾರ್ಯಕ್ರಮಕ್ಕೆ ಆಝಾದ್ ಹಿಂದ್ ಫೌಜ್ ಟೋಪಿಯನ್ನು ಧರಿಸಿ ಗಮನಸೆಳೆದಿದ್ದರು. ಈಗ ಹೊಸ ಬೇಡಿಕೆಯನ್ನು ಬೋಸ್ ಕುಟುಂಬಸ್ಥರು ಇಟ್ಟಿದ್ದು ಈಗ ಭಾರೀ ಚರ್ಚೆ ಆಗುತ್ತಿದೆ. ಇದನ್ನು ಓದಿ: ಸ್ವಾತಂತ್ರ್ಯ ಸಿಕ್ಕಿ ವರ್ಷಗಳು ಕಳೆದರೂ ನೇತಾಜಿ ಕನಸ್ಸನ್ನು ನನಸು ಮಾಡಲು ಸಾಧ್ಯವಾಗಿಲ್ಲ: ಮೋದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv