Tag: ncrb

  • ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿ – ದೇಶದಲ್ಲೇ ಬೆಂಗಳೂರು ನಂಬರ್ 1

    ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿ – ದೇಶದಲ್ಲೇ ಬೆಂಗಳೂರು ನಂಬರ್ 1

    ನವದೆಹಲಿ: ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿಯಲ್ಲಿ (Acid Attack) ಮಹಾನಗರಗಳ ಪೈಕಿ ಬೆಂಗಳೂರು (Bengaluru) ಮೊದಲನೇ ಸ್ಥಾನವನ್ನು ಪಡೆದಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

    ಈ ಪೈಕಿ ನವದೆಹಲಿ (New Delhi) ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಹಮದಾಬಾದ್ (Ahmedabad) ಮೂರನೇ ಸ್ಥಾನವನ್ನು ಪಡೆದಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು 8 ಆ್ಯಸಿಡ್ ದಾಳಿ ನಡೆದಿತ್ತು. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ (NCRB) ವರದಿಯಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ. ಇದನ್ನೂ ಓದಿ: ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಇಳಿಯಲು ಮುಂದಾದ ಯುವತಿ – ಯುವತಿ, ಕಂಡಕ್ಟರ್ ನಡುವೆ ಗಲಾಟೆ

    ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ ವರದಿ ಅನ್ವಯ ದೇಶದ 19 ಮಹಾನಗರಗಳ ಪೈಕಿ 2022ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ 8 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದು, ಇದು ಆ ವರ್ಷದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಕ್ರಮ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ವಿಜಯೇಂದ್ರ ಕಿಡಿ

    7 ಆ್ಯಸಿಡ್ ದಾಳಿ ಪ್ರಕರಣಗಳನ್ನು ದಾಖಲಿಸಿರುವ ದೆಹಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 5 ಪ್ರಕರಣಗಳೊಂದಿಗೆ ಗುಜರಾತ್‌ನ ಅಹಮದಾಬಾದ್ 3ನೇ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ 2 ಆ್ಯಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ಯುವತಿಯ ಮೇಲಿನ ಆ್ಯಸಿಡ್ ದಾಳಿ ಭಾರೀ ಸುದ್ದಿಯಾಗಿತ್ತು. ಇದನ್ನೂ ಓದಿ: ಕ್ಯಾಂಡಲ್‌ ಬೆಳಕಲ್ಲಿ ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿ ಬೆಂಕಿಗೆ ಬಲಿ

  • ಅತಿಹೆಚ್ಚು ಅತ್ಯಾಚಾರ ಕೇಸ್ ದಾಖಲಾಗಿರೋದು ರಾಜಾಸ್ಥಾನದಲ್ಲೇ, 3ನೇ ಸ್ಥಾನದಲ್ಲಿ ಯೋಗಿ ರಾಜ್ಯ

    ನವದೆಹಲಿ: ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ 2021ರ ಅತ್ಯಾಚಾರ ಪ್ರಕರಣಗಳ ವರದಿ ಬಿಡುಗಡೆ ಮಾಡಿದ್ದು, ಅತಿಹೆಚ್ಚು ಅತ್ಯಾಚಾರ ಕೇಸ್‌ಗಳು ದಾಖಲಾಗಿರುವುದು ರಾಜಾಸ್ಥಾನದಲ್ಲಿ, ಜೊತೆಗೆ ಉತ್ತರಪ್ರದೇಶ 3ನೇ ಸ್ಥಾನದಲ್ಲಿರುವುದಾಗಿ ಹೇಳಿದೆ.

    2021ರಲ್ಲಿ ರಾಜಸ್ಥಾನದಲ್ಲಿ 6,337, ಮಧ್ಯಪ್ರದೇಶದಲ್ಲಿ 2,947, ಉತ್ತರಪ್ರದೇಶದಲ್ಲಿ 2,845 ಹಾಗೂ ಮಹಾರಾಷ್ಟ್ರದಲ್ಲಿ 2,496 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ರಾಜಸ್ಥಾನದಲ್ಲಿ 5,310 ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ವರದಿಯು ಅತ್ಯಾಚಾರ ಪ್ರಕರಣಗಳಲ್ಲಿ ಶೇ.19.34 ರಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸಿದೆ. ಇದನ್ನೂ ಓದಿ: ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ 4 ಮಹಿಳೆಯರ ಸಾವು

    2021ರಲ್ಲಿ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 1,452 ಅತ್ಯಾಚಾರ ಪ್ರಕರಣಗಳಲ್ಲಿ 18 ವರ್ಷ ಒಳಪಟ್ಟ ಅಪ್ರಾಪ್ತರು ಬಲಿಯಾಗಿದ್ದಾರೆ. 4 ಪ್ರಕರಣಗಳಲ್ಲಿ 60 ವರ್ಷ ಮೇಲ್ಪಟ್ಟವರು ಸಿಲುಕಿದ್ದಾರೆ. ಅರ್ಧಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು, ಕುಟುಂಬದ ಸ್ನೇಹಿತರು, ನೆರೆಯವರು ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ಮನೆಕೆಲಸದಾಕೆಗೆ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ ನಾಯಕಿ – ಬಿಜೆಪಿಯಿಂದ ಅಮಾನತು

    ಇನ್ನೂ ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ 2ನೇ ಸ್ಥಾನದಲ್ಲಿದ್ದು ಶೇ.17ರಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ. ಈ ಪೈಕಿ ರಾಜಸ್ಥಾನದಲ್ಲಿ 40,738 ಪ್ರಕಣಗಳು ದಾಖಲಾಗಿದ್ದರೆ, 56,083 ಪ್ರಕರಣಗಳು ಉತ್ತರಪ್ರದೇಶದಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಈ ಬಾರಿಯ ಎನ್‌ಸಿಆರ್‌ಬಿ ವರದಿಯು ಅಪರಾಧ ಹೆಚ್ಚಿದಂತೆ ಅಪರಾಧಗಳ ನೋಂದಣಿಯೂ ಹೆಚ್ಚಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    ಅಗರ್ತಲಾ: ಕಳೆದ ವರ್ಷ ನಾಲ್ಕೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಆರೋಪಿಗೆ ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.

    ಖೋವೈ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ ಮೊದಲ ನಿದರ್ಶನ ಇದಾಗಿದ್ದು, ಅಪರಾಧಿ ಕಾಳಿಚರಣ್‌ಗೆ ಮರಣದಂಡನೆ ವಿಧಿಸಲಾಗಿದೆ. ಈ ಹಿಂದೆ ಆರೋಪಿ ಸಾಕ್ಷ್ಯಾಧಾರಗಳಿಂದ ತಪ್ಪಿಸಿಕೊಂಡಿದ್ದನು. ಸತತ ವಿಚಾರಣೆಯ ಬಳಿಕ ಸುಳ್ಳು ಮಾಹಿತಿ ಹಂಚಿಕೊಂಡಿರುವುದು ಸಾಬೀತಾಗಿದ್ದು ಅಪರಾಧಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

    STOP RAPE

    ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಕರಿ ದಾಸ್ ಅವರು ತನಿಖಾಧಿಕಾರಿ ಬಿದೀಶ್ವರ್ ಸಿನ್ಹಾರ ವರದಿಯನ್ನು ಪರಿಶೀಲನೆ ನಡೆಸಿದ ಬಳಿಕ ಮರಣದಂಡನೆಗೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 35 ಸಾಕ್ಷಿಗಳನ್ನು ದಾಖಲಿಸಲಾಗಿದೆ.

    ಏನಿದು ಘಟನೆ?: 2021ರ ಫೆಬ್ರವರಿ 22ರಂದು ಖೋವೈ ಜಿಲ್ಲೆಯ ಟೆಲಿಯಮುರಾದ ಡಸ್ಕಿ ಪ್ರದೇಶದಿಂದ 4 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಅದಾದ 6 ದಿನಗಳ ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಕಾಡಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹವನ್ನು ಹೊರತೆಗೆಯಲಾಗಿತ್ತು.

    Live Tv

  • ಎಸ್‍ಸಿ, ಎಸ್‍ಟಿಗಳ ಮೇಲೆ ಹೆಚ್ಚಿದ ದೌರ್ಜನ್ಯ ಪ್ರಕರಣಗಳು- NCRB ವರದಿ

    ಎಸ್‍ಸಿ, ಎಸ್‍ಟಿಗಳ ಮೇಲೆ ಹೆಚ್ಚಿದ ದೌರ್ಜನ್ಯ ಪ್ರಕರಣಗಳು- NCRB ವರದಿ

    ನವದೆಹಲಿ: ದೇಶದಲ್ಲಿ ಪರಿಶಿಷ್ಟ ಜಾತಿ (ಎಸ್‍ಸಿ), ಪರಿಶಿಷ್ಟ ಪಗಂಡದ (ಎಸ್‍ಟಿ) ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳು 2019ಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ ಶೇ.9.4ರಷ್ಟು ಮತ್ತು ಶೇ.9.3ರಷ್ಟು ಹೆಚ್ಚಾಗಿವೆ ಎಂದು ಬಿಡುಗಡೆಯಾಗಿರುವ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

    2020ರಲ್ಲಿ ಎಸ್‍ಸಿ ಗಳ ವಿರುದ್ಧ 50,291 ಅಪರಾಧಗಳು ದಾಖಲಾಗಿವೆ. 2019ರಲ್ಲಿ 45,961 ಪ್ರಕರಣ ದಾಖಲಾಗಿದ್ದವು. 2020ರಲ್ಲಿ ಎಸ್‍ಟಿ ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ 7,570 ಪ್ರಕರಣಗಳು ದಾಖಲಾಗಿದ್ದವು. ಇದನ್ನೂ ಓದಿ: ಆಪ್ತ ಸ್ನೇಹಿತನ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಸಿಎಂ

    2020ರಲ್ಲಿ ಎಸ್‍ಸಿ ಗಳ ವಿರುದ್ಧದ ಅಪರಾಧಗಳಲ್ಲಿ ಸಿಂಪಲ್ ಹರ್ಟ್ ಎಂದು ಒಟ್ಟು 16,543 (ಶೇ.32.9) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿದೆ. ಜೊತೆಗೆ ಎಸ್‍ಸಿ, ಎಸ್‍ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 4,273 (ಶೇ.8.5) ಅಪರಾಧಗಳು ಮತ್ತು 3,788 ಕ್ರಿಮಿನಲ್ ಬೆದರಿಕೆಗಳು ಎಸ್‍ಸಿ ಗಳ ವಿರುದ್ಧ ನಡೆದಿವೆ.

    ಎಸ್‍ಟಿಗಳ ವಿಷಯದಲ್ಲಿ ನಡೆದ ಒಟ್ಟು ಅಪರಾಧಗಳಲ್ಲಿ, ಸಿಂಪಲ್ ಹರ್ಟ್ ಎಂದು ಒಟ್ಟು 2,247(ಶೇ.27.2) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿವೆ. ಅತ್ಯಾಚಾರ ಅಪರಾಧಗಳು 1,137(ಶೇ.13.7), ಮಹಿಳೆಯರ ಮೇಲೆ ಹಲ್ಲೆ ನಡೆದಿರುವ 885 (ಶೇ.10.7) ಪ್ರಕರಣಗಳು ದಾಖಲಾಗಿವೆ.

    ಎಸ್‍ಸಿಗಳ ವಿರುದ್ಧ ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಅತ್ಯಧಿಕ ಅಪರಾಧಗಳು ನಡೆದಿವೆ. ಎಸ್‍ಟಿ ಗಳ ವಿರುದ್ಧ ಅತ್ಯಧಿಕ ಅಪರಾಧಗಳು ಕೇರಳ, ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳಿದೆ.

  • ಮಹಿಳೆಯರಿಗೆ ಸುರಕ್ಷಿತವಲ್ಲ ರಾಷ್ಟ್ರ ರಾಜಧಾನಿ ದೆಹಲಿ

    ಮಹಿಳೆಯರಿಗೆ ಸುರಕ್ಷಿತವಲ್ಲ ರಾಷ್ಟ್ರ ರಾಜಧಾನಿ ದೆಹಲಿ

    ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೊನಾ ಮತ್ತು ಲಾಕ್‍ಡೌನ್ ಮಧ್ಯೆಯೂ ಭಾರಿ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ಬೆಂಗಳೂರು, ಮುಂಬೈ ಸೇರಿದಂತೆ ಇತರೆ ಮಹಾ ನಗರಗಳಿಗಿಂತಲೂ ದೆಹಲಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು ಮಹಿಳೆಯರ ಸುರಕ್ಷಿತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?

    2019 ಮತ್ತು 2020 ರ ನಡುವೆ ಶೇ.18 ರಷ್ಟು ಪ್ರಕರಣಗಳು ಕೊರೊನಾ ಮತ್ತು ಲಾಕ್ಡೌನ್ ನಿಂದ ಕುಸಿದಿದ್ದರೂ 2020 ರಲ್ಲಿ ಒಟ್ಟು 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನವೊಂದಕ್ಕೆ 650 ಕ್ಕೂ ಹೆಚ್ಚು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಇತರೆ ಮಹಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಳೆದ ವರ್ಷ 19,964 ಮತ್ತು ಮುಂಬೈನಲ್ಲಿ 50,000 ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ಹೇಳಿದೆ.

    ದೆಹಲಿಯಲ್ಲಿ 2019 ರಲ್ಲಿ 5901 ಕಿಡ್ಯಾಪ್ ಪ್ರಕರಣಗಳು ದಾಖಲಾದರೆ 2020 ರಲ್ಲಿ 4062 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 13395 ಮಹಿಳೆಯರ ಮೇಲೆ ದೌರ್ಜನ್ಯ ಆದ್ರೆ 2020 ರಲ್ಲಿ 10,093 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 521 ಮಹಿಳೆಯರ ಕೊಲೆಯಾದ್ರೆ 2020 ರಲ್ಲಿ 472 ಮಹಿಳೆಯರ ಕೊಲೆಯಾಗಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

    ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 10,093 ಕ್ಕೂ ಹೆಚ್ಚು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಮುಂಬೈ, ಪುಣೆ, ಗಾಜಿಯಾಬಾದ್, ಬೆಂಗಳೂರು ಅಥವಾ ಇಂದೋರ್ ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ದೆಹಲಿಯಲ್ಲಿ ದಾಖಲಾಗಿದೆ.