Tag: NCPCR

  • `ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ಬೋರ್ನ್‍ವಿಟಾವನ್ನು ತೆಗೆದುಹಾಕಿ: ಕೇಂದ್ರದಿಂದ ಮಹತ್ವದ ಆದೇಶ

    `ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ಬೋರ್ನ್‍ವಿಟಾವನ್ನು ತೆಗೆದುಹಾಕಿ: ಕೇಂದ್ರದಿಂದ ಮಹತ್ವದ ಆದೇಶ

    ನವದೆಹಲಿ: ಆರೋಗ್ಯಕರ ಪಾನಿಯ (Health Drinks) ವರ್ಗದಿಂದ ಬೋರ್ನ್‍ವಿಟಾವನ್ನು (Bournvita) ತೆಗೆದು ಹಾಕುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ. ಪೋರ್ಟಲ್ ಮತ್ತು ಪ್ಲಾಟ್‍ಫಾರ್ಮ್‍ಗಳಲ್ಲಿ ಬೋರ್ನ್‍ವಿಟಾ ಸೇರಿದಂತೆ ಎಲ್ಲಾ ಪಾನೀಯಗಳು ಈ ವರ್ಗದಿಂದ ಕೈಬಿಡುವಂತೆ ಆದೇಶ ನೀಡಲಾಗಿದೆ.

    ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್‌ನ (NCPCR) ತನಿಖೆಯಯಲ್ಲಿ ಬೋರ್ನ್‍ವಿಟಾ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪನಿಗಳು ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿವೆ. ಅಲ್ಲದೇ ಆರೋಗ್ಯಕರ ಪಾನೀಯಗಳು ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‍ಸಿಪಿಸಿಆರ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸೂಚಿಸಿತ್ತು. ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ಬೋರ್ನ್‍ವಿಟಾದ ಅನಾರೋಗ್ಯಕರ ಅಂಶಗಳ ಬಗ್ಗೆ ಮೊದಲು ಯೂಟ್ಯೂಬರ್ ಒಬ್ಬ ವಿಡಿಯೋದಲ್ಲಿ ಚರ್ಚೆ ಹುಟ್ಟುಹಾಕಿದ್ದರು. ವಿಡಿಯೊದಲ್ಲಿ ಪೌಡರ್ ಸೆಪ್ಲಿಮೆಂಟ್ ಕುರಿತು ಚರ್ಚಿಸಿದ್ದ. ಆತ ತನ್ನ ಪ್ರಯೋಗದಲ್ಲಿ ಬೋರ್ನ್‍ವಿಟಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಇದೆ ಎಂದು ಹೇಳಿದ್ದ. ಅಲ್ಲದೇ ಅದರಲ್ಲಿರುವ ಅತಿಯಾದ ಸಕ್ಕರೆ, ಕೋಕೋ ಮತ್ತು ಹಾನಿಕಾರಕ ಕೃತಕ ಬಣ್ಣಗಳು ಕ್ಯಾನ್ಸರ್ ಸೇರಿದಂತೆ ಮಕ್ಕಳಲ್ಲಿ ಗಂಭೀರವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ಸೂಚಿಸಿದ್ದ.

    ಈ ವಿಡಿಯೋ ವ್ಯಾಪಕ ವೈರಲ್ ಆಗಿ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ ಹೆಚ್ಚಾಗಿತ್ತು. ಇದೀಗ ಬೋರ್ನ್‍ವಿಟಾ ಪೇಯವನ್ನು `ಆರೋಗ್ಯ ಪಾನೀಯ’ ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಮೋದಿ ವಿರುದ್ಧ ಮಾತನಾಡಲು ಏನಿಲ್ಲವೆಂದು ಸಂವಿಧಾನ ಬದಲಾವಣೆಯ ಭಯ ಹುಟ್ಟಿಸುತ್ತಾರೆ: ಬೊಮ್ಮಾಯಿ

  • ಸೋನು ಗೌಡ ಕೇಸ್ – ಬಾಲಕಿ ಪೋಷಕರಿಗೆ ಕೌನ್ಸಿಲಿಂಗ್‌ಗೆ ಮುಂದಾದ ರಕ್ಷಣಾ ಆಯೋಗ

    ಸೋನು ಗೌಡ ಕೇಸ್ – ಬಾಲಕಿ ಪೋಷಕರಿಗೆ ಕೌನ್ಸಿಲಿಂಗ್‌ಗೆ ಮುಂದಾದ ರಕ್ಷಣಾ ಆಯೋಗ

    ಬೆಂಗಳೂರು: ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು (Parents) ಕೌನ್ಸಿಲಿಂಗ್ (Counselling) ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮುಂದಾಗಿದೆ. ಕೌನ್ಸಿಲಿಂಗ್‌ನಲ್ಲಿ ಹಲವು ಅಂಶಗಳನ್ನು ಚರ್ಚಿಸಲಿದೆ. ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮ, ಇಲ್ಲವಾದಲ್ಲಿ ತಂದೆ ತಾಯಿಗೆ ಮಗುವನ್ನ ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ.

    ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಮುಂದಾಗಿದೆ. ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಮೇಲೆ ಪೋಷಕರು ಯಾಕೆ ದೂರು ಕೊಡಲಿಲ್ಲ? ಅವರಿಂದ ಆಮಿಷಕ್ಕೆ ಒಳಗಾಗಿದ್ರಾ ಎಂಬ ಆಯಾಮದಲ್ಲಿ ಕೌನ್ಸಿಲಿಂಗ್ ಮಾಡಿ ಮಗುವನ್ನು ರಕ್ಷಣೆ ಮಾಡೋಕೆ ಮುಂದಾಗಿದೆ. ಇದನ್ನೂ ಓದಿ: ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

    ಸದ್ಯ ಮಗು ಬಾಲಿಕ ಆಶ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿದೆ. ದತ್ತು ಪಡೆಯುವಾಗ ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿಲ್ಲ. ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಿ ಅವರದ್ದು ತಪ್ಪು ಇದ್ದರೆ ಕ್ರಮಕ್ಕೆ ಮುಂದಾಗುತ್ತಾರೆ. ತಂದೆ ತಾಯಿ ತಪ್ಪು ಇಲ್ಲದಿದ್ದರೆ ಮಗುವನ್ನು ತಂದೆ ತಾಯಿಗೆ ವಾಪಸ್ ಒಪ್ಪಿಸಲು ತಯಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಒಂದೇ ದೇಹದ ಎರಡು ಕಣ್ಣುಗಳು: ಹೆಚ್‍ಡಿಕೆ

    ಅತ್ತ ಸೋನು ಜೈಲಿನಲ್ಲಿದ್ದರೆ ಇತ್ತ ಮಕ್ಕಳ ಆಯೋಗ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡೋದಕ್ಕೆ ಮುಂದಾಗಿದೆ. ಕೌನ್ಸಿಲಿಂಗ್ ಬಳಿಕ ಏನೆಲ್ಲ ಬೆಳವಣಿಗೆಗಳು ಆಗಲಿವೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಮಹುವಾ ಮೊಯಿತ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

  • 200 ಮಕ್ಕಳನ್ನು ಶಾಲೆಗೆ ಕಳಿಸದೇ ಇಸ್ಲಾಮಿಕ್ ಶಿಕ್ಷಣ – ಬೆಂಗಳೂರಿನ ಅನಾಥಾಶ್ರಮದ ಮೇಲೆ NCPCR ದಾಳಿ

    200 ಮಕ್ಕಳನ್ನು ಶಾಲೆಗೆ ಕಳಿಸದೇ ಇಸ್ಲಾಮಿಕ್ ಶಿಕ್ಷಣ – ಬೆಂಗಳೂರಿನ ಅನಾಥಾಶ್ರಮದ ಮೇಲೆ NCPCR ದಾಳಿ

    ಬೆಂಗಳೂರು: ಕಾವಲ್‌ ಬೈರಸಂದ್ರದಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ (Muslim Community) ಸೇರಿದ ಅನಾಥಾಶ್ರಮದ (Orphanage) ಮೇಲೆ ರಾಷ್ಟ್ರೀಯ ಮಕ್ಕಳ ಆಯೋಗ (NCPCR) ದಾಳಿ ನಡೆಸಿದೆ.

    200 ಅನಾಥ ಮಕ್ಕಳನ್ನು ಶಾಲೆಗೆ ಕಳಿಸದೇ ಇಸ್ಲಾಮಿಕ್ ಶಿಕ್ಷಣ (Islamic education) ನೀಡಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ (Priyank Kanoongo) ಆರೋಪಿಸಿದ್ದಾರೆ. ತಾಲಿಬಾನಿ ಮಾದರಿಯಲ್ಲಿ ಇಲ್ಲಿ ಮಕ್ಕಳು ಬದುಕುವಂತಾಗಿದೆ. ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ಕಲ್ಪಿಸಿಲ್ಲ. ಮಕ್ಕಳನ್ನು ಕೂಡಿ ಹಾಕಲಾಗಿದೆ ಎಂದು ಆಪಾದಿಸಿದ್ದಾರೆ.

    ಖುದ್ದು ನಾನೇ ಹೋಗಿ ಸ್ಥಳ ಪರಿಶೀಲನೆ ಮಾಡಿದ್ದೇನೆ. ಅಲ್ಲಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಮಾಡಿ ಮಕ್ಕಳನ್ನು ಕೂಡಿ ಹಾಕಿ ಹಾಕಲಾಗಿದೆ. ಎಫ್‌ಐಆರ್‌ ದಾಖಲಿಸುವಂತೆ ನಾವು ಕರ್ನಾಟಕ ಸರ್ಕಾರದ (Karnataka Government) ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡುತ್ತಿದ್ದೇವೆ. ಮುಂದಿನ ಕ್ರಮಕ್ಕೆ ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಈ ಆರೋಪವನ್ನು ಅನಾಥಾಶ್ರಮದ ಟ್ರಸ್ಟಿ ಅಶ್ರಫ್ ಖಾನ್ ಅಲ್ಲಗಳೆದಿದ್ದಾರೆ. ಅನಾಥಾಶ್ರಮದಲ್ಲಿ ಮಕ್ಕಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದೇವೆ. ಶಾಲೆಯಲ್ಲಿ ಓದಿಸಲು ನಮ್ಮಲ್ಲಿ ಹಣವಿಲ್ಲ. ಅದಕ್ಕೆ ನಾವೇ ಇಸ್ಲಾಮಿಕ್ ಶಿಕ್ಷಣ ಕೊಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆಯೋಗದವರು ಸುಳ್ಳು ಆರೋಪ ಮಾಡಿದ್ದಾರೆ. ಅನಾಥಶ್ರಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಪಕ್ಕದ ಶಾಲೆಯಲ್ಲಿ ಮಕ್ಕಳನ್ನು ಓದಿಸಲು ಹಣವಿಲ್ಲ. ಈ ಅನಾಥಾಶ್ರಮದಲ್ಲಿ ಇಸ್ಲಾಮಿಕ್ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

     

  • ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ – ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಪತ್ರ ಬರೆದ ಎನ್‌ಸಿಪಿಸಿಆರ್

    ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ – ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಪತ್ರ ಬರೆದ ಎನ್‌ಸಿಪಿಸಿಆರ್

    ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದ ಅಭ್ಯರ್ಥಿ ದುರ್ಗೇಶ್ ಪಾಠಕ್, ದೆಹಲಿಯ ರಾಜಿಂದರ್ ಅವರ ನಗರ ವಿಧಾನಸಭಾ ಉಪಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಬಗ್ಗೆ ಪೊಲೀಸರಿಗೆ ಎಫ್‌ಐಆರ್ ದಾಖಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ.

    ಎಎಪಿ ನಾಯಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಮಕ್ಕಳ ಹಕ್ಕುಗಳ ಸಂಸ್ಥೆ ಮುಖ್ಯ ಚುನಾವಣಾ ಆಯುಕ್ತರಿಗೂ ಪತ್ರ ಬರೆದಿದೆ. ಎರಡೂ ಪತ್ರಗಳನ್ನು, ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ನೀಡಿರುವುದಾಗಿ ಎನ್‌ಸಿಪಿಸಿಆರ್ ತಿಳಿಸಿದೆ. ಇದನ್ನೂ ಓದಿ: ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

    ಅಪ್ರಾಪ್ತ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ಸಣ್ಣ ಮೊತ್ತದ ಹಣ ನೀಡಿ, ಅವರನ್ನು ಕರಪತ್ರಗಳನ್ನು ಹಂಚಲು, ಪೋಸ್ಟರ್‌ಗಳನ್ನು ಹಚ್ಚಲು, ಬ್ಯಾನರ್‌ಗಳನ್ನು ನೇತು ಹಾಕಲು ಹಾಗೂ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ಬಳಸಿಕೊಂಡಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಒದಗಿಸಿರುವುದಾಗಿಯೂ ಎನ್‌ಸಿಪಿಸಿಆರ್ ಪತ್ರದಲ್ಲಿ ತಿಳಿಸಿದೆ. ಇದನ್ನೂ ಓದಿ: ಪ್ರಧಾನಿಯೊಂದಿಗೆ ಭಾಗವಹಿಸಿದ್ದು ಸಂತಸ ತರಿಸಿದೆ: ಯದುವೀರ್

    ಎಎಪಿ ಪಕ್ಷ ಹಾಗೂ ಅದರ ಅಭ್ಯರ್ಥಿ ದುರ್ಗೇಶ್ ಪಾಠಕ್, ಮಕ್ಕಳಿಗೆ ದಿನಕ್ಕೆ 100 ರೂ. ಯ ಆಮಿಷ ನೀಡಿ ರಾಜಿಂದರ್ ನಗರ ಕ್ಷೇತ್ರದಲ್ಲಿ ಕರಪತ್ರಗಳನ್ನು ಹಂಚಲು ಅಲೆದಾಡಿಸುತ್ತಿದ್ದಾರೆ. ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.

    Live Tv

  • ಹಿಜಬ್ ಗಲಾಟೆಗೆ ದಾರುಲ್ ಉಲೂಮ್ ದಿಯೋಬಂದ್ ಕಾರಣ: ಎನ್‌ಸಿಪಿಸಿಆರ್

    ಹಿಜಬ್ ಗಲಾಟೆಗೆ ದಾರುಲ್ ಉಲೂಮ್ ದಿಯೋಬಂದ್ ಕಾರಣ: ಎನ್‌ಸಿಪಿಸಿಆರ್

    ನವದೆಹಲಿ: ಮುಸ್ಲಿಂ ಯುವತಿಯರಿಗೆ ಹಿಜಬ್ ಧರಿಸಲು ಮುಸ್ಲಿಂ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್ ಪ್ರೇರಣೆ ನೀಡುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ(ಎನ್‌ಸಿಪಿಸಿಆರ್)ದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಹೇಳಿದ್ದಾರೆ. ಈ ಮೂಲಕ ಹಿಜಬ್ ಗಲಬೆ ಹೊಸ ತಿರುವು ಪಡೆದುಕೊಂಡಿದೆ.

    ಎನ್‌ಸಿಪಿಸಿಆರ್ ತಮ್ಮ ವೆಬ್‌ಸೈಟ್‌ನಲ್ಲಿ ಮಕ್ಕಳ ಹಕ್ಕನ್ನು ಉಲ್ಲಂಘಿಸುವ ಫತ್ವಾ ವಿಷಯನ್ನು ಉಲ್ಲೇಖಿಸಿದ್ದಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಕನುಂಗೋ ತಿಳಿಸಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು

    ಹಿಜಬ್ ಅನುಮತಿಸದ ಶಾಲೆಗಳಿಂದ ಮುಸ್ಲಿಂ ಹುಡುಗಿಯರನ್ನು ಹೊರ ಹಾಕಬೇಕು ಹಾಗೂ ಪುರುಷ ಶಿಕ್ಷಕನಿದ್ದಲ್ಲಿ ನಿರ್ದಿಷ್ಟ ವಯಸ್ಸಿನ ಬಳಿಕ ಹುಡುಗಿಯರನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಬಿಡಬಾರದು ಎಂದು ಫತ್ವಾದಲ್ಲಿ ತಿಳಿಸಲಾಗಿದೆ. ಹೀಗಾಗಿ ಹಿಜಬ್ ಪ್ರತಿಭಟನೆಯನ್ನು ದಾರುಲ್ ಉಲೂಮ್ ದಿಯೋಬಂದ್ ಆಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತದ ಎಂಜಿನಿಯರ್ ಕ್ಷೇತ್ರದ ವೈಶಿಷ್ಟ್ಯ – ಸಿದ್ಧವಾಗುತ್ತಿದೆ ಕೇಬಲ್ ರೈಲ್ವೇ ಸೇತುವೆ

    ಎನ್‌ಸಿಪಿಸಿಆರ್ ಈ ಕುರಿತು ಜನವರಿ 15ರಂದು ನೋಟಿಸ್ ಕಳುಹಿಸಿದೆ ಹಾಗೂ ಅದರ ಉತ್ತರ ಈ ವಾರ ಬರಲಿದೆ ಎಂದು ತಿಳಿಸಿದ್ದಾರೆ.

  • Mekedatu Padayatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    Mekedatu Padayatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    ನವದೆಹಲಿ: ಸರ್ಕಾರದ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ(ಎನ್‌ಸಿಪಿಸಿಆರ್‌) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.

    ಪಾದಯಾತ್ರೆ ವೇಳೆ ಶಾಲಾ ಮಕ್ಕಳನ್ನು ಶಿವಕುಮಾರ್‌ ಭೇಟಿಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಪತ್ರ ಬರೆದಿದೆ.

    ಪತ್ರದಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿರುವ ಶಿವಕುಮಾರ್‌ ವಿರುದ್ಧ ಕ್ರಮ ಕೈಗೊಂಡು 7 ದಿನಗಳ ಒಳಗಡೆ ವರದಿ ನೀಡುವಂತೆ ಸೂಚಿಸಿದೆ. ಪತ್ರದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಶಾಲಾ ಮಕ್ಕಳೊಂದಿಗೆ ಇರುವ ವಿಡಿಯೋದ ಟ್ವಿಟ್ಟರ್‌ ಲಿಂಕ್‌ ಅನ್ನು ಉಲ್ಲೇಖಿಸಿದೆ. ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಆಯೋಗ ಸೂಚಿಸಿದೆ. ಇದನ್ನೂ ಓದಿ: ಕೊರೊನಾ ಟೆಸ್ಟ್‌ ಮಾಡಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ಮಾಡ್ತಿದೆ ಬಿಜೆಪಿ: ಡಿಕೆಶಿ

    ಶಿವಕುಮಾರ್‌ ಅವರು ಪಾದಯಾತ್ರೆ ವೇಳೆ ವಿಶ್ವೋದಯ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆ ಮಕ್ಕಳ ಗುಂಪಿನ ನಡುವೆ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್‌ ಧರಿಸದೇ ಫೋಟೊ ತೆಗೆಸಿಕೊಂಡಿದ್ದು ಟೀಕೆಗೆ ಗುರಿಯಾಗಿತ್ತು.  ಇದನ್ನೂ ಓದಿ: ಡಿಕೆಶಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಕಳುಹಿಸಿದ್ದಾರೆ: ಡಿ.ಕೆ ಸುರೇಶ್