Tag: NCMC

  • ಕಾರ್ಡ್‌ ಇದ್ರೂ ಪ್ರಯಾಣ ಆಗಲ್ಲ – ಮೊಬಿಲಿಟಿ ಕಾರ್ಡ್‌ ಬಳಸುವ ಮೆಟ್ರೋ ಬಳಕೆದಾರರಿಗೆ ಶಾಕ್‌

    ಕಾರ್ಡ್‌ ಇದ್ರೂ ಪ್ರಯಾಣ ಆಗಲ್ಲ – ಮೊಬಿಲಿಟಿ ಕಾರ್ಡ್‌ ಬಳಸುವ ಮೆಟ್ರೋ ಬಳಕೆದಾರರಿಗೆ ಶಾಕ್‌

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸುವ ಗ್ರಾಹರಿಗೆ ಬಿಗ್‌ ಶಾಕ್ ಎದುರಾಗಿದೆ. ಎನ್‌ಸಿಎಂಸಿ ಕಾರ್ಡ್‌ ಹೊಂದಿರುವ ಪ್ರಯಾಣಿಕರು ತಮ್ಮ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಮತ್ತು ಮೆಟ್ರೋ ಪ್ರಯಾಣಗಳಿಗೆ ಅವುಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ.

    ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಹಳೆಯ ಮೊಬಿಲಿಟಿ ಕಾರ್ಡ್‌ಗಳಿಗೂ ಕೂಡ ರೀಚಾರ್ಜ್ ಸಮಸ್ಯೆ ಆಗುತ್ತಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ರಿಚಾರ್ಜ್‌ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರ್ಡ್‌ನಲ್ಲಿ ದುಡ್ಡು ಇದ್ದರೂ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

    ಮೊಬಿಲಿಟಿ ಕಾರ್ಡ್‌ನಲ್ಲಿ ಸಮಸ್ಯೆ ಆಗುತ್ತಿದ್ದಂತೆ ಏಪ್ರಿಲ್‌ 15 ರವರೆಗೂ NCMC ಕಾರ್ಡ್‌ ವಿತರಣೆ ಮಾಡದೇ ಇರಲು ಬಿಎಂಆರ್‌ಸಿಎಲ್‌ ನಿರ್ಧಾರ ತೆಗೆದುಕೊಂಡಿದೆ.

    ಸಮಸ್ಯೆ ಯಾಕಾಯ್ತು?
    NCMC  ಪೂರೈಸುವ RBL ಬ್ಯಾಂಕ್ ತನ್ನ ಮಾರಾಟಗಾರರನ್ನು ಬದಲಾಯಿಸಿದ ನಂತರ ಬ್ಯಾಕೆಂಡ್ ವ್ಯವಸ್ಥೆಗಳಲ್ಲಿನ ಪರಿವರ್ತನೆಯಿಂದ ಈ ಸಮಸ್ಯೆಗಳು ಉಂಟಾಗಿವೆ. ಏಪ್ರಿಲ್ 15 ರೊಳಗೆ ಈ ಸಮಸ್ಯೆ ಬಗೆಹರಿಯಲಿದೆ ಎಂದು  BMRCL  ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್‌ ಹಾಜರ್

    ಸಂಪರ್ಕವಿಲ್ಲದ ಸ್ಮಾರ್ಟ್ ಕಾರ್ಡ್‌ಗಳು, ಟೋಕನ್‌ಗಳು ಅಥವಾ QR ಕೋಡ್‌ಗಳನ್ನು ಬಳಸುವವರಿಗೆ ಹೋಲಿಸಿದರೆ NCMC ಕಾರ್ಡ್ ಬಳಕೆದಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ.

    ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ನಮ್ಮ ಮೆಟ್ರೋ, ಬಿಎಂಟಿಸಿ ಸೇರಿ ದೇಶದ ಎಲ್ಲ ಸಾರಿಗೆ ವ್ಯವಸ್ಥೆಗಳು ಹಾಗೂ ಚಿಲ್ಲರೆ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ಬಳಕೆ ಮಾಡಬಹುದು.

  • ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ನವದೆಹಲಿ: ಇಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ತಮ್ಮ ಬಜೆಟ್‍ನಲ್ಲಿ ಒಂದು ದೇಶ, ಒಂದು ಕಾರ್ಡ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್‍ಸಿಎಂಸಿ) ಮಾನದಂಡಗಳ ಆಧಾರದ ಮೇಲೆ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಾವತಿ ವ್ಯವಸ್ಥೆಯನ್ನು ಮಾರ್ಚ್, 2019ರಲ್ಲಿ ಪ್ರಧಾನ ಮಂತ್ರಿ ಉದ್ಘಾಟಿಸಿದ್ದರು. ಎನ್‍ಸಿಎಂಸಿ ದೇಶೀಯವಾಗಿ ಅಭಿವೃದ್ಧಿಗೊಂಡಿದ್ದು, ಹಲವು ಸೇವೆಗಳನ್ನು ಗ್ರಾಹಕರು ಈ ಒಂದೇ ಕಾರ್ಡ್‍ನಿಂದ ಪಡೆಯಬಹುದಾಗಿದೆ.

    ಕಾರ್ಡ್ ಒಂದು ಉಪಯೋಗ ಹಲವು ಎನ್ನುವುದೇ ಈ ಕಾರ್ಡ್‍ನ ವಿಶೇಷತೆಯಾಗಿದ್ದು, ಸಾರಿಗೆ, ಮೆಟ್ರೊ ಸೇವೆ, ಟೋಲ್ ಸುಂಕ, ಪಾರ್ಕಿಂಗ್ ಶುಲ್ಕ ಪಾವತಿ, ರೀಟೇಲ್ ಶಾಪಿಂಗ್, ದೇಶದ ಎಲ್ಲಾ ಕಡೆಯೂ ಹಣ ಪಡೆಯುವ ಅವಕಾಶ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳಿಗೆ ಈ ಕಾರ್ಡ್ ಉಪಯೋಗಿಸಬಹುದು. ಅಲ್ಲದೆ ಈ ಎನ್‍ಸಿಎಂಸಿ ರುಪೇ ಕಾರ್ಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಇದನ್ನು ಬಳಕೆದಾರರು ಮೆಟ್ರೋ, ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್, ಎಟಿಎಂನಿಂದ ಹಣ ತೆಗೆಯಲು ಸಹ ಉಪಯೋಗಿಸಬಹುದಾಗಿದೆ.

    ಈ ಎನ್‍ಸಿಎಂಸಿ ಕಾರ್ಡ್ ರುಪೇ ಕಾರ್ಡ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರಯಾಣ ಸಂಬಂಧಿ ಸಮಸ್ಯೆಗಳನ್ನು ಈ ಕಾರ್ಡ್‍ನಿಂದ ದೂರವಾಗುತ್ತದೆ. ಮೆಟ್ರೊ, ಬಸ್, ರೈಲಿನಲ್ಲಿ ಪ್ರಯಾಣ ಮಾಡುವಾಗ ಅಥವಾ ಟೋಲ್‍ಗಳಲ್ಲಿ ಸುಂಕ ಕಟ್ಟುವಾಗ, ವಾಹನ ಪಾರ್ಕಿಂಗ್ ಮಾಡುವಾಗ ಚಿಲ್ಲರೆಯ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಆಟೋಮ್ಯಾಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಎನ್‍ಸಿಎಂಸಿ ಕಾರ್ಡ್‍ನಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು.

    ನಾನಾ ಸಂಸ್ಥೆಗಳು ಕಾರ್ಡ್ ವಿತರಿಸುತ್ತಿದ್ದ ಕಾರಣಕ್ಕೆ ಅವುಗಳು ಸೇವೆ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಪಡೆಯಲು ಅವಕಾಶ ಇತ್ತು. ಇದು ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ, ಈ ಬಂದಿರುವ ಎನ್‍ಸಿಎಂಸಿ ಬಳಸಿ ದೇಶದ ಎಲ್ಲೆಡೆ ಸೇವೆಯನ್ನು ಪಡೆಯಬಹುದಾಗಿದೆ ಎಂದು ಮೋದಿ ಹೇಳಿದ್ದರು.

    ಈ ಒಂದು ದೇಶ ಒಂದು ಕಾರ್ಡ್ ತಂತ್ರಜ್ಞಾನವು ಕೇವಲ ಆಯ್ದ ದೇಶಗಳಲ್ಲಿ ಮಾತ್ರ ಇದೆ. ಈಗ ಭಾರತವು ಈಗ ಕೂಡ ಈ ಪಟ್ಟಿಗೆ ಸೇರಿದೆ. ವಿದೇಶ ತಂತ್ರಜ್ಞಾನವನ್ನು ಹೆಚ್ಚಿನ ಕಾಲದವರೆಗೆ ಉಪಯೋಗಿಸದೆ ಮೇಕ್ ಇನ್ ಇಂಡಿಯಾ ಮೂಲಕ ಈ ಕಾರ್ಡ್ ರೂಪುಗೊಂಡಿದೆ. ಬ್ಯಾಂಕ್‍ಗಳು, ವಿವಿಧ ಸಚಿವಾಲಯಗಳು ಹಾಗೂ ಸಕಾರಿ ಇಲಾಖೆಗಳ ಜೊತೆ ಚರ್ಚೆ ನಡೆಸಿ ಹಾಗೂ ಹಲವು ಪ್ರಕ್ರಿಯೆಗಳು ಮುಗಿದ ಬಳಿಕ ಈ ನೂತನ ಕಾರ್ಡ್ ಕಾರ್ಯರೂಪಕ್ಕೆ ಬಂದಿದೆ. ಅಂದರೆ ರುಪೇ ಕಾರ್ಡ್ ಅನ್ನು ಮೊಬಿಲಿಟಿ ಕಾರ್ಡ್ ಜೊತೆ ವಿಲೀನ ಮಾಡಲಾಗಿದೆ.

    ಎನ್‍ಸಿಎಂಸಿಯಲ್ಲಿ ಯಾವೆಲ್ಲ ಸೇವೆ ಲಭ್ಯ?
    1. ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯೇ ಈ ಎನ್‍ಸಿಎಂಸಿ ಇರುತ್ತದೆ. ಎಸ್‍ಬಿಐ, ಪಿಎನ್‍ಬಿ ಸೇರಿದಂತೆ 25 ಬ್ಯಾಂಕ್‍ಗಳಲ್ಲಿ ಈ ಕಾರ್ಡ್ ಲಭ್ಯವಿದೆ.
    2. ಇದರಿಂದ ಮೆಟ್ರೊ, ಬಸ್, ಸಬರ್ಬನ್ ರೈಲ್ವೆ, ಸ್ಮಾರ್ಟ್ ಸಿಟಿ ಮತ್ತು ರೀಟೇಲ್ ಶಾಪಿಂಗ್ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ.

    3. ಟೇಲ್ ಗೇಟ್‍ಗಳಲ್ಲಿ ಮತ್ತು ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಕಟ್ಟಲು ಈ ಕಾರ್ಡ್ ಉಪಯುಕ್ತ.
    4. ಇದರಿಂದ ಬಿಲ್ ಪೇಮೆಂಟ್ ಕೂಡ ಮಾಡಬಹುದು. ಅಲ್ಲದೆ ಇದರಲ್ಲಿ ಕ್ಯಾಶ್‍ಬ್ಯಾಕ್ ಆಫರ್ ಗಳೂ ಲಭ್ಯವಿದ್ದು, ಸಾವಿರಕ್ಕೂ ಅಧಿಕ ಸೇವೆಗಳ ಆನಂದಿಸಬಹುದು.
    5. ಅಷ್ಟೇ ಅಲ್ಲದೆ ಈ ಕಾರ್ಡ್ ಬಳಕೆದಾರರು ಎಟಿಎಂಗಳಲ್ಲಿ ಶೇ.5ರಷ್ಟು ಕ್ಯಾಶ್‍ಬ್ಯಾಕ್ ಪಡೆಯಬಹುದು. ವಿದೇಶಕ್ಕೆ ತೆರಳಿದಾಗ ಮರ್ಚೆಂಟ್‍ಗಳ ಔಟ್‍ಲೆಟ್‍ಗಳಲ್ಲಿ ಶೇ.10ರಷ್ಟು ಕ್ಯಾಶ್‍ಬ್ಯಾಕ್ ಈ ಕಾರ್ಡ್ ಹಿಂದಿದವರಿಗೆ ಸಿಗುತ್ತದೆ.