Tag: NCERT

  • NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

    NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

    ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ NCERT ತನ್ನ 8ನೇ ತರಗತಿ ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ದೆಹಲಿ ಸುಲ್ತಾನರ (Delhi Sultanate) ಕ್ರೌರ್ಯ ಮತ್ತು ಮೊಘಲರ ಧಾರ್ಮಿಕ ಅಸಹಿಷ್ಣುತೆಯನ್ನು ಒತ್ತಿಹೇಳುವ ಹೊಸ ವಿಷಯ ಸೇರಿಸಿದೆ.

    ಈ ಪರಿಷ್ಕರಣೆಯಿಂದ ಉಂಟಾಗಬಹುದಾದ ವಿವಾದವನ್ನು ತಡೆಯಲು ಒಂದು ಡಿಸ್ಕ್ಲೈಮರ್‌ನೊಂದಿಗೆ ಹೊರಡಿಸಿದ್ದು, ಇದರಲ್ಲಿ ಇತಿಹಾಸದ ವಿವರಣೆಯು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ರೂಪಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

    ಪರಿಷ್ಕೃತ ಪಠ್ಯಪುಸ್ತಕವು ದೆಹಲಿ ಸುಲ್ತಾನರ ಆಡಳಿತ (1206-1526) ಮತ್ತು ಮೊಘಲ್ ಸಾಮ್ರಾಜ್ಯದ (1526-1857) ಕಾಲಘಟ್ಟದಲ್ಲಿ (Mughal Periods) ಕಂಡುಬಂದ ಧಾರ್ಮಿಕ ಅಸಹಿಷ್ಣುತೆಯ ಕೆಲವು ಘಟನೆಗಳನ್ನು ಒಳಗೊಂಡಿದೆ. ಹೊಸ ಪಠ್ಯಪುಸ್ತಕದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್‌ನನ್ನು ʻಕ್ರೂರ ವಿಜಯಶಾಲಿʼಅಂತ ವರ್ಣಿಸಿದ್ರೆ, ಅಕ್ಬರ್‌ನನ್ನು ʻಕ್ರೌರ್ಯ ಮತ್ತು ಸಹಿಷ್ಣತೆಯ ಏಕರೂಪʼ, ಔರಂಗಜೇಬ್ ತನ್ನ ಆಳ್ವಿಕೆಯಲ್ಲಿ ʻದೇವಾಲಯಗಳು ಮತ್ತು ಗುರುದ್ವಾರಗಳನ್ನು ಕೆಡವಿದ್ದಕ್ಕೆʼ ಹೆಸರುವಾಸಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

    NCERT ಈ ವಿಷಯವನ್ನು ಮಂಡಿಸಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದು, ಡಿಸ್ಕ್ಲೈಮರ್‌ನಲ್ಲಿ ಈ ವಿವರಣೆಯು ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಒತ್ತಿಹೇಳಿದೆ. ಇದನ್ನೂ ಓದಿ: ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

  • ಶೀಘ್ರದಲ್ಲೇ ನಡೆಯುತ್ತೆ ವಿದ್ಯಾರ್ಥಿಗಳ ರಾಷ್ಟ್ರೀಯ ಸಮೀಕ್ಷೆ; ಏನಿದು ಸರ್ವೇ – ಹಿಂದಿನ ಸಮೀಕ್ಷೆಗಳಿಗೆ ಇದು ಹೇಗೆ ಭಿನ್ನ?

    ಶೀಘ್ರದಲ್ಲೇ ನಡೆಯುತ್ತೆ ವಿದ್ಯಾರ್ಥಿಗಳ ರಾಷ್ಟ್ರೀಯ ಸಮೀಕ್ಷೆ; ಏನಿದು ಸರ್ವೇ – ಹಿಂದಿನ ಸಮೀಕ್ಷೆಗಳಿಗೆ ಇದು ಹೇಗೆ ಭಿನ್ನ?

    ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ನಿರ್ಣಯಿಸಲು ‘ಪರಾಖ್ ರಾಷ್ಟ್ರೀಯ ಸರ್ವೇಕ್ಷಣ್ 2024’ ಎಂಬ ಹೊಸ ಹೆಸರಿನಲ್ಲಿ ಈ ಬಾರಿ ರಾಷ್ಟ್ರೀಯ ಸಾಧನೆ ಸಮೀಕ್ಷೆ ನಡೆಯಲಿದೆ. ಇದೇ ಡಿಸೆಂಬರ್ 4 ರಂದು ಸಮೀಕ್ಷೆ ನಡೆಯಲಿದ್ದು, ಈ ವರ್ಷದ ಮೌಲ್ಯಮಾಪನವು ಕೆಲವು ಬದಲಾವಣೆಗಳನ್ನು ಒಳಗೊಂಡಿದೆ.

    ಪರಾಖ್ ರಾಷ್ಟ್ರೀಯ ಸರ್ವೇಕ್ಷಣ್ ಸಮೀಕ್ಷೆ ಅಂದ್ರೇನು?
    ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ನೇತೃತ್ವದ ಸಮೀಕ್ಷೆಯು ಶಾಲಾ ವಿದ್ಯಾರ್ಥಿಗಳ ಕಲಿಕೆಯ ಸಾಧನೆಗಳನ್ನು ಮೌಲ್ಯಮಾಪನ ಮಾಡುತ್ತದೆ. ದೇಶದ ಪ್ರತಿ ಜಿಲ್ಲೆಯಿಂದ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳ ಶಾಲಾ ವಿದ್ಯಾರ್ಥಿಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಇದು ವಿವಿಧ ವಿಷಯಗಳ ಬಹು ಆಯ್ಕೆಯ ಪ್ರಶ್ನೆಗಳ ರೂಪದಲ್ಲಿರುತ್ತದೆ.

    ಎಷ್ಟು ವರ್ಷಗಳಿಗೊಮ್ಮೆ ಸಮೀಕ್ಷೆ?
    ಎನ್‌ಸಿಇಆರ್‌ಟಿ 2001 ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಕಲಿಕೆಯ ಪ್ರಗತಿಯನ್ನು ತಿಳಿಯಲು ಈ ರಾಷ್ಟ್ರೀಯ ಮಟ್ಟದ ಸಮೀಕ್ಷೆಗಳನ್ನು ನಡೆಸುತ್ತಿದೆ. 3, 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳನ್ನು ಈ ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು. 2014-15 ರಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಸಹ ಮೊದಲ ಬಾರಿಗೆ ಇದರಲ್ಲಿ ಪಾಲ್ಗೊಂಡಿದ್ದರು. 2017 ಮತ್ತು 2021 ರ ಮೌಲ್ಯಮಾಪನಗಳನ್ನು 3, 5, 8 ಮತ್ತು 10 ನೇ ತರಗತಿಗಳಿಗೆ ಮಾಡಲಾಗಿತ್ತು.

    ಸಮೀಕ್ಷೆಯು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವರದಿ ಕಾರ್ಡ್‌ಗಳನ್ನು ಒದಗಿಸುತ್ತದೆ. 2021 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ, ಇದು ಪ್ರತಿ ವಿಷಯದಲ್ಲಿ 500 ಅಂಕಗಳ ವಿಷಯದಲ್ಲಿ ವಿದ್ಯಾರ್ಥಿಗಳ ಸರಾಸರಿ ಕಾರ್ಯಕ್ಷಮತೆಯನ್ನು ನೀಡಿತು. ಪ್ರತಿ ರಾಜ್ಯಕ್ಕೆ ಸಿದ್ಧಪಡಿಸಲಾದ ರಾಜ್ಯ ವರದಿ ಕಾರ್ಡ್, ಪ್ರತಿ ವಿಷಯದಲ್ಲಿ ‘ಪ್ರಾವೀಣ್ಯತೆಯ ಮಟ್ಟ’ ಮೂಲಕ ರಾಜ್ಯದ ಶೇಕಡಾವಾರು ವಿದ್ಯಾರ್ಥಿಗಳ ಪ್ರಮಾಣವನ್ನು ಒದಗಿಸಿದೆ. ಇದು ಲಿಂಗ, ಸ್ಥಳ (ನಗರ/ಗ್ರಾಮೀಣ) ಮತ್ತು ಸಾಮಾಜಿಕ ಗುಂಪು  ಮೂಲಕ ಈ ಅಂಕಿ ಅಂಶವನ್ನು ಸಹ ಒದಗಿಸುತ್ತದೆ. ಪ್ರತಿ ಜಿಲ್ಲೆಗೆ ಒಂದೇ ರೀತಿಯ ರಿಪೋರ್ಟ್ ಕಾರ್ಡ್ ತಯಾರಿಸಲಾಗುತ್ತದೆ.

    ಹಿಂದಿನ ವರ್ಷಗಳಿಗಿಂತ ಈ ಬಾರಿಯ ಸಮೀಕ್ಷೆ ಹೇಗೆ ಭಿನ್ನ?
    2021 ರಲ್ಲಿ 720 ಜಿಲ್ಲೆಗಳಲ್ಲಿ 1.18 ಲಕ್ಷ ಶಾಲೆಗಳ 3, 5, 8 ಮತ್ತು 10 ನೇ ತರಗತಿಗಳ 34,01,158 ವಿದ್ಯಾರ್ಥಿಗಳಿಗೆ ಸಮೀಕ್ಷೆ ನಡೆಸಲಾಗಿತ್ತು.

    ಎನ್‌ಸಿಇಆರ್‌ಟಿ ಅಡಿಯಲ್ಲಿ ಬರುವ ಸಂಸ್ಥೆಯಾದ ಪರಾಖ್‌ನ ಮುಖ್ಯಸ್ಥ ಮತ್ತು ಸಿಇಒ ಇಂದ್ರಾಣಿ ಭಾದುರಿ, ಈ ವರ್ಷದ ಪ್ರಮುಖ ವ್ಯತ್ಯಾಸವೆಂದರೆ 3 (ಫೌಂಡೇಷನಲ್ ಹಂತದ ಕೊನೆಯಲ್ಲಿ), 6 (ಫೌಂಡೇಷನಲ್ ಹಂತದ ಕೊನೆಯಲ್ಲಿ), 9 (ಮಧ್ಯಮ ಹಂತದ ಕೊನೆಯಲ್ಲಿ) ವಿದ್ಯಾರ್ಥಿಗಳಿಗೆ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಅದು ರೂಪಿಸುವ ರಚನೆಯೊಂದಿಗೆ ಸಮೀಕ್ಷೆಯನ್ನು ಹೊಂದಿಸಲು ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.  ವರ್ಗ 1 ಮತ್ತು 2 ಅನ್ನು ಫೌಂಡೇಷನಲ್ ಹಂತವಾಗಿ, 3 ರಿಂದ 5 ನೇ ತರಗತಿಗಳನ್ನು ಪೂರ್ವಸಿದ್ಧತಾ ಹಂತವಾಗಿ ಮತ್ತು 6 ರಿಂದ 8 ನೇ ತರಗತಿಗಳನ್ನು ಮಧ್ಯಮ ಹಂತವೆಂದು ಗುರುತಿಸುತ್ತದೆ. ಇದರೊಂದಿಗೆ ಈ ವರ್ಷದ ಮೌಲ್ಯಮಾಪನದಿಂದ 10ನೇ ತರಗತಿ ಹೊರಗುಳಿದಿದೆ.

    ಸಮೀಕ್ಷೆ ಯಾಕಾಗಿ?
    3 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳನ್ನು ಭಾಷೆ, ಗಣಿತ ಮತ್ತು ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ಪರಿಸರ ಶಿಕ್ಷಣ ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. 9 ನೇ ತರಗತಿಯ ವಿದ್ಯಾರ್ಥಿಗಳನ್ನು ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಸಾಮರ್ಥ್ಯ-ಆಧಾರಿತ ಮೌಲ್ಯಮಾಪನ ಮತ್ತು ಅದು ಒದಗಿಸುವ ಡೇಟಾವು “ಶೈಕ್ಷಣಿಕ ನೀತಿಗಳನ್ನು ರೂಪಿಸಲು” ಸಹಾಯ ಮಾಡುತ್ತದೆ.

    2021 ರಲ್ಲಿ 3 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳು ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನದಲ್ಲಿ ಸಮೀಕ್ಷೆಯನ್ನು ತೆಗೆದುಕೊಂಡಿದ್ದರು. 8 ನೇ ತರಗತಿ ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಸಮೀಕ್ಷೆಗೆ ಒಳಪಟ್ಟಿದ್ದರು.

    ಪರಾಖ್ (ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ಕಾರ್ಯಕ್ಷಮತೆಯ ಮೌಲ್ಯಮಾಪನ, ವಿಮರ್ಶೆ ಮತ್ತು ವಿಶ್ಲೇಷಣೆ) ಅನ್ನು 2023 ರಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರವಾಗಿ ಸ್ಥಾಪಿಸಲಾಯಿತು. ಸಾಧನೆಯ ಸಮೀಕ್ಷೆಗಳನ್ನು ಆಯೋಜಿಸುವುದು ಅದರ ಉದ್ದೇಶಗಳಲ್ಲಿ ಒಂದಾಗಿದೆ. 2021 ರಲ್ಲಿ ‘ಎನ್‌ಎಎಸ್’ (ರಾಷ್ಟ್ರೀಯ ಸಾಧನೆ ಸಮೀಕ್ಷೆ) ಎಂಬ ಶೀರ್ಷಿಕೆಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ಬಾರಿ ಅದನ್ನು ‘ಪರಾಖ್’ ಎಂದು ಬದಲಿಸಲಾಗಿದೆ. ಈ ವರ್ಷ 782 ಜಿಲ್ಲೆಗಳಲ್ಲಿ ಒಟ್ಟು 75,565 ಶಾಲೆಗಳು ಮತ್ತು 22,94,377 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

    2021 ರ ಸಮೀಕ್ಷೆಯನ್ನು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ನಡೆಸಲಾಯಿತು. 2017 ರಿಂದ ವಿದ್ಯಾರ್ಥಿಗಳ ಸಾಧನೆಯ ಮಟ್ಟದಲ್ಲಿ ಕುಸಿತ ಆಗಿರುವುದು ಸಮೀಕ್ಷೆಯಿಂದ ತಿಳಿದುಬಂತು. ಉದಾಹರಣೆಗೆ 3 ನೇ ತರಗತಿಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾರೆ ಸ್ಕೋರ್ ಅನ್ನು ಕಂಡವು. ಅದು 2017 ರಲ್ಲಿ ದಾಖಲಾದ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. 5 ನೇ ತರಗತಿಯಲ್ಲಿ, ಪಂಜಾಬ್ ಮತ್ತು ರಾಜಸ್ಥಾನಗಳು ಮಾತ್ರ 2017 ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಅಂಕಗಳನ್ನು ಹೊಂದಿದ್ದವು.

    ಕಾಲ್ನಡಿಗೆಯಲ್ಲೇ ವಿದ್ಯಾರ್ಥಿಗಳು ಶಾಲೆಗೆ!
    ಭಾರತದಲ್ಲಿ ಶೇ.48 ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುತ್ತಿದ್ದಾರೆ. ಶೇ.9 ವಿದ್ಯಾರ್ಥಿಗಳು ಶಾಲಾ ಬಸ್‌ಗಳು, ಶೇ.9 ಸಾರ್ವಜನಿಕ ಸಾರಿಗೆ ವಾಹನಗಳು ಮತ್ತು ಶೇ.8 ರಷ್ಟು ವಿದ್ಯಾರ್ಥಿಗಳು ತಮ್ಮ ಸ್ವಂತ ವಾಹನಗಳಲ್ಲಿ ಶಾಲೆಗೆ ಹೋಗುತ್ತಾರೆ ಎಂಬುದನ್ನು 2021ರ ಎನ್‌ಎಎಸ್ ಸಮೀಕ್ಷೆ ಬಹಿರಂಗಪಡಿಸಿತ್ತು.

    2021ರಲ್ಲಿ ಕರ್ನಾಟಕದ ಸಾಧನೆ ಹೇಗಿತ್ತು?
    ರಾಷ್ಟ್ರೀಯ ಸಾಧನೆ ಸಮೀಕ್ಷೆ 2021  ವರದಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಭಾಷಾ ವಿಷಯದಲ್ಲಿ ಹೆಚ್ಚಿನ ಅಂಕ ಪಡೆಯಲು ಕಷ್ಟಪಟ್ಟಿರುವುದು ಬಹಿರಂಗವಾಗಿತ್ತು. ಪ್ರೌಢಶಾಲಾ ವಿದ್ಯಾರ್ಥಿಗಳು ಅದರಲ್ಲಿಯೂ ವಿಶೇಷವಾಗಿ 10 ನೇ ತರಗತಿಯ ವಿದ್ಯಾರ್ಥಿಗಳು ರಾಷ್ಟ್ರೀಯ ಸರಾಸರಿ ಶೇ.41 ಕ್ಕೆ ಹೋಲಿಸಿದರೆ ಆಧುನಿಕ ಭಾರತೀಯ ಭಾಷೆಯಲ್ಲಿ ಕೇವಲ ಶೇ.35 ಸಾಧನೆ ಮಾಡಿದ್ದರು. ಎಲ್ಲಾ ಜಿಲ್ಲೆಗಳಾದ್ಯಂತ 10 ನೇ ತರಗತಿಯ ವಿದ್ಯಾರ್ಥಿಗಳು ರಾಷ್ಟ್ರೀಯ ಸರಾಸರಿಗಿಂತ ಆಧುನಿಕ ಭಾರತೀಯ ಭಾಷಾ ವಿಷಯದಲ್ಲಿ ಕಡಿಮೆ ಸಾಧನೆ ಮಾಡಿದ್ದರು. ಕೋವಿಡ್‌ನಿಂದಾಗಿ ಶಾಲೆಗಳನ್ನು ಮುಚ್ಚಿದ್ದರಿಂದ ವಿದ್ಯಾರ್ಥಿಗಳು ಕನಿಷ್ಠ ಒಂದು ಭಾಷಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು.

    ಚಿಕ್ಕೋಡಿಗೆ ಅಗ್ರಸ್ಥಾನ
    ಬೆಳಗಾವಿ ಚಿಕ್ಕೋಡಿ ಜಿಲ್ಲೆ ಮತ್ತೊಮ್ಮೆ ಎಲ್ಲಾ ವರ್ಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡುವ ಮೂಲಕ ಒಟ್ಟಾರೆ ಸಾಧನೆಯ ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ. ಚಿಕ್ಕೋಡಿ ಜಿಲ್ಲೆ 3ನೇ ತರಗತಿಯಲ್ಲಿ ಶೇ.72.4, 5ನೇ ತರಗತಿಯಲ್ಲಿ ಶೇ.61.8, 8ನೇ ತರಗತಿಯಲ್ಲಿ ಶೇ.47.6 ಹಾಗೂ 10ನೇ ತರಗತಿಯಲ್ಲಿ ಶೇ.41.7 ಅಂಕ ಗಳಿಸಿದೆ. 10 ನೇ ತರಗತಿಯಲ್ಲಿ ಬೆಂಗಳೂರು ನಗರ ಉತ್ತರ ಮಾತ್ರ ಸರಾಸರಿ ಶೇಕಡಾ 42 ರಷ್ಟು ದಾಖಲಿಸುವ ಮೂಲಕ ಒಟ್ಟಾರೆ ಸಾಧನೆಯ ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ.

    2024ರ ಸಮೀಕ್ಷೆ
    ಜಿಲ್ಲೆಗಳು: 782
    ಶಾಲೆಗಳು: 75,565
    ವಿದ್ಯಾರ್ಥಿಗಳು: 22,94,377

  • ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ನವದೆಹಲಿ: ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗಳ (Gujarat Riots And Babri Masjid) ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿರಲಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಅವರು, ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಗಳನ್ನಾಗಿ ಮಾಡಬೇಕೇ? ಸಮಾಜದಲ್ಲಿ ದ್ವೇಷ ಬಿತ್ತಬೇಕೆ? ದ್ವೇಷಕ್ಕೆ ಮಕ್ಕಳು ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಅಂತಹ ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಪ್ರಶ್ನೆಗಳ ಮಳೆ ಸುರಿಸಿದರಲ್ಲದೇ ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಾದ ಎಬ್ಬಿಸುವಂತಹ ವಿಷಯವೇ ಇದಲ್ಲ ಎಂದಿದ್ದಾರೆ.

    ಎನ್‌ಸಿಇಆರ್‌ಟಿ 12ನೇ ತರಗತಿ ರಾಜ್ಯಶಾಸ್ತ್ರ ಪುಸ್ತಕದಲ್ಲಿ ಅಯೋಧ್ಯೆ ಪಠ್ಯ ವಿಭಾಗವನ್ನು 2 ಪುಟಗಳಿಗೆ ಇಳಿಸಲಾಗಿದೆ. ಗಲಭೆಗಳ ಕುರಿತ ಬೋಧನೆಯು ಆವೇಶಭರಿತ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ, ಗುಜರಾತ್ ಗಲಭೆಗಳು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ. ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದಾಗ ಅದರ ಬಗ್ಗೆ ಕಲಿಯಬಹುದು ಶಾಲೆಯ ಪಠ್ಯಪುಸ್ತಕಗಳು ಏಕೆ? ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದು ಅವರು ಪ್ರತಿಪಾದಿಸಿದ್ದಾರೆ.

    ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ ಅವರು, ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಪ್ರವೃತ್ತಿಯ, ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುವುದಲ್ಲ. ದ್ವೇಷ ಮತ್ತು ಹಿಂಸೆ ಬೋಧನೆಯ ವಿಷಯಗಳಲ್ಲ. ಅವು ನಮ್ಮ ಪಠ್ಯಪುಸ್ತಕಗಳ ಕೇಂದ್ರಬಿಂದುವಾಗಿರಬಾರದು ಎಂದು ಸಕ್ಲಾನಿ ಹೇಳಿದ್ದಾರೆ.

  • NCERT ಪಠ್ಯಕ್ರಮ ನಿರ್ಧಾರ ಮಂಡಳಿಯಲ್ಲಿ ಸುಧಾಮೂರ್ತಿಗೆ ಸ್ಥಾನ

    NCERT ಪಠ್ಯಕ್ರಮ ನಿರ್ಧಾರ ಮಂಡಳಿಯಲ್ಲಿ ಸುಧಾಮೂರ್ತಿಗೆ ಸ್ಥಾನ

    ನವದೆಹಲಿ: 3 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು (Textbook) ಅಂತಿಮಗೊಳಿಸಲು NCERT ರಚಿಸಿರುವ ಮಂಡಳಿಯಲ್ಲಿ ಲೇಖಕಿ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ (Sudha Murty), ಗಾಯಕ ಶಂಕರ್ ಮಹಾದೇವನ್, ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಸೇರಿದಂತೆ ಮುಂತಾದ 19 ಸದಸ್ಯರು ಇರಲಿದ್ದಾರೆ.

    ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ 2020ರ ಪಠ್ಯಕ್ರಮವನ್ನು ಸೇರಿಸಲು ಸಮಿತಿ ಕಾರ್ಯ ನಿರ್ವಹಿಸಲಿದೆ. ಇದು ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣದ ರೂಪುರೇಷೆಯ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ

    ಶಾಲಾ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಮಂಡಳಿಗೆ ಅಧಿಕಾರ ನೀಡಲಾಗುವುದು. ಅದಲ್ಲದೇ 3ನೇ ತರಗತಿಯಿಂದ 12 ನೇ ತರಗತಿಯವರೆಗೆ ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು ಮಂಡಳಿಯ ಜವಾಬ್ದಾರಿ ಆಗಿರಲಿದೆ.

    ಈ ಸಮಿತಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜಲ್ ಭಗವ್ ಅವರು ಉಪಾಧ್ಯಕ್ಷರಾಗಿರಲಿದ್ದಾರೆ. ಇತರ ಸದಸ್ಯರಲ್ಲಿ ಗಣಿತಜ್ಞ ಸುಜಾತಾ ರಾಮ್ ದೊರೈ, ಬ್ಯಾಡ್ಮಿಂಟನ್ ಆಟಗಾರ ಯು.ವಿಮಲ್ ಕುಮಾರ್, ಪಾಲಿಸಿ ಅಧ್ಯಯನ ಕೇಂದ್ರದ ಎಂಡಿ ಶ್ರೀನಿವಾಸ್ ಮತ್ತು ಅಧ್ಯಕ್ಷರಾಗಿ ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಕೃಷ್ಣ ಶಾಸ್ತ್ರಿ ಕೂಡ ಇರಲಿದ್ದಾರೆ. ಇದನ್ನೂ ಓದಿ: Eiffel Tower: ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಘಲ್ ಸಾಮ್ರಾಜ್ಯದ ಪಠ್ಯಗಳಿಗೆ ಕತ್ತರಿ ಹಾಕಿದ ಯೋಗಿ ಸರ್ಕಾರ

    ಮೊಘಲ್ ಸಾಮ್ರಾಜ್ಯದ ಪಠ್ಯಗಳಿಗೆ ಕತ್ತರಿ ಹಾಕಿದ ಯೋಗಿ ಸರ್ಕಾರ

    ಲಕ್ನೋ: ಮೊಘಲ್ ಸಾಮ್ರಾಜ್ಯದ (Mughal empire) ಕುರಿತಾದ ಅಧ್ಯಾಯಗಳನ್ನು ಸಿಬಿಎಸ್‍ಸಿ (CBSE) ಹಾಗೂ 12ನೇ ತರಗತಿಯ ಬೋರ್ಡ್ ಪಠ್ಯದಿಂದ ಉತ್ತರ ಪ್ರದೇಶ ಸರ್ಕಾರ ತೆಗೆದುಹಾಕಿದೆ.

    ಶಾಲಾ ಶಿಕ್ಷಣದ ಕೇಂದ್ರ ಮತ್ತು ರಾಜ್ಯದ ಉನ್ನತ ಸಲಹಾ ಸಂಸ್ಥೆಯಾದ ಎನ್‌ಸಿಇಆರ್‌ಟಿ (NCERT) ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ನೂತನ ಪಠ್ಯ ಪುಸ್ತಕದಲ್ಲಿ 12ನೇ ತರಗತಿಯ ಮಧ್ಯಕಾಲೀನ ಇತಿಹಾಸ ಪಠ್ಯಪುಸ್ತಕಗಳಿಂದ (Textbooks) ಕಿಂಗ್ಸ್ ಮತ್ತು ಕ್ರಾನಿಕಲ್ಸ್ ಹಾಗೂ ದಿ ಮೊಘಲ್ ಕೋರ್ಟ್ಸ್ (Mughal Courts) ಅಧ್ಯಾಯಗಳನ್ನು ಕೈಬಿಟ್ಟಿದೆ. ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಹೊಸ 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಲಿವೆ. ಅದರಲ್ಲಿ ಮೊಘಲ್ ಇತಿಹಾಸದ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಿಸಿಲು

    ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನಾವು ನಮ್ಮ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಬಳಸಿ ಕಲಿಸುತ್ತೇವೆ. ಪರಿಷ್ಕೃತ ಆವೃತ್ತಿಯಲ್ಲಿ ಏನಿದೆಯೋ ಅದನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

    ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಪಠ್ಯ ಪರಿಷ್ಕರಣೆ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. 12ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳನ್ನೂ ಪರಿಷ್ಕರಿಸಲಾಗಿದೆ. ಪ್ರಮುಖ ಚಳುವಳಿಗಳ ಉದಯ, ಭಾರತದಲ್ಲಿ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಉದಯ, ಏಕಪಕ್ಷದ ಪ್ರಾಬಲ್ಯದ ಯುಗ, ಸ್ವಾತಂತ್ರ್ಯ ನಂತರದ ಯುಗದಲ್ಲಿ ಕಾಂಗ್ರೆಸ್ ಆಡಳಿತದ ಪಠ್ಯಗಳಿನ್ನು ತೆಗೆಯಲಾಗಿದೆ. ಪರಿಷ್ಕೃತ ಆವೃತ್ತಿಯಲ್ಲಿ ಲಭ್ಯವಿರುವ ಪಠ್ಯವನ್ನು 2023-24 ರಿಂದ ರಾಜ್ಯದ ಶಾಲೆಗಳಲ್ಲಿ ಬೋಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    10 ಮತ್ತು 11ನೇ ತರಗತಿಯ ಪಠ್ಯಪುಸ್ತಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. 10ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ (Democracy and Diversity), ಪ್ರಮುಖ ಹೋರಾಟಗಳು ಮತ್ತು ಚಳುವಳಿಗಳು ಎಂಬ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಸೆಂಟ್ರಲ್ ಇಸ್ಲಾಮಿಕ್ ನೆಲೆಗಳು ಮತ್ತು ಸಂಸ್ಕೃತಿಗಳ ಮುಖಾಮುಖಿ ಎಂಬ ಅಧ್ಯಾಯಗಳನ್ನು 11ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

  • ಮದರಸಾ ಶಿಕ್ಷಣಕ್ಕೆ ವಿಶೇಷ ಮಂಡಳಿ – ಉತ್ತರ ಪ್ರದೇಶದಲ್ಲಿ ಹೇಗಿದೆ?

    ಮದರಸಾ ಶಿಕ್ಷಣಕ್ಕೆ ವಿಶೇಷ ಮಂಡಳಿ – ಉತ್ತರ ಪ್ರದೇಶದಲ್ಲಿ ಹೇಗಿದೆ?

    ಬೆಂಗಳೂರು: ರಾಜ್ಯದ ಮದರಸಾಗಳ ಶಿಕ್ಷಣದ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸರ್ಕಾರ ಮುಂದಾಗಿದೆ. ಮದರಸಾಗಳ ಶಿಕ್ಷಣ ವ್ಯವಸ್ಥೆಗಾಗಿ ವಿಶೇಷ ಮಂಡಳಿ ರಚನೆಗೆ ನಿರ್ಧರಿಸಲಾಗಿದೆ.

    ಬುಧವಾರ ಶಿಕ್ಷಣ ಸಚಿವ ನಾಗೇಶ್‌ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಂಪೂರ್ಣ ಮದರಸಗಳ ಮಾಹಿತಿ ಪಡೆಯಲು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಮದರಸಾಗಳ ಕುರಿತು 15 ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳ ವರದಿ ಬಳಿಕ ಮುಂದಿನ ತೀರ್ಮಾನ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

    ಮದರಸಾ ಶಿಕ್ಷಣದ ಬಗ್ಗೆ ಕರ್ನಾಟಕ ದಲ್ಲಿ ದೊಡ್ಡ ಮಟ್ಟದಲ್ಲಿ ಹಿಂದೂಸಂಘಟನೆಗಳು ಕೆಲ ಕಮಲ ನಾಯಕರು ಸಿಡಿದೆದ್ದಿದ್ದರು. ಮದರಸಾದಲ್ಲಿ ಭಯೋತ್ಪಾದನೆಯ ಪಾಠ ಹೇಳಲಾಗುತ್ತಿದೆ. ಇಸ್ಲಾಂ ಮೂಲಭೂತವಾದ ಕಲಿಸಿಕೊಡಲಾಗುತ್ತದೆ. ಅಂಕುಶ ಹಾಕಿ ಇಲ್ಲವೇ ಬ್ಯಾನ್ ಮಾಡಿ ಎನ್ನುವ ಕೂಗು ದೊಡ್ಡದಾಗಿ ಕೇಳಿಬಂದಿತ್ತು. ಬಿಜೆಪಿ ಮುಖಂಡ ಸಿಟಿ ರವಿ ಟ್ವೀಟ್ ಮಾಡಿ ಮದರಸಾ ಶಿಕ್ಷಣದ ಬಗ್ಗೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದರು.

    ಮಂಡಳಿ ರಚನೆಗೆ ಕಾರಣ ಏನು?
    ಕರ್ನಾಟಕದಲ್ಲಿ 900 ಮದರಸಾಗಳು ವಕ್ಫ್‌ ಬೋರ್ಡ್‌ ಅಡಿ ನೋಂದಣಿಯಾಗಿದ್ದು ಪ್ರತಿ ವರ್ಷ 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಈ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಮದರಸಾಗಳಲ್ಲಿ ಶಿಕ್ಷಣದ ಬದಲಾಗಿ ಧರ್ಮ ಬೋಧನೆಯ ಕೆಲಸ ಆಗುತ್ತಿದೆ ಎಂಬ ಆರೋಪ ಬಂದಿದೆ.

    ಅಷ್ಟೇ ಅಲ್ಲದೇ ರಾಷ್ಟ್ರಗೀತೆ, ರಾಷ್ಟ್ರ ಭಾವೈಕ್ಯತೆಯ ಕಾರ್ಯಕ್ರಮಗಳು‌ ನಡೆಯುತ್ತಿಲ್ಲ. ಮದರಸಾಗಳಲ್ಲಿ ಕಲಿಯೋ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕಂಪ್ಯೂಟರ್ ತರಬೇತಿ, ವಿಜ್ಞಾನದ ಲ್ಯಾಬ್ ಗಳು, ನೈತಿಕ ಶಿಕ್ಷಣದಂತಹ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಮಂಡಳಿ ರಚನೆಗೆ ಸರ್ಕಾರ ಮುಂದಾಗಿದೆ.

    .

    ಸಮಿತಿ ಕೆಲಸ ಏನು?
    ಮದರಸಾಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ? ಸರ್ಕಾರದ ಅನುದಾನದ ಸಮರ್ಪಕ ಬಳಕೆ , ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿದ್ಯಾ? ಮದರಸಗಳಲ್ಲಿ ಧರ್ಮ ಬೋಧನೆ ಆರೋಪದ ಬಗ್ಗೆ ವರದಿ ಸಂಗ್ರಹಿಸಬೇಕು.

    ಪಠ್ಯಗಳ ಸಿಲಬಸ್ ಹೇಗಿದೆ? ಈ ಮಕ್ಕಳ ಕಲಿಕೆಗೂ ಬೇರೆ ಮಕ್ಕಳ ಕಲಿಕೆಗೂ ಇರುವ ವ್ಯತ್ಯಾಸ, ಸರ್ಕಾರದ ಅನುದಾನ ಹೊರತು ಪಡಿಸಿ ಖಾಸಗಿಯಾಗಿ ನಡೆಯುತ್ತಿರೋ ಮದರಸಾಗಳ ಕಾರ್ಯಚಟುವಟಿಕೆಗಳು ಏನು? ಖಾಸಗಿ ಮದರಸಾಗಳ ಅನುದಾನ ಮೂಲ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮಗಳು, ಮೂಲಭೂತ ಕರ್ತವ್ಯಗಳ ಪಾಲನೆ ಆಗ್ತಿದೆಯಾ ಎಂಬ ವರದಿ ಸಂಗ್ರಹಿಸಬೇಕು.

    ಉತ್ತರ ಪ್ರದೇಶದಲ್ಲಿ ಹೇಗಿದೆ?
    ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏಕೆ ಉತ್ತರ ಪ್ರದೇಶ ಮಾದರಿಯನ್ನೇ ಅನುಸರಿಸುತ್ತಿದೆ. ಮದರಸಾಗಳ ಮೇಲಿನ ನಿಯಂತ್ರಣಕ್ಕೂ ಏಕೆ ಯುಪಿ ಮಾಡೆಲ್ ಮೊರೆ ಹೋಗುತ್ತಿದೆ.

    ಉತ್ತರ ಪ್ರದೇಶದಲ್ಲಿ  ಶಿಕ್ಷಕರು ಬಿ.ಎಡ್ ಪದವಿ ಜೊತೆಗೆ ಟಿಇಟಿ ಪರೀಕ್ಷೆ ಉತ್ತೀರ್ಣ ಕಡ್ಡಾಯ. ಮದರಸಾಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀಡುತ್ತಿರುವ ಧಾರ್ಮಿಕ ಶಿಕ್ಷಣಕ್ಕೆ ಕಡಿವಾಣ.  ಶೇ.20 ಮಾತ್ರ ಧಾರ್ಮಿಕ ಶಿಕ್ಷಣ,  ಶೇ.80ರಷ್ಟು ಹೊಸ ಶಿಕ್ಷಣ ನೀಡಬೇಕಾಗುತ್ತದೆ.  ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ

    ಧಾರ್ಮಿಕ ಬೋಧನೆ ಜೊತೆ ಎನ್‌ಸಿಇಆರ್‌ಟಿ(NCERT) ರೂಪಿಸಿದ ಹಿಂದಿ, ಇಂಗ್ಲಿಷ್, ವಿಜ್ಞಾನ, ಗಣಿತ ಸೇರಿ ಇತರೇ ವಿಷಯಗಳನ್ನು ಬೋಧಿಸಬೇಕಾಗುತ್ತದೆ. ಆಧುನಿಕ ಶಿಕ್ಷಣ ಪದ್ಧತಿಯ ಪ್ರಕಾರ ಕಂಪ್ಯೂಟರ್ ಶಿಕ್ಷಣ ನೀಡುವುದು.

    ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಪಠ್ಯಕ್ರಮ ರಚನೆಯಾಗುತ್ತದೆ. ಆಲಿಯಾ ಮಟ್ಟದ ಮದರಸಗಳಲ್ಲಿ ಒಬ್ಬ ಶಿಕ್ಷಕರು, 5ನೇ ತರಗತಿಯಲ್ಲಿ ನಾಲ್ವರು ಶಿಕ್ಷಕರು, 6-8ನೇ ತರಗತಿಗೆ ಇಬ್ಬರು ಶಿಕ್ಷಕರು, 9-10ನೇ ತರಗತಿಗೆ ಆಧುನಿಕ ಶಿಕ್ಷಣವನ್ನು ಕಲಿಸಲು ಮೂವರು ಶಿಕ್ಷಕರ ನೇಮಕ ಮಾಡಲಾಗುತ್ತದೆ. ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡುವುದು ಕಡ್ಡಾಯ. ಅನಧಿಕೃತ ಮದರಸಗಳನ್ನು ಮುಚ್ಚಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬರಗೂರು ಸಮಿತಿಯ ಪರಿಷ್ಕೃತ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ: NCERT

    ಬರಗೂರು ಸಮಿತಿಯ ಪರಿಷ್ಕೃತ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ: NCERT

    ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಪರ-ವಿರೋಧಗಳು ನಡೆಯುತ್ತಿರುವ ಹೊತ್ತಿನಲ್ಲೇ ಈಗ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಕಾಲದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದ ಪರಿಷ್ಕೃತ ಪಠ್ಯ ಪುಸ್ತಕ ಗುಣಮಟ್ಟದ ಸರಿಯಿಲ್ಲ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(ಎನ್‍ಸಿಇಆರ್‌ಟಿ) ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    2005ರ ರಾಷ್ಟ್ರೀಯ ಶಿಕ್ಷಣ ನೀತಿ ಅಂಶಗಳು ಬರಗೂರು ಸಮಿತಿ ರಚನೆ ಮಾಡಿದ್ದ ಪರಿಷ್ಕರಣೆ ಪಠ್ಯದಲ್ಲಿ ಹೆಚ್ಚಾಗಿ ಇರಲಿಲ್ಲ. ಮೌಲ್ಯಗಳನ್ನು ಬೆಳೆಸಲು ಪೂರಕವಾದ ಪಠ್ಯಗಳು ಬರಗೂರು ರಾಮಚಂದ್ರಪ್ಪರ ಪರಿಷ್ಕರಣೆ ಪಠ್ಯ ಪುಸ್ತಕದಲ್ಲಿ ಇಲ್ಲ ಎಂಬ ಮಹತ್ವದ ಅಂಶವನ್ನು ತಿಳಿಸಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್

    2017-18ರಲ್ಲಿ ಕರ್ನಾಟಕದ ಶಾಲೆಗಳಲ್ಲಿ ಜಾರಿಗೆ ತರಲಾದ ಬರಗೂರು ಸಮಿತಿ ನೂತನ ಪರಿಷ್ಕತ ಪಠ್ಯಪುಸ್ತಕಗಳ ಬಗ್ಗೆ ಎನ್‍ಸಿಇಆರ್‌ಟಿ ಸಂಸ್ಥೆ ಅಧ್ಯಯನ ಕೈಗೊಂಡು ವರದಿ ಸಲ್ಲಿಸಿತ್ತು. 78 ಪುಟಗಳ ವರದಿಯಲ್ಲಿ ಭಾಷೆ ಮತ್ತು ಸಮಾಜ ವಿಜ್ಞಾನ, ಗಣಿತ ಪಠ್ಯ ಪುಸ್ತಕಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುವ ಪಠ್ಯಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

    ಇಷ್ಟೆಲ್ಲ ಲೋಪಗಳಿದ್ದರೂ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯ ಪರಿಷ್ಕರಣೆಯನ್ನು ಬರಗೂರು ಟೀಂ ವಿರೋಧ ಮಾಡಿದ್ದು ಯಾಕೆ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ.

    ಎನ್‌ಸಿಆರ್‌ಟಿಇ ವರದಿಯಲ್ಲಿ ಏನಿದೆ?
    ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಅಡಕಗೊಳಿಸಲಾದ ವಿಷಯಗಳು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಲು ಪೂರಕವಾದ ಚಟುವಟಿಕೆಗಳನ್ನು ಹೊಂದಿರಬೇಕು.ಆದರೆ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಇಂತಹ ಚಟುವಟಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.

    ಪಠ್ಯಪುಸ್ತಕಗಳಲ್ಲಿ ಲಿಂಗತ್ವ, ಒಳಗೊಳ್ಳುವಿಕೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಯಾವುದೇ ಪೂರ್ವಗ್ರಹಗಳು ಇಲ್ಲ. ಆದಾಗ್ಯೂ ಈ ಅಂಶಗಳಿಗೆ ಸಂಬಂಧಿಸಿದ ಕಾಳಜಿಗಳಿಗೆ ಅಗತ್ಯವಾದ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಪೂರಕವಾದ ವಿಷಯ, ಚಟುವಟಿಕೆ,ನಿಯೋಜಿತ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.

    ರಾಷ್ಟ್ರೀಯ ಶಿಕ್ಷಣ ನೀತಿ 2005 ರಂತೆ ಪಠ್ಯಪುಸ್ತಕಗಳು ಜ್ಞಾನ ಕಟ್ಟುವ ವಿಧಾನವನ್ನು (constructivist approach) ಒಳಗೊಂಡಿರಬೇಕು.ಆದರೆ ಸಿದ್ದಪಡಿಸಲಾದ ಪಠ್ಯಪುಸ್ತಕಗಳಲ್ಲಿ ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡಿಲ್ಲ.

    ಭಾಷೆ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಮೌಲ್ಯಗಳು ಅಂತರ್ಗತವಾಗಿದ್ದರೂ ಮೌಲ್ಯಗಳನ್ನು ಬೆಳೆಸಲು ಪೂರಕವಾದ, ಚಟುವಟಿಕೆಗಳು, ಉದಾಹರಣೆಗಳು, ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.

    ವಿದ್ಯಾರ್ಥಿಗಳ ದೈನಂದಿನ ಅನುಭವಗಳಿಗೆ ಪಠ್ಯಪುಸ್ತಕಗಳನ್ನು ಜೋಡಿಸುವ ಕಾರ್ಯ ಆಗಿದ್ದರೂ ಇದು ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಜೊತೆಗೆ ಪಠ್ಯಪುಸ್ತಕಗಳಲ್ಲಿ ನೀಡಲಾದ ಉದಾಹರಣೆಗಳು ವಿದ್ಯಾರ್ಥಿಗಳ ಸನ್ನಿವೇಶಗಳಿಗೆ ಹೆಚ್ಚು ಪೂರಕವಾಗಿಲ್ಲ ಹಾಗೂ ಅರ್ಥಪೂರ್ಣವಾಗಿಲ್ಲ.

    ಪಠ್ಯ ಪುಸ್ತಕಗಳಲ್ಲಿ ಹೆಚ್ಚಿನ ಅಭ್ಯಾಸ ಕಾರ್ಯ ಮತ್ತು ಚಟುವಟಿಕೆಗಳನ್ನು ನೀಡಲಾಗಿದೆ. ಆದರೆ ಗಣಿತ ವಿಷಯದ ಪಠ್ಯಪುಸ್ತಕದಲ್ಲಿ ಪುನುರಾವರ್ತಿತ ಚಟುವಟಿಕೆಗಳನ್ನು ಇದ್ದು, ವಿದ್ಯಾರ್ಥಿಗಳಿಗೆ ಹೊರೆ ಎನಿಸುವಂತೆ ಇವೆ. ಇದರಿಂದ ವಿದ್ಯಾರ್ಥಿಗಳು ಕಂಠ ಪಾಠ ಮತ್ತು ನೆನಪಿನ ಶಕ್ತಿಗೆ ಹೆಚ್ಚು ಒತ್ತು ನೀಡುವಂತಿದ್ದು, ವಿಷಯದ ಪರಿಕಲ್ಪನಾತ್ಮಕ ಜ್ಞಾನದ ಬೆಳವಣಿಗೆಗೆ ಸಹಾಯ ಆಗುವಂತಿಲ್ಲ.

    ಗಣಿತ ವಿಷಯದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಷಯಗಳನ್ನು ಅಳವಡಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಚೆನ್ನೈ: ಪಠ್ಯ ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳಾಗಲಿ, ತುಂಬಿದ ಕಂಟೈನರ್ ಗಳಾಗಲಿ ಅಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈ ಕೋರ್ಟ್ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದೆ.

    ಮಕ್ಕಳ ಕೈ ಚೀಲದ ಹೊರೆಯನ್ನು ಕಡಿಮೆ ಮಾಡುವಂತೆ ಹಾಗೂ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡದಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ತನ್ನ ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದೆ.

    ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳ ಆದೇಶಗಳನ್ನು ಉಲ್ಲೇಖ ಮಾಡುತ್ತಾ ನ್ಯಾಯಮೂರ್ತಿ ಕಿರುಬಾಕರನ್ ಕೈ ಚೀಲದ ತೂಕ ಮಕ್ಕಳ ತೂಕದ 10% ಮೀರಿರಬಾರದು. ಈ ಸಂಬಂಧ “ಮಕ್ಕಳ ಶಾಲಾ ಬ್ಯಾಗ್ ನೀತಿ” ಗೆ ಸಂಬಂಧಿಸಿದಂತೆ ಮಾನದಂಡಗಳನ್ನು ರೂಪಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

    ವಕೀಲ ಎಂ ಪುರುಷೋತ್ತಮನ್ ಅವರು ಎನ್‍ಸಿಇಆರ್ ಟಿ ಸಿದ್ಧಪಡಿಸಿದ ಪಠ್ಯ ಮತ್ತು ಎನ್‍ಸಿಇಆರ್ ಟಿ ಮುದ್ರಿಸಿದ ಪುಸ್ತಕಗಳನ್ನು ಮಾತ್ರ ಖರೀದಿಸುವಂತೆ ಸಿಬಿಎಸ್‍ಇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.

    ಎನ್‍ಸಿಇಆರ್ ಟಿ ಪಠ್ಯ ಕ್ರಮ ಮತ್ತು ಬುಕ್ ಗಳನ್ನು ಕಡ್ಡಾಯ ಗೊಳಿಸುವಂತೆ ಕೇಂದ್ರಿಯ ಶಿಕ್ಷಣ ಮಂಡಳಿ (ಸಿಬಿಎಸ್‍ಇ) ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಕೋರ್ಟ್ ಸೂಚಿಸಿದೆ.

    1 ಮತ್ತು 2 ನೇ ತರಗತಿಗೆ ಭಾಷೆ ಮತ್ತು ಗಣಿತ ವಿಷಯಗಳು ಮಾತ್ರ ಇರಬೇಕು. ತರಗತಿ 3 ರಿಂದ 5 ನೇ ತರಗತಿ ವರೆಗೆ ಪರಿಸರ ಅಧ್ಯಯನ ಮತ್ತು ಗಣಿತ ವಿಷಯಗಳನ್ನು ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ ಬೋಧಿಸಬೇಕು. ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡುವ ಹಾಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

    ವೈದ್ಯರು ಹೇಳುವಂತೆ 5 ರಿಂದ 6 ವರ್ಷದ ಮಕ್ಕಳಿಗೆ ಕನಿಷ್ಠ 11 ಗಂಟೆ ನಿದ್ದೆ ಬೇಕು. ಬೆಳಗ್ಗೆ ಶಾಲೆಗೆ ಮುಂಚೆ ಹೋಗಿದ್ದರೆ ಬೇಗ ಮಲಗಬೇಕು. ಹೋಮ್ ವರ್ಕ್ ಮಕ್ಕಳ ನಿದ್ದೆಯ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ತನ್ನ ಆದೇಶದಲ್ಲಿ ವೈದ್ಯಕೀಯ ತಜ್ಞರ ಹೇಳಿಕೆಗಳನ್ನು ಜಡ್ಜ್ ಉಲ್ಲೇಖಿಸಿದರು.

    1 ನೇ ತರಗತಿ ಪಠ್ಯ ಕ್ರಮದಲ್ಲಿ ವ್ಯಾಕರಣ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳು ಇರುವುದು ಆಶ್ಚರ್ಯ ಮತ್ತು ಅತಂಕ ತರಿಸುವಂತದ್ದು. 5 ವರ್ಷದ ಮಗು ಹೇಗೆ ಈ ವಿಷಯಗಳನ್ನು ಗ್ರಹಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಸಿಬಿಎಸ್‍ಇ ಶಾಲೆಗಳು ಅಪ್ರಸ್ತುತ ವಿಷಯಗಳನ್ನು ಬೋಧಿಸಿ ಮಕ್ಕಳನ್ನು ಒತ್ತಡದಲ್ಲಿ ಸಿಲುಕಿಸುತ್ತಿದೆ ಎಂದು ಅಭಿಪ್ರಾಯಪಟ್ಟು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದರು.