Tag: NCAP

  • ನಿಸ್ಸಾನ್ ಮ್ಯಾಗ್ನೈಟ್ ಕಾರ್‌ಗೆ ಸಿಕ್ತು 5-ಸ್ಟಾರ್ ಸೇಫ್ಟಿ ರೇಟಿಂಗ್

    ನಿಸ್ಸಾನ್ ಮ್ಯಾಗ್ನೈಟ್ ಕಾರ್‌ಗೆ ಸಿಕ್ತು 5-ಸ್ಟಾರ್ ಸೇಫ್ಟಿ ರೇಟಿಂಗ್

    ನಿಸ್ಸಾನ್ ಮ್ಯಾಗ್ನೈಟ್ (Nisasn Magnite) ಕಾರು ಗ್ಲೋಬಲ್ NCAP (Global NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ (5 Star Rating) ಪಡೆದುಕೊಂಡಿದೆ. ನಿಸ್ಸಾನ್ ಕಂಪನಿಯು ಮೂರು ಬಾರಿ ಮ್ಯಾಗ್ನೈಟ್ ಕಾರನ್ನು ಕ್ರ್ಯಾಶ್ ಟೆಸ್ಟಿಂಗ್‌ಗೆ ಕಳುಹಿಸಿತ್ತು. ಫೇಸ್‌ಲಿಫ್ಟ್‌ಗೂ ಮುಂಚಿನ ಕಾರು (ಅಕ್ಟೋಬರ್‌ 2024ಕ್ಕೂ ಮುಂಚೆ ತಯಾರಾದ ಕಾರ್) ಕೇವಲ 2-ಸ್ಟಾರ್ ರೇಟಿಂಗ್ ಪಡೆದಿತ್ತು. ಫೇಸ್‌ಲಿಫ್ಟ್‌ ನಂತರದ ಕಾರು 4-ಸ್ಟಾರ್ ರೇಟಿಂಗ್ ಪಡೆಯಲು ಯಶಸ್ವಿಯಾಗಿತ್ತು. ಆದರೆ ಇಷ್ಟಕೇ ಸುಮ್ಮನಾಗದ ಕಂಪನಿಯು ಕೆಲವೊಂದು ಬದಲಾವಣೆ ಮಾಡಿ ಮತ್ತೆ ಕ್ರ್ಯಾಶ್ ಟೆಸ್ಟ್‌ಗೆ ಕಳುಹಿಸಿತ್ತು. ಈ ಬಾರಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದು ಮ್ಯಾಗ್ನೈಟ್ ಸುರಕ್ಷಿತ ಕಾರು ಎನಿಸಿಕೊಂಡಿದೆ.

    ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 32.31 ಅಂಕಗಳನ್ನು ಗಳಿಸುವ ಮೂಲಕ ಮ್ಯಾಗ್ನೈಟ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 33.64 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ.

    ನಿಸ್ಸಾನ್ ಮ್ಯಾಗ್ನೈಟ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.0-ಲೀಟರ್ B4D ಪೆಟ್ರೋಲ್ ಎಂಜಿನ್ 72 hp ಪವರ್‌ ಮತ್ತು 96 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದ್ದು 99 hp ಪವರ್‌ ಮತ್ತು 160 Nm ಟಾರ್ಕ್ ಉತ್ಪಾದಿಸುತ್ತದೆ. B4D ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್ ಬಾಕ್ಸ್‌ನೊಂದಿಗೆ ಲಭ್ಯವಿದೆ, ಟರ್ಬೋಚಾರ್ಜ್ಡ್ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.

    ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ಲೋಬಲ್ NCAP ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಮ್ಯಾಗ್ನೈಟ್ ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಎಲ್ಲಾ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌, ISOFIX ಆಂಕರೇಜ್‌ಗಳು , 360 ಡಿಗ್ರೀ ಕ್ಯಾಮೆರಾ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ.

    ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 6,14,000 ದಿಂದ 11,76,000 ರೂಪಾಯಿವರೆಗೆ (ಎಕ್ಸ್ ಶೋರೂಮ್) ಇದೆ.

  • ಭಾರತ್-NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇನ್ನೋವಾ ಹೈಕ್ರಾಸ್‌ಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಭಾರತ್-NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇನ್ನೋವಾ ಹೈಕ್ರಾಸ್‌ಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Bharath NCAP)ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ.

    ಟೊಯೋಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಕಾರು, ಭಾರತ್ ಎನ್‌ಸಿಎಪಿ (Bharath NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 30.47 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 45 ಅಂಕಗಳನ್ನು ಪಡೆದು 5-ಸ್ಟಾರ್ ರೇಟಿಂಗ್ ಪಡೆದಿದೆ.

    ಇನ್ನೋವಾ ಹೈಕ್ರಾಸ್ ಪ್ರಯಾಣಿಕರ ಸುರಕ್ಷತೆಗಾಗಿ ಗರಿಷ್ಠ ರಕ್ಷಣಾ ವೈಶಿಷ್ಟ್ಯಗಳನ್ನು ಹೊಂದಿದೆ. 6-ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ವಿಥ್ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ADAS ಸೂಟ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್‌ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಈ ಕಾರು ಹೊಂದಿದೆ.

    ಇನ್ನೋವಾ ಹೈಕ್ರಾಸ್ 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 2.0-ಲೀಟರ್ ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಹೈಬ್ರಿಡ್ ಕಾರ್ಯ 23.೨೧ ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಘೋಷಿಸಿತ್ತು. ಹೈಕ್ರಾಸ್ ಬೆಲೆ 19.09 ಲಕ್ಷದಿಂದ 31.34 ಲಕ್ಷ ರೂಪಾಯಿವರೆಗೆ ಇದೆ.

  • ಭಾರತ್ NCAPಗೆ ಚಾಲನೆ; ಕಂಪನಿಗಳಿಗೆ ಎಷ್ಟು ಲಾಭವಾಗುತ್ತೆ ಗೊತ್ತಾ..?

    ಭಾರತ್ NCAPಗೆ ಚಾಲನೆ; ಕಂಪನಿಗಳಿಗೆ ಎಷ್ಟು ಲಾಭವಾಗುತ್ತೆ ಗೊತ್ತಾ..?

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಂಗೆ (Bharat NCAP) ಚಾಲನೆ ನೀಡಿದರು.

    ನಮ್ಮ ಜನ ಈಗ ಹೊಸ ಕಾರು ಖರೀದಿಸುವಾಗ ಬೆಲೆ, ವೈಶಿಷ್ಟ್ಯಗಳಿಗಿಂತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬೆಲೆ ತುಸು ಹೆಚ್ಚಾದರೂ ಪರವಾಗಿಲ್ಲ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಇರುವ ಕಾರನ್ನೇ ಖರೀದಿಸೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ಜನ ಈಗಾಗಲೇ ಬಂದಿದ್ದಾರೆ. ಇಷ್ಟು ವರ್ಷ ಗ್ಲೋಬಲ್ NCAP ಮತ್ತು ASEAN NCAP ಕ್ರ‍್ಯಾಶ್ ಟೆಸ್ಟ್‌ (Crash Test) ನಡೆಸಿ ಕಾರುಗಳಿಗೆ ರೇಟಿಂಗ್ ನೀಡುತ್ತಿದ್ದರು. ಇದೀಗ ಈ ಸುರಕ್ಷತಾ ರೇಟಿಂಗ್ ನೀಡುವ ವ್ಯವಸ್ಥೆ ಅಕ್ಟೊಬರ್ 1ರಿಂದ ಭಾರತದಲ್ಲಿಯೇ ಆರಂಭವಾಗಲಿದೆ.

    ಭಾರತ ಸ್ವಂತ ಕಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಸಿಸ್ಟಮ್ ಹೊಂದಿರುವ ಐದನೇ ದೇಶವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪರೀಕ್ಷೆಗೆ ಒಳಪಡುವ ಕಾರುಗಳು ಭಾರತ್ NCAP ಲೋಗೋ ಮತ್ತು ಅದರ ರೇಟಿಂಗ್ ಸೂಚಿಸುವ ಸ್ಟಿಕ್ಕರ್ ಹೊಂದಿರುತ್ತವೆ. ಭಾರತ್ NCAPಗೆ ಈಗಾಗಲೇ ೩೦ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಲು ಬೇಡಿಕೆ ಬಂದಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

    ಭಾರತ್ NCAP ಕಾರ್ಯಕ್ರಮದ ಅಡಿಯಲ್ಲಿ ಕಾರನ್ನು ಪರೀಕ್ಷಿಸಲು ಸುಮಾರು 60 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದೇ ರೀತಿಯ ಪರೀಕ್ಷೆಯನ್ನು ವಿದೇಶದಲ್ಲಿ ಮಾಡಿದರೆ ಸುಮಾರು 2.5 ಕೋಟಿ ರೂಪಾಯಿಗಳು ಬೇಕಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು. ಇದನ್ನೂ ಓದಿ: ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಸಚಿವಾಲಯ, ಮಾರುಕಟ್ಟೆಯಲ್ಲಿ ಲಭ್ಯ ಇರುವ ವಾಹನಗಳ ಕ್ರ್ಯಾಶ್ ಸುರಕ್ಷತೆಯ ತುಲನಾತ್ಮಕ ಮೌಲ್ಯಮಾಪನ ಮಾಡಲು ಕಾರು ಗ್ರಾಹಕರಿಗೆ ಒಂದು ಸಾಧನವನ್ನು ಒದಗಿಸುವ ಗುರಿಯನ್ನು ಭಾರತ್ NCAP ಹೊಂದಿದೆ ಎಂದು ತಿಳಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕಾರು ತಯಾರಕರು ಸ್ವಯಂಪ್ರೇರಣೆಯಿಂದ ತಮ್ಮ ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ನೀಡಬಹುದು ಮತ್ತು ಈ ಪರೀಕ್ಷೆ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AIS) 197ರ ಪ್ರಕಾರ ಈ ನಡೆಯುತ್ತದೆ ಎಂದು ಸಹ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಗ್ಲೋಬಲ್ NCAPನಲ್ಲಿ ರೇಟಿಂಗ್ ನೀಡುವಂತೆ ಭಾರತ್‌ ಎನ್‌ಸಿಎಪಿ ಸಹ ಕಾರಿನ ಕಾರ್ಯಕ್ಷಮತೆಯ ಆಧಾರದ ಮೇಲೆ, ವಯಸ್ಕರ ಸುರಕ್ಷತೆಗೆ ನೀಡುವ ಅಡಲ್ಟ್‌ ಆಕ್ಯುಪೆನ್ಸ್ ಪ್ರೊಟೆಕ್ಷನ್‌ (AOP) ಮತ್ತು ಮಕ್ಕಳ ಸುರಕ್ಷತೆಗೆ ನೀಡುವ ಚೈಲ್ಡ್ ಆಕ್ಯುಪೆನ್ಸ್ ಪ್ರೊಟೆಕ್ಷನ್‌ (COP) ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಕಾರುಗಳನ್ನು ಕೊಳ್ಳುವ ಗ್ರಾಹಕರು ಈ ಸ್ಟಾರ್ ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ ಸ್ಪೋರ್ಟ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ- ಬಗೆಹರಿಸುವ ಭರವಸೆ ನೀಡಿದ ಸಂಸ್ಥೆ

    ಭಾರತ್‌ ಎನ್‌ಸಿಎಪಿ ಸುರಕ್ಷಿತ ಕಾರುಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗಿದೆ, ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಕಾರು ತಯಾರಕರನ್ನು ಉತ್ತೇಜಿಸುತ್ತದೆ. ಹೆಚ್ಚಿನ ಸುರಕ್ಷತಾ ಮಾನದಂಡಗಳೊಂದಿಗೆ, ಭಾರತದ ಕಾರುಗಳು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಹಾಗೂ ಭಾರತದ ಕಾರು ತಯಾರಕರ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದ ವಿಟಾರಾ ಬ್ರೇಝಾ- ವಿಡಿಯೋ ನೋಡಿ

    ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಪಡೆದ ವಿಟಾರಾ ಬ್ರೇಝಾ- ವಿಡಿಯೋ ನೋಡಿ

    ನವದೆಹಲಿ: ಎನ್‍ಸಿಎಪಿ (ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಸಂಸ್ಥೆ ನಡೆಸುವ ವಾಹನಗಳ ಗುಣಮಟ್ಟ ಪರೀಕ್ಷೆಯಲ್ಲಿ ಮಾರುತಿ ಕಂಪೆನಿಯ ವಿಟಾರಾ ಬ್ರೇಝಾ ಎಸ್‍ಯುವಿ ಕಾರ್ 4 ಸ್ಟಾರ್ ಪಡೆದುಕೊಂಡಿದೆ.

    ಭಾರತದಾದ್ಯಂತ ಅತ್ಯಧಿಕ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಕಂಪೆನಿಯ ವಿಟಾರಾ ಬ್ರೇಝಾ ಎಸ್‍ಯುವಿ ವಾಹನವು ಉತ್ತಮ ಗುಣಮಟ್ಟ ಹಗೂ ಭದ್ರತೆಯಿಂದ ಕೂಡಿದೆ ಎಂದು ಎನ್‍ಸಿಎಪಿ ಪರೀಕ್ಷೆ ನಡೆಸಿ 4 ಸ್ಟಾರ್ ಗಳನ್ನು ನೀಡಿದೆ.

    ಎನ್‍ಸಿಎಪಿ ಜರ್ಮನಿಯಲ್ಲಿ ನಡೆಸಿದ ಪರಿಕ್ಷಾರ್ಥದಲ್ಲಿ ವಿಟಾರಾ ಬ್ರೇಝಾ ಕಾರನ್ನು ಗಂಟೆಗೆ 64 ಕಿ.ಮೀ ವೇಗದಲ್ಲಿ ಮುಂಭಾಗದ ಮೂಲಕ ಡಿಕ್ಕಿ ಹೊಡೆಸಿದೆ. ಈ ವೇಳೆ ಮುಂಭಾಸಗದ ಚಾಲಕ ಹಾಗೂ ಸಹ ಪ್ರಯಾಣಿಕನ ಪ್ರತಿರೂಪ ಬೊಂಬೆಗಳಲ್ಲಿ ಅಳವಡಿಸಿರುವ ಸೆನ್ಸರ್ ಗಳ ಪೈಕಿ 4 ಸ್ಟಾರ್ ದೊರೆತಿದೆ. ಅಲ್ಲದೇ ಹಿಂಬದಿ ಸೀಟಿನ ಮಗುವಿನ ಬೊಂಬೆಗೆ ಅಳವಡಿಸಿದ್ದ ಸೆನ್ಸರ್ ವರದಿಯ ಪ್ರಕಾರ 2 ಸ್ಟಾರ್ ಗಳು ಸಿಕ್ಕಿವೆ.

    ವಿಟಾರಾ ಬ್ರೇಝಾ ವಾಹನವು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದೆ. ಅಲ್ಲದೇ ಪ್ರತಿ ಸಂಸ್ಥೆಯ ಕಾರುಗಳನ್ನು ಎನ್‍ಸಿಎಪಿ ಪರೀಕ್ಷೆಗೆ ಒಳಪಡಿಸಿ, ಕಾರುಗಳು ಎಷ್ಟರ ಮಟ್ಟಿಗೆ ವಾಹನ ಡ್ರೈವರ್ ಮತ್ತು ಪ್ರಯಾಣಿಕರನ್ನು ರಕ್ಷಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಒದಗಿಸುತ್ತದೆ. ಈ ಮಾಹಿತಿಗಳ ಪ್ರಕಾರ ಯಾವ ಯಾವ ಸ್ಟಾರ್ ಗಳಿಗೆ ಯಾವ ಯಾವ ರೀತಿ ಮಾನದಂಡಗಳಿವೆ ಎಂಬುದನ್ನು ತಿಳಿದು ಕೊಳ್ಳಲು ಸಹಾಯಕವಾಗುತ್ತದೆ.

    ಭಾರತದಲ್ಲಿ ಎಸ್‍ಯುವಿ ವಿಭಾಗದಲ್ಲಿ ಸದ್ದು ಮಾಡುತ್ತಿರುವ ವಿಟಾರಾ ಬ್ರೇಝಾ ಪೆಟ್ರೋಲ್ ಮಾದರಿಗಳಾದ ಎಲ್‍ಡಿಐಗೆ 7,76,720 ರೂಪಾಯಿ, ವಿಡಿಐ ಮಾದರಿಗೆ 8,45,349 ರೂಪಾಯಿ ಹಾಗೂ ವಿಡಿಐ ಎಎಂಟಿಗೆ 8,95,349 ಎಕ್ಸ್ ಶೋರೂಂ ಬೆಲೆಯಾಗಿದೆ. ಅಲ್ಲದೇ ಡಿಸೇಲ್ ಮಾದರಿಯ ಜೆಡ್‍ಡಿಐ ಮಾದರಿಗೆ 9,10,202 ರೂಪಾಯಿ, ಜೆಡ್‍ಡಿಐ ಎಎಂಟಿಗೆ 9,60,202 ರೂಪಾಯಿ, ಜೆಡ್‍ಡಿಐ+ಗೆ 10,05,378 ರೂಪಾಯಿ ಹಾಗೂ ಜೆಡ್‍ಡಿಐ+ ಎಎಂಟಿಗೆ 10,55,378 ರೂಪಾಯಿ ಆಗಲಿದೆ.

    ಏನಿದು ಕ್ರ್ಯಾಶ್ ಟೆಸ್ಟಿಂಗ್?
    ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‍ಸಿಎಪಿ, ಕಾರುಗಳಲ್ಲಿನ ಸುರಕ್ಷತೆಗೆ ರೇಟಿಂಗ್ ನೀಡುತ್ತದೆ. ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಪಾಯಕಾರಿ ಕಾರು ಎಂದು ಕರೆಯಲಾಗುತ್ತದೆ.

    ಎಷ್ಟು ಸ್ಟಾರ್ಸ್‍ ಗೆ ಎಷ್ಟು ಸೇಫ್ಟಿ?
    ಕೇವಲ ಅಪಘಾತದ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತದೆ.
    ** ಅಪಘಾತದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಆದರೆ ಅಪಘಾತವನ್ನು ತಪ್ಪಿಸುವ ಯಾವುದೇ ತಂತ್ರಜ್ಞಾನ ಇಲ್ಲ.
    *** ಪ್ರಯಾಣಿಕರಿಗೆ ಒಂದು ಮಟ್ಟಿಗೆ ಸುರಕ್ಷಿತ ವಾಹನ ಆದರೆ ಯಾವುದೇ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡುವ ತಂತ್ರಜ್ಞಾನ ಹೊಂದಿಲ್ಲ.
    **** ಅಪಘಾತದ ತೀವ್ರತೆಯಿಂದಾಗುವ ಅವಘಡಗಳನ್ನು ತಪ್ಪಿಸುತ್ತದೆ. ಏರ್ ಬ್ಯಾಗ್ ಹಾಗೂ ಇನ್ನುಳಿದ ಸುರಕ್ಷತೆಯನ್ನು ವಾಹನ ಒಳಗೊಂಡಿದೆ.
    ***** ಅಪಘಾತದ ಎಲ್ಲಾ ಹಂತಗಳಲ್ಲು ಸುಭದ್ರವಾಗಿದ್ದು, ಎರ್ ಬ್ಯಾಗ್, ಎಬಿಎಸ್ ಸೇರಿದಂತೆ ಮುಂತಾದ ಅಡ್ವಾನ್ಸ್ ಟೆಕ್ನಾಲಜಿಗಳನ್ನು ಬಳಸಿರುವುದರಿಂದ ಅಪಘಾತದ ತೀವ್ರತೆ ತೀರಾ ಕಡಿಮೆ ಎನ್ನಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv