Tag: NCA

  • ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ಬೆಂಗಳೂರು: 40 ಪ್ರಾಕ್ಟೀಸ್‌ ಪಿಚ್‌ಗಳು, ಇಂಡೋರ್‌ ಕ್ರಿಕೆಟ್‌ ಪಿಚ್‌ ಹಾಗೂ ಒಲಿಂಪಿಕ್ಸ್‌ ಗಾತ್ರದ ಈಜುಕೊಳ ಸೇರಿ ಅನೇಕ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (NCA) ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದಾರೆ.

    ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಬಿಸಿಸಿಐನ (BCCI) ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನಾಯಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್‌ – ಬ್ರ್ಯಾಂಡ್‌ ಮೌಲ್ಯ 6 ಪಟ್ಟು ಹೆಚ್ಚಳ

    ಉದ್ಘಾಟನೆಗೊಳ್ಳಲಿರುವ ನೂತನ ಕ್ರಿಕೆಟ್‌ ಅಕಾಡೆಮಿಯಲ್ಲಿ ಮೂರು ವಿಶ್ವದರ್ಜೆಯ ಆಟದ ಮೈದಾನಗಳು (World class playing grounds), 45 ಅಭ್ಯಾಸ ಪಿಚ್‌ಗಳು, ಇಂಡೋರ್‌ ಕ್ರಿಕೆಟ್‌ ಪಿಚ್‌ಗಳು, ಒಲಿಂಪಿಕ್ಸ್‌ ಗಾತ್ರದ ಈಜುಕೊಳ (Olympic size swimming Pool), ತರಬೇತಿ, ಚೇತರಿಕೆ ಹಾಗೂ ಕ್ರೀಡಾ ವಿಜ್ಞಾನ ಸಂಸ್ಥೆಯಂತಹ ಸೌಲಭ್ಯಗಳು ಇರಲಿವೆ ಎಂದು ಜಯ್‌ ಶಾ ಮಾಹಿತಿ ಹಂಚಿಕೊಂಡಿದ್ದಾರೆ.

    ಈ ಅಕಾಡೆಮಿಯು ನಮ್ಮ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಆಟಗಾರರು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಹಾಗೂ ಆಟಗಾರರಿಗೆ ಉತ್ತಮ ವಾತಾವರಣ ಕಲ್ಪಿಸಲು ಸಹಾಯಕವಾಗುತ್ತದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: IND vs SL ODI: ಟೀಂ ಇಂಡಿಯಾ ಆಲೌಟ್‌; ಗೆಲುವಿಗೆ ಬೇಕಿದ್ದ 1 ರನ್‌ ಗಳಿಸಲು ವಿಫಲ – ಲಂಕಾ ವಿರುದ್ಧದ ಚೊಚ್ಚಲ ಪಂದ್ಯ ಟೈ 

  • ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

    ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

    ಬೆಂಗಳೂರು: ಗಾಯಳುವಾಗಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಲ್‍ರೌಂಡರ್ ರವೀಂದ್ರ ಜಡೇಜಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA) ಮುಖ್ಯಸ್ಥರಾದ ಲಕ್ಷ್ಮಣ್ ಗರಡಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

    ಶರ್ಮಾ ಮತ್ತು ಜಡೇಜಾ ಬೆಂಗಳೂರಿನಲ್ಲಿರುವ NCA ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಳ್ಳಲು ಆಗಮಿಸಿದ್ದು, ಈಗಾಗಲೇ ಅಭ್ಯಾಸ ಆರಂಭಿಸಿ ಮತ್ತೆ ಫಿಟ್ ಆಗಿ ತಂಡಕ್ಕೆ ಕಮ್‍ಬ್ಯಾಕ್ ಆಗಲು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿ.ವಿ.ಎಸ್ ಲಕ್ಷ್ಮಣ್ ಎನ್‍ಸಿಎ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು. ಅವರು ಇದೀಗ ರೋಹಿತ್ ಮತ್ತು ಜಡೇಜಾಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ: ಎನ್‌ಸಿಎಯಲ್ಲಿ ಪಾಠ ಆರಂಭಿಸಿದ ಲಕ್ಷ್ಮಣ್

    ರವೀಂದ್ರ ಜಡೇಜಾ ಮೊಣಕಾಲು ಗಾಯದಿಂದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದು, ರೋಹಿತ್ ಮುಂಬೈನಲ್ಲಿ ಅಭ್ಯಾಸದ ವೇಳೆ ಗಾಯಗೊಂಡು ಮೂರು ಅಥವಾ ನಾಲ್ಕು ವಾರಗಳ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದರು. ಇದೀಗ ಇವರಿಬ್ಬರೂ ಕೂಡ ಬೆಂಗಳೂರಿನಲ್ಲಿ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

  • ಎನ್‌ಸಿಎಯಲ್ಲಿ ಪಾಠ ಆರಂಭಿಸಿದ ಲಕ್ಷ್ಮಣ್

    ಎನ್‌ಸಿಎಯಲ್ಲಿ ಪಾಠ ಆರಂಭಿಸಿದ ಲಕ್ಷ್ಮಣ್

    ಬೆಂಗಳೂರು: ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೂತನ ಮುಖ್ಯಸ್ಥರಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಲಕ್ಷ್ಮಣ್ ಅವರು ತಮ್ಮ ಕಚೇರಿಯಲ್ಲಿ ಮೊದಲ ದಿನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾದ ಮುಖ್ಯ ತರಬೇತುದಾರರಾಗಿ ನೇಮಕವಾದ ನಂತರ ಎನ್‌ಸಿಎಯಲ್ಲಿ ಉನ್ನತ ಹುದ್ದೆಯನ್ನು ವಿವಿಎಸ್ ಲಕ್ಷ್ಮಣ್ ಅಲಂಕರಿಸಿದ್ದರು.

    ಲಕ್ಷ್ಮಣ್ ಅವರು ಈ ಫೋಟೋವನ್ನು ಶೇರ್ ಮಾಡಿಕೊಂಡು ಎನ್‌ಸಿಎ ಕಚೇರಿಯಲ್ಲಿ ಮೊದಲ ದಿನ. ಬೇರೆ ಬೇರೆ ಸವಾಲಿಗೆ ನಾನು ಹೆಚ್ಚು ಉತ್ಸುಕನಾಗಿದ್ದೇನೆ. ಭಾರತೀಯ ಕ್ರಿಕೆಟ್‌ನ ಭವಿಷ್ಯದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

    ಇದೇ ವೇಳೆ ಮಾಜಿ ಆಟಗಾರ ಇರ್ಫಾನ್ ಪಠಾಣ್ ಲಕ್ಷ್ಮಣ್ ಅವರಿಗೆ ಶುಭ ಹಾರೈಸಿದರು. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಎನ್‌ಸಿಎ ಇನ್ನೂ ಉತ್ತುಂಗದ ಸ್ಥಾನಕ್ಕೆರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು

    ಎನ್‌ಸಿಎಯಲ್ಲಿ ಭಾರತೀಯ ಕ್ರಿಕೆಟ್‌ನ ಉನ್ನತಿಗಾಗಿ ಲಕ್ಷ್ಮಣ್ ಅವರು ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದರು.

  • NCA ಮುಖ್ಯಸ್ಥರಾಗಿ ಲಕ್ಷ್ಮಣ್ ಡಿ.13ಕ್ಕೆ ಪದಗ್ರಹಣ

    NCA ಮುಖ್ಯಸ್ಥರಾಗಿ ಲಕ್ಷ್ಮಣ್ ಡಿ.13ಕ್ಕೆ ಪದಗ್ರಹಣ

    ಮುಂಬೈ: ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯಸ್ಥರಾಗಿ ಡಿಸೆಂಬರ್ 13 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

    ಬಿಸಿಸಿಐ ವಾರ್ಷಿಕ ಮಹಾಸಭೆ ನಿನ್ನೆ ನಡೆದಿತ್ತು. ಈ ಸಭೆಯಲ್ಲಿ ಎನ್‍ಸಿಎ ಮುಖ್ಯಸ್ಥರ ಅಧಿಕಾರ ಸ್ವೀಕಾರ ಡಿ.13ರಂದು ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಸಭೆಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಚರ್ಚೆ ನಡೆದಿದ್ದು, ಸರಣಿ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಬೌಲ್ಡಾದರೂ DRS ಮೊರೆ ಹೋಗಿ ಲೆಜೆಂಡ್ ಎನಿಸಿಕೊಂಡ ಅಶ್ವಿನ್

    ಬೆಂಗಳೂರಿನಲ್ಲಿ ಎನ್‍ಸಿಎ ಮುಖ್ಯಸ್ಥರಾಗಿ ದ್ರಾವಿಡ್ ಸೇವೆಸಲ್ಲಿಸುತ್ತಿದ್ದರು ಇದೀಗ ಅವರು ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದರಿಂದ ತೆರವುಗೊಂಡಿರುವ ಎನ್‍ಸಿಎ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್ ನೇಮಕಗೊಂಡಿದ್ದು, ಲಕ್ಷ್ಮಣ್ ಬಿಸಿಸಿಐ ಜೊತೆ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಡಿ.13 ರಂದು ಕೋಚಿಂಗ್ ಸಿಬ್ಬಂದಿಯೊಂದಿಗೆ ಬೆಂಗಳೂರಿಗೆ ಆಗಮಿಸಿ ಅಧಿಕಾರ ಪಡೆಯಲಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: 10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

  • ದ್ರಾವಿಡ್ ಬಳಿಕ ಲಕ್ಷ್ಮಣ್ NCA ಮುಖ್ಯಸ್ಥ?

    ದ್ರಾವಿಡ್ ಬಳಿಕ ಲಕ್ಷ್ಮಣ್ NCA ಮುಖ್ಯಸ್ಥ?

    ಬೆಂಗಳೂರು: ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯಸ್ಥ ಸ್ಥಾನ ತೆರವಾಗಿದೆ. ಈ ಸ್ಥಾನಕ್ಕೆ ಇದೀಗ ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಆಯ್ಕೆಯಾಗುವುದು ಬಹುತೇಕ ನಿಶ್ಚಿತ ಎಂದು ವರದಿಯಾಗಿದೆ.

    ಎನ್‍ಸಿಎ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಯ ಅಧಿಕಾರವದಿ ಮುಗಿದ ಬಳಿಕ ಬಿಸಿಸಿಐ ನೂತನ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಿಸಿದೆ. ಆ ಬಳಿಕ ಬೆಂಗಳೂರಿನಲ್ಲಿರುವ ನ್‍ಸಿಎಗೆ ಮೂತನ ಮುಖ್ಯಸ್ಥರಿಗಾಗಿ ಬಿಸಿಸಿಐ ಹುಡುಕಾಟದಲ್ಲಿತ್ತು. ಇದೀಗ ಬಿಸಿಸಿಐ ಲಕ್ಷ್ಮಣ್ ಅವರನ್ನು ಎನ್‍ಸಿಎ ಮುಖ್ಯಸ್ಥರನ್ನಾಗಿ ಅಂತಿಮಗೊಳಿಸಿದೆ ಎಂದು ಬಿಸಿಸಿಐ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

    ಕಾಮೆಂಟರಿ ಮತ್ತು ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿರುವುದರಿಂದಾಗಿ ಎನ್‍ಸಿಎ ಮುಖ್ಯಸ್ಥರಾಗಲು ಮೊದಲು ಲಕ್ಷ್ಮಣ್ ಒಪ್ಪಿಕೊಂಡಿರಲಿಲ್ಲ. ಆ ಬಳಿಕ ಈ ಹಿಂದೆ ಸಹ ಆಟಗಾರರಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಮಾತುಕತೆ ನಡೆಸಿ ಲಕ್ಷ್ಮಣ್ ಅವರನ್ನು ಒಪ್ಪಿಸಿದ್ದಾರೆ ಎಂದು ವರದಿಯಾಗಿದ್ದು, ಈ ಮೂಲಕ ದಿಗ್ಗಜ ಆಟಗಾರರು ಮತ್ತೆ ಭಾರತ ಕ್ರಿಕೆಟ್ ತಂಡಕ್ಕೆ ನೆರವಾಗಲು ಮುಂದಾಗಿದ್ದಾರೆ. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

  • ಕನ್ನಡಿಗ ದ್ರಾವಿಡ್‍ರನ್ನು ಭೇಟಿಯಾಗಲಿರುವ ಗಂಗೂಲಿ

    ಕನ್ನಡಿಗ ದ್ರಾವಿಡ್‍ರನ್ನು ಭೇಟಿಯಾಗಲಿರುವ ಗಂಗೂಲಿ

    ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಬಳಿಕ ಸೌರವ್ ಗಂಗೂಲಿ ಅವರು ಮೊದಲ ಬಾರಿಗೆ ಟೀಂ ಇಂಡಿಯಾ ಆಟಗಾರ, ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

    ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಡೇ-ನೈಟ್ ಪಂದ್ಯಕ್ಕೆ ಗಂಗೂಲಿ ಒಪ್ಪಿಗೆ ಸೂಚಿಸಿದ್ದು, ಸದ್ಯ ಟೀಂ ಇಂಡಿಯಾ ತಂಡಕ್ಕೆ ಸಂಬಂಧಿಸಿದ ಮಾರ್ಗಸೂಚಿ (ರೋಡ್ ಮ್ಯಾಪ್) ರಚನೆ ಮಾಡಲು ಗಂಗೂಲಿ, ದ್ರಾವಿಡ್‍ರನ್ನು ಭೇಟಿ ಮಾಡುತ್ತಿದ್ದಾರೆ.

    ಬೆಂಗಳೂರಿನಲ್ಲಿ ಬುಧವಾರ ಮಾಜಿ ನಾಯಕರಿಬ್ಬರು ಭೇಟಿಯಾಗಲಿದ್ದು, ಟೀಂ ಇಂಡಿಯಾ ಕ್ರಿಕೆಟ್ ಪರ ಸುದೀರ್ಘ ಅನುಭವ ಹೊಂದಿರುವ ಸ್ನೇಹಿತರ ಭೇಟಿ ವಿಶೇಷವಾಗಿದೆ. ಟೀಂ ಇಂಡಿಯಾ ರೋಡ್ ಮ್ಯಾಪ್  ರಚಿಸಲು ಗಂಗೂಲಿ ಅವರು ದ್ರಾವಿಡ್‍ರಿಂದ ಕೆಲ ಪ್ರಮುಖ ಸಲಹೆಗಳನ್ನು ಪಡೆಯಲಿದ್ದಾರೆ. ಈಗಾಗಲೇ ದ್ರಾವಿಡ್ ಎನ್‍ಸಿಎ ಮಾರ್ಗಸೂಚಿಗಳನ್ನು ರಚಿಸಿದ್ದಾರೆ. ಇದೇ ವೇಳೆ ಎನ್‍ಸಿಎ ಮುಖ್ಯಸ್ಥರಾದ ಬಳಿಕ ಸಂಸ್ಥೆಯಲ್ಲಿ ಕಂಡ ಬಂದಿರುವ ಲೋಪಗಳು ಹಾಗೂ ಮುಂದಿನ ಹಾದಿಯ ಕುರಿತು ದ್ರಾವಿಡ್‍ರಿಂದ ಗಂಗೂಲಿ ಮಾಹಿತಿ ಪಡೆಯಲಿದ್ದಾರೆ. ಈ ಸಭೆಗೆ ಎನ್‍ಸಿಎ ಸಿಇಒ ಆಗಿರುವ ತುಫಾನ್ ಘೋಷ್ ಕೂಡ ಹಾಜರಾಗಲಿದ್ದಾರೆ.

    4 ವರ್ಷ ಟೀಂ ಇಂಡಿಯಾ-ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ದ್ರಾವಿಡ್, ಕಳೆದ ಜುಲೈನಲ್ಲಿ ಎನ್‍ಸಿಎ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಬಿಸಿಸಿಐ ಹೊಸದಾಗಿ ಸೃಷ್ಟಿ ಮಾಡಿದ್ದ ಮುಖ್ಯಸ್ಥರ ಪದವಿಗೆ ಹಲವರು ಪೈಪೋಟಿ ನಡೆಸಿದ್ದರು ಕೂಡ ಅಂತಿಮವಾಗಿ ದ್ರಾವಿಡ್ ನೇಮಕವಾಗಿದ್ದರು. ಯುವ ಆಟಗಾರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ದ್ರಾವಿಡ್ ಅವರೇ ಎನ್‍ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಹರು ಎಂದು ಬಿಸಿಸಿಐ ಈ ತೀರ್ಮಾನ ಕೈಗೊಂಡಿತ್ತು. ಅಂದಹಾಗೇ ಬಿಸಿಸಿಐನಲ್ಲಿ ಈ ಹಿಂದೆ ನಡೆದಿದ್ದ ಕೆಲ ತಾಂತ್ರಿಕ ಸಭೆಗಳಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಕೋಚ್ ಆಗಿ ದ್ರಾವಿಡ್ ಒಟ್ಟಿಗೆ ಭಾಗಿಯಾಗಿದ್ದರು.

  • ಜುಲೈ 01 ರಂದು ಬೆಂಗ್ಳೂರು ಎನ್‍ಸಿಎ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ದ್ರಾವಿಡ್

    ಜುಲೈ 01 ರಂದು ಬೆಂಗ್ಳೂರು ಎನ್‍ಸಿಎ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ದ್ರಾವಿಡ್

    ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಜೂನಿಯರ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ನಾಳೆ ಅಂದರೆ ಜುಲೈ 1 ರಂದು ಎನ್‍ಸಿಎ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

    ಸದ್ಯ ಟೀಂ ಇಂಡಿಯಾ ಎ ಹಾಗೂ ಅಂಡರ್ 19 ತಂಡದ ಕೋಚ್ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದು, ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ಎನ್‍ಸಿಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವುದರಿಂದ ಕೋಚ್ ಹುದ್ದೆಯಿಂದ ಬಿಡುಗಡೆ ಆಗಲಿದ್ದಾರೆ ಎನ್ನಲಾಗಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

    ಎನ್‍ಸಿಎ ಭಾರತ ಕ್ರಿಕೆಟ್ ತಂಡ ಮಹತ್ವದ ಭಾಗವಾಗಿದ್ದು, ಈ ಕೇಂದ್ರದಲ್ಲಿ ವಲಯವಾರು ಕ್ರಿಕೆಟ್ ಅಕಾಡೆಮಿ ತರಬೇತಿದಾರರನ್ನು ನೇಮಿಸುವುದು, ಮಹಿಳಾ ತಂಡದ ಅಭಿವೃದ್ಧಿ, ಗಾಯಗೊಂಡಿರುವ ಆಟಗಾರರ ಚೇತರಿಸಿಕೊಳ್ಳುವ ಮೇಲೆ ಹೆಚ್ಚಿನ ನಿಗಾವಹಿಸುವ ಕಾರ್ಯವನ್ನು ಮಾಡಲಿದೆ.

    ರಾಹುಲ್ ದ್ರಾವಿಡ್ ಅವರ ತರಬೇತಿಯಲ್ಲಿ ಟೀಂ ಇಂಡಿಯಾ ಎ ತಂಡ ಹಾಗೂ ಅಂಡರ್ 19 ತಂಡಗಳು ಉತ್ತಮ ಪ್ರದರ್ಶನವನ್ನು ತೋರಿದೆ. ಯುವ ಉದಯೋನ್ಮುಖ ಕ್ರಿಕೆಟರ್ ಗಳಿಗೆ ಉತ್ತಮ ತರಬೇತಿ ನೀಡಿದ್ದರು. ರಾಹುಲ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಯುವ ಪ್ರತಿಭೆಗಳು ರಾಷ್ಟ್ರೀಯ ತಂಡದಲ್ಲಿ ಮಿಂಚುಹರಿಸಿದ್ದಾರೆ.

  • ಬೆಂಗ್ಳೂರು ಎನ್‍ಸಿಎ ಹೆಡ್‍ಕೋಚ್ ರೇಸಿನಲ್ಲಿ ದ್ರಾವಿಡ್

    ಬೆಂಗ್ಳೂರು ಎನ್‍ಸಿಎ ಹೆಡ್‍ಕೋಚ್ ರೇಸಿನಲ್ಲಿ ದ್ರಾವಿಡ್

    ಮುಂಬೈ: ಟೀಂ ಇಂಡಿಯಾ ಜೂನಿಯರ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡಲು ಬಿಸಿಸಿಐ ಪ್ರಕ್ರಿಯೆ ಆರಂಭಿಸಿದೆ ಎಂಬ ಮಾಹಿತಿ ಲಭಿಸಿದೆ.

    ಬಿಸಿಸಿಐ ಹೊಸದಾಗಿ ಸೃಷ್ಟಿ ಮಾಡಿರುವ ಹೆಡ್‍ಕೋಚ್ ಹುದ್ದೆ ಜವಾಬ್ದಾರಿಯನ್ನು ನಿರ್ವಹಿಸಲು ಕೋಚ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈಗಾಗಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಅಂಡರ್ 19, ಟೀಂ ಇಂಡಿಯಾ ‘ಎ’ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಅವರನ್ನು ಎನ್‍ಸಿಎ ಮುಖ್ಯ ಕೋಚ್ ಆಗಿ ನೇಮಕ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

    ಸದ್ಯ ಎನ್‍ಸಿಎ ಜವಾಬ್ದಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಫಾನ್ ಘೋಷ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಮುಖ್ಯ ಕೋಚ್ ನೇಮಕವಾದ ಬಳಿಕ ಅಕಾಡೆಮಿಯ ಇತರೆ ಕೋಚ್‍ಗಳ ನೇಮಕದಿಂದ ಹಿಡಿದು, ಎಲ್ಲಾ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮುಖ್ಯ ಕೋಚ್ ಅವರು ನಿರ್ವಹಿಸಲಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಬಿಸಿಸಿಐ ವಕ್ತಾರರೊಬ್ಬರು ಪ್ರತಿಕ್ರಿಯಿಸಿ, ಬಿಸಿಸಿಐ ನಿಯಮಗಳ ಅನ್ವಯವೇ ಕೋಚ್ ಪದವಿಗೆ ಅರ್ಜಿ ಆಹ್ವಾನ ಮಾಡಿ ನೇಮಕ ಮಾಡಲಾಗುತ್ತದೆ. ಈ ರೇಸ್ ನಲ್ಲಿ ದ್ರಾವಿಡ್ ಅವರು ಮುಂದಿದ್ದಾರೆ. ಆದರೆ ಇಂದಿಗೂ ಅವರು ಟೀಂ ಇಂಡಿಯಾ ಜೂನಿಯರ್ ತಂಡ ಕೋಚ್ ಆಗಿ ಮುಂದುವರಿದಿದ್ದಾರೆ ಎಂದು ತಿಳಿಸಿದರು.

    ಬಿಸಿಸಿಐ ನೀಡಿರುವ ಮಾಹಿತಿಯಂತೆ ದ್ರಾವಿಡ್ ಅವರಿಗೆ ಕೋಚ್ ಹೆಚ್ಚಿನ ಜವಾಬ್ದಾರಿಯುತ ಹುದ್ದೆ ಬಹುತೇಕ ಖಚಿತ ಎನ್ನಲಾಗಿದ್ದು, ನಿಯಮಗಳನ್ನು ಪೂರೈಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಈ ಹಿಂದೆ ಇಂತಹ ಹುದ್ದೆಗಳಿಗೆ ನೇರ ನೇಮಕಾತಿ ನಡೆದ ವೇಳೆ ಕೇಳಿ ಬಂದ ವಿಮರ್ಶೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಾರಿ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

  • ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ

    ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ

    ಬೆಂಗಳೂರು: ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಕುರಿತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ಆರೋಪದ ವರದಿಗಳನ್ನು ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅಲ್ಲಗೆಳೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಯುವಿ, ನಾನು ಎನ್‍ಸಿಎ ಕುರಿತ ಅನುಭವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಮಾರಕ ಕ್ಯಾನ್ಸರ್ ನಿಂದ ನಾನು ಹೊರ ಬರಲು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಸಹಕಾರ ನೀಡಿತ್ತು. ಬಿಸಿಸಿಐ ನಿರಂತರವಾಗಿ ಆಟಗಾರರ ಗಾಯದ ಸಮಸ್ಯೆಗಳನ್ನು ಬಹುಬೇಗ ನಿವಾರಿಸಲು ಕಾರ್ಯನಿರ್ವಹಿಸುತ್ತಿದ್ದು, ದೇಶದ ಉತ್ತಮ ತರಬೇತುದಾರರು ಹಾಗೂ ವೈದ್ಯರನ್ನು ನಿಯೋಜಿಸಿದೆ ಎಂದು ಬರೆದುಕೊಂಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಬಹು ನಿರೀಕ್ಷಿತ ಪ್ರವಾಸದ ವೇಳೆ ಟೀಂ ಇಂಡಿಯಾ ಪ್ರಮುಖ ವೇಗಿಗಳಾದ ಮಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಸಂಪೂರ್ಣ ಫಿಟ್ ಆಗದಿರುವ ಕಾರಣ ಈ ಚರ್ಚೆ ಆರಂಭವಾಗಿತ್ತು. ಶಮಿ ಮೊದಲು ಯೋಯೋ ಟೆಸ್ಟ್ ಎದುರಿಸಿದ ವೇಳೆ ಪಾಸ್ ಮಾಡಲು ವಿಫಲರಾಗಿದ್ದು, ಸದ್ಯ 2ನೇ ಬಾರಿ ಯೋಯೋ ಟೆಸ್ಟ್ ಎದುರಿಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಭುವನೇಶ್ವರ್ ಬೆನ್ನು ನೋವಿನ ಸಮಸ್ಯೆಯಿಂದ ಆರಂಭದ 3 ಟೆಸ್ಟ್ ಪಂದ್ಯಗಳಿಂದ ಹೊರ ನಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್‍ಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದು, ಈ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ. ಇನ್ನು ಕುಲ್ ದೀಪ್ ಯಾದವ್, ಆರ್ ಆಶ್ವಿನ್, ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ.