Tag: Nayana Puttaswamy

  • ಬಿಗ್ ಬಾಸ್ ಖ್ಯಾತಿಯ ನಯನಾಗೆ ಗಂಡು ಮಗು ಜನನ

    ಬಿಗ್ ಬಾಸ್ ಖ್ಯಾತಿಯ ನಯನಾಗೆ ಗಂಡು ಮಗು ಜನನ

    ಬೆಂಗಳೂರು: ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಈ ಕುರಿತು ಅವರು ಇನ್‍ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಟ್ ಇಸ್ ಎ ಬಾಯ್ ಎಂದು ಬರೆದುಕೊಂಡು ಮಗುವಿನ ಕೈ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಗಂಡು ಮಗು ಜನನವಾಗಿರುವುದನ್ನು ತಿಳಿಸಿದ್ದಾರೆ.

     

    View this post on Instagram

     

    A post shared by Nayana Puttaswamy (@naina_puttaswamy)

    ನಯನಾ ಪುಟ್ಟಸ್ವಾಮಿ ಬಿಗ್ ಬಾಸ್ 6 ಹಾಗೂ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 1ರ ಮೂಲಕ ಸಹ ಜನಪ್ರಿಯರಾಗಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಸಿರಿಯಲ್‍ಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಪತಿ ಚರಣ್ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವುದಿರಿಂದ ಅಲ್ಲಿಗೇ ಶಿಫ್ಟ್ ಆಗಿದ್ದಾರೆ. ಇದೇ ವೇಳೆ ಅವರೂ ಸಹ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡುತ್ತಿದ್ದಾರಂತೆ. ಅಲ್ಲದೆ ಭಾರತಕ್ಕೆ ಮರಳಿ ಕನ್ನಡ ಚಿತ್ರರಂಗದಲ್ಲಿ ಸೇವೆ ಮಾಡಬೇಕೆಂಬ ಬಯಕೆಯನ್ನು ಸಹ ಅವರು ಈ ಹಿಂದೆ ತಿಳಿಸಿದ್ದರು.

     

    View this post on Instagram

     

    A post shared by Nayana Puttaswamy (@naina_puttaswamy)

    ಇತ್ತೀಚೆಗೆ ಅವರು ಪ್ರಗ್ನೆನ್ಸಿ ವಿಚಾರವನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಗಂಡು ಮಗು ಜನನವಾಗಿರುವ ಕುರಿತು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತಸದ ವಿಚಾರ ತಿಳಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾಲಿಟಿ ಶೋ ವಿನ್ನರ್ ‘ನಯನ’

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾಲಿಟಿ ಶೋ ವಿನ್ನರ್ ‘ನಯನ’

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್ ನಲ್ಲಿ ತಾರೆಯರ ಮದುವೆಗಳು ನಡೆಯುತ್ತಲೇ ಇದೆ. ಸೋಮವಾರ ನಟ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ರಿಯಾಲಿಟಿ ಶೋ ವಿನ್ನರ್ ಕೂಡ ನಿನ್ನೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ವಿನ್ನರ್ ಆಗಿದ್ದ ನಯನ ಪುಟ್ಟಸ್ವಾಮಿ ಸೋಮವಾರ ಚರಣ್ ತೇಜ್ ಎಂಬ ಯುವಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮೂಲತಃ ಹೈದರಾಬಾದ್ ಮೂಲದ ಚರಣ್ ತೇಜ್ ಜೊತೆ ನಯನ ನಿಶ್ಚಿತಾರ್ಥ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆದಿತ್ತು. ಇದೀಗ ಸೋಮವಾರ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಜೀವನ ಆರಂಭಿಸಲು ಅಣಿಯಾಗಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನೀಲ್ ರಾವ್!

    ರಿಯಾಲಿಟಿ ಶೋ ವಿನ್ನರ್ ಆದ ಬಳಿಕ ನಯನ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟರು. ವಿನಯ್ ರಾಜ್‍ಕುಮಾರ್ ಅಭಿನಯಿಸಿದ ‘ಸಿದ್ಧಾರ್ಥ್’ ಚಿತ್ರದಲ್ಲಿ ನಾಯಕನ ಗೆಳತಿಯಾಗಿ ನಯನ ನಟಿಸಿದ್ದರು. ಈ ಸಿನಿಮಾ ಜೊತೆಗೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ನಯನ ಮಿಂಚಿದ್ದಾರೆ.

    ಇನ್ನೂ ನಯನ ಮದುವೆಗೆ ನಟ ವಿನಯ್ ರಾಜ್‍ಕುಮಾರ್ ಭೇಟಿ ನೀಡಿ ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.