Tag: naxals

  • ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ನಕ್ಸಲರ ಸಂಚು!

    ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ನಕ್ಸಲರ ಸಂಚು!

    ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ ಸಂಚನ್ನು ನಕ್ಸಲರು ರೂಪಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಡಿಸೆಂಬರ್ ನಲ್ಲಿ ನಡೆದ ಭೀಮ-ಕೋರೆಗಾನ್ ಹಿಂಸಾಚಾರ ಹಾಗೂ ನಕ್ಸಲರ ಜೊತೆ ಸಂಬಂಧ ಹೊಂದಿರುವ ಹಿನ್ನಲೆಯಲ್ಲಿ ಪೊಲೀಸರು ಒಟ್ಟು ಐದು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದರು. ಇದರಲ್ಲಿ ದಲಿತ ಮುಖಂಡನಾದ ಸುಧೀರ್ ಧಾವಲೆ, ವಕೀಲ ಸುರೇಂದ್ರ ಗಾದ್ಲಿಂಗ್, ಮಹೇಶ್ ಶಾವತ್, ಸೋಮಸೇನ ಮತ್ತು ರೋನ ವಿಲ್ಸನ್ ಇವರನ್ನು ಮುಂಬೈ, ನಾಗ್ಪುರ ದೆಹಲಿಯ ನಿವಾಸದಲ್ಲಿ ಬಂಧಿಸಿದ್ದರು.

    ದೆಹಲಿಯಲ್ಲಿ ಬಂಧನಕ್ಕೆ ಒಳಗಾದ ರೋನ್ ವಿಲ್ಸನ್ ನ ಮನೆಯನ್ನು ಪರಿಶೀಲಿಸಿದಾಗ ನಕ್ಸಲರಿಗೆ ಸೇರಿದ ಪತ್ರವೊಂದು ಸಿಕ್ಕಿತ್ತು. ಈ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವ ಕುರಿತು ಬರೆಯಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪತ್ರದಲ್ಲಿ ಏನಿತ್ತು?
    ಪ್ರಧಾನಿ ಮೋದಿಯವರು ಭಾರತದಲ್ಲಿ ಹಿಂದುತ್ವದ ಮುಂದಾಳತ್ವವನ್ನು ವಹಿಸಿದ್ದಾರೆ. ಇದು ಅನೇಕ ಆದಿವಾಸಿಗಳ ಜೀವಕ್ಕೆ ಕುತ್ತಾಗಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಳ ಹೊರತು ಪಡಿಸಿ ಮೋದಿಯವರು ದೇಶಾದ್ಯಂತ ಅಧಿಕಾರ ವಿಸ್ತರಿಸುತ್ತಿದ್ದು ಪ್ರಸ್ತುತ 15 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಮುಂದಿನ ದಿನಗಳಲ್ಲಿ ಇದರಿಂದ ನಮಗೆ ಹೆಚ್ಚಿನ ಹಾನಿಯುಂಟಾಗುತ್ತದೆ. ಆದರಿಂದ ಮೋದಿಯವರ ರೋಡ್ ಶೋ ಹಾಗೂ ಸಮಾರಂಭಗಳಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲೇ ಅವರ ಮೇಲೆ ದಾಳಿ ಮಾಡಿ ಹೊಡೆದು ಹಾಕಬೇಕು ಹಾಗೂ ಈ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲಗೊಳ್ಳಬಾರದು ಎಂದು ಬರೆಯಲಾಗಿದೆ.

    ಈ ರೀತಿಯ ದಾಳಿ ನಡೆಸಲು ಸುಮಾರು 8 ಕೋಟಿ ರೂಪಾಯಿಯ ಅಗತ್ಯವಿದ್ದು ಇದರಲ್ಲಿ ಎಂ-4 ಮಾದರಿಯ ಅತ್ಯಾಧುನಿಕ ರೈಫಲ್ಸ್ ಅವಶ್ಯಕತೆಯಿದೆ ಇದೆ ಎಂದು ಉಲ್ಲೇಖಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‍ನ ಸಂಜಯ್ ನಿರುಪಮ್ “ಈ ಪತ್ರವು ನಕ್ಸಲರದ್ದೇ ಎಂದು ಅಧಿಕೃತ ಮಾಹಿತಿ ಸಿಕ್ಕಿಲ್ಲ ಇದನ್ನು ಸುಳ್ಳು ಎಂದು ನಾನು ಹೇಳುತ್ತಿಲ್ಲ. ಕೇವಲ ಇದು ಮೋದಿಯವರ ತಂತ್ರವಾಗಿದ್ದು, ಮುಖ್ಯಮಂತ್ರಿಯಾಗಿದ್ದಾಗಿಂದಲೂ ತಮ್ಮ ಜನಪ್ರಿಯೆ ಕಡಿಮೆಯಾದಾಗ ಈ ರೀತಿ ಸುದ್ದಿಗಳನ್ನು ಹುಟ್ಟಿಸಿ ಪ್ರಚಾರಗಿಟ್ಟಿಸಿಕೊಳ್ಳುತ್ತಾರೆ. ಈ ಕುರಿತು ಸಮಗ್ರ ತನಿಖೆ ನಡೆದ ಬಳಿಕ ನಿಜಾಂಶ ತಿಳಿಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

    ರಾಜೀವ್ ಹತ್ಯೆ ಹೇಗೆ ನಡೆದಿತ್ತು?
    ಪ್ರಧಾನಿ ರಾಜೀವ್ ಗಾಂಧಿಯವರನ್ನು 1991ರ ಮೇ 21ರಂದು ತಮಿಳುನಾಡಿನ ಚೆನ್ನೈನ ಪೆರಂಬದೂರಿನಲ್ಲಿ ನಡೆದ ಸಮಾರಂಭದಲ್ಲಿ ಎಲ್‍ಟಿಟಿಇ ಸಂಘಟನೆಗೆ ಸೇರಿದ ಮಹಿಳೆಯು ಪ್ರಧಾನಿಯವರಿಗೆ ಹಾರಹಾಕುವ ವೇಳೆ ತನ್ನನ್ನು ತಾನೇ ಸ್ಫೋಟಿಸಿಕೊಳ್ಳುವ ಮೂಲಕ ಹತ್ಯೆ ಮಾಡಿದ್ದಳು.

  • ಪ್ರಧಾನಿ ಮೋದಿ ವಿರುದ್ಧ ರಮ್ಯಾ ಭಾರೀ ಟೀಕೆ!

    ಪ್ರಧಾನಿ ಮೋದಿ ವಿರುದ್ಧ ರಮ್ಯಾ ಭಾರೀ ಟೀಕೆ!

    ಬೆಂಗಳೂರು: ಛತ್ತೀಸ್‍ಗಢದ ಸುಕ್ಮಾದಲ್ಲಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದು, ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯವರನ್ನು ಟ್ವಿಟ್ಟರಿನಲ್ಲಿ ಟೀಕಿಸಿದ್ದಾರೆ.

    `ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಗೋವುಗಳು, ಕಾಲೆಳೆಯುವವರು ಮಾತ್ರ ಸುರಕ್ಷಿತ. ಈ ಸರ್ಕಾರದಲ್ಲಿ ಸೇನೆ, ಪ್ರಜೆಗಳು, ಆಧಾರ್ ಕಾರ್ಡ್ ಮಾಹಿತಿಗೆ ರಕ್ಷಣೆಯೇ ಇಲ್ಲ. ಕೇಂದ್ರ ಗೃಹ ಸಚಿವಾಲಯ, ಗುಪ್ತಚರ ಇಲಾಖೆಯ ವೈಫಲ್ಯದಿಂದಲೇ ಸಿಆರ್‍ಪಿಎಫ್ ಯೋಧರ ಹುತಾತ್ಮಕ್ಕೆ ಕಾರಣ. ಮೋದಿ ಸಿಎಂ ಆಗಿದ್ದಾಗ ದೂರವಾಣಿ ಕದ್ದಾಲಿಕೆಗೆ ಆಡಳಿತ ಯಂತ್ರ ಬಳಸಿಕೊಂಡಿದ್ದರು. ಆದರೆ ಸಿಆರ್‍ಪಿಎಫ್ ಯೋಧರ ರಕ್ಷಣೆಗೆ ಆಡಳಿತ ಯಂತ್ರ ಬಳಸಿಕೊಂಡಿಲ್ಲ ಅಂತಾ ರಮ್ಯಾ  ಟೀಕಿಸಿದ್ದಾರೆ.

    ಇದನ್ನೂ ಓದಿ: ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು

    ಟೀಕಿಸಲು ಕಾರಣವೇನು?: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಸೋಮವಾರ ನಕ್ಸಲರು ಮತ್ತು ಯೋಧರ ಮಧ್ಯೆ ಗುಂಡಿನ ದಾಳಿ ನಡೆದಿತ್ತು. ಈ ಗುಂಡಿನ ಚಕಮಕಿಯಲ್ಲಿ 24 ಮಂದಿ ಸಿಆರ್ ಪಿ ಎಫ್ ಯೋಧರು ಹುತಾತ್ಮರಾಗಿದ್ದರು. ಇನ್ನು ಘಟನೆಯಲ್ಲಿ 6 ಮಂದಿ ಸಿಆರ್ ಪಿ ಎಫ್ ಯೋಧರು ಗಾಯಗೊಂಡಿದ್ದರು.