Tag: naxals

  • ಮಹಾರಾಷ್ಟ್ರದಲ್ಲಿ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ

    ಮಹಾರಾಷ್ಟ್ರದಲ್ಲಿ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ

    ಮುಂಬೈ: ಮಹಾರಾಷ್ಟ್ರದ (Maharashtra) ಕಂಕೇರ್ ಬಳಿಯ ಛತ್ತೀಸ್‌ಗಢ-ಗಡ್‌ಚಿರೋಲಿ ಗಡಿಯಲ್ಲಿರುವ ವಂಡೋಲಿ ಗ್ರಾಮದಲ್ಲಿ ಪೊಲೀಸ್ ಸಿ60 ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ 12 ನಕ್ಸಲರು (Naxals) ಸಾವನ್ನಪ್ಪಿದ್ದಾರೆ.

    ಕಾರ್ಯಾಚರಣೆ ವೇಳೆ ಸಬ್‌ಇನ್‌ಸ್ಪೆಕ್ಟರ್‌ ಸತೀಶ್ ಪಾಟೀಲ್ ಅವರ ಎಡ ಭುಜಕ್ಕೆ ಗುಂಡು ತಗುಲಿದೆ. ಈ ಪ್ರದೇಶದಲ್ಲಿ 12ರಿಂದ 15 ನಕ್ಸಲರು ಕ್ಯಾಂಪ್ ಮಾಡುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆ ನಡೆಸಲಾಗಿತ್ತು. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

    ಎಲ್ಲಾ 12 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಯಂಚಾಲಿತ ಮೆಷಿನ್ ಗನ್‌ಗಳು, ಭಾರೀ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ನಕ್ಸಲೀಯರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ತಿಳಿಸಿದ್ದಾರೆ.

    ಎನ್‌ಕೌಂಟರ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಜವಾನ ಗಾಯಗೊಂಡಿದ್ದಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ರಾಜ್ಯ ಸರ್ಕಾರದ ಪರವಾಗಿ ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೇಳೆ ಬೆಲೆ ಇಳಿಕೆಗೆ ಕ್ರಮ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

  • ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ರಾಯ್ಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ (CRPF) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಸುಕ್ಮಾ (Sukma) ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

    ಸುಕ್ಮಾ ಜಿಲ್ಲೆಯ ಸಿಲ್ಗರ್ ಮತ್ತು ತೆಕುಲಗುಡೆಮ್ ಗ್ರಾಮಗಳ ನಡುವೆ ನಕ್ಸಲರು ಐಇಡಿ ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ನೌಕಪಡೆಯಿಂದ ಭಾರತದ 22 ಮೀನುಗಾರರ ಅರೆಸ್ಟ್

    ಸಿಆರ್‌ಪಿಎಫ್‌ನ ಕೋಬ್ರಾ 201 ಬೆಟಾಲಿಯನ್‌ನ ಸಿಬ್ಬಂದಿ, ಸಿಲ್ಗರ್‌ನಿಂದ ಟೇಕುಲಗುಡೆಮ್ ಕ್ಯಾಂಪ್‌ಗಳಿಗೆ ಅದರ ರಸ್ತೆ ಉದ್ಘಾಟನೆಯ ಅಂಗವಾಗಿ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಐಇಡಿ ಸ್ಫೋಟಗೊಂಡು ಘಟನೆ ನಡೆದಿದೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

    ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಯನ್ನು ಕೇರಳದ ತಿರುವನಂತಪುರದ ವಿಷ್ಣು ಆರ್ (35) ಮತ್ತು ಉತ್ತರ ಪ್ರದೇಶದ ಕಾನ್ಪುರದ ಶೈಲೇಂದ್ರ (29) ಎಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ

  • ಭದ್ರತಾ ಸಿಬ್ಬಂದಿ, ನಕ್ಸಲರ ನಡುವೆ ಗುಂಡಿನ ಚಕಮಕಿ – ಇಬ್ಬರು ನಕ್ಸಲರ ಹತ್ಯೆ

    ಭದ್ರತಾ ಸಿಬ್ಬಂದಿ, ನಕ್ಸಲರ ನಡುವೆ ಗುಂಡಿನ ಚಕಮಕಿ – ಇಬ್ಬರು ನಕ್ಸಲರ ಹತ್ಯೆ

    ರಾಯ್ಪುರ: ಶನಿವಾರ ಛತ್ತೀಸ್‌ಗಢದ (Chattisgarh) ಕಂಕೇರ್ (Kanker) ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ (Security Personnel) ನಡೆದ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ನಕ್ಸಲರು (Naxals) ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಾಜ್ಯ ಪೊಲೀಸ್ ಪಡೆಯ ಒಂದು ಘಟಕವಾದ ಜಿಲ್ಲಾ ರಿಸರ್ವ್ ಗಾರ್ಡ್ (DRG) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕೊಯಲಿಬೀಡ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಗುಂಡಿನ ಚಕಮಕಿ ಸಂಭವಿಸಿದೆ ಎಂದು ಇನ್ಸ್ಪೆಕ್ಟರ್ ಜನರಲ್ ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಿಸ್ ಮಹಿಳೆಯನ್ನು ದೆಹಲಿಗೆ ಕರೆಸಿ ಹತ್ಯೆ ಮಾಡಿದ ಸ್ನೇಹಿತ

    ಘಟನೆಯ ಬಳಿಕ ಇಬ್ಬರು ನಕ್ಸಲರ ಮೃತದೇಹಗಳು ಮತ್ತು ಇನ್ಸಾಸ್ ರೈಫಲ್, ಒಂದು 12 ಬೋರ್ ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಬ್ಬಬ್ಬಾ! ಬ್ಲೌಸ್‌ನಲ್ಲೂ ಚಿನ್ನ ಸಾಗಾಟ – ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ ಅಂದರ್‌

    ನಕ್ಸಲರ ಗುರುತನ್ನು ಇನ್ನೂ ಪತ್ತೆಹಚ್ಚಿಲ್ಲ. ಹತ್ತಿರದ ಪ್ರದೇಶಗಳಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗೆಲುವಿನ ತನಕ ವಿರಮಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಪ್ರತಿಜ್ಞೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

    ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

    ಬೆಂಗಳೂರು: ನಕ್ಸಲ್ (Naxals) ಚಟುವಟಿಕೆ ಒಡಿಶಾ ಕಡೆ ಸೀಮಿತ ಆಗಿತ್ತು. ಈಗ ಕರ್ನಾಟಕದಲ್ಲಿ ಶುರು ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಸಿಟಿ ರವಿ, ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ನಕ್ಸಲರು ಇದ್ದರು. ಗುಳೆ ಹೋಗಿದ್ದ ನಕ್ಸಲರು, ಈಗ ಸಮೃದ್ಧಿ ಕಾಲ ಅಂತ ಬಂದಿರೋ ತರ ಇದೆ. ನಕ್ಸಲರು ಸಂವಿಧಾನ ವಿರೋಧಿಗಳು. ಈಗ ಅವರಿಗೆ ಹಾಲು ಕುಡಿದಂತಾಗಿದೆ. ಅವರಿಗೆ ಸಂವಿಧಾನದ ಮೇಲೆ ಅಲ್ಲ, ಗುಂಡಿನ ಮೇಲೆ ನಂಬಿಕೆ ಇದೆ ಎಂದು ವಾಗ್ದಾಳಿ ನಡೆಸಿದರು.

    ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಹೆಡ್ಗೆವಾರ್ ಅವರು ಆರ್‌ಎಸ್‌ಎಸ್ ಸಂಸ್ಥಾಪಕರು. ಅವರ ಬಗ್ಗೆ ಪಠ್ಯ ಇದೆ. ಅವರನ್ನು ವಿರೋಧಿಸಿ, ಪಠ್ಯದಿಂದ ಹೇಗೆ ತೆಗೆಯುತ್ತಾರೆ ನೋಡೋಣ. ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದವರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆಗಿದ್ದರು. ಅನುಭವದ ಆಧಾರದ ಮೇಲೆ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂದುಕೊAಡಿದ್ದೇನೆ. ಯಾರದ್ದೋ ಮಾತು ಕೇಳಿದರೆ ಮತ್ತೆ ಮನೆಗೆ ಹೋಗುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ಉಚಿತ ಕೊಡುಗೆ ವಿಚಾರವಾಗಿ ಮಾತನಾಡಿ, ಚುನಾವಣೆಗೆ ಮೊದಲು ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ ಅಂದಿದ್ದರು. ಉಚಿತ, ನಿಶ್ಚಿತ, ಖಂಡಿತ, ಖಚಿತ ಹೀಗೆ ಹೇಳಿದ್ದರು. ಮೊದಲು ಯಾವುದೇ ಷರತ್ತು ಇರಲಿಲ್ಲ. ಈಗ ಎಲ್ಲಾ ಷರತ್ತು ಬಂದಿದೆ. ಇವರು ಲೋಕಸಭೆ ಚುನಾವಣೆಯವರೆಗೂ ಕೊಡಬಹುದು. ನೋಡೋಣ ಏನು ಮಾಡುತ್ತಾರೆ ಎಂದು ಸವಾಲು ಹಾಕಿದರು.

    ಈಗಾಗಲೇ ಊರುಗಳಲ್ಲಿ ಢಂಗೂರ ಸಾರುತ್ತಿದ್ದಾರೆ. ಲೈಟ್ ಬಿಲ್ ಕಟ್ಟಲ್ಲ, ಟಿಕೆಟ್ ತಗೋಳಲ್ಲ ಅಂತಿದ್ದಾರೆ. ಇವರು ಒಳ್ಳೆಯ ಕೆಲಸ ಮಾಡಿದ್ರೆ ಬೆಂಬಲ ಕೊಡುತ್ತೇವೆ. ಇಲ್ಲವೆ ಅರ್ಬನ್ ನಕ್ಸಲರ ಮಾತು ಕೇಳಿದ್ರೆ ಅನುಭವಿಸುತ್ತಾರೆ. ನಾವೂ ಕೂಡ 36% ಮತಗಳನ್ನು ಪಡೆದಿದ್ದೇವೆ. ಕಡಿಮೆ ಸೀಟುಗಳು ಬಂದಿರಬಹುದು. ಮುಂದೆ ಏನಾಗುತ್ತೆ ನೋಡೋಣ ಎಂದರು.

    ಮಹದೇವಪ್ಪ, ಸಿದ್ದರಾಮಯ್ಯ, ಕಾಕಾ ಪಾಟೀಲ್ ಎಲ್ಲರೂ ಬಿಪಿಎಲ್ ಕಾರ್ಡ್ ಇರೋರಾ? ಅವರು ಮೊದಲೇ ಹೇಳಬೇಕಿತ್ತು ಇಂತವರಿಗೆ ಫ್ರೀ ಅಂತ. ಕಾಂಗ್ರೆಸ್ ಏನು ನಿನ್ನೆ ಮೊನ್ನೆ ಬಂದ ಪಕ್ಷವಾ? ಸಿದ್ದರಾಮಯ್ಯ, ಮಹದೇವಪ್ಪ ಯಾರೂ ಟ್ಯಾಕ್ಸ್ ಕಟ್ಟೋದಿಲ್ವಾ? ಎನ್‌ಇಪಿ ಕಿತ್ತಾಕ್ತೀವಿ ಅಂತ ಹೇಳ್ತಾರೆ. ನೈತಿಕ ಮೌಲ್ಯ ಶಿಕ್ಷಣ ಇವರಿಗೆ ಬೇಕಿಲ್ಲ. ಆಧುನಿಕ ಶಿಕ್ಷಣ ಇವರಿಗೆ ಬೇಕಿಲ್ಲ. ಒಂದು ಪೂರ್ವಾಗ್ರಹ ಮನಸ್ಥಿತಿಗೆ ಬಲಿಯಾಗಿದ್ದಾರೆ. ಮಾತೃಭಾಷೆ ವಿರೋಧಿಸುತ್ತಾರೆ, ಆಧುನಿಕ ಶಿಕ್ಷಣ ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ನಾನು ಯಾವುದೇ ಹುದ್ದೆಯ ರೇಸ್‌ನಲ್ಲಿ ಇಲ್ಲ. ಪಕ್ಷ ಕೊಟ್ಟಿರೋ ಜವಾಬ್ದಾರಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ಬಾರಿಗಿಂತ 9 ಸಾವಿರ ಮತ ಪಡೆದು ಸೋತಿದ್ದೇನೆ. ಅತಿ ಹೆಚ್ಚು ಕೆಲಸ ಮಾಡಿದ್ದು ಈ ಬಾರಿ. ಆದರೂ ಸೋತಿದ್ದೇನೆ. ನಾನು ಯಾವುದೇ ಅಧಿಕಾರಕ್ಕೆ ಬೇಡಿಕೆ ಇಟ್ಟಿಲ್ಲ. ಎಲ್ಲರನ್ನೂ ಜೋಡಿಸಿಕೊಂಡು ಕೆಲಸ ಮಾಡಬೇಕಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಕೊರೊನಾದಿಂದ ದೇಶಗಳ ಜಿಡಿಪಿ ಕುಸಿದಿದೆ. ನಮ್ಮದು 4.5 ಜಿಡಿಪಿ ಇದೆ. ಪ್ರಧಾನಿ ಮೋದಿ ಮಾತು ಜಗತ್ತು ಕೇಳುತ್ತಿದೆ. 2047ಕ್ಕೆ ಭಾರತ ಅಭಿವೃದ್ಧಿಶೀಲ ರಾಷ್ಟ್ರ ಮಾಡಬೇಕು ಅಂತಿದೆ. ಆದರೆ ಕೆಲ ಜಿಹಾದಿ ಮನಸ್ಥಿತಿ ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದೆ. ಪಕ್ಷ ಈಗ ಸೋತಿದೆ. ಆದರೆ ಲೋಕಸಭೆ ಚುನಾವಣೆ ಹೊತ್ತಿಗೆ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್

    ವಿಪಕ್ಷ ನಾಯಕ ಸ್ಥಾನದ ಕುರಿತು ಮಾತನಾಡಿದ ಸಿಟಿ ರವಿ, ಪಕ್ಷದ ಶಾಸಕಾಂಗ ಸಭೆ ಕರೆದು ಚರ್ಚೆ ಮಾಡಲಾಗುತ್ತದೆ. ಪ್ರತಿಯೊಬ್ಬರನ್ನು ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಬಿಜೆಪಿಗೆ ಸೋಲು ಹೊಸದೇನಲ್ಲ. ಶೀಘ್ರವೇ ವಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

  • ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

    ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

    ರಾಯ್ಪುರ: ಛತ್ತೀಸ್‌ಗಢದಲ್ಲಿ (Chhatisgarh) ಮತ್ತೆ ನಕ್ಸಲರು (Naxals) ಅಟ್ಟಹಾಸ ಮೆರೆದಿದ್ದು, ಚಾಲಕ ಹಾಗೂ 10 ಪೊಲೀಸ್‌ ಸಿಬ್ಬಂದಿ ಸೇರಿ 11 ಯೋಧರು ಹುತಾತ್ಮರಾದ ಘಟನೆ ಗುರುವಾರದಲ್ಲಿ ದಾಂತೇವಾಡದಲ್ಲಿ (Dantewada) ನಡೆದಿದೆ.

    ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಗುಪ್ತಚರ ಮಾಹಿತಿಯ ಮೇರೆಗೆ ಪ್ರಾರಂಭವಾದ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಿಂದ ಪೊಲೀಸರು ಹಿಂತಿರುಗುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಯೋಧರು ಸಂಚರಿಸುತ್ತಿದ್ದ ವಾಹನವನ್ನು ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಯಿಂದ ದಾಳಿ ನಡೆಸಿ ಸ್ಫೋಟಿಸಿದ್ದಾರೆ. ಇದರ ಪರಿಣಾಮವಾಗಿ 10 ಭದ್ರತಾ ಸಿಬ್ಬಂದಿ ಮತ್ತು ಚಾಲಕ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ನಕ್ಸಲ್‌ ನಿಗ್ರಹ ದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

    ಘಟನೆ ಕುರಿತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿ, ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಅವರು, ದಾಳಿಯಲ್ಲಿ ಭಾಗಿಯಾಗಿರುವ ನಕ್ಸಲರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಹೋರಾಟವು ಕೊನೆಯ ಹಂತದಲ್ಲಿದೆ. ನಕ್ಸಲರನ್ನು ಬಿಡಲಾಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ ಸೋಲಿಸುವ ಹೊಣೆ ನನ್ನದು- ಯಡಿಯೂರಪ್ಪ

    ನಕ್ಸಲರೆಂದು ಕರೆಯಲ್ಪಡುವ ಮಾವೋವಾದಿಗಳು ಕಳೆದ 6 ದಶಕಗಳಿಂದ ನೂರಾರು ಜನರನ್ನು ಹತ್ಯೆಗೈದು ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಾಡ್ಬೇಕು – ನಿರ್ಮಲಾ ಸೀತಾರಾಮನ್ ಕರೆ

  • Naxals killed: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್‌ಗೆ 5 ನಕ್ಸಲರು ಬಲಿ

    Naxals killed: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್‌ಗೆ 5 ನಕ್ಸಲರು ಬಲಿ

    ರಾಂಚಿ: ಜಾರ್ಖಂಡ್‌ನ (Jharkhand) ಛತ್ರದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) ಐವರು ನಕ್ಸಲರು (Naxals) ಹತ್ಯೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

    ಹತ್ಯೆಗೀಡಾದ ಐವರ ಪೈಕಿ ಇಬ್ಬರ ತಲೆಗೆ ತಲಾ 25 ಲಕ್ಷ ರೂ. ಹಾಗೂ ಮತ್ತಿಬ್ಬರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹತ್ಯೆಯಾದವರ ಬಳಿಯಿದ್ದ ಎರಡು AK 47 ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು

    ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಮುಂಜಾನೆ, ಪೊಲೀಸ್ ಮತ್ತು DRG ಜಂಟಿ ತಂಡವು ಛತ್ತೀಸ್‌ಗಢದ ದಂಗೆ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಬಂಧಿಸಿತ್ತು.

    ಬಂಧಿತ ನಕ್ಸಲರು ಸಮುಂದ್ ಅಲಿಯಾಸ್ ಸುಮನ್ ಸಿಂಗ್ ಅಂಚಲಾ (42), ಸಂಜಯ್ ಕುಮಾರ್ ಉಸೇಂಡಿ (27) ಮತ್ತು ಪರಶ್ರಾಮ್ ಧಂಗುಲ್ (55) ಎಂದು ಗುರುತಿಸಲಾಗಿದೆ. ನಕ್ಸಲರು ಇರುವ ಬಗ್ಗೆ ನಿಖರ ಸುಳಿವು ಸಿಕ್ಕ ನಂತರ ಎನ್‌ಕೌಂಟರ್‌ ಕಾರ್ಯಾಚರಣೆ ನಡೆಸಲಾಯಿತು. ಇದನ್ನೂ ಓದಿ: ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ- PhD ವಿದ್ಯಾರ್ಥಿ ಆತ್ಮಹತ್ಯೆ

    ಬಂಧಿತ ನಕ್ಸಲರು ವಾಹನಗಳು, ಟವರ್‌ಗಳಿಗೆ ಬೆಂಕಿ ಹಚ್ಚುವುದು. ಪೊಲೀಸ್ ಮಾಹಿತಿದಾರರು ಮತ್ತು ಇತರರನ್ನು ಗುರುತಿಸಿ ಹಲ್ಲೆ ನಡೆಸುವುದು ಸೇರಿದಂತೆ ಹಲವಾರು ಕುಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎಎಸ್ಪಿ ಸಿನ್ಹಾ ತಿಳಿಸಿದ್ದಾರೆ.

  • ಸಾರ್ವಜನಿಕರ ಬಸ್‌ಗೆ ಬೆಂಕಿ ಇಟ್ಟ ನಕ್ಸಲರು – 15 ಮಂದಿ ಸಾವು

    ಸಾರ್ವಜನಿಕರ ಬಸ್‌ಗೆ ಬೆಂಕಿ ಇಟ್ಟ ನಕ್ಸಲರು – 15 ಮಂದಿ ಸಾವು

    ರಾಯಪುರ: ನಕ್ಸಲರ ಗುಂಪೊಂದು (Naxals) ಪ್ರಯಾಣಿಕರ ಬಸ್‌ಗೆ (Bus) ಬೆಂಕಿ ಹಚ್ಚಿ 15 ಜನ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chattisgarh) ದಾಂತೇವಾಡ (Dantewada) ಜಿಲ್ಲೆಯ ಮಾಲೆವಾಹಿ (Malewahi) ಪ್ರದೇಶದಲ್ಲಿ ನಡೆದಿದೆ.

    ಮಾರ್ಚ್ 31ರಂದು ಮಧ್ಯಾಹ್ನ ಬಸ್ ದಾಂತೇವಾಡದಿಂದ ಸುಕ್ಮಾಗೆ (Sukma) ತೆರಳುತ್ತಿದ್ದ ಸಂದರ್ಭ, ಮಾಲೆವಾಹಿ ಬಳಿ ನಕ್ಸಲರು ಬಸ್ ತಡೆದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ 15 ಜನ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲ- ಪ್ರಕರಣ ದಾಖಲು 

    ಈ ಘಟನೆಯನ್ನು ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂತ್ರಸ್ತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ನಕ್ಸಲರ ದಾಳಿಯನ್ನು ಖಂಡಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

    ನಾಗರಿಕರ ಮೇಲೆ ದಾಳಿ ನಡೆಯುತ್ತಿರುವುದು ಛತ್ತೀಸ್‌ಗಢದಲ್ಲಿ ಇದೇ ಮೊದಲಲ್ಲ. ಈ ಪ್ರದೇಶವು ಹಲವು ವರ್ಷಗಳಿಂದ ನಕ್ಸಲ್ ಹಿಂಸಾಚಾರವನ್ನು ಎದುರಿಸುತ್ತಿದೆ. ಅಮಾಯಕ ನಾಗರಿಕರು ಆಗಾಗ ಅವರ ದಾಳಿಗೆ ಒಳಗಾಗುತ್ತಾರೆ. ಈ ಪ್ರದೇಶದಲ್ಲಿ ನಕ್ಸಲ್ ಬಂಡಾಯವನ್ನು ಎದುರಿಸಲು ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ ಅನಿಶ್ಚಿತ ಪರಿಸ್ಥಿತಿಗಳಿಂದಾಗಿ ನಕ್ಸಲರು ಸರಾಗವಾಗಿ ದಾಳಿ ನಡೆಸುತ್ತಿದ್ದು, ಇದನ್ನು ನಿಭಾಯಿಸಲು ಭದ್ರತಾ ಪಡೆಯವರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ

  • ನಕ್ಸಲರಿಂದ ಯೋಧನ ಫೋಟೋ ರಿಲೀಸ್ – ಮಾತುಕತೆಗೆ ಮಧ್ಯವರ್ತಿ ನೇಮಿಸುವಂತೆ ಪಟ್ಟು

    ನಕ್ಸಲರಿಂದ ಯೋಧನ ಫೋಟೋ ರಿಲೀಸ್ – ಮಾತುಕತೆಗೆ ಮಧ್ಯವರ್ತಿ ನೇಮಿಸುವಂತೆ ಪಟ್ಟು

    ರಾಯ್‍ಪುರ: ಕಳೆದ ವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 22 ಯೋಧರು ಹುತಾತ್ಮರಾಗಿ, ಹಲವು ಯೋಧರು ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಕೋಬ್ರಾ ಯುನಿಟ್‍ನ ಯೋಧರೊಬ್ಬರ ಫೋಟೋ ಒಂದನ್ನು ನಕ್ಸಲ್ ಸಂಘಟನೆ ಬಿಡುಗಡೆ ಮಾಡಿದೆ.

    ಛತ್ತೀಸ್‍ಗಢದ ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬಿಡುಬಿಟ್ಟಿರುವ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್‌ಪಿಎಫ್‌ ನೊಂದಿಗೆ ಜಂಟಿ ಕಾರ್ಯಾಚರಣೆಗೆ ನಡೆಸಿತ್ತು. ಸಿಆರ್‌ಪಿಎಫ್‌ ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆಗಿಳಿದು, ನಕ್ಸಲರ ಅಡಗುತಾಣದ ಮೇಲೆ ದಾಳಿ ಮಾಡಿತ್ತು. ಬಳಿಕ ಈ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟು ಹಲವು ಯೋಧರು ನಾಪತ್ತೆಯಾಗಿದ್ದರು.

    ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಒಟ್ಟು 4 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ 22 ಜನ ಯೋಧರು ಮೃತಪಟ್ಟು ಉಳಿದ ಯೋಧರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಘಟನೆಯೊಂದು ಇದೀಗ ಕೋಬ್ರಾ ಯುನಿಟ್‍ನ ಯೋಧರೊಬ್ಬರ ಫೋಟೋವನ್ನು ಕಳುಹಿಸಿ ಈ ಯೋಧ ನಮ್ಮ ವಶದಲ್ಲಿದ್ದಾನೆ ಎಂದು ಪತ್ರದ ಮೂಲಕ ತಿಳಿಸಿದೆ.

    ನಕ್ಸಲ್ ಸಂಘಟನೆ ಕಳುಹಿಸಿ ಕೊಟ್ಟಿರುವ ಪತ್ರದಲ್ಲಿ ಈ ಯೋಧನನ್ನು ಬಿಡುಗಡೆ ಮಾಡಬೇಕಾದರೆ ಮಾತುಕತೆ ನಡೆಸಲು ಮಧ್ಯವರ್ತಿಯನ್ನು ನೇಮಿಸುವಂತೆ ಸರ್ಕಾರಕ್ಕೆ ತಿಳಿಸಿದೆ. ನಕ್ಸಲ್ ಸಂಘಟನೆ ಈ ಪತ್ರವನ್ನು ಸ್ಥಳೀಯ ಪತ್ರಕರ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದೆ. ಹೀಗಾಗಿ ಸರ್ಕಾರ ಅದೇ ಪತ್ರಕರ್ತರನ್ನು ಮಾತುಕತೆಗಾಗಿ ಮಧ್ಯವರ್ತಿಯಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

    ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

    ಚಾಮರಾಜನಗರ: ಕೇರಳದಲ್ಲಿ ನಾಲ್ವರು ನಕ್ಸಲರ ಹತ್ಯೆ ಹಿನ್ನೆಲೆಯಲ್ಲಿ ಚಾಮರಾಜನಗರದ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

    ಗಡಿಭಾಗದ ಬಂಡೀಪುರ ಅರಣ್ಯಕ್ಕೆ ನಕ್ಸಲರು ನುಸುಳುವ ಸಾಧ್ಯತೆಗಳಿರುವುದರಿಂದ ಕರ್ನಾಟಕ ಕೇರಳ ಗಡಿಭಾಗದ ಮೂಲೆಹೊಳೆ ಹಾಗೂ ಕರ್ನಾಟಕ ತಮಿಳುನಾಡು ಗಡಿಭಾಗದ ಕೆಕ್ಕನಹಳ್ಳ ಬಳಿ ನಕ್ಸಲ್ ನಿಗ್ರಹದಳ ಹಾಗೂ ಜಿಲ್ಲಾ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ನಕ್ಸಲ್ ನಿಗ್ರಹದಳದ ಜೊತೆಗೆ ಜಿಲ್ಲಾ ಪೊಲೀಸ್‍ನ 10 ಮಂದಿ ಕಮಾಂಡೋಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದ್ದು, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ ಗುಂಡ್ಲುಪೇಟೆ ತಾಲೂಕು ಗಡಿಭಾಗದ ಬೇರಂಬಾಡ ಬಳಿ ಸ್ಯಾಟಲೈಟ್ ಫೋನ್ ಬಳಕೆ ಆಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಆನಂದಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಸ್ಯಾಟಲೈಟ್ ಫೋನ್ ಅನ್ನು ನಕ್ಸಲರು ಬಳಸಿದ್ದಾರೋ ಅಥವಾ ಬೇರೆ ಯಾರಾದರು ಬಳಸಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದೂವರೆಗೆ ನಕ್ಸಲರ ಚಟುವಟಿಕೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರ ಜೊತೆಗೆ ಗಿರಿಜನರು ಕೈ ಜೋಡಿಸದಂತೆ ಮನವಿ ಮಾಡಲಾಗಿದೆ. ಗಿರಿಜನ ಯುವಕರಿಗೆ ಉದ್ಯೋಗಾವಾಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಆನಂದಕುಮಾರ್ ಹೇಳಿದ್ದಾರೆ.

  • ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ನಕ್ಸಲರ ಅಟ್ಟಹಾಸ – ಮೂವರು ಬಲಿ

    ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ನಕ್ಸಲರ ಅಟ್ಟಹಾಸ – ಮೂವರು ಬಲಿ

    ರಾಯ್ಪುರ: ಛತ್ತೀಸ್‍ಗಢದ ಕಂಕರ್ ಜಿಲ್ಲೆಯಲ್ಲಿ ರೈಲ್ವೆ ಹಳಿ ನಿರ್ಮಾಣ ಕೆಲಸ ಮಾಡುತ್ತಿದ್ದಾಗ ಡೀಸೆಲ್ ಟ್ಯಾಂಕರ್ ಒಂದನ್ನು ನಕ್ಸಲಿಯರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಇಟ್ಟು ಸ್ಫೋಟಿಸಿದ್ದು, ನಕ್ಸಲಿಯರ ಅಟ್ಟಹಾಸಕ್ಕೆ ಮೂವರು ನಾಗರಿಕರು ಬಲಿಯಾಗಿದ್ದಾರೆ.

    ಕಂಕರ್ ಜಿಲ್ಲೆಯ ತುಮಾ ಪಾಲ್ ಗ್ರಾಮದ ಬಳಿ ಸೋಮವಾರ ರಾತ್ರಿ ನಕ್ಸಲಿಯರು ಈ ಕೃತ್ಯವೆಸೆಗಿದ್ದಾರೆ. ಜಿಲ್ಲೆಯ ರೌಫಾಟ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಟ್ರಕ್ ಮ್ಯಾನ್‍ಗಳು ಹಾಗೂ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿದ್ದಾರೆ. ಕೆಲಸ ನಡೆಯುತ್ತಿದ್ದ ಪ್ರದೇಶದಲ್ಲಿ ಐಇಡಿ ಸ್ಫೋಟಿಸಿ ನಕ್ಸಲಿಯರು ಅಟ್ಟಹಾಸ ಮೆರೆದಿದ್ದಾರೆ.

    ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಲು ಜವಾನರು ಸ್ಥಳಕ್ಕೆ ಹೋದಾಗ, ಅಲ್ಲಿಯೇ ಹೊಂಚು ಹಾಕಿ ಕುಳಿತ್ತಿದ್ದ ನಕ್ಸಲರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    ಘಟನಾ ಸ್ಥಳಕ್ಕೆ ಕಂಕರ್ ಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗೃತ ಕ್ರಮವಾಗಿ ಘಟನಾ ಸ್ಥಳವನ್ನು ಹಾದು ಹೋಗುವ ಭಾನುಪ್ರತಾಪ್‍ಪುರ ಹಾಗೂ ನಾರಾಯಣ್‍ಪುರ ಮಾರ್ಗದ ರಸ್ತೆ ಸಂಚಾರವನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ನಕ್ಸಲರಿಗಾಗಿ ಹುಡುಕಾಟ ನಡೆಸಲಾಗಿದೆ