Tag: Nawazuddin Siddiqui

  • ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಕಳೆದೆರಡು ವರ್ಷಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಹಲವಾರು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಭಾರತೀಯ ಸಿನಿಮಾದಲ್ಲಿ ದಕ್ಷಿಣ ಭಾರತದ ಪುಷ್ಪಾ, RRR ಮತ್ತು ಕೆಜಿಎಫ್-2 ಸಿನಿಮಾಗಳ ಯಶಸ್ಸು ಬಾಲಿವುಡ್ ಮಂದಿಯಲ್ಲಿ ಅಭದ್ರತೆಯನ್ನು ಸೃಷ್ಟಿಸಿದೆ ಎಂಬ ಮಾತು ಬಿ’ಟೌನ್‍ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಮಾಧ್ಯಮಗಳು ಬಾಲಿವುಡ್ ಸ್ಟಾರ್ ನವಾಜುದ್ದೀನ್ ಸಿದ್ದಿಕಿ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಖಡಕ್ ಉತ್ತರ ಕೊಟ್ಟಿದ್ದಾರೆ.

    Nawazuddin Siddiqui Builds A Mansion In Mumbai; Names It After His Late Father - View Pics

    ಸಿನಿಮಾ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಮುಕ್ತವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ನವಾಜುದ್ದೀನ್ ಸಿದ್ದಿಕಿ, ಒಂದು ಸಿನಿಮಾ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಪ್ರತಿಯೊಬ್ಬರೂ ಸೇರಿಕೊಳ್ಳುತ್ತಾರೆ. ಅದನ್ನು ಬಹುಶಃ ಅರ್ಹತೆಗಿಂತ ಹೆಚ್ಚು ಹೊಗಳುತ್ತಾರೆ. ಹಾಗೆಯೇ ಒಂದು ಚಲನಚಿತ್ರವು ಹಿಟ್ ಆಗದಿದ್ದರೆ, ಅದೇ ಜನರು ಅದನ್ನು ಅರ್ಹತೆಗಿಂತ ಹೆಚ್ಚು ಟೀಕಿಸುತ್ತಾರೆ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್ 

    ಇದು ಫ್ಯಾಷನ್‍ನಂತೆ, ಈಗ ಬಾಲಿವುಡ್ ಚಿತ್ರವು ದೊಡ್ಡ ಹಿಟ್ ಆಗಿದ್ದರೆ ಈ ಎಲ್ಲ ಮಾತುಕತೆಗಳು ಬದಲಾಗುತ್ತವೆ. ಇದು ಕೇವಲ ಪ್ರವೃತ್ತಿ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಅಭದ್ರತೆಯ ಮಾತು ಬರುವುದಿಲ್ಲ ಎಂದು ಉತ್ತರಿಸಿದರು.

    ನವಾಜುದ್ದೀನ್ ‘ಟಿಕು ವೆಡ್ಸ್ ಶೇರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕಂಗನಾ ರಣಾವತ್ ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

  • ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ನಾನು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತೇನೆ. ಆದರೆ, ಅಂತಹ ಚಿತ್ರಗಳನ್ನು ನೋಡಲಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ. ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ನೀವು ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್, ಆರ್.ಆರ್.ಆರ್, ಪುಷ್ಪಾ ಸಿನಿಮಾಗಳನ್ನು ನೋಡಿದ್ದೀರಾ ಎಂದು ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವ ಅವರು, ನಾನು ಅಂತಹ ಚಿತ್ರಗಳನ್ನು ನೋಡುವುದಿಲ್ಲ, ನೋಡಲಾರೆ ಎಂದು ನೇರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ನವಾಜುದ್ಧೀನ್ ಸಿದ್ದಿಕಿ ನೀಡಿದ ಈ ಉತ್ತರ ಇದೀಗ ಭಾರೀ ಸದ್ದು ಮಾಡುತ್ತಿದೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪುವ ಸಿದ್ದಿಕಿ, ಈಗ ಅಂತಹ ಸಿನಿಮಾಗಳ‍ನ್ನು ನೋಡುವುದಿಲ್ಲ ಎನ್ನುವುದು ಸರಿಯಾದದ್ದು ಅಲ್ಲ ಎಂದಿದ್ದಾರೆ ಹಲವರು. ದಕ್ಷಿಣದ ಚಿತ್ರಗಳು ಬಾಲಿವುಡ್ ಅನ್ನೂ ಮಕಾಡೆ ಮಲಗಿಸುತ್ತಿವೆ. ಹಾಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಕಮರ್ಷಿಯಲ್ ಸಿನಿಮಾಗಳನ್ನು ನೋಡದೇ ಇರುವುದಕ್ಕೆ ಅವರಲ್ಲಿ ಕಾರಣವಿದೆಯಂತೆ. ಚಿತ್ರಗಳು ಕಾಡಬೇಕು, ನನ್ನ ಬುದ್ಧಿಮತ್ತೆಯನ್ನು ಅವು ಹೆಚ್ಚಿಸಬೇಕು. ನಾನು ಒಂದಷ್ಟು ಹೊತ್ತು ಅದಕ್ಕೆ ಟೈಮ್ ಕೊಡುತ್ತೇನೆ ಅಂದರೆ, ಅದರಿಂದ ನನಗೆ ಉಪಯೋಗವಾಗಬೇಕು. ಕಮರ್ಷಿಯಲ್ ಚಿತ್ರಗಳಿಂದ ಅವೆಲ್ಲವನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಂತಹ ಚಿತ್ರಗಳನ್ನು ನಾನು ನೋಡುವುದಿಲ್ಲ ಎಂದಿದ್ದಾರೆ ಸಿದ್ದಿಕಿ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಕಮರ್ಷಿಯಲ್ಲಿ ಸಿನಿಮಾಗಳ ಯಶಸ್ಸು ತಾತ್ಕಾಲಿಕ ಎಂದು ನಾಯಕರಿಗೂ ತಿವಿದಿದ್ದಾರೆ. ಒಂದು ಸಿನಿಮಾ ಗೆದ್ದಿದೆ ಎಂದು ಬೀಗುವುದು, ನಾನೇ ಸ್ಟಾರ್ ಅನ್ನುವುದು ಸರಿಯಲ್ಲ. ಅಂತಹ ಚಿತ್ರಗಳಿಗೆ ಕಡಿಮೆ ಆಯುಷ್ಯ. ಎಲ್ಲವೂ ಗೆಲ್ಲುವುದಿಲ್ಲ. ಅದನ್ನು ಎಲ್ಲರಿಗೂ ಅರಿಯಬೇಕು ಎಂದು ಕಲಾವಿದರಿಗೂ ಸಿದ್ದಿಕಿ ಚಾಟಿ ಬೀಸಿದ್ದಾರೆ. ಈ ಸಂದರ್ಶನ್ ಸಖತ್ ವೈರಲ್ ಕೂಡ ಆಗಿದೆ. ಪರ ವಿರೋಧದ ಚರ್ಚೆಗೂ ಕಾರಣವಾಗಿದೆ.

  • 11 ವರ್ಷದ ದಾಂಪತ್ಯ ಅಂತ್ಯ – ಡಿವೋರ್ಸ್ ನೋಟಿಸ್ ನೀಡಿದ ಸಿದ್ದಿಕಿ ಪತ್ನಿ

    11 ವರ್ಷದ ದಾಂಪತ್ಯ ಅಂತ್ಯ – ಡಿವೋರ್ಸ್ ನೋಟಿಸ್ ನೀಡಿದ ಸಿದ್ದಿಕಿ ಪತ್ನಿ

    ಮುಂಬೈ: ಬಾಲಿವುಡ್ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ ಕುಟುಂಬ ಕ್ವಾರಂಟೈನ್‍ನಲ್ಲಿ ಇದೆ. ಆದರೆ ಇದೇ ವೇಳೆ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ವಿಚ್ಛೇದನ ಕೋರಿ ನೋಟಿಸ್ ಕಳುಹಿಸಿದ್ದಾರೆ.

    ಪತ್ನಿ ಆಲಿಯಾ ಸಿದ್ದಿಕಿ 11 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಆಲಿಯಾ ಸಿದ್ದಿಕಿ ಈ ತಿಂಗಳು ತಮ್ಮ ಪತಿಗೆ ವಾಟಪ್ಸ್ ಮತ್ತು ಇಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಪ್ರಸ್ತುತ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಹುಟ್ಟೂರಿಗೆ ಮರಳಿದ್ದು, ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಆಲಿಯಾ ಸಿದ್ದಿಕಿ, “ಹೌದು, ನಾನು ಅವರಿಗೆ ವಿಚ್ಛೇದನಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಆದರೆ ಅವರಿಂದ ನನಗೆ ಯಾವುದೇ ಉತ್ತರ ಇನ್ನೂ ಬಂದಿಲ್ಲ” ಎಂದು ಹೇಳಿದರು. ವಿಚ್ಛೇದನಕ್ಕೆ ಕಾರಣ ಕೇಳಿದ್ದಕ್ಕೆ, “ನಾನು ಈಗ ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ನಮ್ಮ ಮಧ್ಯೆ ಸಮಸ್ಯೆಗಳಿವೆ. ಈ ಲಾಕ್‍ಡೌನ್ ಸಂದರ್ಭದಲ್ಲಿ ನಾನು ನಮ್ಮ ದಾಂಪತ್ಯ ಜೀವನವನ್ನು ಕೊನೆಯಾಗಿಸಬೇಕು ಎಂದು ಯೋಚಿಸುತ್ತಿದ್ದೆ. ಅವರು ಮುಜಫ್ಫರ್ ಪುರಕ್ಕೆ ತೆರಳುವ ಮೊದಲೇ ನೋಟಿಸ್ ಕಳುಹಿಸಿದ್ದೇನೆ. ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ನಾನು ಈಗ ಕಾನೂನು ಮಾರ್ಗದ ಮೂಲಕ ಹೋಗುತ್ತಿದ್ದೇನೆ” ಎಂದು ತಿಳಿಸಿದರು.

    ಕೊರೊನಾ ಲಾಕ್‍ಡೌನ್‍ನಿಂದ ಸ್ಪೀಡ್ ಪೋಸ್ಟ್ ಮಾಡಲು ಸಾಧ್ಯವಾಗದ ಕಾರಣ ಮೇ 7 ರಂದು ನವಾಜುದ್ದೀನ್ ಸಿದ್ದಿಕಿ ಅವರಿಗೆ ಇ-ಮೇಲ್ ಮತ್ತು ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಆಲಿಯಾ ಸಿದ್ದಿಕಿ ಸಹ ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಆದರೂ ಸಿದ್ದಿಕಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಆಲಿಯಾ ಅವರ ವಕೀಲ ಅಭಯ್ ಸಹೈ ಸ್ಪಷ್ಟಪಡಿಸಿದ್ದಾರೆ.

    ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ 2009ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದವರು ಉತ್ತರಪ್ರದೇಶದ ಮುಜಫ್ಫರ್ ಪುರದ ಬುಧಾನಾದಲ್ಲಿರುವ ತಮ್ಮ ಹುಟ್ಟೂರಿನಲ್ಲಿದ್ದಾರೆ. ಲಾಕ್‍ಡೌನ್ ನಿರ್ಬಂಧದ ನಡುವೆ ಮುಂಬೈಯಲ್ಲಿದ್ದ ನವಾಜುದ್ದಿನ್ ಸಿದ್ದಿಕಿ ಪಾಸ್ ಪಡೆದು ಬುಧಾನಾಗೆ ತೆರಳಿದ್ದಾರೆ. ಲಾಕ್‍ಡೌನ್ ನಡುವೆಗೆ ಹುಟ್ಟೂರಿಗೆ ಹೋಗಲು ಕಾರಣ ಏನೆಂಬುದನ್ನು ಟ್ವಿಟ್ಟರಿನಲ್ಲಿ ನವಾಜುದ್ದೀನ್ ತಿಳಿಸಿದ್ದಾರೆ.

    “ಇತ್ತೀಚೆಗೆ ನನ್ನ ಕಿರಿಯ ತಂಗಿಯನ್ನು ಕಳೆದುಕೊಂಡಿದ್ದೇನೆ. ಇದರಿಂದಾಗಿ ನನ್ನ 71 ವರ್ಷದ ಅಮ್ಮ ಎರಡು ಭಾರಿ ಆತಂಕದಿಂದ ಆಘಾತಕ್ಕೆ ಒಳಗಾಗಿದ್ದರು. ರಾಜ್ಯ ಸರ್ಕಾರ ನೀಡಿರುವ ಎಲ್ಲ ಮಾರ್ಗದರ್ಶಿಗಳನ್ನೂ ನಾವು ಪಾಲಿಸುತ್ತಿದ್ದೇವೆ. ನಾವು ಬುಧಾನಾನಲ್ಲಿ 14 ದಿನ ಹೋಮ್ ಕ್ವಾರಂಟೈನ್‍ನಲ್ಲಿದ್ದೇವೆ. ದಯವಿಟ್ಟು ನೀವು ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ” ಎಂದು ನವಾಜುದ್ದೀನ್ ಸಿದ್ದಿಕಿ ಟ್ವಿಟ್ಟರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

    ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

    ಮುಂಬೈ: 8 ವರ್ಷದದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಇಂದು ಮೃತಪಟ್ಟಿದ್ದಾರೆ.

    ನಟನ ಸಹೋದರಿ ತಮ್ಶಿ ಸಿದ್ದಿಕಿ (26) ಅವರು ಇಂದು ಸಾವನ್ನಪ್ಪಿದ್ದಾರೆ. 18 ವರ್ಷ ವಯಸ್ಸಿನಲ್ಲಿಯೇ ತಮ್ಶಿ ಸಿದ್ದಿಕಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ತಮ್ಶಿ ಸುಮಾರು 8 ವರ್ಷಗಳ ಕಾಲ ಕಾಯಿಲೆ ವಿರುದ್ಧ ಹೋರಾಡಿ ಇಂದು ಸಾವನ್ನಪ್ಪಿದ್ದಾರೆ.

    ಸಹೋದರಿಯ ಸಾವಿನ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಅಮೆರಿಕದಲ್ಲಿ ನೋ ಲ್ಯಾಂಡ್ಸ್ ಮ್ಯಾನ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂದು ತಮ್ಮ ಸ್ವಗ್ರಾಮ ಉತ್ತರ ಪ್ರದೇಶದ ಬುಧಾನ ಗ್ರಾಮದಲ್ಲಿ ಅಂತ್ಯಕ್ರಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಈ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಸಹೋದರಿಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ತಾನು ಮತ್ತು ಸಹೋದರಿ ತಮ್ಶಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದ ಸಿದ್ದಿಕಿ, ನನ್ನ ಸಹೋದರಿ ಆಕೆಯ 18 ವಯಸ್ಸಿನಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಾಯಿಲೆಯ ವಿರುದ್ಧ ತಮ್ಮ ಮನೋಬಲ ಮತ್ತು ಅತ್ಮವಿಶ್ವಾಸದಿಂದ ಹೋರಾಡುತ್ತಾ ಬಂದಿದ್ದಾರೆ. ಅವಳಿಗೆ ಇಂದಿಗೆ 25 ವರ್ಷ ತುಂಬಿತು ಎಂದು ಬರೆದುಕೊಂಡಿದ್ದರು.