Tag: navyrally

  • ಭೂಸೇನಾ ನೇಮಕ ರ‍್ಯಾಲಿಗೆ ಬಂದು ರಾತ್ರಿಯಿಡೀ ಪರದಾಡಿದ ಸಾವಿರಾರು ಅಭ್ಯರ್ಥಿಗಳು

    ಭೂಸೇನಾ ನೇಮಕ ರ‍್ಯಾಲಿಗೆ ಬಂದು ರಾತ್ರಿಯಿಡೀ ಪರದಾಡಿದ ಸಾವಿರಾರು ಅಭ್ಯರ್ಥಿಗಳು

    ಕೊಪ್ಪಳ: ಭೂಸೇನಾ ನೇಮಕ ರ‍್ಯಾಲಿಗೆ ಬಂದ ಸಾವಿರಾರು ಅಭ್ಯರ್ಥಿಗಳು ರಾತ್ರಿ ಇಡೀ ಪರದಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಕೊಪ್ಪಳ ನಗರದಲ್ಲಿ ಇಂದಿನಿಂದ ನವೆಂಬರ್ 16ರ ವರೆಗೆ ಭೂಸೇನಾ ನೇಮಕ ರ‍್ಯಾಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೊದಲ ದಿನವೇ ಸಾವಿರಾರು ಅಭ್ಯರ್ಥಿಗಳು ಬಂದಿದ್ದಾರೆ. ಆದರೆ ಅಗತ್ಯ ಸೌಲಭ್ಯ ಸಿಗದೆ ನಗರದ ಫುಟ್ ಪಾತ್, ಅಂಗಡಿ ಮುಂಗಟ್ಟುಗಳ ಮುಂದೆ, ಚರಂಡಿ ಮೇಲೆ ಮಲಗಿ ಯುವಕರು ರಾತ್ರಿ ಆಶ್ರಯ ಪಡೆದಿದ್ದಾರೆ. ಈ ಮೂಲಕ ಚಳಿ, ಸೊಳ್ಳೆ ಕಾಟಕ್ಕೆ ಶಿಬಿರಾರ್ಥಿಗಳು ಬೇಸತ್ತಿದ್ದಾರೆ.

    ಕೊಪ್ಪಳ ಜಿಲ್ಲಾಡಳಿತ ನಗರದ 6 ಕಡೆ ಆಶ್ರಯಕ್ಕಾಗಿ ಸ್ಥಳ ಗುರುತಿಸಿದ್ದರೂ ಅದು ಸಮರ್ಪಕವಾಗಿ ಅಭ್ಯರ್ಥಿಗಳಿಗೆ ದೊರಕಿಲ್ಲ. ಅಗತ್ಯ ಸೌಲಭ್ಯ ಕೊಡುವಲ್ಲಿ ಎಡವಿದ ಜಿಲ್ಲಾಡಳಿತದ ವಿರುದ್ಧ ಅಭ್ಯರ್ಥಿಗಳು ಕಿಡಿಕಾರಿದ್ದಾರೆ.

    ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಯುವಕರು ಭಾಗಿಯಾಗಿದ್ದಾರೆ. 44,595 ಉದ್ಯೋಗ ಆಕಾಂಕ್ಷಿಗಳು ಆನ್ ಲೈನ್ ರಿಜಿಸ್ಟ್ರೇಶನ್ ಮಾಡಿಸಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಯುವಕರು ಬೆಳಗ್ಗೆಯಿಂದಲೇ ಜಮಾಯಿಸಿದ್ದಾರೆ. ರನ್ನಿಂಗ್ ಸೇರಿದಂತೆ ವಿವಿಧ ದೈಹಿಕ ಪರೀಕ್ಷೆಗಳು ಆರಂಭವಾಗಿವೆ.