Tag: navy staff

  • ಕುಡಿದು ವಾಹನ ಚಲಾಯಿಸಿದ ನೌಕಾ ಸಿಬ್ಬಂದಿಗೆ ಧರ್ಮದೇಟು

    ಕುಡಿದು ವಾಹನ ಚಲಾಯಿಸಿದ ನೌಕಾ ಸಿಬ್ಬಂದಿಗೆ ಧರ್ಮದೇಟು

    ಕಾರವಾರ: ಕುಡಿದು ವಾಹನ ಚಲಾವಣೆ ಮಾಡುತ್ತಿದ್ದ ನೌಕಾದಳದ ಸಿಬ್ಬಂದಿಯೊಬ್ಬರಿಗೆ ಇತರೇ ವಾಹನ ಸವಾರರು ಧರ್ಮದೇಟು ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾದಲ್ಲಿ ನಡೆದೆ.

    ಕದಂಬ ನೌಕಾದಳದ ಗೇಟ್ ಬಳಿ ನೌಕಾದಳದ ಸಿಬ್ಬಂದಿ ರಾಜಾಶಾಮ್ ಅವರು ಧರ್ಮದೇಟು ತಿಂದಿದ್ದಾರೆ. ಶನಿವಾರ ರಾತ್ರಿ ರಾಜಾಶಾಮ್ ಅವರು ಕುಡಿದು ವಾಹನ ಚಲಾವಣೆ ಮಾಡಿದ್ದು, ಕುಡಿತದ ಅಮಲಿನಲ್ಲಿ ದಾರಿಯಲ್ಲಿದ್ದ ಮೂರ್ನಾಲ್ಕು ವಾಹನಕ್ಕೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ವಾಹನ ಮಾಲೀಕರು ರಾಜಾಶಾಮ್ ತಮ್ಮ ವಾಹನವನ್ನು ನೌಕಾದಳದ ಗೇಟ್ ಬಳಿ ನಿಲ್ಲಿಸುತ್ತಿದ್ದಂತೆ ಸಖತ್ ಗೂಸ ನೀಡಿದ್ದಾರೆ.

    ಅಷ್ಟೇ ಅಲ್ಲದೆ ನೌಕಾದಳದ ಸಿಬ್ಬಂದಿಯಿಂದ ಅಪಘಾತಗೊಂಡ ಕಾರಿನವರು ಆತನಿದ್ದ ಸ್ಥಳಕ್ಕೆ ಬಂದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಈ ಘಟನೆ ಸಂಬಂಧ ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ರಾಜಾಶಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ

    ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ

    ಪಣಜಿ: ಪ್ರತಿನಿತ್ಯ ಮನೆಗೆ ಕುಡಿದು ಬಂದು ದೌರ್ಜನ್ಯ ಎಸಗುತ್ತಿದ್ದ ಪತಿಯನ್ನು ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ.

    ಐಎನ್‍ಎಸ್ ಹನ್ಸಾ ದಲ್ಲಿ ಕೆಲಸ ಮಾಡುತ್ತಿದ್ದ ಕೌಶಲೇಂದ್ರ ಸಿಂಗ್ ಮೃತ ದುದೈರ್ವಿ. ಕೊಲೆಗೈದ ಪತ್ನಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕೌಶಲೇಂದ್ರ ಅವರು ನಿತ್ಯ ಮದ್ಯದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು. ಅಲ್ಲದೆ ಪತ್ನಿಗೆ ಹೊಡೆದು ಬಡೆದು ಕಿರುಕುಳ ನೀಡುತ್ತಿದ್ದರು. ಹೀಗಾಗಿ ಕಿರುಕುಳದಿಂದ ಬೇಸತ್ತ ಮಹಿಳೆ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಟ್ಟಿನಲ್ಲಿದ್ದ ಪತ್ನಿ ಶನಿವಾರ ಕೌಶಲೇಂದ್ರ ಮಲಗಿದ್ದಾಗ ಅಡುಗೆ ಮನೆಯಲ್ಲಿದ್ದ ಸುತ್ತಿಗೆ ತಂದು ಹಲ್ಲೆ ಮಾಡಿದ್ದಾಳೆ. ಪರಿಣಾಮ ಮದ್ಯದ ಅಮಲಿನಲ್ಲಿದ್ದ ಕೌಶಲೇಂದ್ರ ಹಲ್ಲೆ ನಡೆಸಿದರೂ ಏನೂ ಪ್ರತಿಕ್ರಿಯೆ ನೀಡಲಿಲ್ಲ. ಆಗ ಭಯಗೊಂಡ ಪತ್ನಿ ನೆರೆಹೊರೆಯವರ ಸಹಾಯದಿಂದ ನೌಕಾಪಡೆಯ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಅದರಂತೆ ಪತಿ ಹಣೆಯ ಭಾಗಕ್ಕೆ 12 ರಿಂದ 14 ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವ ಹೆಚ್ಚಾಗಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.