Tag: Navjot Kaur

  • ಸಿಎಂ ಕುರ್ಚಿ ನನ್ನ ಗಂಡ ಕೊಟ್ಟ ಗಿಫ್ಟ್‌ – ನವಜೋತ್ ಸಿಂಗ್‌ ಸಿಧು ಪರ ಪತ್ನಿ ಬ್ಯಾಟಿಂಗ್‌

    ಸಿಎಂ ಕುರ್ಚಿ ನನ್ನ ಗಂಡ ಕೊಟ್ಟ ಗಿಫ್ಟ್‌ – ನವಜೋತ್ ಸಿಂಗ್‌ ಸಿಧು ಪರ ಪತ್ನಿ ಬ್ಯಾಟಿಂಗ್‌

    ಚಂಡೀಗಢ: ತಮ್ಮ ಪತಿ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಂಜಾಬ್‌ ಮುಖ್ಯಮಂತ್ರಿ ಸ್ಥಾನವನ್ನು ಭಗವಂತ್‌ ಮಾನ್‌ (Bhagwant Mann) ಅವರಿಗೆ ಉಡುಗೊರೆಯಾಗಿ ನೀಡಿರುವುದಾಗಿ ಸಿಧು ಪತ್ನಿ ನವಜೋತ್‌ ಕೌರ್‌ (Navjot Kaur) ಹೇಳಿದ್ದಾರೆ.

    ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕಾಂಗ್ರೆಸ್ (Congress) ನಾಯಕ ನವಜೋತ್ ಸಿಂಗ್ ಸಿಧು ನಡುವಿನ ಮಾತಿನ ಚಕಮಕಿಯ ನಡುವೆ ಕೌರ್ ಸರಣಿ ಟ್ವೀಟ್‌ಗಳ ಮೂಲಕ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಮನೆಗೆ ಸಂಗೀತಾ ಫೋಗಟ್ – ಪೊಲೀಸರಿಂದ ಘಟನೆಯ ಮರುಸೃಷ್ಟಿ

    ಸಿಧು ಅವರಿಗೇ ಪಂಜಾಬ್‌ನ ಚುಕ್ಕಾಣಿ ನೀಡಲು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಬಯಸಿದ್ದರು. ಆದ್ರೆ ಸಿಧು ಅವರು ತಮ್ಮ ಪಕ್ಷಕ್ಕೆ ದ್ರೋಹ ಬಗೆಯದಿರಲು ನಿರ್ಧರಿಸಿದ್ದರು. ಹಾಗಾಗಿ ಭಗವಂತ್‌ ಮಾನ್‌ ಅವರು ಸಿಎಂ ಆದರು ಎಂದು ಪತಿಯ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ

    ಸಿಎಂ ಭಗವಂತ್ ಮಾನ್ ಅವರೇ ಮುಚ್ಚಿಟ್ಟ ರಹಸ್ಯವೊಂದನ್ನು ನಾನಿಂದು ಬಹಿರಂಗಪಡಿಸುತ್ತೇನೆ. ನೀವು ಇಂದು ಅಲಂಕರಿಸಿರುವ ಬಹಳ ಗೌರವಾನ್ವಿತ ಕುರ್ಚಿಯನ್ನು ನಿಮ್ಮ ಹಿರಿಯ ಸಹೋದರ ನವಜೋತ್ ಸಿಂಗ್ ಸಿಧು ಅವರು ನಿಮಗೆ ಉಡುಗೊರೆಯಾಗಿ ನೀಡಿರುವುದು. ನಿಮ್ಮದೇ ಹಿರಿಯ ನಾಯಕ ಪಂಜಾಬ್ ನಾಯಕತ್ವವನ್ನು ನವಜೋತ್ ಮುನ್ನಡೆಸಬೇಕು ಎಂದು ಬಯಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯವನ್ನ ಮುನ್ನಡೆಸಲು ಸಿಧು ಅವರನ್ನು ವಿವಿಧ ಮಾಧ್ಯಮಗಳ ಮೂಲಕ ಸಂಪರ್ಕಿಸಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ.

    2022ರಲ್ಲಿ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನ ಸೋಲಿಸಿ ಎಎಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇದಕ್ಕೂ ಮುನ್ನ ಸಿಧು ಅವರು ಕಾಂಗ್ರೆಸ್ ತೊರೆದು ಎಎಪಿ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು.

  • ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಕಾಂಗ್ರೆಸ್ ತೊರೆದಿದ್ದಾರೆ.

    ಪೂರ್ವ ಅಮೃತಸರದ ಮಾಜಿ ಶಾಸಕಿ ಹಾಗೂ ಮಾಜಿ ಸಂಸದೀಯ ಪ್ರಧಾನ ಕಾರ್ಯದರ್ಶಿ ಕೌರ್ ಅವರಿಗೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿತ್ತು.

    ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಾ ಕುಮಾರಿ ಅವರಿಂದಾಗಿ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿಲ್ಲ ಎಂದು ಕೌರ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಸಿಧು ಸಹ ಸಮರ್ಥಿಸಿಕೊಂಡು ಅವರು ಎಂದೂ ಸುಳ್ಳು ಹೇಳುವುದಿಲ್ಲ. ನನ್ನ ಪತ್ನಿಗೆ ಶಕ್ತಿ ಹಾಗೂ ನೈತಿಕತೆ ಇದೆ, ಅವರು ಎಂದಿಗೂ ಸುಳ್ಳು ಹೇಳುವುದಿಲ್ಲ, ಇದೇ ನನ್ನ ಉತ್ತರ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಈ ಕುರಿತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಅವರಿಗೆ ಅಮೃತಸರ ಅಥವಾ ಬಂಟಿಂಡಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದರು. ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ಹಂಚಿಕೆ ಮಾಡಿತ್ತು ಎಂದು ಸ್ಪಷ್ಟಪಡಿಸಿದ್ದರು.

    ಮುಖ್ಯಮಂತ್ರಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಜುಲೈನಲ್ಲಿ ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಕೆಲವು ತಿಂಗಳುಗಳ ನಂತರ ಕೌರ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕೌರ್ ಅವರು 2016ರಲ್ಲಿ ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

  • ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಕೌರ್, ಸಾಕ್ಷಿ ಮಲಿಕ್‍ಗೆ ಕಂಚು

    ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಕೌರ್, ಸಾಕ್ಷಿ ಮಲಿಕ್‍ಗೆ ಕಂಚು

    ಬಿಶ್‍ಕೆಕ್: ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಹಿರಿಯರ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿ ಪಟು ಎನಿಸಿಕೊಂಡಿದ್ದಾರೆ. ಹಾಗೇ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್ ಇಲ್ಲಿಯೂ ಕಂಚು ಪಡೆದಿದ್ದಾರೆ.

    ಕಿರ್ಗಿಸ್ತಾನದ ಬಿಶ್‍ಕೆಕ್‍ನಲ್ಲಿ ಶುಕ್ರವಾರದಂದು ನಡೆದ ಮಹಿಳೆಯರ 65 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿ ಅಂತಿಮ ಹಣಾಹಣಿಯಲ್ಲಿ ಜಪಾನ್ ನ ಮಿಯಾ ಇಮಾಯಿರನ್ನು 9-1 ಅಂತರದಲ್ಲಿ ಸೋಲಿಸಿ ನವಜೋತ್ ಕೌರ್ ಚಿನ್ನವನ್ನು ಗೆದ್ದರು. ಹಾಗೂ ಈ ಬಾರಿಯ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಾಲಿನ ಮೊದಲ ಚಿನ್ನದ ಪದಕವನ್ನು ಕೌರ್ ಜಯಿಸಿದ್ದಾರೆ.

    ಇತ್ತ 62 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್, ಕಝಕಿಸ್ತಾನದ ಕ್ಯಾಸಿಮೋವಾ ವಿರುದ್ಧ ಹಣಾಹಣಿ ನಡೆಸಿ 10-7 ಅಂತರದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಈವರೆಗೆ ಒಟ್ಟು 6 ಪದಕಗಳನ್ನು ಪಡೆದಿದೆ.