Tag: navi mumbai

  • Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

    Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

    ಮುಂಬೈ: ಮಹಾರಾಷ್ಟ್ರದ (Maharshtra) ನವಿ ಮುಂಬೈ (Navi Mumbai) ಟೌನ್‌ಶಿಪ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಾಶಿ ಪ್ರದೇಶದ ಸೆಕ್ಟರ್ 14ರಲ್ಲಿರುವ ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್‌ನ 10ನೇ ಫ್ಲೋರ್‌ನಲ್ಲಿರುವ ಫ್ಲಾಟ್‌ನಲ್ಲಿ ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗೂ ಹರಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

    ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 6 ವರ್ಷದ ಬಾಲಕಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಾಶಿಯ ಎರಡು ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ ನಾಲ್ಕು ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸ

    ಬೆಂಕಿ ಅವಘಡದ ಕುರಿತು ಮಾಹಿತಿ ದೊರೆಯುತ್ತಿದ್ದಂತೆ 40 ಅಗ್ನಿಶಾಮಕ ದಳದ ಸಿಬ್ಬಂದಿ, 8 ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಮಂಗಳವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

  • ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

    ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಬುಧವಾರ ಮಧ್ಯಾಹ್ನ ಅತ್ಯಾಧುನಿಕ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Navi Mumbai Airport) ಉದ್ಘಾಟಿಸಿದರು. ಈ ವಿಮಾನ ನಿಲ್ದಾಣವು ಮುಂಬೈ, ಪುಣೆ ಮತ್ತು ಕೊಂಕಣ ಪ್ರದೇಶಕ್ಕೆ ವ್ಯಾಪಾರ ಮತ್ತು ಪ್ರವಾಸೋದ್ಯಮ ಉತ್ತೇಜಿಸುವ ನಿರೀಕ್ಷೆಯಿದೆ.

    ಉದ್ಘಾಟನೆಗೂ ಮೊದಲು ಮೋದಿ ವಿಮಾನ ನಿಲ್ದಾಣ ವೀಕ್ಷಣೆ ಮಾಡಿದರು. ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಉಪಸ್ಥಿತರಿದ್ದರು. ಇದನ್ನೂ ಓದಿ: Karur Stampede | ಸ್ವತಂತ್ರ ತನಿಖೆಗೆ ಕೋರಿ ಸುಪ್ರೀಂಗೆ ಟಿವಿಕೆ ಅರ್ಜಿ – ಅ.10ಕ್ಕೆ ವಿಚಾರಣೆ

    ಮುಂಬೈನ ದೀರ್ಘ ಕಾಯುವಿಕೆ ಕೊನೆಗೊಂಡಿದೆ. ವಿಕಸಿತ ಭಾರತ ದೃಷ್ಟಿಕೋನವು ವೇಗ ಮತ್ತು ಪ್ರಗತಿಯನ್ನು ರೂಪಿಸುತ್ತದೆ. 2014 ರಲ್ಲಿ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಆದರೆ, ಈಗ ಅದು 160 ಆಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

    19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವು ಆರಂಭದಲ್ಲಿ ವರ್ಷಕ್ಕೆ 2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆಯಿದೆ. ಇದು ಸುಗಮ ಪ್ರಯಾಣವನ್ನು ಸುಗಮಗೊಳಿಸುವುದಲ್ಲದೆ, ಪುಣೆಯಲ್ಲಿನ ಕೈಗಾರಿಕೆಗಳಿಗೆ ಜಾಗತಿಕ ಮಾರುಕಟ್ಟೆಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 6 ಮಂದಿ ಸಜೀವ ದಹನ

    ಈ ವಿಮಾನ ನಿಲ್ದಾಣವನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಅದಾನಿ ವಿಮಾನ ನಿಲ್ದಾಣ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆ) ಮತ್ತು ಸಿಡ್ಕೊ (ಮಹಾರಾಷ್ಟ್ರ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್) ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾಗಿದೆ.

  • ಟ್ರಕ್ ಡ್ರೈವರ್ ಕಿಡ್ನ್ಯಾಪ್‌ ಕೇಸ್‌ – ಪೂಜಾ ಖೇಡ್ಕರ್ ಕಾರು ಚಾಲಕ ಅರೆಸ್ಟ್‌

    ಟ್ರಕ್ ಡ್ರೈವರ್ ಕಿಡ್ನ್ಯಾಪ್‌ ಕೇಸ್‌ – ಪೂಜಾ ಖೇಡ್ಕರ್ ಕಾರು ಚಾಲಕ ಅರೆಸ್ಟ್‌

    ಮುಂಬೈ: ನವಿ ಮುಂಬೈ (Navi Mumbai) ರೋಡ್‌ ರೇಜ್‌ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ (Puja Khedkar) ಅವರ ಕಾರು ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಮುಲುಂಡ್ – ಐರೋಲಿ ರಸ್ತೆಯಲ್ಲಿ ಪ್ರಹ್ಲಾದ್ ಕುಮಾರ್ (22) ಎಂಬವರು ಚಲಾಯಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಟ್ರಕ್, ಖೇಡ್ಕರ್ ಅವರ ಕಾರಿನ ನಡುವೆ ಸಣ್ಣಪ್ರಮಾಣದ ಅಪಘಾತವಾಗಿತ್ತು. ಇದು ಚಾಲಕ ಹಾಗೂ ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ಅಂಗರಕ್ಷಕ ಪ್ರಫುಲ್ ಸಲುಂಖೆ ಕುಮಾರ್ ಸೇರಿ ಟ್ರಕ್ ಚಾಲಕನನ್ನು ಕಟ್ಟಿ ಹಾಕಿ ಅಪಹರಿಸಿದ್ದರು. ಬಳಿಕ ಆತನನ್ನು ಪುಣೆಯಲ್ಲಿರುವ ಬಂಗಲೆಗೆ ಕರೆದೊಯ್ದಿದ್ದರು. ಇದನ್ನೂ ಓದಿ: ಐಎಎಸ್ ಹುದ್ದೆಗೆ ನಕಲಿ ಪ್ರಮಾಣಪತ್ರ: ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು

    ಟ್ರಕ್ ಮಾಲೀಕನ ದೂರಿನ ಆಧಾರದ ಮೇಲೆ, ರಬಾಲೆ ಪೊಲೀಸರು ಭಾನುವಾರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಕಾರಿನ ಗುರುತು ಪತ್ತೆಹಚ್ಚಿ, ಖೇಡ್ಕರ್ ಬಂಗಲೆಗೆ ತೆರಳಿದ್ದರು. ಈ ವೇಳೆ ಪೂಜಾ ಅವರ ತಾಯಿ ಪೊಲೀಸರಿಗೆ ಒಳಬರದಂತೆ ತಡೆದಿದ್ದರು. ಅಂತಿಮವಾಗಿ ಪೊಲೀಸರು ದಾಳಿ ನಡೆಸಿ ಟ್ರಕ್‌ ಚಾಲಕನನ್ನು ರಕ್ಷಿಸಿದ್ದರು.

    ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಖೇಡ್ಕರ್ ಅವರ ತಾಯಿಯ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಿದ್ದಾರೆ. ಅಲ್ಲದೇ ಚಾಲಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

    ಪೂಜಾ ಖೇಡ್ಕರ್ ಈ ಹಿಂದೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ವಂಚನೆ, ಒಬಿಸಿ ಮತ್ತು ಅಂಗವೈಕಲ್ಯ ಕೋಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಎದುರಿಸಿದ್ದರು. ಇದನ್ನೂ ಓದಿ: IAS ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ – ಕೇಂದ್ರ ಸರ್ಕಾರ ಆದೇಶ

  • ಮುಂಬೈ-ನವಿ ಮುಂಬೈಗೆ ವಾಟರ್ ಟ್ಯಾಕ್ಸಿ ಸರ್ವಿಸ್

    ಮುಂಬೈ-ನವಿ ಮುಂಬೈಗೆ ವಾಟರ್ ಟ್ಯಾಕ್ಸಿ ಸರ್ವಿಸ್

    ಮುಂಬೈ: ಅವಳಿ ನಗರಗಳಾದ ಮುಂಬೈ ಹಾಗೂ ನವಿ ಮುಂಬೈಗೆ ಸಂಪರ್ಕ ಕಲ್ಪಿಸಲು ಇದೇ ಮೊದಲ ಬಾರಿಗೆ ವಾಟರ್ ಟ್ಯಾಕ್ಸಿ ಸೇವೆ ಪ್ರಾರಭವಾಗಿದೆ.

    ಹೊಸದಾಗಿ ನಿರ್ಮಿಸಲಾಗಿರುವ ವಾಟರ್ ಟ್ಯಾಕ್ಸಿಯಲ್ಲಿ ಮುಂಬೈನ ಜನರು ನವಿ ಮುಂಬೈಗೆ ಪ್ರಯಾಣಿಸಬಹುದು. ಕೇಂದ್ರ ಬಂದರು ಹಾಗೂ ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಇತ್ತೀಚೆಗೆ ಬೇಲಾಪುರ ಜೆಟ್ಟಿಯಿಂದ ಈ ಹೊಸ ವಾಟರ್ ಟ್ಯಾಕ್ಸಿಗೆ ಚಾಲನೆ ನೀಡಿದ್ದಾರೆ.

    ಬೇಲಾಪುರ ಜೆಟ್ಟಿ ಯೋಜನೆ 2019ರ ಜನವರಿಯಲ್ಲಿ ಪ್ರಾರಂಭವಾಗಿತ್ತು. 2021ರ ಸಪ್ಟೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಇದು ಅವಳಿ ನಗರಗಳಾದ ಮುಂಬೈ ಹಾಗೂ ನವಿ ಮುಂಬೈಯನ್ನು ಸಂಪರ್ಕಿಸುತ್ತದೆ. ಇದು ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್(ಡಿಸಿಟಿ)ನಿಂದ ಪ್ರಾರಂಭವಾಗಿ ನೆರೂಲ್, ಬೇಲಾಪುರ್, ಎಲಿಫೆಂಟಾ ದ್ವೀಪ ಹಾಗೂ ಜೆಎನ್‌ಪಿಟಿಯ ಹತ್ತಿರದ ಸ್ಥಳಗಳನ್ನು ಸಂಪರ್ಕಿಸುತ್ತದೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ

    ಈ ಯೋಜನೆಗೆ ಒಟ್ಟು 8.37 ಕೋಟಿ ರೂ. ವೆಚ್ಚ ತಗುಲಿದೆ. ವಾಟರ್ ಟ್ಯಾಕ್ಸಿ ಸ್ಪೀಡ್ ಬೋಟ್ ಸೇವೆಯ ದರ ಏಕಮುಖ ಪ್ರಯಾಣಕ್ಕೆ ಸುಮಾರು 800 ರಿಂದ 1,200 ರೂ. ಯಾಗಲಿದೆ ಎಂದು ಅಧಿಕೃತ ವರದಿ ತಿಳಿಸಿದೆ. ಇದರ ಪ್ರಯಾಣ ಪೂರ್ಣಗೊಳಿಸಲು 30 ರಿಂದ 40 ನಿಮಿಷ ತೆಗೆದುಕೊಳ್ಳುತ್ತದೆ.

    ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್(ಡಿಸಿಟಿ)ನಿಂದ ಬೇಲಾಪುರಕ್ಕೆ ಪ್ರಯಾಣ ದರ 1,210 ರೂ. ಹಾಗೂ ಡಿಸಿಟಿಯಿಂದ ಧರ್ಮತಾರ್‌ಗೆ 2,000 ರೂ. ದರ ಇದ್ದು, ಪ್ರಯಾಣವನ್ನು ಪೂರ್ಣಗೊಳಿಸಲು 55 ನಿಮಿಷ ತೆಗೆದುಕೊಳ್ಳುತ್ತದೆ. ಡಿಸಿಟಿಯಿಂದ ಜೆಎನ್‌ಪಿಟಿಗೆ 200 ರೂ. ಇದ್ದು ಪ್ರಯಾಣದ ಅವಧಿ 20 ನಿಮಿಷ ಆಗಲಿದೆ. ಇದನ್ನೂ ಓದಿ: ಕೂದಲಿನಿಂದ 126 ಕೋಟಿ, ಲಡ್ಡು ಪ್ರಸಾದದಿಂದ 365 ಕೋಟಿ – ಟಿಟಿಡಿ ನಿರೀಕ್ಷಿತ ಆದಾಯ

    ಡಿಸಿಟಿಯಿಂದ ಕಾರಂಜಾಗೆ 1,200 ರೂ. ಹಾಗೂ 45 ನಿಮಿಷ ಪ್ರಯಾಣದ ಅವಧಿ ಇದೆ. ಡಿಸಿಟಿಯಿಂದ ಕನೋಜಿ ಆಂಗ್ರೆಗೆ ಪ್ರಯಾಣಿಸಲು 1,500 ರೂ. ಹಾಗೂ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ), ಬೇಲಾಪುರದಿಂದ ನೆರೂಲ್‌ಗೆ 1,100 ರೂ. ದರ ಆಗಿರುತ್ತದೆ. ಹಾಗೂ ಇದರ ಅವಧಿಯು 30 ನಿಮಿಷ ಇರಲಿದೆ.‌

  • ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರ, ವ್ಯಕ್ತಿ ಬಂಧನ

    ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರ, ವ್ಯಕ್ತಿ ಬಂಧನ

    ಮುಂಬೈ: ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಮಹಾರಾಷ್ಟ್ರದ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

    ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಅನಿಮಲ್ಸ್(ಪೆಟಾ) ಸಹಕಾರದಿಂದ ವಿಜಯ್ ರಂಗರೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ನವ ಮುಂಬೈನ ಖರಗರ್‍ನಲ್ಲಿ ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಆಗಸ್ಟ್ 22 ರಂದು ನವ ಮುಂಬೈ ಹಾಗೂ ಪನ್ವೆಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಈ ಹಿಂದೆಯೂ ಇತರ ಪ್ರಾಣಿಗಳಿಗೆ ಲೈಂಗಿಕ ಕಿರುಕುಳ ನೀಡಿರಬಹುದು. ಆತ ಪ್ರಾಣಿಗಳಿಗೆ ಕಿರುಕುಳ ನೀಡುವುದನ್ನೇ ಚಟವಾಗಿಸಿಕೊಂಡಿದ್ದಾನೆ ಎಂದು ಪೆಟಾ ದೂರಿನಲ್ಲಿ ಆರೋಪಿಸಿದೆ.

    ಐಪಿಸಿ ಸೆಕ್ಷನ್ 377(ಪ್ರಾಣಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವುದು) ಅಡಿ ಎಫ್‍ಐಆರ್ ದಾಖಲಾಗಿದ್ದು, ಈ ಪ್ರಕರಣದ ಅಡಿ ಆರೋಪ ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

    ಒಂದು ವೇಳೆ ನಾಯಿಯ ಮೇಲೆ ಅತ್ಯಾಚಾರ ಎಸಗಿರುವ ಈತನನ್ನು ಬಿಡುಗಡೆಗೊಳಿಸಿದ್ದಲ್ಲಿ ಮನುಷ್ಯರ ಮೇಲೂ ಈತ ಅತ್ಯಾಚಾರ ಎಸಗಬಹುದು ಎಂದು ಪೆಟಾ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

  • ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ 7 ಲಕ್ಷ ವಂಚನೆ!

    ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ 7 ಲಕ್ಷ ವಂಚನೆ!

    ಮುಂಬೈ: ಬ್ಯಾಂಕ್‍ನ ಓಟಿಪಿ(ಒನ್ ಟೈಮ್ ಪಾಸವರ್ಡ್)ಯನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯ ಖಾತೆಯಿಂದ 7 ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ.

    40 ವರ್ಷದ ನೆರುಲ್ ಹಣ ಕಳೆದುಕೊಂಡ ಮಹಿಳೆ. ತಸ್ನೀಮ್ ಮುಜ್ಜಕ್ಕರ್ ಮೊದಕ್ ಹೆಸರಿನ ಆರೋಪಿಯು ಮೇ 17ರಂದು ಮಹಿಳೆಗೆ ಕರೆ ಮಾಡಿ ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಎಟಿಎಂ ಕಾರ್ಡ್ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಪುನಃ ಸರಿಪಡಿಸಲು ಎಟಿಎಂನ ಮಾಹಿತಿಗಳನ್ನು ಕೇಳಿದ್ದಾನೆ.

    ಇದನ್ನು ನಂಬಿದ ಆಕೆಯು ತನ್ನ ಎಟಿಎಂನ 16 ಅಂಕಿಗಳು ಹಾಗೂ ಎಲ್ಲಾ ಗುಪ್ತ ಮಾಹಿತಿಗಳನ್ನು ಆರೋಪಿಯೊಂದಿಗೆ ಹಂಚಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಆರೋಪಿಯು 28 ಬಾರಿ ಮೊಬೈಲ್‍ಗೆ ಓಟಿಪಿಯನ್ನು ಕಳುಹಿಸಿದ್ದ, ಸಂದೇಶಗಳನ್ನು ಅವನೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ಖಾತೆಯಿಂದ ಒಟ್ಟು 7 ಲಕ್ಷ 20 ಸಾವಿರ ರೂಪಾಯಿ ಕಡಿತಗೊಂಡಾಗ ಅನುಮಾನಗೊಂಡು ಬ್ಯಾಂಕ್‍ನಲ್ಲಿ ವಿಚಾರಿಸಿದ್ದಾರೆ. ಬ್ಯಾಂಕ್‍ನಲ್ಲಿ ವಂಚನೆಯಾಗಿರುವುದು ತಿಳಿದ ಬಳಿಕ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

    ಪೊಲೀಸ್ ಅಧಿಕಾರಿಯಾದ ಬಿ. ಎನ್. ಆಟಿರವರು ಮಾತನಾಡಿ, ಆರೋಪಿಯು ಮಹಿಳೆಗೆ ಬ್ಯಾಂಕ್ ಅಧಿಕಾರಿಯೆಂದು ಕರೆ ಮಾಡಿದ್ದಾನೆ. ಮಹಿಳೆಯ ಎಟಿಎಂನ ಮಾಹಿತಿಯನ್ನು ಪಡೆದುಕೊಂಡು ಹಂತ ಹಂತವಾಗಿ ಹಣ ಎಗರಿಸಿದ್ದಾನೆ. ಒಟ್ಟು ಆರೋಪಿಯು 6,98,973 ರೂಪಾಯಿ ವಂಚನೆ ಮಾಡಿದ್ದು, ಆರೋಪಿಯು ಮೂರು ಬೇರೆ ಬೇರೆ ಸಿಮ್‍ಗಳನ್ನು ಕೃತ್ಯಕ್ಕೆ ಬಳಸಿರುವುದು ತಿಳಿದು ಬಂದಿದೆ. ಮುಂಬೈ, ನೋಯ್ಡಾ, ಗುರುಗಾವ್, ಕೊಲ್ಕತ್ತಾ ಮತ್ತು ಬೆಂಗಳೂರಿನ ವಿವಿಧ ನಗರಗಳಲ್ಲಿ ಆನ್‍ಲೈನ್ ಮೂಲಕ ವಹಿವಾಟು ನಡೆಸಿದ್ದಾನೆಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಹೆಚ್ಚಿನ ಆನ್‍ಲೈನ್ ವಂಚನೆಗಳಲ್ಲಿ ಆರೋಪಿಗಳು ತಾವು ಬ್ಯಾಂಕ್‍ನ ಸಿಬ್ಬಂದಿಗಳೆಂದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮಾಧ್ಯಮಗಳ ಮೂಲಕ ಗ್ರಾಹಕರನ್ನು ಎಚ್ಚರಿಸುತ್ತಿದ್ದರೂ, ಗ್ರಾಹಕರು ಪದೇ ಪದೇ ಇಂತಹ ವಂಚನೆ ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಯಾವುದೇ ಬ್ಯಾಂಕ್‍ನ ಸಿಬ್ಬಂದಿ ಅಥವಾ ಅಧಿಕಾರಿಗಳಾಗಲಿ ಗ್ರಾಹಕರಿಗೆ ಕರೆ ಮಾಡಿ ಯಾವುದೇ ಮಾಹಿತಿ ಪಡೆಯುವುದಿಲ್ಲವೆಂದು ಈ ವೇಳೆ ತಿಳಿಸಿದ್ದಾರೆ.

  • ನಾಗರಹಾವಿಗೆ ಮುತ್ತಿಡಲು ಹೋಗಿ 100 ವಿಷಕಾರಿ ಹಾವು ಹಿಡಿದ ಉರಗ ರಕ್ಷಕ ಸಾವು!

    ಮುಂಬೈ: ಅನೇಕ ಸಂದಂರ್ಭಗಳಲ್ಲಿ ಹಾವು ಕಾಣಿಸಿಕೊಂಡಾಗ ಉರಗ ತಜ್ಞರು ಬಂದು ಬೇರೆಯವರ ಪ್ರಾಣ ಕಾಪಾಡಿದ್ದಾರೆ. ಆದ್ರೆ ಮುಂಬೈನಲ್ಲಿ ಉರಗ ರಕ್ಷಕರೊಬ್ಬರು ತಾವೇ ರಕ್ಷಿಸಿದ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

    ಫೆಬ್ರವರಿ 1ರಂದು ಮುಂಬೈನ ಉರಗ ರಕ್ಷಕ ಸೋಮನಾಥ್ ನಾಗರಹಾವೊಂದನ್ನು ರಕ್ಷಿಸಿದ್ದರು. ಹವಿನೊಂದಿಗೆ ಫೋಟೋ ತೆಗಿಸಿಕೊಳ್ಳುವಾಗ ಅದರ ನೆತ್ತಿಗೆ ಮುತ್ತು ಕೊಡಲು ಮುಂದಾಗಿದ್ದರು. ಈ ವೇಳೆ ಹಾವು ಹಿಂದೆ ತಿರುಗಿ ಸೋಮನಾಥ್‍ಗೆ ಕಚ್ಚಿ ಸಾವನ್ನಪ್ಪಿದ್ದಾರೆ.

    ನವೀ ಮುಂಬೈನ ಸಿಬಿಡಿ ಬಲೇಪುರ್ ನಿವಾಸಿಯಾದ ಸೋಮನಾಥ್, ಅಂದು ಕಾರ್‍ವೊಂದರಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ರಕ್ಷಿಸಲು ಹೋಗಿದ್ದರು. ಕಾರಿನಿಂದ ಹಾವನ್ನು ರಕ್ಷಿಸಿ ಬೇರೆಡೆಗೆ ಅದನ್ನು ತೆಗೆದುಕಂಡು ಹೋಗಿದ್ದರು. ಅಲ್ಲಿ ಸೋಮನಾಥ್ ಹಾವಿನ ನೆತ್ತಿಗೆ ಮುತ್ತು ಕೊಡಲು ಪ್ರಯತ್ನಿಸಿದ್ದರು. ಆದ್ರೆ ಇದ್ದಕ್ಕಿದ್ದಂತೆ ಹಾವು ಹಿಂದೆ ತಿರುಗಿ ಸೋಮನಾಥ್ ಅವರ ಎದೆಗೆ ಕಚ್ಚಿತ್ತು. ನಂತರ ಅವರನ್ನು 5 ದಿನಗಳವರೆಗೆ ನವೀ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆಂದು ಮತ್ತೊಬ್ಬ ಉರಗ ರಕ್ಷಕರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಸೋಮನಾಥ್ ಈ ಹಿಂದೆ ಸುಮಾರು 100 ವಿಷಕಾರಿ ಹಾವುಗಳನ್ನ ರಕ್ಷಿಸಿದ್ದರು.

    ಕಳೆದ 12 ವರ್ಷಗಳಲ್ಲಿ ಹಾವಿಗೆ ಮುತ್ತು ಕೊಡುವ ಸ್ಟಂಟ್ ಮಾಡಲು ಹೋಗಿ ಸತ್ತವರಲ್ಲಿ ಸೋಮನಾಥ್ 31ನೇ ಯವರು ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಾಗರಹಾವಿನಿಂದ ಕಚ್ಚಿಸಿಕೊಂಡು ಈವರೆಗೆ 22 ಉರಗ ರಕ್ಷಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.