ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಗಲಿ ಒಂದು ತಿಂಗಳು ಕಳೆದಿದೆ. ವಿಜಯ ಕುಟುಂಬಕ್ಕೆ, ಆಪ್ತರಿಗೆ ಸ್ಪಂದನಾ ಅಗಲಿಕೆಯ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ಈ ವೇಳೆ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಟ ನವೀನ್ ಕೃಷ್ಣ (Naveen Krishna) ಸ್ಪಂದನಾ ವಿಜಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪಂದನಾ ನಿರ್ಮಾಣದ (Produce) ವಿಜಯ ನಟನೆಯ ‘ಕಿಸ್ಮತ್’ (Kismat Film) ಸಿನಿಮಾದಲ್ಲಿ ನವೀನ್ ಕೃಷ್ಣ (Naveen Krishna) ಅವರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನ ಬರೆದಿದ್ದಾರೆ. ಈ ವೇಳೆ ರಾಘು ಅವರಿದ್ದ ಸ್ಪಂದನಾ ಮೇಲಿನ ಪ್ರೀತಿ, ಗೌರವದ ಬಗ್ಗೆ ನವೀನ್ ಕೃಷ್ಣ ಬಿಚ್ಚಿದ್ದಾರೆ. ಇದನ್ನೂ ಓದಿ:‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ
‘ಕಿಸ್ಮತ್’ ಚಿತ್ರಕ್ಕೆ ನಾನೇ ಸಂಭಾಷಣೆ ಬರೆದಿದ್ದೆ, ಸ್ಪಂದನಾ ಅವರಿಲ್ಲ ಅಂತಾ ನಾನು ಅನಿಸಿಕೊಳ್ಳೋಕೆ ನಾನು ಇಷ್ಟಪಡಲ್ಲ. ಅವರ ನಿಧನರಾದ ದಿನದಿಂದ ರಾಘು ಹತ್ತಿರ ನಾನು ಮಾತನಾಡಲಿಲ್ಲ. ಆ ಧೈರ್ಯ ನನಗಿಲ್ಲ. ರಾಘು, ಮಗ ಶೌರ್ಯ ಅವರು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ. ಆದರೆ ಅವರ ನೋವು ಏನೀದೆ ಅದು ಮಾಯ ಆಗಲ್ಲ. ಆದರೂ ಜೀವನ ಮುಂದೆವರಿಯಬೇಕು. ಹಾಗಾಗಿ ರಾಘುಗೆ ಟೇಕ್ ಕೇರ್ ಎಂದು ಹೇಳುತ್ತೇನೆ.
‘ಕಿಸ್ಮತ್’ ಚಿತ್ರದಲ್ಲಿ ನಾನು ಡೈಲಾಗ್ ಬರಿಬೇಕಾದ್ರೆ, ಆ್ಯಕ್ಚುಲಿ ಹೀರೋಯಿನ್‌ಗೆ ಸ್ಪಂದನಾ ಎಂದು ಹೆಸರಿಟ್ಟೆ. ಡೈಲಾಗ್ ಕೊಡುವಾಗ ವಿಜಯ ಸಖತ್ ಎಂಜಾಯ್ ಮಾಡಿ ಹೇಳ್ತಿದ್ದರು. ಆ ಹೀರೋಯಿನ್‌ಗೆ ಬೇರೆ ಪಾತ್ರಧಾರಿ ಫ್ಲರ್ಟ್ ಮಾಡೋ ತರಹ ಸೀನ್ ಇತ್ತು. Hai Baby Whats Your Name ಎಂದು ಕೇಳ್ತಾನೆ. ಹೀರೋಯಿನ್ ಸ್ಪಂದನಾ ಎನ್ನುತ್ತಾರೆ. ಆತ ನೋ ಡೌಂಟ್ ಯು ಸೋ ಬ್ಯೂಟಿಫುಲ್, ನಿಮ್ಮ ಹೆಸರಲ್ಲೇ ಸ್ಪಾ.. ಇದೆ ಎಂದು ಡೈಲಾಗ್ ಹೊಡಿತ್ತಾನೆ.
ಈ ಡೈಲಾಗ್ ರಾಘು ಕೇಳಿ, ಹೇ ಬೇಡ ಬೇಡ ನನ್ನ ಹೆಂಡ್ತಿ ಹೆಸರನ್ನ ಹೀರೋಯಿನ್ ಇಡಬೇಡ ಅಂದಿದ್ರು. ಎಷ್ಟು ಚೆನ್ನಾಗಿದೆ ಈ ಡೈಲಾಗ್ ಹೇಳಿದ್ರೆ ಎನಾಗುತ್ತೆ ಎಂದು ಹೇಳಿದ್ದೆ. ಅದಕ್ಕೆ ರಾಘು ನನ್ನ ಹೆಂಡ್ತಿ ಕೇಳಿ ಬೈತಾರೆ ಬೇಡ ಅಂದಿದ್ದರು. ಅವತ್ತು ಹೀರೋಯಿನ್ ಹೆಸರನ್ನ ಚೇಂಜ್ ಮಾಡಿದ್ವಿ.
ಈ ಘಟನೆ ನಡೆದ ಮೇಲೆ ಸ್ಪಂದನಾನೇ ಬಂದು ತುಂಬಾ ಚೆನ್ನಾಗಿ ಸಂಭಾಷಣೆ ಬರೆದಿದ್ದೀರಾ ಎಂದು ಹೇಳಿದ್ದರು. ನನ್ನ ಕೆಲಸಕ್ಕೆ ಸ್ಪಂದನಾ ಬೆಂಬಲಿಸಿದ್ದರು. ತುಂಬಾ ಒಳ್ಳೆಯ ಹೆಣ್ಣು ಮಗಳು, ಒಳ್ಳೆಯ ಗೃಹಿಣಿ, ಎಲ್ಲಾ ರೀತಿಯ ಒಳ್ಳೆಯತನ ಇದ್ದಂತಹ ಹೃದಯ ಸ್ಪಂದನಾ ಅವರದ್ದು. ಆದರೆ ಇವತ್ತು ಅವರು ನಮ್ಮ ಜೊತೆ ಇಲ್ಲ ಎಂದು ನಟ ನವೀನ್ ಕೃಷ್ಣ ಭಾವುಕರಾಗಿದ್ದಾರೆ.
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಆಗಸ್ಟ್ 6ರಂದು ಥೈಲ್ಯಾಂಡ್‌ನಲ್ಲಿ ಹೃದಯಾಘಾತದಿಂದ (Heart Attack) ನಿಧನರಾದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು.
ಸ್ಯಾಂಡಲ್ ವುಡ್ ನಟ, ನಿರ್ದೇಶಕ ನವೀನ್ ಕೃಷ್ಣ (Naveen Krishna) ಅವರ ಸಹೋದರಿ ನೀತಾ ಪವರ್ (Neeta Pawar) ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾರೆ (missing). ಈ ಮಾಹಿತಿಯನ್ನು ಸ್ವತಃ ನವೀನ್ ಕೃಷ್ಣ ಅವರೇ ಸೋಷಿಯ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಯ ಫೋಟೋ ಮತ್ತು ಮಾಹಿತಿಯನ್ನೂ ಪೋಸ್ಟ್ ಮಾಡಿರುವ ಅವರು, ‘ಕಂಡರೆ ಕೂಡಲೇ ತಿಳಿಸಿ ನಮ್ಮ ಅಕ್ಕ’ ಎಂದು ಬರೆದುಕೊಂಡಿದ್ದಾರೆ.
ನವೀನ್ ಕೃಷ್ಣ ಅವರು ಪೋಸ್ಟ್ ಮಾಡಿರುವ ಪೋಸ್ಟರ್ ನಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17 ರಂದು ಮಧ್ಯಾಹ್ನ 2:57ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ಹಾಗಾಗಿ ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ, ನಿಮಗೆ ಮಾಹಿತಿ ಸಿಕ್ಕರೆ ಕೂಡಲೇ ಸಂಪರ್ಕಿಸಿ ಎಂದು ಹಲವು ನಂಬರ್ ಗಳನ್ನು ಅವರು ನೀಡಿದ್ದಾರೆ.
ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಅವರ ಪುತ್ರನಾದ ನವೀನ್ ಕೃಷ್ಣ ಧಿಮಾಕು ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ. ಸ್ವತಃ ನಿರ್ದೇಶಕರಾಗಿ ಹಲವು ಧಾರಾವಾಹಿಗನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಜೀ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ಧಾರಾವಾಹಿಯಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಬಿಗ್ ಬಾಸ್ 9ನೇ ಆವೃತ್ತಿ ಇನ್ನೇನು ಶುರುವಾಗಲಿದೆ. ಮೊನ್ನೆಯಿಂದ ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಈಗಾಗಲೇ ಸುದೀಪ್ ಅವರ ಗೆಟಪ್ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸಕ್ಲೂಸಿವ್ ಆದ ಮಾಹಿತಿ ನೀಡಿತ್ತು. ಇದೀಗ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಸಂಭವನೀಯ ಪಟ್ಟಿಯೂ ಸಿಕ್ಕಿದೆ. ಇವರ ಹೆಸರು ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಓಡಾಡುತ್ತಿದೆ.
ಪ್ರತಿ ಸಲವೂ ಬಿಗ್ ಬಾಸ್ ಶುರುವಾದಾಗ ಕೆಲವು ಹೆಸರುಗಳು ಕೇಳಿ ಬರುತ್ತವೆ. ಈ ವರ್ಷವೂ ಅವರು ಸಂಭವನೀಯ ಯಾದಿಯಲ್ಲಿದ್ದಾರೆ. ನಂಬರ್ ಮೂಲಕ ಫೇಮಸ್ ಆಗಿರುವ ಜ್ಯೋತಿಷಿ ಆರ್ಯವರ್ಧನ್, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ನಟ ಕಂ ನಿರ್ದೇಶಕ ನವೀನ್ ಕೃಷ್ಣ ಹಾಗೂ ನಟಿ ಪವಿತ್ರಾ ಲೋಕೇಶ್ ಹೆಸರು ಕೇಳಿ ಬಂದಿದೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್
ಹೊಸ ಸೇರ್ಪಡೆ ಎನ್ನುವಂತೆ ನಾಗಿನಿ 2 ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ನ್ಯೂಸ್ ರೀಡರ್ ದಿವ್ಯಾ ವಸಂತ್, ಸರಿಗಮಪ ಶೋನಲ್ಲಿ ಫೇಮಸ್ ಆಗಿರುವ ಹನುಮಂತ, ಖ್ಯಾತ ಗಾಯಕ ರಘು ದೀಕ್ಷಿತ್, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಹೆಸರು ಈ ಬಾರಿ ಮುಂಚೂಣೆಯಲ್ಲಿ ಕೇಳಿ ಬರುತ್ತಿದೆ. ರೂರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಅಂಜನ್ ಕೂಡ ಈ ಬಾರಿ ದೊಡ್ಮನೆಗೆ ಹೋಗುವಂತಹ ಅವಕಾಶವನ್ನೂ ಪಡೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಈ ಲಿಸ್ಟ್ ನಲ್ಲಿರುವ ಕೆಲವರನ್ನೂ ಈಗಾಗಲೇ ವಾಹಿನಿಯು ಸಂಪರ್ಕ ಮಾಡಿದೆ ಎಂದೂ ಹೇಳಲಾಗಿದ್ದು, ಅಂತಿಮ ಪಟ್ಟಿಯು ಶೋ ಶುರುವಾದಾಗಲೇ ವಾಹಿನಿಯು ರಿಲೀಸ್ ಮಾಡಲಿದೆ. ಅದಕ್ಕೂ ಮುನ್ನ ಕೆಲ ಕಲಾವಿದರಿಗೆ ಗಾಳ ಹಾಕಿದ್ದು, ಹೆಚ್ಚು ಸುದ್ದಿಯಲ್ಲಿರುವವರನ್ನೇ ಟಾರ್ಗೆಟ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.
Live Tv
[brid partner=56869869 player=32851 video=960834 autoplay=true]
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಇನ್ನೂ ಎರಡು ಚಿತ್ರಗಳು ತೆರೆಗೆ ಬರಬೇಕು. ಅದರಲ್ಲಿ ಮೇಲೊಬ್ಬ ಮಾಯಾವಿ ಕೂಡ ಒಂದು. ಈ ಸಿನಿಮಾದಲ್ಲಿ ಅವರು ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುವ ಹರಳು ಕಲ್ಲು ದಂಧೆಯ ಸುತ್ತ ಹೆಣೆದಿರುವ ಈ ಕಥೆಯಲ್ಲಿ ವಿಜಯ್, ಅಪರೂಪದ ಎನ್ನುವಂತಹ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : exclusive photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
ಈ ಕುರಿತು ನಿರ್ದೇಶಕ ಬಿ.ನವೀನ್ ಕೃಷ್ಣ ಹೇಳುವುದು ಹೀಗೆ, “ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರ ಹುಡುಕಾಟ ಹೇಗಿರುತ್ತದೆ ಮತ್ತು ಹುಡುಕಾಟದಲ್ಲಿ ಸಂಭವಿಸುವ ಸಾವು-ನೋವುಗಳ ಹಿಂದಿನ ಅಸಲಿ ಸತ್ಯ ಏನು? ಅರಣ್ಯ ಇಲಾಖೆ ಈ ದಂಧೆಯ ವಿಚಾರದಲ್ಲಿ ಸುಮ್ಮನಿರುವುದೇಕೆ ಹೀಗೆ ದಶಕಗಳಿಂದ ನಡೆಯುತ್ತಿರುವ ಈ ಹರಳು ಮಾಫಿಯಾದ ಹಿಂದಿರುವ ಪೈಶಾಚಿಕ ಮನಸ್ಥಿಗಳ ಕುರಿತಾದ ಸಿನಿಮಾವಿದು. ಈ ಹರಳು ದಂಧೆ ಇಡೀ ಪರಿಸರವನ್ನು ನಾಶಗೊಳಿಸುವುದರ ಜೊತೆಗೆ, ಇಡೀ ಮನುಕುಲವನ್ನೇ ಹೇಗೆ ವಿನಾಶದ ಅಂಚಿಗೆ ಕೊಂಡೊಯ್ಯಬಹುದು ಎನ್ನುವುದೂ ಸಿನಿಮಾದಲ್ಲಿದೆ. ನಾನು ಅವನಲ್ಲ ಅವಳು ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಸಂಚಾರಿ ವಿಜಯ್ ಅವರ ಈ ಚಿತ್ರದಲ್ಲಿನ ಇರುವೆ ಪಾತ್ರ ಮಾಡಿದ್ದಾರೆ. ಅದೊಂದು ಕುತೂಹಲ ಮೂಡಿಸುವಂತ ಪಾತ್ರವಾಗಿದೆ’ ಅಂತಾರೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?
ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕಿರುತೆರೆ ನಟಿ ಪವಿತ್ರಾ ಜಯರಾಮ್ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.
– ಇದು ರಾಜ್‍ಕುಮಾರ್ ಇದ್ದ ಇಂಡಸ್ಟ್ರಿ
– ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ
ಬೆಂಗಳೂರು: ಇದು ರಾಜ್ ಕುಮಾರ್ ಇದ್ದ ಇಂಡಸ್ಟ್ರಿ. ಅಣ್ಣಾವ್ರು ಯಾವಾಗಲೂ ಕ್ಯಾಮೆರಾನೇ ದೇವರಂತೆ ಕಾಣುತ್ತಿದ್ದರು. ಕ್ಯಾಮೆರಾಗೆ, ಮೇಕಪ್ ಮ್ಯಾನ್‍ಗೆ, ನಿರ್ದೇಶಕರಿಗೆ ಕೈ ಮುಗಿದು ಬರುವ ಇಂಡಸ್ಟ್ರಿ ಇದು. ನಾನು ಕಂಡಂತೆ ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ ಎಂದು ನಟ ನವೀನ್ ಕೃಷ್ಣ ಹೇಳಿದ್ದಾರೆ.
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ, ನನ್ನ ಪ್ರಕಾರ ನನಗೆ ಡ್ರಗ್ಸ್ ಅನ್ನೋದರ ಸ್ಪೆಲ್ಲಿಂಗ್ ಗೊತ್ತಿಲ್ಲ. ಚಿತ್ರರಂಗದಲ್ಲಿ ಕೆಲವೇ ಕೆಲವು ನಟರು ಮಾತ್ರವಿಲ್ಲ. ಇಲ್ಲಿ ಸಾವಿರಾರು ಕಲಾವಿದರು, ಸಾವಿರಾರು ತಂತ್ರಜ್ಞರು ಕೆಲಸ ಮಾಡುತ್ತಿದ್ದೀವಿ. ಆದ್ದರಿಂದ ಯಾರೋ ಒಬ್ಬರು ಇರಬಹುದೆನೋ? ಅನ್ನೋ ಕಾರಣಕ್ಕೆ ಇಡೀ ಇಂಡಸ್ಟ್ರಿಯನ್ನ ಎಳೆದು ತರುವುದು ತಪು ಎಂದರು.
ಶೂಟಿಂಗ್‍ಗೆ ಡ್ರಗ್ಸ್ ಸೇವಿಸಿ ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಇದು ರಾಜ್ ಕುಮಾರ್ ಇದ್ದ ಇಂಡಸ್ಟ್ರಿ. ಅಣ್ಣಾವ್ರು ಯಾವಾಗಲೂ ಕ್ಯಾಮೆರಾನೇ ದೇವರಂತೆ ಕಾಣುತ್ತಿದ್ದರು. ಕ್ಯಾಮೆರಾಗೆ, ಮೇಕಪ್ ಮ್ಯಾನ್‍ಗೆ, ನಿರ್ದೇಶಕರಿಗೆ ಕೈ ಮುಗಿದು ಬರುವ ಇಂಡಸ್ಟ್ರಿ ಇದು. ನಾನು ಕಂಡಂತೆ ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ. ಹೀಗಾಗಿ ಯಾರು ನಿಜವಾಗಿಯೂ ಪಾಲ್ಗೊಂಡಿದ್ದಾರೆ ಅವರ ಹೆಸರನ್ನಷ್ಟೇ ಹೇಳಿ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಡೀ ಇಂಡಸ್ಟ್ರಿಯನ್ನ ದೂಷಿಸುವುದು ತಪ್ಪು ಎಂದಿದ್ದಾರೆ.
ಅಕ್ರಮ ಚಟುವಟಿಕೆಗಳು ಎಲ್ಲಿ ಇಲ್ಲ, ಎಲ್ಲಾ ಉದ್ಯಮಗಳಲ್ಲೂ ಇದೆ. ದುಡ್ಡಿಗಾಗಿ ಏನೇನೋ ನಡೆಯುತ್ತಿದೆ. ಇಂದ್ರಜಿತ್ ಆರೋಪ ಮಾಡಿರುವ ವೇಗದಲ್ಲೇ ನೇರವಾಗಿ ಗೊತ್ತಿರುವ ಹೆಸರುಗಳನ್ನ ಹೇಳಬಹುದಿತ್ತು. ಪ್ರಭಾವಿಗಳು ಏನಾದರೂ ತಪ್ಪು ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿ ಎಂದು ನವೀನ್ ಕೃಷ್ಣ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದರು ನವೀನ್ ಕೃಷ್ಣ “ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕಲಾವಿದರು ಮಾತ್ರ ಇಲ್ಲ. ಕಲಾವಿದರು, ತಂತ್ರಜ್ಞರು ಸೇರಿ ಲಕ್ಷಾಂತರ ಮಂದಿ ಕೂಡ ಕನ್ನಡ ಚಿತ್ರರಂಗದಲ್ಲಿದ್ದಾರೆ. ಮಜಾ ಮಾಡಲು ಹಣವಿರುವ ಶ್ರೀಮಂತರು ಒಂದೆಡೆಯಿದ್ದರೆ, ದುಡಿದು ಬದಕಲೂ ಪರದಾಡುವ ಬಡವರೂ ಇದ್ದಾರೆ. ಆದರೆ ಎಲ್ಲರೂ ಸ್ಯಾಂಡಲ್‍ವುಡ್‍ನ ಭಾಗವೇ ಆಗಿದ್ದಾರೆ. ನನ್ನ ಉದ್ದೇಶ ಒಂದೇ, ಯಾರು ಈ ಮಾಫಿಯಾದಲ್ಲಿ ಸೇರಿಕೊಂಡಿದ್ದಾರೋ ಅವರ ಹೆಸರುಗಳನ್ನ ಹೇಳಿ. ಅವರನ್ನು ಮಾತ್ರ ಆರೋಪಿತರನ್ನಾಗಿಸಿ” ಎಂದು ನವೀನ್ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.
sandalwood is not just some actors..lakhs together actors technicians are included. people who have money to enjoy is different from people who don't have money to live. but all are sandalwood. so my intention is strait. Who are indulged. Name them blame them ONLY
ಅಭಿಮಾನಿಯೊಬ್ಬರು ಇಂದ್ರಜಿತ್ ಹೇಳಿಕೆಗೆ ನೀವು ಏನು ಪ್ರತಿಕ್ರಿಯೆ ಕೊಡುತ್ತೀರಿ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಇದಕ್ಕೆ ನಟ ನವೀನ್ ಕೃಷ್ಣ, “ಯಾರು ಅಂತ ಗೊತ್ತು, ಆದರೆ ಆಮೇಲೆ ಹೇಳುತ್ತೀನಿ ಅಂದರೆ ಹೇಗೆ. ಹೋಳೊಂಗೆ ಇದ್ದರೆ ಫಸ್ಟ್ ಹೇಳಬೇಕು. ಅದು ಬಿಟ್ಟು ಟ್ರೈಲರ್ ನೋಡಿ ಆಮೇಲೆ ಸಿನಿಮಾ ನೋಡಿ ಅಂದರೆ ಹೇಗೆ” ಎಂದು ಪ್ರತಿಕ್ರಿಯಿಸಿದ್ದಾರೆ.
ದಯಾಳ್ ಪದ್ಮನಾಭನ್ ಈಗಾಗಲೇ ಆ ಕರಾಳ ರಾತ್ರಿ ಚಿತ್ರದ ಮೂಲಕ ಗೆದ್ದಿದ್ದಾರೆ. ಅವರು ಬಿಗ್ ಬಾಸ್ ಮನೆಯಿಂದ ಕಳೆದ ವರ್ಷ ಹೊರ ಬಂದೇಟಿಗೆ ಏಕ ಕಾಲದಲ್ಲಿಯೇ ಆ ಕರಾಳ ರಾತ್ರಿ ಮತ್ತು ಪುಟ 109 ಎಂಬೆರಡು ಚಿತ್ರಗಳನ್ನು ಆರಂಭಿಸಿದ್ದರು. ಇದೀಗ ಪುಟ 109 ಈ ವಾರ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.
ಈ ಹಿಂದೆ ಕರಾಳ ರಾತ್ರಿಯಲ್ಲಿ ಬೇರೆಯದ್ದೇ ಜಗತ್ತನ್ನು ತೋರಿಸುವಲ್ಲಿ ದಯಾಳ್ ಯಶ ಕಂಡಿದ್ದರು. ಇದೀಗ ಒಂದು ರೋಚಕ ಸಸ್ಪೆನ್ಸ್ ಕಥಾನಕವನ್ನು ಮತ್ತೆ ಜೆಕೆ ಹಾಗೂ ನವೀನ್ ಕೃಷ್ಣ ಜೊತೆಗೂಡಿ ಹೇಳ ಹೊರಟಿದ್ದಾರೆ. ಪ್ರೇಕ್ಷಕರಿಗೆ ಒಂದಷ್ಟು ಅಚ್ಚರಿಗಳನ್ನೂ ಹೊತ್ತು ತಂದಿದ್ದಾರೆ.
ಪೊಲೀಸ್ ತನಿಖೆಯ ಬಗ್ಗೆ ಜನಸಾಮಾನ್ಯರಲ್ಲೊಂದು ಕುತೂಹಲವಿದೆ. ಆದರೆ ಅದನ್ನು ನೇರವಾಗಿ ಕಣ್ತುಂಬಿಕೊಳ್ಳೋ ಅವಕಾಶ ಸಿಗೋದಿಲ್ಲ. ಅಂಥಾದ್ದೊಂದು ಕೊಲೆ, ಸುಪಾರಿಯ ಸುತ್ತ ನಡೆಯೋ ಪೊಲೀಸ್ ತನಿಖೆಯನ್ನು ಕಣ್ಣಿಗೆ ಕಟ್ಟುವಂತೆ, ಪ್ರತಿ ಕ್ಷಣವೂ ಸೀಟಿನ ತುದಿಗೆ ತಂದು ಕೂರಿಸೋ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರಂತೆ ದಯಾಳ್.
ದಯಾಳ್ ಪದ್ಮನಾಭನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಹಣವಿದೆ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಜೆ ಕೆ, ನವೀನ್ ಕೃಷ್ಣ, ವೈಷ್ಣವಿ ಚಂದ್ರನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪಮ ಗೌಡ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.