Tag: Navaratri Festival

  • ನವರಾತ್ರಿ ಹಬ್ಬದ ಫೋಟೋ ಹಂಚಿಕೊಂಡ ಪ್ರಿಯಾಂಕಾ ಉಪೇಂದ್ರ

    ನವರಾತ್ರಿ ಹಬ್ಬದ ಫೋಟೋ ಹಂಚಿಕೊಂಡ ಪ್ರಿಯಾಂಕಾ ಉಪೇಂದ್ರ

    ವರಾತ್ರಿಯು (Navaratri) ದುರ್ಗಾ ದೇವಿಗೆ ಸಮರ್ಪಿತವಾದ ಮಂಗಳಕರ ಹಿಂದೂ ಹಬ್ಬವಾಗಿದೆ. ಇದು ಒಂಬತ್ತು ರಾತ್ರಿಗಳ ಸಾಂಕೇತಿಕ ಆಚರಣೆಯಾಗಿದೆ ಮತ್ತು ಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇನ್ನೂ ಕನ್ನಡ ಚಿತ್ರರಂಗದ ತಾರೆಯರು ಕೂಡ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಮನೆಯಲ್ಲೂ ‘ನವ’ರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಚೆಂದದ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ:ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನವರಾತ್ರಿ ಹಬ್ಬವನ್ನು ಆಚರಣೆಯನ್ನು ಸರಳವಾಗಿ ಪ್ರಿಯಾಂಕಾ (Priyanka) ಆಚರಿಸಿದ್ದಾರೆ. ಆಚರಣೆಯ ಕೆಲ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಅಭಿಮಾನಿಗಳ ಗಮನ ಸೆಳೆದಿದೆ.

    ಸಾಂಪ್ರದಾಯಿಕ ಲುಕ್‌ನಲ್ಲಿ ಲೈಟ್ ಬಣ್ಣ ಸೀರೆಯುಟ್ಟು ನಟಿ ಮಿಂಚಿದ್ದಾರೆ. ದೀಪ ಮತ್ತು ಶಂಕವಿಟ್ಟಿರುವ ಬೆಳ್ಳಿ ತಟ್ಟೆಯನ್ನು ಹಿಡಿದು ನಿಂತಿರುವ ಕೆಲ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಪ್ರತಿ ಹಬ್ಬವನ್ನು ಕೂಡ ನಟಿ ಮನೆಯಲ್ಲಿ ಆಚರಿಸುತ್ತಾರೆ. ಸದ್ಯ ಈ ಫೋಟೋ ನೋಡಿ ಅಭಿಮಾನಿಗಳು ನವರಾತ್ರಿ ಹಬ್ಬಕ್ಕೆ ನಟಿಗೆ ಶುಭಕೋರಿದ್ದಾರೆ.

    ಅಂದಹಾಗೆ, ನವರಾತ್ರಿ ಆಚರಣೆಯ ಹಿಂದೆ ಹಲವು ವಿಚಾರಗಳಿವೆ. ದಂತಕಥೆಯ ಪ್ರಕಾರ, ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದಳು ಮತ್ತು ನಂತರ ನವಮಿಯ ರಾತ್ರಿ ಅವನನ್ನು ಕೊಂದಳು ಎಂದು ಕಥೆಯಲ್ಲಿ ಹೇಳಲಾಗಿದೆ. ಅಂದಿನಿಂದ ದೇವಿಯನ್ನು ‘ಮಹಿಷಾಸುರಮರ್ದಿನಿ’ ಎಂದು ಕರೆಯುತ್ತಾರೆ. ಅಂದಿನಿಂದ, ತಾಯಿ ದುರ್ಗೆಯ ಶಕ್ತಿಗೆ ಸಮರ್ಪಿತವಾದ ನವರಾತ್ರಿಯ ಉಪವಾಸವನ್ನು ಆಚರಿಸುವಾಗ ಅವಳ 9 ರೂಪಗಳನ್ನು ಪೂಜಿಸಲಾಗುತ್ತದೆ.

  • ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ 9 ದಿನಗಳಿಗೆ 9 ಬಣ್ಣದ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

    ಯಾವ ದಿನ, ಯಾವ ಬಣ್ಣದ ಉಡುಪು?
    1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಹಳದಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡುವುದರಿಂದ ಲಾಭವಾಗುತ್ತದೆ.

    2. ಬ್ರಹ್ಮಚಾರಿಣಿ: ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನಡೆಯುತ್ತದೆ. ಈ ದಿನ ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ.

    3. ಚಂದ್ರಘಂಟಾ: ಮೂರನೇ ದಿನ ಚಂದ್ರಘಂಟ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಗ್ರೇ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ನಿಮ್ಮ ಕೆಟ್ಟು ಹೋದ ಕೆಲಸ ಸರಿ ಹೋಗುತ್ತದೆ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    4. ಕೂಷ್ಮಾಂಡಾ ದೇವಿ: ನಾಲ್ಕನೇ ದಿನ ಕೂಷ್ಮಾಂಡಾದೇವಿಯ ಆರಾಧನೆ ನಡೆಯುತ್ತದೆ. ಈ ದಿನ ಕಿತ್ತಲೆ ಹಣ್ಣಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಕೂಷ್ಮಾಂಡಾದೇವಿ ಕಿತ್ತಲೆ ಹಣ್ಣಿನ ಬಣ್ಣ ಪ್ರಿಯೆ ಎನ್ನುವ ನಂಬಿಕೆಯಿದೆ.

    5. ಸ್ಕಂದ ಮಾತೆ: ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಇದನ್ನೂ ಓದಿ: ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    6. ಕಾತ್ಯಾಯಿನಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಪೂಜೆ ನಡೆಯುತ್ತದೆ. ಈ ದಿನ ಕೆಂಪು ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    7. ಕಾಳರಾತ್ರಿ: ಏಳನೇ ದಿನ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    8. ಮಹಾಗೌರಿ: ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಗುಲಾಬಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    9. ಸಿದ್ಧಿದಾತ್ರಿ: ಒಂಬತ್ತನೇ ಹಾಗೂ ಕೊನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ ನಡೆಯುತ್ತದೆ. ಈ ದಿನದಂದು ಪರ್ಪಲ್ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    ಕಪ್ಪು ಬಣ್ಣ:
    ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸಬಾರದು ಎಂದು ಹೇಳುತ್ತಾರೆ. ಕಪ್ಪು ಬಣ್ಣ ದುಃಖದ ಸಂಕೇತ. ಹಾಗಾಗಿ ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸುವುದು ಅಶುಭ ಎನ್ನುವ ನಂಬಿಕೆಯಿದೆ.

     

     

  • 8 ಕೆಜಿ ಚಿನ್ನ, 4 ಕೋಟಿ ರೂ. ಮೌಲ್ಯದ ಹಣದಿಂದ ಲಕ್ಷ್ಮಿಗೆ ಅಲಂಕಾರ!

    8 ಕೆಜಿ ಚಿನ್ನ, 4 ಕೋಟಿ ರೂ. ಮೌಲ್ಯದ ಹಣದಿಂದ ಲಕ್ಷ್ಮಿಗೆ ಅಲಂಕಾರ!

    ಅಮರಾವತಿ: ನವರಾತ್ರಿ ಉತ್ಸವವೂ ಎಲ್ಲೆಡೆ ಅದ್ಧೂರಿಯಾಗಿ ನೆರವೇರುತ್ತಿದೆ. ಆದರೆ ಆಂಧ್ರಪ್ರದೇಶದ ಲಕ್ಷ್ಮೀ ದೇವಸ್ಥಾನ ಒಂದರಲ್ಲಿ ಹಣ ಮತ್ತು ಬಂಗಾರದಿಂದ ಶೃಂಗರಿಸಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

    ವಿಶಾಖಪಟ್ಟಣಂನ ಪ್ರಸಿದ್ಧ ಕನ್ನಿಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮೀ ಅವತಾರಂ ದೇವಿಗೆ 4 ಕೋಟಿ ರೂ. ಮೌಲ್ಯದ ನೋಟು ಮತ್ತು 8 ಕೆಜಿ ಚಿನ್ನದಿಂದ ಅಲಂಕರಿಸಲಾಗಿದೆ.

    9 ದಿನದ ಉತ್ಸವ ಸಮಯದಲ್ಲಿ ದೇವತೆಯನ್ನು ಪ್ರತೀ ವರ್ಷವು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತಿದ್ದು, ಎಂಟನೇ ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ನೋಟು ಮತ್ತು ಚಿನ್ನದಿಂದ ಅಲಂಕರಿಸಿ ಲಕ್ಷ್ಮಿಯನ್ನು ಪೂಜಿಸಲಾಗಿದೆ.

    ಹೊಸದಾಗಿ ಪರಿಚಯಿಸಲಾದ 2000 ರೂ. ನೋಟುಗಳು, ನಿಷೇಧಗೊಂಡಿರುವ 500 ರೂ. 1 ಸಾವಿರ ರೂ. ಮುಖಬೆಲೆಯ ನೋಟುಗಳು ಸೇರಿದಂತೆ ಚಲಾವಣೆಯಲ್ಲಿರುವ ಎಲ್ಲ ಕರೆನ್ಸಿ ನೋಟುಗಳನ್ನು ಬಳಸಿ ಲಕ್ಷ್ಮಿ ಕುಳಿತುಕೊಂಡಿದ್ದ ಮಂಟಪವನ್ನು ಶೃಂಗರಿಸಲಾಗಿದೆ.

    ಭಕ್ತರು ತಮ್ಮ ಸಂಕಷ್ಟ ನಿವಾರಣೆಗಾಗಿ ದೇಣಿಗೆ ರೂಪದಲ್ಲಿ ನೀಡಿರುವ ನೋಟುಗಳನ್ನು ಇಲ್ಲಿ ಬಳಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.