Tag: Navaratri

  • Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

    Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

    ವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ (Katyayani Devi) ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ಧಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿ, ಮಹಿಷಾಸುರನನ್ನು ಕೊಂದವಳು, ದೇವತೆಗಳನ್ನು ರಾಕ್ಷಸರ ಸೆರೆಯಿಂದ ಬಿಡಿಸಿದವಳು. ಈಕೆ ಮಹಿಷಾಸುರ ಮರ್ಧಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ.

    ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು.

    ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ (Mahishasura) ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು. ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ಕಾತ್ಯಾಯಿನಿ ಕೊಂದಳು. ಶುಂಭ ಮತ್ತು ನಿಶುಂಭರೂ ಸ್ವರ್ಗದ ಮೇಲೆ ದಾಳಿ ನಡೆಸಿ ಹಾಳುಮಾಡಿದ್ದರು. ಇಂದ್ರನ ಸಿಂಹಾಸನವನ್ನೂ ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಇದರಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅವರನ್ನು ಅಸುರರ ದೌರ್ಜನ್ಯದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿ ಈ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದಳು.

    ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಕೊಡುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಸರಿಯಾಗಿ ಪೂಜಿಸಿ ಕೆಲವು ವಿಶೇಷ ಉಪಾಯಗಳನ್ನು ಮಾಡುವುದರಿಂದ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ.

    ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.

    ಕಾತ್ಯಾಯಿನಿ ದೇವಿ ಕಥೆ:
    ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು. ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ.

    ತಾಯಿ ಕಾತ್ಯಾಯಿನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂದು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು.

    ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು.

    ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ.

    ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ.

  • Navratri 2025 Day 4: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ – ಪುರಾಣ ಕಥೆ ಏನು?

    Navratri 2025 Day 4: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ – ಪುರಾಣ ಕಥೆ ಏನು?

    ವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡಲಾಗುತ್ತದೆ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೆಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ. ಈ ದೇವಿಯನ್ನು ಪೂಜಿಸುವುದು ಹೇಗೆ? ಯಾವ ಬಗೆಯ ಪೂಜೆಯಿಂದ ಪ್ರಸನ್ನಳಾಗುತ್ತಾಳೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಕೂಷ್ಮಾಂಡ ದೇವಿಯ ಸ್ವರೂಪ ಹೇಗೆ?
    ಆದಿಶಕ್ತಿಯ ಪ್ರತಿರೂಪವಾದ ಕೂಷ್ಮಾಂಡ ದೇವಿಯ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ. ಇವಳು ಸಿಂಹವಾಹನೆಯಾಗಿದ್ದು, ತೇಜೋಮಯಿಯಾಗಿದ್ದಾಳೆ. ಇವಳಿಗೆ ಎಂಟು ಕೈಗಳು. ತನ್ನ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದಿರುತ್ತಾಳೆ. ವಿಶೇಷ ಎಂದರೆ ಕೂಷ್ಮಾಂಡ ದೇವಿಯ ಪ್ರಭೆಯ ಕಾಂತಿ ಸೂರ್ಯನಿಗೆ ಸಮಾನವಾಗಿರುತ್ತದೆ.

    ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನುತ್ತಾರೆ. ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ. ಭಕ್ತರ ಅಜ್ಞಾನವನ್ನೂ ದೂರ ಮಾಡುತ್ತಾಳೆ. ಕೂಷ್ಮಾಂಡ ದೇವಿಯ ಆರಾಧನೆಯ ಪೂಜಾ ಫಲಗಳು ಅತ್ಯಂತ ವಿಶೇಷ. ಕೂಷ್ಮಾಂಡ ದೇವಿ ಆರಾಧನೆಯಿಂದ ರೋಗಗಳಿಂದ ಮುಕ್ತಿ ಪಡೆಯಬಹುದು. ಭಕ್ತರ ದುಃಖ ದೂರ ಮಾಡುತ್ತಾಳೆ. ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಸಾಧಕರು ಕೂಷ್ಮಾಂಡ ದೇವಿಯ ಆರಾಧನೆ ಮಾಡುತ್ತಾರೆ. ಈ ದಿನ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆನಿಲ್ಲುತ್ತದೆ. ಈ ದೇವಿಯ ಆರಾಧನೆಯಿಂದ ಮನಸ್ಸು ಏಕಾಗ್ರತೆಗೆ ಸಾಧಿಸುತ್ತದೆ.

    ಕೂಷ್ಮಾಂಡ ದೇವಿಯ ಹಿನ್ನೆಲೆ:
    ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲುವ ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುತ್ತದೆ.

    ಪೂಜಾ ವಿಧಿ:
    ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ಈ ಹೂಗಳಿಂದ ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿಧದ ಪೂಜೆಯನ್ನು ಮಾಡಿ ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಬೇಡಿಕೊಳ್ಳಿ.

  • Dasara Special | ಸರಸ್ವತಿ ಪೂಜೆಯ ಮಹತ್ವ ಏನು?

    Dasara Special | ಸರಸ್ವತಿ ಪೂಜೆಯ ಮಹತ್ವ ಏನು?

    ಮಗೆ ಬೇಕಾದ ಎಲ್ಲ ವಿದ್ಯೆಗಳನ್ನೂ ದಯಪಾಲಿಸುವವ ದೇವತೆ ಸರಸ್ವತಿ. ಈ ಕಾರಣಕ್ಕೆ ನವರಾತ್ರಿಯ ಸಂದರ್ಭದಲ್ಲಿ ಶಾರದಾ ಪೂಜೆ ಅಥವಾ ಸರಸ್ವತಿ ಪೂಜೆಗೆ (Saraswathi Pooja) ವಿಶೇಷ ಮಹತ್ವ. ನವರಾತ್ರಿ (Navaratri) ಹಬ್ಬದ ಸಪ್ತಮಿಯಿಂದ ಸರಸ್ವತಿ ದೇವಿಯ ಆರಾಧನೆಯು ಆರಂಭವಾಗುತ್ತದೆ.

    ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ
    ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ ।
    ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ
    ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ

    ಸರಸ್ವತಿ ಜ್ಞಾನವನ್ನು (Knowledge) ಕೊಡುವವಳು, ನಮಗೆ ಬುದ್ಧಿವಂತಿಕೆ, ಕಲಿಕೆ ಮತ್ತು ಬುದ್ಧಿಶಕ್ತಿಯನ್ನು ಅನುಗ್ರಹಿಸುತ್ತಾಳೆ. ಅಷ್ಟೇ ಅಲ್ಲದೇ ಆಕೆ ʼಕಾಮರೂಪಿಣಿ’ಯೂ ಹೌದು, ತನಗೆ ಬೇಕಾದ ರೂಪವನ್ನು ಧರಿಸಬಲ್ಲವಳು ಎಂದರ್ಥ. ಬರಿ ವಿದ್ಯೆ ಸಿಕ್ಕಿದರೆ ಪ್ರಯೋಜನವಿಲ್ಲ, ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವ ದೇವತೆ ಸರಸ್ವತಿ. ಇದನ್ನೂ ಓದಿ: Mysuru Dasara | ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್‌ ಅಭಿಮನ್ಯು & ಟೀಂ

    ಹಿಂದೂ ಧರ್ಮದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಿದರೆ ಜ್ಞಾನ ಸಿಗುತ್ತದೆ ಎಂಬ ನಂಬಿಕೆ. ಈ ಕಾರಣಕ್ಕೆ ಮನೆಗಳಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ಸರಸ್ವತಿ ಪೂಜೆ ಮಾಡಲಾಗುತ್ತದೆ. ಈ ಶುಭ ದಿನ ಅಕ್ಷರ ಅಭ್ಯಾಸ ಮಾಡಿದ ಮಗು ಮುಂದೆ ವಿದ್ಯಾವಂತನಾಗಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತದೆ ಎಂಬ ನಂಬಿಕೆಯಿದೆ.

    ಸಾಧಾರಣವಾಗಿ ಮಕ್ಕಳ ಬೆಳವಣಿಗೆ ಅವರು ಆಲೋಚನಾ ಶೈಲಿಯನ್ನು ಗಮನದಲ್ಲಿಟ್ಟುಕೊಂಡು 2 ವರ್ಷದ ನಂತರ 4 ವರ್ಷದೊಳಗಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಅಕ್ಷರಾಭ್ಯಾಸ ಎಂದರೆ ಓದು, ಬರಹದ ಆರಂಭ. ಈ ವಿದ್ಯಾರಂಭವನ್ನು ಮನೆ, ಶಾಲೆ ಅಥವಾ ದೇವಸ್ಥಾನದಲ್ಲಾದರೂ ಮಾಡಬಹುದು.

    ಜ್ಞಾನ, ಬುದ್ಧಿವಂತಿಕೆ ಮತ್ತು ಕಲೆಗಳ ದೇವತೆಯಾಗಿರುವ ಸರಸ್ವತಿ ವಾಹನ ಹಂಸ. ಶಿಸ್ತು ಮತ್ತು ಶುದ್ಧತೆಯ ಪ್ರತೀಕ ಹಂಸ ಎನ್ನಲಾಗುತ್ತದೆ. ಸರಸ್ವತಿ ಹರಿಯುವ ನೀರಿನೊಂದಿಗೆ ಹಂಸದಲ್ಲಿ ಕುಳಿತುಕೊಂಡಿದ್ದಾಳೆ. ನೀರು ಶುದ್ಧತೆಯ ಸಂಕೇತ. ಎಷ್ಟೇ ಮಲೀನವಾದರೂ ನೀರು ಹರಿಯುತ್ತಲೇ ಅದನ್ನು ಶುದ್ಧ ಮಾಡುತ್ತದೆ. ಹೀಗಾಗಿ ಇಲ್ಲಿ ನೀರನ್ನು ಆಲೋಚನೆ ಮತ್ತು ಜ್ಞಾನದ ಶುದ್ಧತೆಯನ್ನು ಸಾಧಿಸುವ ಸಾಧನವಾಗಿ ಅರ್ಥೈಸಿಕೊಳ್ಳಬಹುದು.

  • 2 ಕಂತಿನ ಗೃಹಲಕ್ಷ್ಮಿ ಹಣ ಈ ತಿಂಗಳು ಜಮೆ: ಹೆಬ್ಬಾಳ್ಕರ್‌

    2 ಕಂತಿನ ಗೃಹಲಕ್ಷ್ಮಿ ಹಣ ಈ ತಿಂಗಳು ಜಮೆ: ಹೆಬ್ಬಾಳ್ಕರ್‌

    ಬೆಳಗಾವಿ: ನವರಾತ್ರಿ (Navaratri) ಸಂದರ್ಭದಲ್ಲಿ ಗೃಹ ಲಕ್ಷ್ಮಿ (Gruha Lakshmi) ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್. ಎರಡು ತಿಂಗಳ ಹಣ ಅಕ್ಟೋಬರ್‌ನಲ್ಲಿ ಜಮೆಯಾಗಲಿದೆ.

    ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಮಾತನಾಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಇದೇ ಅ.7 ಮತ್ತು 9 ರಂದು ಎರಡೂ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಂಟರ್ನ್‌ಶಿಪ್‌ ಯೋಜನೆಗೆ ಚಾಲನೆ, ಸಿಗಲಿದೆ ತಿಂಗಳಿಗೆ 5 ಸಾವಿರ ಭತ್ಯೆ – ಅರ್ಜಿ ಸಲ್ಲಿಸೋದು ಹೇಗೆ? ಮಾನದಂಡ ಏನು?

    ತಾಂತ್ರಿಕ ಕಾರಣದಿಂದ ಎರಡು ತಿಂಗಳ ಕಂತಿನ ಹಣ ತಡವಾಗಿತ್ತು. ಈ ತಿಂಗಳು ಜುಲೈ ಮತ್ತು ಆಗಸ್ಟ್ ಕಂತಿನ ಹಣ ಜಮೆಯಾಗಲಿದೆ ಎಂದು ಹೇಳಿದರು.

  • ಮಡಿಕೇರಿ ದಸರಾಗೆ ವರ್ಣರಂಜಿತ ತೆರೆ

    ಮಡಿಕೇರಿ ದಸರಾಗೆ ವರ್ಣರಂಜಿತ ತೆರೆ

    ಮಡಿಕೇರಿ: ಎಲ್ಲೆಲ್ಲೂ ಜನವೋ ಜನ, ಎತ್ತನೋಡಿದರೂ ಜನಸಾಗರ. ಕಣ್ಣು ಕುಕ್ಕುವ ವಿದ್ಯುತ್ ದೀಪಾಲಂಕಾರ. ಹುಚ್ಚೆದ್ದು ಕುಣಿಯುತ್ತಿರೋ ಜನರು, ಅಬ್ಬರದಿಂದ ಪ್ರದರ್ಶನಗೊಂಡ ಸ್ತಬ್ಧ ಚಿತ್ರಗಳು.

    ಇದು ಮಡಿಕೇರಿ ದಸರಾದ (Madikeri Dasara) ಕೊನೆಯ ದಿನದ ಶೋಭಾಯಾತ್ರೆಯ ಚಿತ್ರಣ. ಹಗಲು ಮೈಸೂರು (Mysuru) ದಸರಾದ ವೈಭವ ನೋಡು, ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು ಎಂಬ ಮಾತಿನಂತೆ ಐತಿಹಾಸಿಕ ಮಡಿಕೇರಿ ದಸರಾಗೆ ವರ್ಣರಂಜಿತ ತೆರೆಬಿದ್ದಿದೆ. ಇದನ್ನೂ ಓದಿ: ರಾಮನಗರ ಇಬ್ಭಾಗ, ಬೆಂಗಳೂರಿಗೆ ಕನಕಪುರ – ಏನಿದು ಡಿಕೆಶಿ ಲೆಕ್ಕಾಚಾರ?

    ರಾತ್ರಿಯಿಡೀ ನಡೆದ ಮೈನವಿರೇಳಿಸುವ ದಶಮಂಟಪಗಳ ಶೋಭಾಯಾತ್ರೆ ಜನರ ಮನಸೂರೆಗೊಂಡಿತು. ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧ ಚಿತ್ರ ಪ್ರದರ್ಶನ ಜನರನ್ನು ದೇವಲೋಕಕ್ಕೆ ಕರೆದೊಯ್ಯಿತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪ ಪ್ರದರ್ಶನ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು. ಇದನ್ನೂ ಓದಿ: ಬನ್ನಿಮಂಟಪದಲ್ಲಿ ದಸರಾಗೆ ವರ್ಣರಂಜಿತ ತೆರೆ; See You In 2024

    ಮಂಜಿನ ನಗರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು. ದೇವಾನು ದೇವತೆಗಳ ಲೀಲೆಗಳನ್ನು ಬಿಂಬಿಸುವ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನಸೆಳೆಯಿತು. ಎದೆನಡುಗಿಸುವ ಶಬ್ಧ, ಅದಕ್ಕೆ ತಕ್ಕಂತೆ ಬೆಳಕು. ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳು ನೆರೆದಿದ್ದ ಜನರನ್ನು ಒಮ್ಮೆ ದೇವಲೋಕಕ್ಕೆ ಸಂಚಾರ ಮಾಡಿಸಿದಂತಿತ್ತು. ದಶಮಂಟಪಗಳ ಶೋಭಾಯತ್ರೆ ಎಲ್ಲರನ್ನು ಆಕರ್ಷಣೆ ಮಾಡಿತ್ತು. ಇದನ್ನೂ ಓದಿ: ಬರದ ನಡುವೆಯೂ ಬತ್ತದ ಜನೋತ್ಸಾಹ; ಲಕ್ಷಾಂತರ ಮಂದಿ ಸಾಕ್ಷಿಯಾದ ದಸರಾಗೆ ತೆರೆ

    ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಉತ್ಸವ ಬೆಳಗ್ಗೆ 5 ಗಂಟೆಯವರೆಗೂ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ರಾತ್ರಿಯಿಡೀ ಮಂಜಿನ ನಗರಿಯ ಪ್ರಮುಖ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತಿತ್ತು. ದೇವಾನುದೇವತೆಗಳ ಶಕ್ತಿ ಲೀಲೆಗಳನ್ನು ಕಣ್ತುಂಬಿಕೊಂಡ ಜನತೆ ಖುಷಿಯ ಅಲೆಯಲ್ಲಿ ತೇಲಿದರು. ಇದನ್ನೂ ಓದಿ: ಅದ್ಧೂರಿಯಾಗಿ ತೆರೆಕಂಡ ಮಂಗಳೂರು ದಸರಾ

    ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆಬೀಳುತ್ತಿದ್ದಂತೆ ಶುರುವಾಗುವ ಮಂಜಿನ ನಗರಿ ದಸರಾ ಅಬ್ಬರ ಸಹಸ್ರಾರು ಜನರ ಸಂಭ್ರಮೋಲ್ಲಾಸಕ್ಕೆ ಕಾರಣವಾಗುತ್ತದೆ. ವಿವಿಧ ಜಿಲ್ಲೆಗಳಿಂದ ಬರುವ ಸಹಸ್ರಾರು ಪ್ರವಾಸಿಗರು ಮಂಜಿನ ನಗರಿ ಮಡಿಕೇರಿ ದಸರಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡ್ತೀನಿ: ಡಿಕೆಶಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನವರಾತ್ರಿ ದಾಂಡಿಯಾ ಉತ್ಸವದಲ್ಲಿ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್ಸ್

    ನವರಾತ್ರಿ ದಾಂಡಿಯಾ ಉತ್ಸವದಲ್ಲಿ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್ಸ್

    ಚಿಕ್ಕೋಡಿ: ನವರಾತ್ರಿ (Navaratri) ಹಿನ್ನೆಲೆಯಲ್ಲಿ ಆಯೋಜಿಸಿದ್ದ ದಾಂಡಿಯಾ (Dandiya) ಉತ್ಸವ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಸಕತ್ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ.

    ಬೆಳಗಾವಿ (Belgavi) ಜಿಲ್ಲೆಯ ನಿಪ್ಪಾಣಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಮಹಿಳೆಯರು ಹಾಗೂ ಕುಟುಂಬಸ್ಥರೊಂದಿಗೆ ಶಶಿಕಲಾ ಜೊಲ್ಲೆ ದಾಂಡಿಯಾ ನೃತ್ಯ ಮಾಡಿದ್ದಾರೆ. ರಾಜಸ್ಥಾನಿ ವೇಷಭೂಷಣ ತೊಟ್ಟು ಮಿಂಚಿದ್ದಾರೆ. ಶಶಿಕಲಾ ಜೊತೆಗೆ ಅವರ ಪತಿ ಸಂಸದ ಅಣ್ಣಾಸಾಹೇಬ ಜೊಲ್ಲೆ (Annasaheb Jolle) ಅವರ ಪುತ್ರ ಬಸವಪ್ರಸಾದ ಜೊಲ್ಲೆ (Basava Prasad Jolle) ಹಾಗೂ ಕುಟುಂಬಸ್ಥರು ಭಾಗಿಯಾಗಿ ದಾಂಡಿಯಾ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು. ನೂರಾರು ಮಹಿಳೆಯರು ಈ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷೀಯ ಚುನಾವಣೆ – ಮಗನ ಜೊತೆ ಚರ್ಚಿಸೋಕೆ ರಾಜ್ಯಕ್ಕೆ ಬರ್ತಿದ್ದಾರೆ ಸೋನಿಯಾ

    ಸಂಸ್ಕೃತಿ ಪರಂಪರೆಗಳನ್ನು ಸಾರುವ ಹಬ್ಬಗಳ ಆಚರಣೆಗಳು ಆಯೋಜನೆ ಮಾಡಬೇಕಿದೆ. ಇದಕ್ಕೆ ಡಾನ್ಸ್ ಎನ್ನುವ ಬದಲು ನಮ್ಮದೇ ದೇಶಿ ಶೈಲಿಯ ಜನಪದ ಕಲೆ ಎನ್ನಬಹದು ಎಂದು ಶಶಿಕಲಾ ಜೊಲ್ಲೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು

    Live Tv
    [brid partner=56869869 player=32851 video=960834 autoplay=true]

  • 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    ಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ತಲೆಯ ಕೂದಲೂ ಬಿಟ್ಟುಕೊಂಡು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆ ಇದ್ದು, ಮೂರುಕಣ್ಣುಗಳಿವೆ. ಈ ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದೆ. ಇವುಗಳ ಕಿರಣಗಳು ವಿದ್ಯುತ್ತಿನಂತೆ ಪಸರಿಸಿಕೊಂಡಿವೆ. ಇವಳ ವಾಹನ ಕತ್ತೆಯಾಗಿದ್ದು ನಾಲ್ಕು ಭುಜಗಳನ್ನು ಹೊಂದಿದ್ದಾಳೆ.

    ಮೇಲಕ್ಕೆ ಎತ್ತಿರುವ ಬಲಕೈಯ ವರಮುದ್ರೆಯಿಂದ ಎಲ್ಲರಿಗೂ ವರದಾನ ನೀಡಿದರೆ ಕೆಳಗಿನ ಬಲಕೈಯಲ್ಲಿ ಅಭಯ ಮುದ್ರೆ ಇದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಕಾಲರಾತ್ರಿ ದುರ್ಗೆಯ ಸ್ವರೂಪವು ನೋಡಲು ಅತ್ಯಂತ ಭಯಂಕರವಾಗಿ ಕಂಡರೂ ಇವಳು ಶುಭಫಲವನ್ನೇ ನೀಡುವ ಕಾರಣ ಈಕೆಯನ್ನು ಶುಭಂಶರೀ ಎಂದು ಕರೆಯುತ್ತಾರೆ.

    ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಉಪಾಸನೆಯ ವಿಧಾನವಿದೆ. ಈ ದಿನ ಸಾಧಕನ ಮನಸ್ಸು ‘ಸಹಸ್ರಾರ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ. ಈ ಚಕ್ರದಲ್ಲಿ ಸ್ಥಿತವಾದ ಸಾಧಕನ ಮನಸ್ಸು ಪೂರ್ಣವಾಗಿ ತಾಯಿ ಕಾಲರಾತ್ರಿಯ ಸ್ವರೂಪದಲ್ಲೇ ಸ್ಥಿರವಾಗುತ್ತದೆ. ಅವಳ ಸಾಕ್ಷಾತ್ಕಾರದಿಂದ ಸಿಗುವ ಪುಣ್ಯಕ್ಕೆ ಅವನು ಭಾಗಿಯಾಗುತ್ತಾನೆ. ಅವನ ಸಮಸ್ತ ಪಾಪ-ವಿಘ್ನಗಳ ನಾಶವಾಗುತ್ತದೆ. ಅವನಿಗೆ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಜಗನ್ಮಾತೆಯ ಕಾಲರಾತ್ರಿಯು ದುಷ್ಟರ ವಿನಾಶ ಮಾಡುವವಳಾಗಿದ್ದಾಳೆ. ದಾನವ, ದೈತ್ಯ, ರಾಕ್ಷಸ, ಭೂತ-ಪ್ರೇತ ಮುಂತಾದವು ಇವಳ ಸ್ಮರಣೆಯಿಂದಲೇ ಭಯಭೀತರಾಗಿ ಓಡಿ ಹೋಗುತ್ತವೆ. ಇವಳು ಗ್ರಹಬಾಧೆಗಳನ್ನೂ ಕೂಡ ದೂರ ಮಾಡುತ್ತಾಳೆ. ಇವಳ ಉಪಾಸಕರಿಗೆ ಅಗ್ನಿಯ, ಜಲ, ಶತು, ಮತ್ತು ರಾತ್ರಿಯ ಭಯ ಮುಂತಾದವುಗಳು ಎಂದೂ ಆಗುವುದಿಲ್ಲ. ಇವಳ ಕೃಪೆಯಿಂದ ಅವನು ಸರ್ವಥಾ ಭಯ ಮುಕ್ತನಾಗಿ ಹೋಗುತ್ತಾನೆ.

    ಕಾಲರಾತ್ರಿ ದೇವಿಯ ಸ್ವರೂಪದ ವಿಗ್ರಹವನ್ನು ತನ್ನ ಹೃದಯದಲ್ಲಿ ನೆಲೆಗೊಳಿಸಿ ಮನುಷ್ಯನು ಏಕನಿಷ್ಠ ಭಾವದಿಂದ ಅವಳ ಉಪಾಸನೆ ಮಾಡಬೇಕು. ಯಮ, ನಿಯಮ, ಸಂಮಯವನ್ನು ಅವನು ಪೂರ್ಣವಾಗಿ ಪಾಲಿಸಬೇಕಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

     

  • ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಗನ್ಮಾತೆ ದುರ್ಗೆಯ ಆರನೇ ಸ್ವರೂಪದ ಹೆಸರು ಕಾತ್ಯಾಯನೀ. ಕಾತ್ಯಾಯನೀ ಹೆಸರು ಬರಲು ಒಂದು ಪುರಾಣ ಕಥೆಯಿದೆ. ಭಗವತಿಯೂ ತನ್ನ ಪುತ್ರಿಯ ಅವತಾರದಲ್ಲಿ ಜನಿಸಬೇಕೆಂದು ಕಾತ್ಯಯನ ಮಹರ್ಷಿ ಹಲವು ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ್ದರು. ಕಾತ್ಯಯನ ಭಕ್ತಿಗೆ ಮೆಚ್ಚಿ ಭಗವತಿಯು ಅವರ ಈ ಪ್ರಾರ್ಥನೆಯನ್ನು ನಡೆಸಿಕೊಟ್ಟಳು.

    ಕೆಲ ಕಾಲಾಂತರದಲ್ಲಿ ಭೂಮಿಯಲ್ಲಿ ಮಹಿಷಾಸುರನ ಉಪಟಳ ಹೆಚ್ಚಾಗತೊಡಗಿತು. ಈ ಸಮಯದಲ್ಲಿ ಬ್ರಹ್ಮ, ವಿಷ್ಣು, ಈಶ್ವರ ಮತ್ತು ಎಲ್ಲ ದೇವತೆಗಳು ತಮ್ಮ-ತಮ್ಮ ತೇಜದ ಅಂಶವನ್ನಿತ್ತು ಮಹಿಷಾಸುರನ ವಿನಾಶಕ್ಕಾಗಿ ಓರ್ವ ದೇವಿಯನ್ನು ಸೃಷ್ಟಿಸಿದರು. ಬಳಿಕ ಆ ದೇವಿಯನ್ನು ಮಹರ್ಷಿ ಕಾತ್ಯಾಯನರು ಮೊಟ್ಟಮೊದಲ ಬಾರಿಗೆ ಪೂಜೆ ಮಾಡಿದರು. ಭಾದ್ರಪದ ಕೃಷ್ಣ ಚತುದರ್ಶಿಯಂದು ಆಶ್ವೀನ ಶುಕ್ಲ ಸಪ್ತಮಿ, ಅಷ್ಟಮಿ, ನವಮಿಯವರೆಗೆ ಮೂರು ದಿನ ಕಾತ್ಯಾಯನ ಋಷಿಯ ಪೂಜೆಯನ್ನು ಸ್ವೀಕರಿಸಿ ನಂತರ ದಶಮಿಯಂದು ಮಹಿಷಾಸುರನ್ನು ದೇವಿ ಸಂಹರಿಸಿದ್ದಳು. ಕಾತ್ಯಾಯನರು ಮೊದಲ ಪೂಜೆ ಮಾಡಿದ ಹಿನ್ನೆಲೆಯಲ್ಲಿ ದೇವಿಯನ್ನು ಕಾತ್ಯಾಯನೀ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಭಗವಾನ್ ಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾಳಿಂದಿ-ಯಮುನೆಯ ತೀರದಲ್ಲಿ ಕಾತ್ಯಾಯನಿಯನ್ನು ಪೂಜಿಸಿದ್ದರು. ಇವಳು ವ್ರಜಮಂಡಲದ ಅಧಿಷ್ಠಾತ್ರಿ ದೇವಿಯಾಗಿ ಪ್ರತಿಷ್ಠಿತವಾಗಿದ್ದಾಳೆ. ಇವಳ ಸ್ವರೂಪವು ಅತ್ಯಂತ ಭವ್ಯ ಹಾಗೂ ದಿವ್ಯವಾಗಿದೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯು ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈಯು ವರಮುದ್ರೆಯಲ್ಲಿದೆ, ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ, ಕೆಳಗಿನ ಕೈಯಲ್ಲಿ ಕಮಲಪುಷ್ಪವಿದ್ದು ಇವಳ ವಾಹನ ಸಿಂಹವಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ಈ ದೇವಿಯ ಪೂಜೆಯ ದಿನದಂದು ಸಾಧಕನ ಮನಸ್ಸು ‘ಆಜ್ಞಾ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಯೋಗಸಾಧನೆಯಲ್ಲಿ ಈ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವ ಪೂರ್ಣಸ್ಥಾನವಿದೆ. ಈ ಚಕ್ರದಲ್ಲಿ ಸ್ಥಿತವಾದ ಮನಸ್ಸುಳ್ಳ ಸಾಧಕನು ತಾಯಿ ಕಾತ್ಯಾಯನಿಯ ಚರಣಗಳಲ್ಲಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುತ್ತಾನೆ. ಪೂರ್ಣವಾಗಿ ಆತ್ಮಸಮರ್ಪಣ ಮಾಡುವ ಇಂತಹ ಭಕ್ತನಿಗೆ ಸಹಜಭಾವದಿಂದ ಕಾತ್ಯಾಯನೀ ದೇವಿಯ ದರ್ಶನ ಪ್ರಾಪ್ತವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಕಾತ್ಯಾಯನಿಯ ಭಕ್ತಿ ಮತ್ತು ಉಪಾಸನೆಯ ಮೂಲಕ ಮನುಷ್ಯನಿಗೆ ಸುಲಭವಾಗಿ ಅರ್ಥ, ಧರ್ಮ, ಕಾಮ, ಮೋಕ್ಷವೆಂಬ ನಾಲ್ಕು ಫಲಗಳ ಪ್ರಾಪ್ತಿಯಾಗುತ್ತದೆ. ಅವನು ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ಪೂರ್ಣವಾಗಿ ನಾಶವಾಗುತ್ತದೆ. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡಲು ಕಾತ್ಯಾಯನಿಯ ಉಪಾಸನೆಗಿಂತ ಸುಗಮ ಹಾಗೂ ಸರಳವಾದ ಮಾರ್ಗವು ಮತ್ತೊಂದಿಲ್ಲ. ಇವಳ ಉಪಾಸಕ ಯಾವಾಗಲೂ ಇವಳ ಸಾನ್ನಿಧ್ಯಲ್ಲಿ ಇದ್ದು ಪರಮಪದದ ಅಧಿಕಾರಿಯಾಗುತ್ತಾನೆ ಎನ್ನುವ ನಂಬಿಕೆಯಿದೆ.

     

  • ನವರಾತ್ರಿ ಪ್ರಯುಕ್ತ ಸೋನು ಸೂದ್ ಪ್ರತಿಮೆ ನಿರ್ಮಿಸಿ ವಿಶೇಷ ಗೌರವ

    ನವರಾತ್ರಿ ಪ್ರಯುಕ್ತ ಸೋನು ಸೂದ್ ಪ್ರತಿಮೆ ನಿರ್ಮಿಸಿ ವಿಶೇಷ ಗೌರವ

    ಕೋಲ್ಕತ್ತಾ: ಬಾಲಿವುಡ್ ನಟ ಸೋನು ಸೂದ್ ಸ್ಕ್ರೀನ್ ಮೇಲೆ ಮಾತ್ರ ಹೀರೋ ಅಲ್ಲ. ಅವರು ರಿಯಲ್ ಲೈಫ್‍ನಲ್ಲಿಯೂ ಹೀರೋ ಎಂಬುವುದಕ್ಕೆ ಈ ಸ್ಟೋರಿ ಸಾಕ್ಷಿ ಎನ್ನಬಹುದು. ಕೊರೊನಾ ಸಂಕಷ್ಟದಲ್ಲಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸು ಗೆದ್ದಿರುವ ಸೋನು ಸೂದ್ ಅವರಿಗೆ ಕೋಲ್ಕತ್ತಾದ ಕೆಸ್ತೋಪುರ್ ಪ್ರಫುಲ್ಲ ಕಾನನ್ ದುರ್ಗಾ ಪೂಜಾ ಸಮಿತಿ ವಿಶೇಷವಾಗಿ ಗೌರವ ಸಲ್ಲಿಸಿದೆ.

    ಈ ವರ್ಷದ ನವರಾತ್ರಿ ಹಬ್ಬದ ಪ್ರಯುಕ್ತ ಕೆಸ್ತೋಪುರ್ ಪ್ರಫುಲ್ಲ ಕಾನನ್ ದುರ್ಗಾ ಪೂಜಾ ಸಮಿತಿ ಸುಂದರ್‍ಬನ್ ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ ಮೀನುಗಾರರಿಗೆ ಸೋನು ಸೂದ್ ಸಹಾಯ ಮಾಡಿರುವುದನ್ನು ಕಲ್ಪಿಸಿಕೊಂಡು ಕೆಲವು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಇದನ್ನೂ ಓದಿ: ಸಿಮ್ ಕಾರ್ಡ್‍ನಲ್ಲಿ ಸೋನು ಸೂದ್ – ಅಭಿಮಾನಿ ಪ್ರೀತಿಗೆ ರಿಯಲ್ ಹೀರೋ ಹೇಳಿದ್ದೇನು ಗೊತ್ತಾ?

    ಸುಂದರ್ಬನ್ ಗ್ರಾಮ ಪ್ರದೇಶದಲ್ಲಿ ಹೆಚ್ಚಾಗಿ ಮೀನುಗಾರರು ವಾಸಿಸುತ್ತಾರೆ. ಆದರೆ ಈ ವರ್ಷ ಉಂಟಾದ ಯಸ್ ಚಂಡಮಾರುತದಿಂದಾಗಿ ಇಡೀ ಪ್ರದೇಶ ಸಂಪೂರ್ಣ ನಾಶವಾಗಿತ್ತು. ಇದರಿಂದಾಗಿ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ವೇಳೆ ಸಂತ್ರಸ್ತರಿಗೆ ಸೋನು ಸೂದ್ ಸಹಾಯ ಮಾಡಿದ್ದರು. ಹೀಗಾಗಿ ಪ್ರಫುಲ್ಲ ಕಾನನ್ ಪೂಜಾ ಸಮಿತಿ ಕೆಲವೊಂದು ಮೂರ್ತಿಗಳನ್ನು ನಿರ್ಮಿಸಿದೆ. ಅದರಲ್ಲಿ ಸೋನು ಸೂದ್ ಅವರ ಗಾತ್ರದ ಪ್ರತಿಮೆಯನ್ನು ನಿರ್ಮಿಸಿದ್ದು, ಫೋಟೋದಲ್ಲಿ ಸೋನು ಸೂದ್ ಕೈಯಲ್ಲಿ ಕವರ್ ಹಿಡಿದುಕೊಂಡು ಮೀನುಗಾರರಿಗೆ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಸುತ್ತ ಮುತ್ತ ಜನ, ಮಕ್ಕಳು, ಪುಟ್ಟ ಮನೆಗಳಿರುವುದನ್ನು ನೋಡಬಹುದಾಗಿದೆ.

    ಕಳೆದ ವರ್ಷ ಸೋನು ಸೂದ್ ಕೊರೊನಾ ಸಂಕಷ್ಟದಲ್ಲಿರುವ ಅನೇಕ ಮಂದಿಗೆ ಸಹಾಯ ಮಾಡುವ ಮೂಲಕ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದರು. ಇದನ್ನೂ ಓದಿ: ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ – ಐಟಿ ಅಧಿಕಾರಿಗಳಿಗೆ ಹೇಳಿದ್ರಂತೆ ಸೋನು ಸೂದ್

    https://www.youtube.com/watch?v=NfxRKAVd5ks

  • ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ವರಾತ್ರಿ  ಹಬ್ಬಕ್ಕೆ ಮನೆಯಲ್ಲಿ ಪ್ರತಿ ನಿತ್ಯ ಒಂದಲ್ಲ  ಒಂದು ಸಿಹಿ ತಿಸಿಸು ಕಾಮನ್. ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಉತ್ತರ ಭಾರತದಲ್ಲಿ ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡುವ ಸಿಹಿ ತಿನಿಸು ಜಿಲೇಬಿ, ಅದರಲ್ಲೂ ನವರಾತ್ರಿ ಸಮಯದಲ್ಲಿ ತುಪ್ಪದ ಜಿಲೇಬಿಗೆ ಎಲ್ಲಿಲ್ಲದ ಬೇಡಿಕೆ.

    ಜೇಬಿಗೆ ಇದು ತುಸು ಭಾರ  ಅನಿಸಿದರೂ ಟೇಸ್ಟ್ ಮಾತ್ರ ಬೊಂಬಾಟಾಗಿರುತ್ತದೆ. ಹಾಗಾಗೀ ಶುಭ ಸಂದರ್ಭಗಳಲ್ಲಿ ತುಪ್ಪದ ಜಿಲೇಬಿ ಉತ್ತರ ಭಾರತದಲ್ಲಿ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ನಾವೂ ಜಿಲೇಬಿಗೂ ಮತ್ತು ತುಪ್ಪದ ಜಿಲೇಬಿಗೂ ಹೆಚ್ಚೆನೂ ವ್ಯತ್ಯಾಸ ಇಲ್ಲ.

    ತುಪ್ಪದ ಜಿಲೇಬಿ ಮಾಡುವ ವಿಧಾನ
    ಮೈದಾ ಹಿಟ್ಟಿಗೆ ನೀರನ್ನ ಬೆರೆಸಿಕೊಳ್ಳಬೇಕು. ಜಿಲೇಬಿ ಹಾಕಲು ಬರುವಂತೆ ಹದವಾಗಿ ನೀರು ಬೆರೆಸಿಕೊಂಡು ಹಿಟ್ಟು ತಯಾರಿಸಿಕೊಳ್ಳಬೇಕು. ಇದಕ್ಕೆ ನೀರು ಮತ್ತು ಮೈದಾ ಹೊರತುಪಡಿಸಿ ಬೇರೇನು ಬೆರೆಸಿಕೊಳ್ಳುವುದಿಲ್ಲ. ಹಿಟ್ಟು ತಯಾರಾದ ಬಳಿಕ ನಿಮ್ಮಿಷ್ಟದ ತುಪ್ಪವನ್ನು ಆಯ್ಕೆ ಮಾಡಿಕೊಂಡು ಕಡಾಯಿಗೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು.

    ಕಾದ ತುಪ್ಪಕ್ಕೆ ತಯಾರಿಸಿಟ್ಟ ಹಿಟ್ಟಿನಿಂದ ಜಿಲೇಬಿ ಹಾಕಿಕೊಂಡು ಕೆಂಪಗೆ ರೋಸ್ಟ್ ಆಗುವರೆಗೂ ಕರಿದುಕೊಳ್ಳಬೇಕು. ಆದಾದ ಬಳಿಕ ಸಕ್ಕರೆ ಪಾಕಕ್ಕೆ ತುಪ್ಪದಲ್ಲಿ ಕರೆದ ಜಿಲೆಬಿ ಅದ್ದಿದ್ರೆ ಬಿಸಿ ಬಿಸಿ ತುಪ್ಪದ ಜಿಲೇಬಿ ಸವಿಯಬಹುದು. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಸಾಮನ್ಯವಾಗಿ ಜಿಲೇಬಿಗೆ ಹಿಂದಿನ ದಿನಾ ರಾತ್ರಿಯೇ ಹಿಟ್ಟನ್ನು ಮಾಡಿಟ್ಟುಕೊಳ್ಳಬೇಕು, ಆದರೆ ತುಪ್ಪದ ಜಿಲೇಬಿಗೆ ಅದರ ಅವಶ್ಯಕತೆ ಇಲ್ಲ ಬಯಕೆ ಆದಾಕ್ಷಣ ಪಟಾಪಟ್ ಅಂತಾ ಆಗಲೇ ಹಿಟ್ಟು ತಯಾರಿಸಿ ಜಿಲೇಬಿ ಮಾಡಬಹುದು.

    ದೆಹಲಿಯಲ್ಲಿ ಈ ಜಿಲೇಬಿ ತುಂಬಾ ಪ್ರಖ್ಯಾತಿ, ಸಾಮಾನ್ಯ ದಿನಗಳಲ್ಲೂ ತುಪ್ಪದ ಜಿಲೇಬಿ ಸವಿಬಹುದು. ಚಾಂದನಿ ಚೌಕ್ ನಲ್ಲಿ ತುಪ್ಪದ ಜಿಲೇಬಿ ಮಾರುವ ಅಂಗಡಿ ಒಂದೇ ಒಂದು ಇದ್ದು ದೂರದೂರಿನಿಂದ ಬಂದವರೆಲ್ಲ ಒಮ್ಮೆ ತುಪ್ಪದ ಜಿಲೇಬಿ ಸವಿಯಬಹುದು.