Tag: Navalgund

  • ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

    ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

    ಧಾರವಾಡ: ಕಳೆದ ಮೂರು ದಿನಗಳಿಂದ ಧಾರವಾಡ (Dharwad) ತಾಲೂಕಿನ ನವಲಗುಂದದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದು ಕುಸಿದಿದೆ.

    ನವಲಗುಂದ (Navalgund) ಪಟ್ಟಣದ ಹಳ್ಳದ ಓಣಿಯಲ್ಲಿರುವ ಮಕ್ತುಮಬಿ ನರಗುಂದ ಅವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದೀಗ ಮನೆಯಿಲ್ಲದೆ ಮಕ್ತುಮಬಿ ನರಗುಂದ ಅವರ ಕುಟುಂಬ ಪರದಾಡುತ್ತಿದ್ದು, ಪಕ್ಕದ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಎಟಿಎಂ ಕಳ್ಳತನ ಮಾಡುವಾಗಲೇ ಎಎಸ್ಐಯಿಂದ ಕಳ್ಳ ಅರೆಸ್ಟ್‌ – ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

    ಸ್ಥಳಕ್ಕೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಮನೆ ಕಳೆದುಕೊಂಡ ಕುಟುಂಬಸ್ಥರು ಸರ್ಕಾರ ಆದಷ್ಟು ಬೇಗ ಪರಿಹಾರವನ್ನ ನೀಡಬೇಕು ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಧಾರವಾಡ | ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿ

    ಧಾರವಾಡ | ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿ

    ಧಾರವಾಡ: ಹಾಸನ, ಶಿವಮೊಗ್ಗದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಧಾರವಾಡದಲ್ಲಿ (Dharwad) ಒಂದೇ ದಿನ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಅಪಮಾನ – ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ

    ಮೃತರನ್ನು ಜಿಲ್ಲೆಯ ನವಲಗುಂದ (Navalgund) ಪಟ್ಟಣದ ನಿವಾಸಿ ಮುತ್ತುಪ್ಪ ಶಂಕ್ರಪ್ಪ ಪೂಜಾರ (44) ಹಾಗೂ ನವಲಗುಂದದ ಯಮನೂರ ಗ್ರಾಮದ ನಿವಾಸಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಫಕಿರಪ್ಪ ಬಣಗಾರ (45) ಎಂದು ಗುರುತಿಸಲಾಗಿದೆ.

    ಸೋಮವಾರ ರಾತ್ರಿ ಇಬ್ಬರು ಕೂಡ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸದ್ಯ ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.ಇದನ್ನೂ ಓದಿ: ಹುಟ್ಟು ಹಬ್ಬದ ದಿನ ಆಂಜನೇಯ ಅವತಾರವೆತ್ತ ಗಣೇಶ್

  • ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡಿದ ಕುಟುಂಬಸ್ಥರು

    ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡಿದ ಕುಟುಂಬಸ್ಥರು

    ಧಾರವಾಡ: ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಕುಟುಂಬಸ್ಥರು ಪರದಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಅಜ್ಜಿ ಯಲ್ಲಮ್ಮ ಮಂಟೂರ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಮಾಡಲು ಕುಟುಂಬದವರು ಮುಂದಾಗಿದ್ದರು. ಈ ವೇಳೆ ಗ್ರಾಮದಲ್ಲಿ ಮೊದಲಿನಿಂದಲೂ ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ಅಜ್ಜಿಯನ್ನು ಮಣ್ಣು ಮಾಡಲು ಮುಂದಾದಾಗ, ಇದೇ ಗ್ರಾಮದ ಕಲ್ಲಯ್ಯಾ ಮತ್ತು ಕಲ್ಲಪ್ಪ ತಳವಾರ ವಿರೋಧ ಮಾಡಿದ್ದಾರೆ.

    ಅಲ್ಲದೇ ಆ ಜಾಗ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸ್ಥಳಕ್ಕೆ ನವಲಗುಂದ ತಹಶಿಲ್ದಾರ್ ಕಚೇರಿ ಸಿಬ್ಬಂದಿ ಬಂದು ಸಮಸ್ಯೆ ಬಗೆಹರಿಸಲು ಮುಂದಾದಾಗ, ರುದ್ರಗೌಡ, ಹಿರೇಗೌಡ್ರ ತಮ್ಮ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ನಂತರ ಅಜ್ಜಿಯ ಕುಟುಂಬದವರು ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ:  ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ 

    ರುದ್ರಗೌಡರ ಹೊಲವನ್ನೇ ಸರ್ಕಾರ ಸ್ಮಶಾನಕ್ಕೆ ಪಡೆದುಕೊಳ್ಳಲು ಮುಂದಾಗಿದೆ. ಅಜ್ಜಿಯ ಸಾವಿಗೆ ಜಾಗನೇ ಸಿಗದೆ ಇದ್ದಾಗ, ಗ್ರಾಮದ ಒಬ್ಬರು ಮುಂದೆ ಬಂದು ಜಮೀನು ಕೊಟ್ಟಿದ್ದಾರೆ. ಇಡೀ ಗ್ರಾಮಸ್ಥರಿಗೆ ಈಗ ಸ್ಮಶಾನ ಸಿಕ್ಕಂತೆ ಆಗಿದೆ ಎಂದು ಜನ ಎಲ್ಲ ಮಾತನಾಡಿಕೊಂಡರು.

  • 8 ದಿನದೊಳಗೆ ಕೊಲೆ ಮಾಡ್ತೀನಿ- ಮಹದಾಯಿ ಹೋರಾಟಗಾರನಿಗೆ ಬೆದರಿಕೆ ಕರೆ

    8 ದಿನದೊಳಗೆ ಕೊಲೆ ಮಾಡ್ತೀನಿ- ಮಹದಾಯಿ ಹೋರಾಟಗಾರನಿಗೆ ಬೆದರಿಕೆ ಕರೆ

    ಧಾರವಾಡ: ಮಹದಾಯಿ ಹೋರಾಟಗಾರ ಹಾಗೂ ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಅನಾಮಧೇಯ ವ್ಯಕ್ತಿಯೋರ್ವ ಫೋನ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.

    ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಸೊಬರದಮಠ ಅವರು ನರಗುಂದದಲ್ಲಿ ಕಳೆದ ಐದು ವರ್ಷಗಳಿಂದ ಮಹದಾಯಿ ಹೋರಾಟ ಮಾಡುತ್ತಿದ್ದಾರೆ. ಆದರೆ ಶುಕ್ರವಾರ ರಾತ್ರಿ ವ್ಯಕ್ತಿಯೋರ್ವ ಅವರಿಗೆ ಮೊಬೈಲ್ ಕರೆ ಮಾಡಿ 8 ದಿನದೊಳಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಈ ಸಂಬಂಧ ಪ್ರತಿಕಾ ಪ್ರಕಟನೆ ನೀಡಿರುವ ವೀರೇಶ ಸೊಬರದಮಠ, ಫೋನ್ ಮಾಡಿದ ವ್ಯಕ್ತಿಯನ್ನು ನೀನು ಯಾರು ಪ್ರಶ್ನಿಸಿದೆ. ಆದರೆ ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ ಎಂದು ತಿಳಿಸಿದ್ದಾರೆ.

    ಈ ಕುರಿತು ವೀರೇಶ ಸೊಬರದಮಠ ಅವರು ನವಲಗುಂದ ಠಾಣೆಗೆ ದೂರು ನೀಡಿದ್ದಾರೆ. ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ನಂಬರ್ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

  • ಮಂಗನ ತಿಥಿ ಮಾಡಿ ಭರ್ಜರಿ ಊಟ ಹಾಕಿದ ಗ್ರಾಮಸ್ಥರು!

    ಮಂಗನ ತಿಥಿ ಮಾಡಿ ಭರ್ಜರಿ ಊಟ ಹಾಕಿದ ಗ್ರಾಮಸ್ಥರು!

    ಧಾರವಾಡ: ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅಂತ್ಯಸಂಸ್ಕಾರದ ಬಳಿಕ ತಿಥಿ ಕಾರ್ಯ ಮಾಡುವುದು ಸಾಮಾನ್ಯ. ಆದರೆ ಮಂಗವೊಂದು ಸಾವನ್ನಪ್ಪಿದ್ದರಿಂದ ಅಂತ್ಯಸಂಸ್ಕಾರದ ಬಳಿಕ ತಿಥಿ ಕೂಡಾ ಮಾಡಿ, ಭರ್ಜರಿ ಊಟ ಹಾಕಿಸಿದ ಅಪರೂಪದ ಸನ್ನಿವೇಶ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ವಾರ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ಹೊರವಲಯದಲ್ಲಿ ಮಂಗಗಳ ನಡುವೆ ಜಗಳ ನಡೆದಿತ್ತು. ದೊಡ್ಡ ಗುಂಪಿನ ಮಂಗಗಳೆಲ್ಲ ಸೇರಿ ಒಂದು ಮಂಗನನ್ನು ಹೊಡೆದು ಮರದಿಂದ ಕೆಳಗೆ ಉರುಳಿಸಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಮಂಗನನ್ನು ಗ್ರಾಮಸ್ಥರು ನೋಡಿ, ಸಮೀಪದ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗ ಮೃತಪಟ್ಟಿತ್ತು.

    ಗ್ರಾಮದಲ್ಲಿ ಮಂಗನ ಅಂತ್ಯಕ್ರಿಯೆ ಮಾಡಿ, ತಿಥಿ ಮಾಡಲು ನಿರ್ಧರಿಸಿದ್ದರು. ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಮಣ್ಣಿನಿಂದಲೇ ಸಮಾಧಿ ನಿರ್ಮಾಣ ಮಾಡಲಾಗಿದೆ. ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಅದರ ಮೇಲೆ ಮಂಗನ ಫೋಟೋವನ್ನು ಇಟ್ಟು ಸಕಲ ಸಂಪ್ರದಾಯಗಳಿಂದ ತಿಥಿ ಕಾರ್ಯ ಹಾಗೂ ಅನ್ನಸಂತರ್ಪಣೆ ಮಾಡಿದ್ದಾರೆ. ಈ ವೇಳೆ ಭಜನೆ ವ್ಯವಸ್ಥೆ ಕೂಡಾ ಇತ್ತು.

  • ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

    ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

    ಬಾಗಲಕೋಟೆ: ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆಯಂತೆ ಅಂತಾ ಹೇಳಿಕೊಂಡು 10 ದಿನದಿಂದ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದಾರೆ. ಮೋದಿ-ದೇವೇಗೌಡರು ಪರಸ್ಪರ ಹೊಗಳಿಕೊಂಡ ಮೇಲಂತೂ ಸಿಎಂ ಹೇಳಿಕೆ ತೀವ್ರ ಸ್ವರೂಪ ಪಡೆದಿದೆ.

    ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಸಿದ್ದರಾಮಯ್ಯ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಯಾವುದಕ್ಕೂ ಇರಲಿ ಅಂತಾ ಸಿಎಂ ಕೆಲ ಜೆಡಿಎಸ್ ಅಭ್ಯರ್ಥಿಗಳ ಜೊತೆ ಡೀಲ್ ಮಾಡಿಕೊಂಡ್ರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ನವಲಗುಂದದಲ್ಲಿ ಜೆಡಿಎಸ್ ಕೋನರೆಡ್ಡಿಯನ್ನು ಸುಲಭವಾಗಿ ಗೆಲ್ಲುವಂತೆ ನೋಡಿಕೊಂಡು, ಒಂದು ವೇಳೆ ಮೈತ್ರಿ ಸಂದರ್ಭ ಬಂದ್ರೆ ಕೋನರೆಡ್ಡಿಯನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು ಸಿಎಂ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

    ಕೋನರೆಡ್ಡಿ ಅವರನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಸಿಎಂ ಸ್ಪರ್ಧಿಸಿರೋ ಬದಾಮಿಯಲ್ಲಿಯೂ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದದ ಚರ್ಚೆ ನಡೆದಿದ್ಯಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

    ಕಾಂಗ್ರೆಸ್-ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬ ಪ್ರಶ್ನೆಗಳಿಗೆ ಪೂರಕ ಎಂಬಂತೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಹಾಗೂ ಬದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್ ಭೇಟಿ ಮಾಡಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.

    ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್, ಎಸ್.ಆರ್.ಪಾಟೀಲರನ್ನ ಭೇಟಿಯಾಗಿದ್ದು ನಿಜ. ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ. ಆಕಸ್ಮಿಕವಾಗಿ ಹೋಟೆಲ್ ನಲ್ಲಿ ಸಿಕ್ಕಿದ್ದರು ಮಾತನಾಡಿಸಿದೆ. ಬಿಜೆಪಿ ನಾಯಕರು ಎದರುಗಡೆ ಸಿಕ್ಕರೆ ಮಾತನಾಡಿಸುವೆ ಇದರಲ್ಲಿ ಯಾವುದೇ ಒಳಒಪ್ಪಂದವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಸೋಲಿನ ಭಯದಿಂದ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಬದಾಮಿ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಅಂತಾ ಸ್ಪಷ್ಟನೆ ನೀಡಿದ್ರು.

    ಇದೇ ವಿಚಾರವಾಗಿ ಮಾತನಾಡಿದ ಎಸ್.ಆರ್.ಪಾಟೀಲ್, ಒಂದೇ ಹೋಟೆಲ್ ನಲ್ಲಿ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ನನ್ನೊಂದಿಗೆ ಚಹಾ ಸೇವಿಸಿದ್ರು. ಭೇಟಿಯ ವೇಳೆ ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ಒಳ ಒಪ್ಪಂದದ ಚರ್ಚೆಯಾಗಿಲ್ಲ. ಹಳೆಯ ಸ್ನೇಹ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ನನ್ನನ್ನು ಭೇಟಿಯಾಗಿದ್ರು ಅಂತ ಪಾಟೀಲ್ ಸಮರ್ಥಿಸಿಕೊಂಡ್ರು.

  • `ರೈತರ ಸಾಲಮನ್ನಾ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಕಳ್ಳತನ ಮಾಡ್ತೀವಿ’

    `ರೈತರ ಸಾಲಮನ್ನಾ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಕಳ್ಳತನ ಮಾಡ್ತೀವಿ’

    ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತರ ಹೆಸರಲ್ಲಿ ಕಳ್ಳರಿಬ್ಬರು ಬ್ಯಾಂಕ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ನವಲಗುಂದ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಕೀಲಿಯನ್ನು ಮುರಿದು ಬ್ಯಾಂಕ್ ಒಳಗಡೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಭಯಭೀತರಾಗಿ ಕಾಲ್ಕಿತ್ತಿದ್ದಾರೆ.

    ಬ್ಯಾಂಕ್ ಮುಂಭಾಗದಲ್ಲಿ ಎರಡು ಬ್ಯಾಗ್‍ಗಳು ಪತ್ತೆಯಾಗಿವೆ. ಬ್ಯಾಗ್‍ನಲ್ಲಿ ಸುತ್ತಿಗೆ ಹಾಗೂ ಒಂದು ಭಿತ್ತಿಪತ್ರ ದೊರಕಿದ್ದು, ಅದರಲ್ಲಿ ರೈತರ ಸಾಲಮನ್ನಾ ಎಲ್ಲಿವರೆಗೂ ಮಾಡಲ್ಲ, ಅಲ್ಲಿಯವರೆಗೂ ನಾವು ಕಳ್ಳತನ ಮಾಡ್ತೀವಿ ಎಂದು ಬರೆಯಲಾಗಿದೆ.

    ಬ್ಯಾಂಕ್ ಮುಂಭಾಗದ ಒಂದು ಸಿಸಿಟಿವಿಯನ್ನು ಕದ್ದಿದ್ದು, ಇನ್ನೊಂದನ್ನು ಮುರಿದು ಹೋಗಿದ್ದಾರೆ. ಕಳ್ಳರು ರೈತರ ಹೆಸರಿನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.