ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಪೂಜಿಸಲ್ಪಡುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯೂ ಪ್ರತಿಷ್ಠಾಪನೆಗೊಂಡಿದೆ. ಶಾರದಾ ಮಾತ್ರೆಗೆ ದಿನಕ್ಕೊಂದು ರೀತಿಯಲ್ಲಿ ವಿಶೇಷ ಅಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರುಗು ನೀಡಲಾಗುತ್ತಿದೆ. ಮಾತೆ ದರ್ಶನಕ್ಕೆ ಬರುವ ಭಕ್ತರು ಅದ್ಧೂರಿ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗೆಯೇ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಾರದಾ ಮಾತೆಗೆ ನವರಾತ್ರಿಯ 8ನೇ ದಿನದ ದಿವ್ಯಾಲಂಕಾರ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…
ಮಂಗಳೂರು: ದಸರಾ ಎಂದರೆ ಮೊದಲು ನೆನಪಾಗುವುದು ಮೈಸೂರು ದಸರಾ(Mysuru Dasara). ಇತ್ತೀಚಿನ ದಿನಗಳಲ್ಲಿ ಮಂಗಳೂರು ದಸರಾ (Mangaluru Dasara) ಕೂಡ ಮೈಸೂರು ದಸರಾದಷ್ಟೇ ಪ್ರಖ್ಯಾತಿ ಪಡೆದಿದೆ. ಇದೀಗ ದಸರಾ ಸಂಭ್ರಮದಲ್ಲಿ ಬೆಳಕಿನ ಚಿತ್ತಾರದಿಂದ ಎಲ್ಲರನ್ನೂ ಸ್ವಾಗತಿಸಲು ಸಿದ್ಧವಾಗಿ ನಿಂತಿದೆ.
ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ (Kudroli Shri Gokarnanatheshwara Kshetra) ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ದಸರಾ ಮೆರವಣಿಗೆ (Dasara Procession) ಹಾದುಹೋಗುವ ನಗರದ ಸುಮಾರು 7ಕಿ.ಮೀ. ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಬರೋಬ್ಬರಿ 22 ಲಕ್ಷ ಬಲ್ಬುಗಳನ್ನು ಬಳಸಿ ದೀಪಾಲಂಕಾರ ಮಾಡಲಾಗಿದೆ. ಈ ಬೆಳಕಿನ ಚಿತ್ತಾರ ಮಂಗಳೂರು ದಸರಾವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿದೆ.ಇದನ್ನೂ ಓದಿ: BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ
7 ಕಿ.ಮೀ. ರಸ್ತೆಯುದ್ದಕ್ಕೂ ಮಾಡಿರುವ ವಿದ್ಯುತ್ ದೀಪಾಲಂಕಾರದಲ್ಲಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ಗಳು ಸೇರಿದಂತೆ ಒಟ್ಟು 22 ಲಕ್ಷಕ್ಕೂ ಅಧಿಕ ಬಲ್ಬ್ಗಳಿಂದ ಶೃಂಗರಿಸಲಾಗಿದೆ. ದಸರಾದ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ಮೊದಲ ದಿನದಿಂದ 10 ದಿನಗಳ ಕಾಲ ಸಂಜೆ 7 ಗಂಟೆಯಾಗುತ್ತಿದ್ದAತೆ ನಗರವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ವಾಹನ ಜನಜಂಗುಳಿಯಿಂದ ಕೂಡಿದ ರಸ್ತೆಗಳು ಇದೀಗ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕಳೆಗಟ್ಟಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿದಿನ ಶಾರದಾ ಮಾತೆಗೆ ವಿಭಿನ್ನ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ. ಹಾಗೆಯೇ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಾರದಾ ಮಾತೆಗೆ ನವರಾತ್ರಿಯ ಆರನೇ ದಿನದ ಶೃಂಗಾರ ಮಾಡಿದ್ದು, ವೈಭವಪೂರಿತ ಅಲಂಕಾರ ದೃಶ್ಯ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…
ಕೊಲ್ಕೋತ್ತಾದ ಕಾಲೇಜು ಚೌಕದ (College Chowk Durga Pandal) ದುರ್ಗಾಪೂಜೆ ನವರಾತ್ರಿ ಪ್ರಸಿದ್ಧ ಪೆಂಡಾಲ್ ಗಳಲ್ಲಿ ಒಂದು. ಈ ದುರ್ಗಾಪೂಜೆ 1948ರಲ್ಲಿ ಸ್ವಾತಂತ್ರ್ಯದ ಮರುವರ್ಷ ಆರಂಭವಾಗಿತ್ತು.
ಒಂದು ಸುಂದರ ಕೆರೆಯ ತಡಿಯಲ್ಲಿರುವ ಕಾಲೇಜ್ ಚೌಕ್ ಪೆಂಡಾಲ್ ಪ್ರಸಿದ್ಧವಾಗಿರುವುದು ಇಲ್ಲಿನ ಭವ್ಯಸುಂದರ ದೀಪಾಲಂಕಾರಕ್ಕಾಗಿ. ಪ್ರತಿವರ್ಷ ಇಲ್ಲಿನ ದೀಪಾಲಂಕಾರದ ವಿನ್ಯಾಸ ಬದಲಾಗುತ್ತದೆ. ಈ ದೀಪಗಳ ವೈಭವ ಕೆರೆಯ ನೀರಿನಲ್ಲಿ ಪ್ರತಿಫಲಿಸುವ ದೃಶ್ಯ ಹೃದಯಂಗಮವಾಗಿರುತ್ತದೆ. ಇಲ್ಲಿ ಪ್ರತಿವರ್ಷ ಬಾಲಕಿಯರನ್ನು ದೇವಿಯ ರೂಪದಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಇದಕ್ಕೆ ʻಕುಮಾರಿ ಪೂಜಾ’ ಎಂದು ಕರೆಯಲಾಗುತ್ತದೆ.
ಕಾಲೇಜ್ ಚೌಕ್ ಪೆಂಡಾಲ್ ಇರುವುದು ಮಧ್ಯ ಕೋಲ್ಕತ್ತಾದ ಕಾಲೇಜ್ ರಸ್ತೆಯಲ್ಲಿ, ಇದು ಕೋಲ್ಕತ್ತಾದ ವಿಶ್ವವಿದ್ಯಾಲಯಕ್ಕೆ ಸಮೀಪದಲ್ಲಿದೆ. ಸೆಂಟ್ರಲ್ ಮೆಟ್ರೋ ಮತ್ತು ಮಹಾತ್ಮಾಗಾಂಧಿ ರಸ್ತೆ ಇಲ್ಲಿಗೆ ಸಮೀಪದಲ್ಲಿದೆ.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ವೈಭವೋಪೇತ ಚಾಲನೆ ಸಿಕ್ಕಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿಧಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರಬನ್ನೂ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಸಂದರ್ಭದಲ್ಲಿ ಶಾರದಾ ಮಾತೆಯ ಅದ್ಧೂರಿ ಅಲಂಕಾರ, ದಸರಾ ಸಂಭ್ರಮದ ಕ್ಷಣಗಳು SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…
– ದಸರಾಕ್ಕೆ ಚಾಲನೆ ನೀಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ
ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnanatheshwara Kshetra) ನಡೆಯುವ ಮಂಗಳೂರು ದಸರಾಕ್ಕೆ ಗುರುವಾರ ಚಾಲನೆ ದೊರೆಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ (Navadurga Idol) ಪ್ರತಿಷ್ಠಾನೆ ನಡೆಯಿತು. ಈ ಬಾರಿಯ ದಸರಾಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಮಹೋತ್ಸವ ‘ಮಂಗಳೂರು ದಸರಾ’ಕ್ಕಿಂದು (Mangaluru Dasara) ವಿದ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್
ಎಲ್ಲಾ ದೇವರನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು, 9 ದಿನಗಳ ಕಾಲ ಪೂಜಾ ಕೈಂಕರ್ಯ ನೆರವೇರಲಿದೆ. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಈ ಬಾರಿಯ ಮಂಗಳೂರು ದಸರಾಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ
ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿಯರನ್ನ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಇದನ್ನೂ ಓದಿ: ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?
ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಅಕ್ಟೋಬರ್ 13 ರಂದು ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನಡೆಸಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಿ, ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು. ಸಂಭ್ರಮದ ಮಂಗಳೂರು ದಸರಾಕ್ಕೆ ನೀವೂ ಬನ್ನಿ.