Tag: Natti

  • ಕುಮಾರಸ್ವಾಮಿ ನಾಟಿ ಲೆಕ್ಕದ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಕುಮಾರಸ್ವಾಮಿ ನಾಟಿ ಲೆಕ್ಕದ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ಕುಮಾರಸ್ವಾಮಿ ಮತ್ತು ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 42 ಲಕ್ಷ ರೂ. ಖರ್ಚಾದ ಬೆನ್ನಲ್ಲೇ ಎಚ್‍ಡಿಕೆ ನಾಟಿ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈ ಪ್ರಶ್ನೆ ಏಳಲಿದೆ ಎಂದು ಮೊದಲೇ ಊಹಿಸಿದ್ದ ಕುಮಾರಸ್ವಾಮಿ ಸರ್ಕಾರದ ದುಡ್ಡನ್ನು ಬಳಸದೇ ಈ ಕಾರ್ಯಕ್ರಮವನ್ನು ನಡೆಸಿದ್ದಾರೆ.

    ಹೌದು. ಮೈತ್ರಿ ಸರ್ಕಾರಕ್ಕೆ ದುಂದುವೆಚ್ಚ ಸರ್ಕಾರ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಸೀತಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸರ್ಕಾರ ದುಡ್ಡಿನಲ್ಲಿ ಯಾವುದೇ ಕಾರಣಕ್ಕೆ ನಡೆಸಬಾರದು ಎಂದು ಸಿಎಂ ಮೊದಲೇ ಅಧಿಕಾರಿಗಳಿಗೆ ಮತ್ತು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಇದನ್ನು ಓದಿ: 7 ನಿಮಿಷದ ಪ್ರಮಾಣವಚನ ಸಮಾರಂಭಕ್ಕೆ 42 ಲಕ್ಷ ರೂ. ಖರ್ಚು: ಯಾರಿಗೆ ಎಷ್ಟು ಖರ್ಚು? ಇಲ್ಲಿದೆ ಮಾಹಿತಿ

    ನಾಟಿ ಕಾರ್ಯಕ್ರಮಕ್ಕೆ 12 ರಿಂದ 15 ಲಕ್ಷ ರೂ. ಖರ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಹಣವನ್ನು ಬಳಸದೇ ಕಾರ್ಯಕ್ರಮವನ್ನು ನಡೆಸುವ ಮೂಲಕ ದುಂದು ವೆಚ್ಚ ಆರೋಪ ಮಾಡುವವರಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಶನಿವಾರ ಕುಮಾರಸ್ವಾಮಿಯವರು ಸೀತಾಪುರದಲ್ಲಿರುವ ಕೆಂಚೇಗೌಡರ ಕುಟುಂಬದ ಐದು ಎಕರೆ ಜಮೀನಿನಲ್ಲಿ 150 ಜನ ರೈತ ಮಹಿಳೆಯರು, 50 ಜನ ರೈತರ ಜೊತೆಯಲ್ಲಿ ನಾಟಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews