Tag: National Women’s Commission

  • ಪಿಂಕಿ-ರಿಂಕಿ ಅವಳಿ ಟೆಕ್ಕಿಗಳನ್ನು ವರಿಸಿದ ಮನ್ಮಥನಿಗೆ ಈಗ ಜೈಲಿನ ಭೀತಿ

    ಪಿಂಕಿ-ರಿಂಕಿ ಅವಳಿ ಟೆಕ್ಕಿಗಳನ್ನು ವರಿಸಿದ ಮನ್ಮಥನಿಗೆ ಈಗ ಜೈಲಿನ ಭೀತಿ

    ಮುಂಬೈ: ಮಹಾರಾಷ್ಟ್ರದ (Maharashtra) ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಐಟಿ ಎಂಜಿನಿಯರ್ (IT Engineer) ಆಗಿರುವ ಅವಳಿ ಸಹೋದರಿಯರಿಬ್ಬರು ಒಬ್ಬನೇ ವ್ಯಕ್ತಿಯನ್ನು ಮದುವೆಯಾದರು (Marriage). ಇದೀಗ ಮದುವೆಯಾದ ಮನ್ಮಥನಿಗೆ ಜೈಲಿನ ಭೀತಿ ಎದುರಾಗಿದೆ.

    ಅವಳಿ ಸಹೋದರಿಯರನ್ನ ವರಿಸಿದ್ದ ಮಲಶಿರಾಸ್ ತಾಲೂಕಿನ ನಿವಾಸಿ ಅತುಲ್ ಉತ್ತಮ್ ಔತಾಡೆ ಮದುವೆ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಇರಲು ಒಂದೇ ವ್ಯಕ್ತಿಯನ್ನು ಮದುವೆಯಾದ ಅವಳಿ ಟೆಕ್ಕಿಗಳು

    ವೀಡಿಯೋ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು (Police) ಅತುಲ್ ವಿರುದ್ಧ ದ್ವಿಪತ್ನಿತ್ವದ ಆರೋಪ ಹೊರಿಸಲಾಗಿದೆ. ಇದು ಕಾನೂನುಬಾಹಿರವಾಗಿದ್ದು, 7 ವರ್ಷ ಶಿಕ್ಷೆಗೆ ಗುರಿಯಾಗಬಹುದು. ಅತುಲ್ ವಿರುದ್ಧ ಐಪಿಸಿ ಸೆಕ್ಷನ್ 494 (ಸಂಗಾತಿ ಜೀವಂತವಾಗಿರುವಾಗ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿರೀಶ್ ಸರ್ದೇಶಪಾಂಡೆ ತಿಳಿಸಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗ (National Women’s Commission)ಮತ್ತು ಮಹಾರಾಷ್ಟ್ರ ಮಹಿಳಾ ಸಂಘ ಸಂಸ್ಥೆಗಳು ಕೂಡ ಮೂವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ. ಇದನ್ನೂ ಓದಿ: ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್‍ಗೆ ಟ್ವಿಸ್ಟ್

    ಏನಿದು ಮ್ಯಾರೇಜ್ ಸ್ಟೋರಿ?
    ಹೌದು ಇತ್ತೀಚೆಗಷ್ಟೇ ಐಟಿ ಎಂಜಿನಿಯರ್‌ಗಳಾದ (IT Engineer) ಅವಳಿ ಸಹೋದರಿ ಪಿಂಕಿ ಮತ್ತು ರಿಂಕಿ ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಂಕಿ ಮತ್ತು ಪಿಂಕಿ ಬಾಲ್ಯದಿಂದಲೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಇಬ್ಬರಿಗೂ ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವಿರಲಿಲ್ಲ. ಇದರಿಂದಾಗಿ ಮದುವೆ ಆಗುವುದಾದರೇ ಇಬ್ಬರು ಒಂದೇ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.

    ಮಲ್ಶಿರಾಸ್ ತಾಲೂಕಿನ ನಿವಾಸಿ ಅತುಲ್ ಉತ್ತಮ್ ಔತಾಡೆ ಎಂಬಾತ ಇವರಿಬ್ಬರಿಗೂ ಪರಿಚಯವಾಗಿದ್ದ. ಅದೇ ಸಮಯಕ್ಕೆ ಪಿಂಕಿ ಮತ್ತು ರಿಂಕಿಯ ತಂದೆಯು ಮರಣ ಹೊಂದಿದ್ದು, ತಾಯಿಯು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ಈ ವೇಳೆ ರಿಂಕಿ ಮತ್ತು ಪಿಂಕಿಯ ಸಹಾಯಕ್ಕೆ ಅತುಲ್ ಧಾವಿಸುತ್ತಿದ್ದ. ಇದೇ ಪರಿಚಯ ಪ್ರೀತಿಗೆ ತಿರುಗಿ ಮೂವರು ಮದುವೆ ಆಗಲು ನಿರ್ಧರಿಸಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಆದರು.

    Live Tv
    [brid partner=56869869 player=32851 video=960834 autoplay=true]

  • ಟಿಕ್‍ಟಾಕ್ ನಿಷೇಧಿಸಲು ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಪತ್ರ

    ಟಿಕ್‍ಟಾಕ್ ನಿಷೇಧಿಸಲು ಕೇಂದ್ರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಪತ್ರ

    ನವದೆಹಲಿ: ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

    ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೆಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.  ಇದನ್ನು ಓದಿ: ಟಿಕ್‍ಟಾಕ್ ಬಳಕೆಯಲ್ಲಿ ವಿಶ್ವದಲ್ಲೇ ಭಾರತ ನಂಬರ್ 1

    ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದಾರೆ.  

    ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.

    ಸದ್ಯ ಸಾಕಷ್ಟು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡುವುದನ್ನು ವೈಭವಿಕರಿಸಲಾಗಿದೆ. ಅಲ್ಲದೇ ಅತ್ಯಾಚಾರಿಗಳನ್ನು ವೈಭವಿಕರಿಸಿ ತೋರಿಸಲಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ #BanTikToklnlndia ಹ್ಯಾಶ್ ಟ್ಯಾಗ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಭಾರತದಲ್ಲಿ ಟಿಕ್‍ಟಾಕ್ ನಿಷೇಧ ಮಾಡಬೇಕು ಎಂಬ ಆಗ್ರಹ ಮತ್ತೊಮ್ಮೆ ಜೋರಾಗಿದೆ.