Tag: National Testing Agency

  • NEET-UG ಕೇಂದ್ರವಾರು ಫಲಿತಾಂಶ ಪ್ರಕಟ

    NEET-UG ಕೇಂದ್ರವಾರು ಫಲಿತಾಂಶ ಪ್ರಕಟ

    ನವದೆಹಲಿ: ನೀಟ್‌-ಯುಜಿ 2024 ಪರೀಕ್ಷೆ (NEET-UG) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಇಂದು ಪ್ರಕಟಿಸಿದೆ. ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಿದೆ.

    ಪರೀಕ್ಷೆ ಬರೆದ ಅಭ್ಯರ್ಥಿಗಳು ಎನ್‌ಟಿಎ NEET ನ ಅಧಿಕೃತ ವೆಬ್‌ಸೈಟ್‌ exams.nta.ac.in/NEET/ ಮತ್ತು neet.ntaonline.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಇದನ್ನೂ ಓದಿ: ಜುಲೈ 20ರಂದು NEET-UG ಫಲಿತಾಂಶ ಪ್ರಕಟಿಸಿ – ಎನ್‌ಟಿಎಗೆ ಸುಪ್ರೀಂ ಆದೇಶ

    ನೀಟ್‌ ಯುಜಿ ಫಲಿತಾಂಶವನ್ನು ಜು.20 ರಂದು ಮಧ್ಯಾಹ್ನ ಒಳಗೆ ಪ್ರಕಟಿಸಬೇಕು ಎಂದು ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿತ್ತು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ. ಆದರೆ ವಿದ್ಯಾರ್ಥಿಗಳ ಹೆಸರನ್ನು ಬಹಿರಂಗಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು.

    ಸಿಜೆಐ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಶನಿವಾರದ ಮಧ್ಯಾಹ್ನದೊಳಗೆ ನಗರ ಮತ್ತು ಕೇಂದ್ರವಾರು ಪ್ರತ್ಯೇಕವಾಗಿ ಫಲಿತಾಂಶಗಳನ್ನು ಪ್ರಕಟಿಸಲು ಆದೇಶಿಸಿತ್ತು. ಇದನ್ನೂ ಓದಿ: NEET: ಪರೀಕ್ಷಾ ಮಂಡಳಿ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕದ್ದಿದ್ದ ಎಂಜಿನಿಯರ್‌ ಬಂಧನ

    ಮೇ 5 ರಂದು 14 ವಿದೇಶಿ ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ ನೀಟ್‌-ಯುಜಿ ಪರೀಕ್ಷೆ ನಡೆಸಲಾಗಿತ್ತು. 23.33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು 1,563 ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂತು. ಇದರ ವಿರುದ್ಧ ದೇಶಾದ್ಯಂತ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

  • UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ

    UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ

    ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಯುಜಿಸಿ-ನೆಟ್‌, ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌, ಎನ್‌ಸಿಇಟಿ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊಸ ದಿನಾಂಕಗಳನ್ನು ಪ್ರಕಟಿಸಿದೆ.

    UGC NET ಜೂನ್ 2024 ಪರೀಕ್ಷೆಗಳನ್ನು ಆಗಸ್ಟ್ 21 ಮತ್ತು ಸೆಪ್ಟೆಂಬರ್ 4 ರ ನಡುವೆ ನಡೆಸಲಾಗುವುದು. ಜಂಟಿ CSIR UGC NET ಅನ್ನು ಜುಲೈ 25 ರಿಂದ ಜುಲೈ 27 ರವರೆಗೆ ಮತ್ತು NCET ಪರೀಕ್ಷೆಗಳನ್ನು ಜುಲೈ 10 ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯನ್ನು ನಾವು ನಿರ್ಮಿಸಿಲ್ಲ, 2009 ರಲ್ಲಿ ಬೇರೊಂದು ಕಂಪನಿ ನಿರ್ಮಿಸಿದೆ: L&T ಸ್ಪಷ್ಟನೆ

    ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ. ಯುಜಿಸಿ-ನೆಟ್ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ. ಈ ಹಿಂದೆ, ಯುಜಿಸಿ ನೆಟ್ ಜೂನ್ 2024 ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆದಿತ್ತು.

    ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಂಬರುವ ಬಜೆಟ್‍ನಲ್ಲಿ ಹೆಜ್ಜಾಲ -ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಸೇರ್ಪಡೆ: ಅಶ್ವಿನಿ ವೈಷ್ಣವ್

  • ನೀಟ್‌, ನೆಟ್‌ ಪರೀಕ್ಷೆಯಲ್ಲಿ ಅಕ್ರಮ – ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮುಖ್ಯಸ್ಥ ವಜಾ

    ನೀಟ್‌, ನೆಟ್‌ ಪರೀಕ್ಷೆಯಲ್ಲಿ ಅಕ್ರಮ – ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮುಖ್ಯಸ್ಥ ವಜಾ

    ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಯುಜಿಸಿ-ನೆಟ್‌ ಪರೀಕ್ಷೆ ಮುಂದೂಡಿಕೆ ಹಾಗೂ ನೀಟ್‌-ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ವಿವಾದದ ಮಧ್ಯೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ಮಹಾನಿರ್ದೇಶಕರನ್ನು ವಜಾಗೊಳಿಸಲಾಗಿದೆ.

    ನೀಟ್‌-ಯುಜಿ ಪರೀಕ್ಷಾ ಅಕ್ರಮ ಮತ್ತು ಯುಜಿಸಿ-ನೆಟ್‌ ಪರೀಕ್ಷೆ ಮುಂದೂಡಿಕೆ ವಿರುದ್ಧ ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಪರೀಕ್ಷಾ ಅಕ್ರಮ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳೂ ಕಿಡಿಕಾರಿವೆ. ಇದನ್ನೂ ಓದಿ: ಭಾನುವಾರ ನಡೆಯಬೇಕಿದ್ದ ನೀಟ್-ಪಿ.ಜಿ ಪರೀಕ್ಷೆ ಮುಂದೂಡಿಕೆ

    ಎನ್‌ಟಿಎಯ ಮಹಾನಿರ್ದೇಶಕರಾಗಿದ್ದ ಸುಬೋಧ್ ಕುಮಾರ್ ಸಿಂಗ್ (Subodh Kumar Singh) ಅವರನ್ನು ವಜಾಗೊಳಿಸಿದ್ದು, ಅವರ ಸ್ಥಾನಕ್ಕೆ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

    ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ನಿಯಮಿತ ಪದಾಧಿಕಾರಿಯ ನೇಮಕದವರೆಗೆ ಅಥವಾ ಮುಂದಿನ ಆದೇಶದವರೆಗೆ NTA ಯ ಮಹಾನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಖರೋಲಾ ಅವರಿಗೆ ನೀಡಲಾಗಿದೆ. ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ

    ಏಜೆನ್ಸಿಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಶಿಫಾರಸು ನೀಡುವ ಸಮಿತಿಯನ್ನು ಸರ್ಕಾರವು ರಚಿಸಿದ ಕೆಲವೇ ಗಂಟೆಗಳ ನಂತರ ಈ ಕ್ರಮವು ಬಂದಿದೆ.