Tag: National Party

  • ಭಾರತ್ ರಾಷ್ಟ್ರ ಸಮಿತಿ – ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ KCR

    ಭಾರತ್ ರಾಷ್ಟ್ರ ಸಮಿತಿ – ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ KCR

    ಹೈದರಾಬಾದ್: 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಷ್ಟ್ರ ಸಮಿತಿ (TRS) ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರು ಬುಧವಾರ ರಾಷ್ಟ್ರೀಯ ಪಕ್ಷವನ್ನು (national party) ಪ್ರಾರಂಭಿಸಿದ್ದಾರೆ. ಹೊಸದಾಗಿ ಪ್ರಾರಂಭವಾದ ರಾಷ್ಟ್ರೀಯ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಎಂದು ಹೆಸರಿಡಲಾಗಿದೆ.

    ಇಂದು ತೆಲಂಗಾಣ ಭವನದಲ್ಲಿ ನಡೆದ ಟಿಆರ್‌ಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಈ ಘೋಷಣೆಯನ್ನು ಮಾಡಲಾಯಿತು. ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ್ ರಾಷ್ಟ್ರ ಸಮಿತಿ (BRS) ಎಂದು ಮರುನಾಮಕರಣ ಮಾಡಲಾಗಿದೆ. ಟಿಆರ್‌ಎಸ್ ಅನ್ನು ಭಾರತ ರಾಷ್ಟ್ರ ಸಮಿತಿಯಾಗಿ ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸುವುದನ್ನು ಪಕ್ಷದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದರು.

    ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾದರೂ ಅದರ ಧ್ವಜ ಅದೇ ಈ ಹಿಂದಿನ ಕಾರಿನ ಚಿಹ್ನೆಯನ್ನೇ ಉಳಿಸಿಕೊಳ್ಳಲಿದೆ. ಆದರೆ ಭಾರತದ ನಕ್ಷೆಯ ರೂಪರೇಖೆಯನ್ನು ಹೊಂದಿರುತ್ತದೆ ಎಂದು ತೆಲಂಗಾಣ ಗೃಹ ಸಚಿವ ಮಹಮ್ಮದ್ ಅಲಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

    ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

    ಹಾಸನ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು? ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.

    ರಾಷ್ಟ್ರೀಯ ಪಕ್ಷಗಳ ಹೇಳಿಕೆ ಕುರಿತು ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಬೆಳಗ್ಗೆ ಎದ್ದರೆ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳನ್ನು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇಲ್ವಾ? ಕಾಂಗ್ರೆಸ್ ನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಎಂಎಲ್‍ಎ, ಎಂಎಲ್‍ಸಿ ಇನ್ನೂ ಬೇರೆ-ಬೇರೆ ಹುದ್ದೆಗಳಲ್ಲಿ ಇದ್ದಾರೆ. ಇವರಿಗೆ ಕುಟುಂಬ ರಾಜಕಾರಣ ಎಂದು ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ಬೆಳಗ್ಗೆ ಎದ್ದು ಜೆಡಿಎಸ್ ಕುಟುಂಬ ರಾಜಕಾರಣ ಅನ್ನೋದು ಬಿಟ್ಟರೆ ಜಿಲ್ಲೆಗೆ ಅವರ ಕೊಡುಗೆ ಏನು? ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು? ಕಾಂಗ್ರೆಸ್ ನಲ್ಲಿ ಎಷ್ಟು ಕುಟುಂಬದವರು ರಾಜಕೀಯ ಹುದ್ದೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಲಿ. ಪ್ರಧಾನಿ ಮೋದಿ ಅವರು ಬಿಜೆಪಿಯಲ್ಲಿ 75 ವರ್ಷ ಆದವರು ಅಧಿಕಾರದಲ್ಲಿ ಇರೋ ಹಾಗಿಲ್ಲ ಎಂಬ ಕಾನೂನು ಮಾಡಿದ್ದಾರೆ. ಅದೇ ರೀತಿ ಕುಟುಂಬದಲ್ಲಿ ಒಬ್ಬರು ರಾಜಕೀಯಕ್ಕೆ ನಿಲ್ಲಲಿ ಎಂದು ಬಿಲ್ ತರಲಿ ಎಂದು ಸವಾಲು ಹಾಕಿದರು.

    ದುಡ್ಡಿನಿಂದ ರಾಜಕೀಯ ಮಾಡಲು ಆಗಲ್ಲ. ಜನತೆ, ದೇವರ ಆಶೀರ್ವಾದ ಇರುವವರೆಗೂ ರಾಜಕೀಯ ಮಾಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಪಕ್ಷ ಮುಗಿಸುತ್ತಾರೆ. ನೆಹರು ಕಾಲದ ಕಾಂಗ್ರೆಸ್ ಈಗ ಇಲ್ಲ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಡಬಲ್ ಇಂಜಿನ್ ಸರ್ಕಾರ ಇತ್ತು. ಆಗ ಕಾಡಾನೆ ಸಮಸ್ಯೆ ಏಕೆ ಪರಿಹರಿಸಲಿಲ್ಲಾ ಎಂದು ಟೀಕಿಸಿದರು.

    ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿರುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಯಾರು ಅರ್ಜಿ ಹಾಕಿಕೊಂಡಿದ್ದಾರೆ ಗೊತ್ತಿಲ್ಲ. ನಾವು ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇವೆ. ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ: ಗರ್ಭಿಣಿ ಮಗಳ ತಲೆಯನ್ನು ಕತ್ತರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಪಾಪಿ ಅಮ್ಮ-ಮಗ 

    ರಾಜ್ಯದಲ್ಲಿ ಬಿಸಿ ಟೀಂ ಇದೆ. ಬಿ ಅಂದರೆ ಬಿಜೆಪಿ, ಸಿ ಅಂದರೆ ಕಾಂಗ್ರೆಸ್. ನಮಗೆ ಬಿಸಿ ಟೀಂ ಬೇಡ. ಬಿಸಿ ಟೀಂ ನಿಂದ ಏನು ಸಿಕ್ಕಲ್ಲ. ನಮ್ಮದು ಜೆಡಿಎಸ್, ಭತ್ತದ ತೆನೆ ಹೊತ್ತ ಮಹಿಳೆ ಗುರುತು. ಮಹಿಳೆ ಹೊಟ್ಟೆ ಹಸಿದವರಿಗೆ ಅನ್ನ ನೀಡುತ್ತಾಳೆ. ಬಡವರ ಕಷ್ಟಕ್ಕೆ ನೆರವಾಗುತ್ತಾಳೆ. ಭತ್ತದಿಂದ ಅನ್ನ, ರೈತರಿಗೆ ಅನ್ನ ನೀಡುತ್ತೇವೆ. ನಮ್ಮದು ಜೆಡಿಎಸ್, 2023ಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.

    ಕಾಂಗ್ರೆಸ್ ನ ಹಿರಿಯ ಮುಖಂಡ ಗುಲಾಬ್ ನಬಿ ಅಜಾದ್ ಅವರು ಅಲ್ಪಸಂಖ್ಯಾತರ ಮಹಾನ್ ನಾಯಕ. ಕಾಂಗ್ರೆಸ್ ನ ಸ್ತಂಭ ಅವರು. ಅಂತಹವರನ್ನೆ ಬುಡಸಮೇತ ಕಿತ್ತು ಹಾಕಿದ್ದಾರೆ. ಇಲ್ಲಿ ಒಬ್ಬ ಮುಖಂಡನನ್ನು ಇಟ್ಟುಕೊಂಡಿದ್ದಾರೆ. ಅವರಿಂದ ಮಾಜಿ ಪ್ರಧಾನಿ ದೇವೇಗೌಡರನ್ನು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಬೈಯ್ಯದಿದ್ದರೆ ಅವರಿಗೆ ಊಟ ಸೇರಲ್ಲ. ಕಾಂಗ್ರೆಸ್ ನನ್ನು ನಾವ್ಯಾರು ತೆಗೆಯಬೇಕಿಲ್ಲ. 26 ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಿದ್ದಾರೆ. 27ನೇಯದು ಇಲ್ಲಿ, ಮನೆಗೆ ಕಳುಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.

  • ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಸೋಲಿನ ಪರಾಮರ್ಶೆ ಸಭೆ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಿದ್ದು ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತಿದೆ. ಇಂತಹ ರಾಜಕಾರಣವನ್ನು ಎಲ್ಲೂ ನೋಡಿಲ್ಲ. ಕಾಂಗ್ರೆಸ್ ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದರು.

    ಜಯನಗರ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಮೋದಿ ವರ್ಸಸ್ ಆಲ್ ಅದರ್ಸ್, ಬಿಜೆಪಿ ವರ್ಸಸ್ ಆಲ್ ಅದರ್ಸ್ ಎನ್ನುವ ರೀತಿಯಾಗಿದೆ. ಕರ್ನಾಟಕದಲ್ಲಿ ಕೂಡ ಅದೇ ವಾತಾವರಣ ಇದೆ ಎಂದರು.

    ಕಾಂಗ್ರೆಸ್ ಜೆಡಿಎಸ್ ಅದೇ ರೀತಿ ಇಲ್ಲೂ ಕುತಂತ್ರ ನಡೆಸುವುದಕ್ಕೆ ಹೊರಟಿದ್ದಾರೆ. ಜನ ಇಂತಹ ಕುತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.