Tag: national park

  • ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು – ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

    ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು – ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

    ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (National Park) ಚೀತಾ ಮರಿಯೊಂದು (Cheetah Cubs) ಮೃತಪಟ್ಟ ಒಂದೇ ವಾರದ ಅಂತರದಲ್ಲಿ ಇನ್ನೆರಡು ಮರಿಗಳು ಗುರುವಾರ ಮೃತಪಟ್ಟಿರುವ ಘಟನೆ ನಡೆದಿದೆ.

    ಈ ವರ್ಷದ ಮಾರ್ಚ್ 24ರಂದು ʻಜ್ವಾಲಾʼ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ಮರಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು ಅದರ ಮೇಲೆ ವೈದ್ಯರು ಸತತ ನಿಗಾ ಇರಿಸಿದ್ದಾರೆ. ಇದನ್ನೂ ಓದಿ: New Parliament Building ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಜೋರು – ವಿಪಕ್ಷಗಳ ಬಹಿಷ್ಕಾರ ಅಸ್ತ್ರಕ್ಕೆ ಪ್ರಧಾನಿ ಮೋದಿ ಕೌಂಟರ್

    ಹೆಚ್ಚಾಗಿ ಚೀತಾ ಮರಿಗಳು 8 ವಾರಗಳಾಗುತ್ತಲೇ ತಮ್ಮ ತಾಯಿಯ ಸುತ್ತ ಸದಾ ಇರುತ್ತವೆ. ಹಾಗೆಯೇ ಈ ಮರಿಗಳೂ ಇದ್ದವು. ಆದರೆ ಚಿರತೆ ತಜ್ಞರ ಪ್ರಕಾರ ಅಫ್ರಿಕಾದಲ್ಲಿ ಚೀತಾ ಮರಿಗಳ ಉಳಿವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸತ್ತ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಜನ ಹುಚ್ಚು ಮೋದಿ ಅಂತಿದ್ದಾರೆ- ಮತ್ತೆ ನಾಲಗೆ ಹರಿಬಿಟ್ಟ ಕೈ ನಾಯಕ ಅಧೀರ್

    ಸಾಂದರ್ಭಿಕ ಚಿತ್ರ

    ಕಳೆದ ಎರಡು ತಿಂಗಳ ಅವಧಿಯಲ್ಲಿ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಮೃತ ಚೀತಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ತರಿಸಲಾಗಿದ್ದ ಮೂರು ಚೀತಾಗಳು ಮೃತಪಟ್ಟಿವೆ. ನಮೀಬಿಯಾದಿಂದ ತರಿಸಲಾಗಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಮಾರ್ಚ್‌ 27 ರಂದು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಆಫ್ರಿಕಾದಿಂದ ತಂದಿದ್ದ ಚೀತಾ ಉದಯ್ ಏಪ್ರಿಲ್ 13ರಂದು ಮೃತಪಟ್ಟಿತ್ತು. ಮೇ 9ರಂದು ದಕ್ಷಿಣ ಆಫ್ರಿಕಾದಿಂದ ತರಲಾದ ದಕ್ಷಾ ಗಂಡು ಚಿರತೆಯೊಂದಿಗಿನ ಸೆಣಸಾಟದ ವೇಳೆ ಉಂಟಾದ ಗಾಯದಿಂದಾಗಿ ಮೃತಪಟ್ಟಿತ್ತು.

  • ಸಿಂಹವನ್ನು ಮುಟ್ಟುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್!

    ಸಿಂಹವನ್ನು ಮುಟ್ಟುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್!

    ಜೊಹಾನ್ಸ್ ಬರ್ಗ್: ಸಫಾರಿ ವೇಳೆ ಮಾರ್ಗ ಮಧ್ಯೆ ಅಡ್ಡ ಬಂದ ಸಿಂಹವನ್ನು ಪ್ರವಾಸಿಗರು ಮುಟ್ಟುತ್ತಿರುವ ಘಟನೆ ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

    ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ವೇಳೆ ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

    ಪ್ರವಾಸಿಗರ ಸಫಾರಿ ವೇಳೆ ಸಿಂಹಗಳ ಗುಂಪೊಂದು ಮಾರ್ಗಮಧ್ಯೆ ಬಂದಿದೆ. ಈ ವೇಳೆ ಸಿಂಹಗಳು ವಾಹನಗಳ ಸುತ್ತ ಸುತ್ತುವರಿಯುತ್ತಿರುವಾಗ ಪ್ರವಾಸಿಗರು ಸಿಂಹಗಳನ್ನು ಮುಟ್ಟಿದ್ದಾರೆ. ಸಿಂಹವು ಪ್ರವಾಸಿಗರ ಕಡೆ ತಿರುಗಿ ಘರ್ಜಿಸಿದಾಗ ಹೆದರಿ ಸಫಾರಿ ವಾಹನದ ಕಿಟಕಿಗಳನ್ನು ಮುಚ್ಚಿಕೊಂಡಿದ್ದಾರೆ. ಅಲ್ಲದೇ ಸಿಂಹಗಳು ವಾಹನದ ನೆರಳಲ್ಲೇ ಮಲಗಿರುವ ವಿಡಿಯೋ ತೆಗೆದು ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿದ್ದಾರೆ. ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

    ಸಿಂಹಗಳು ಮೊದಲು ತಮ್ಮ ಪಾಡಿಗೆ ತಾವು ವಾಹನದ ಸುತ್ತ ಸುತ್ತುವರಿದಿದ್ದವು, ಪ್ರವಾಸಿಗರೂ ಮುಟ್ಟಿದ ಮೇಲೆಯೇ ಅವರ ಮೇಲೆ ಘರ್ಜಿಸಿವೆ.

    ವನ್ಯಜೀವಿ ಪ್ರದೇಶಗಳಾದ ಮರಾ ಹಾಗೂ ಸೆರೆಂಗೆಟಾ ಪ್ರದೇಶಗಳಲ್ಲಿ ಮರಗಳ ನಾಶದಿಂದ ಬಿಸಿಲಿನ ಬೇಗೆಗೆ ಪ್ರಾಣಿಗಳು ತತ್ತರಿಸಿವೆ. ಸಫಾರಿ ವೇಳೆ ವಾಹನಗಳ ಬಳಿ ಬಂದು ಅವುಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಸರ್ವೇಸಾಮಾನ್ಯ ವಿಷಯವಾಗಿದೆ ಎಂದು ವರದಿಯಾಗಿದೆ.

    https://www.youtube.com/watch?v=fpOh7OQpZ4g&feature=youtu.be

  • ವಿಡಿಯೋ: ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ

    ವಿಡಿಯೋ: ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ

    ಬೆಂಗಳೂರು: ಆನೇಕಲ್ ನಲ್ಲಿರೋ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಂದು ಪ್ರಾಣಿ ಅಪಾಯದಲ್ಲಿದೆ.

    ಹೌದು. ಉದ್ಯಾನವನದ ಬೆಂಗಾಲ್ ಟೈಗರ್ಸ್ ಇದ್ದ ಕೇಜ್ ಗೆ ಬಿಳಿ ಹುಲಿಯೊಂದು ದಾರಿ ತಪ್ಪಿ ಬಂದಿದೆ. ಈ ವೇಳೆ ಮೂರು ಬೆಂಗಾಲ್ ಟೈಗರ್ಸ್ ಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿವೆ. ಪರಿಣಾಮ ಬಿಳಿ ಹುಲಿಗೆ ತೀವ್ರ ಗಾಯಗಳಾಗಿದೆ.

    ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸದ್ಯ ಹುಲಿ ಮಲಗಿದಲ್ಲಿಯೇ ಇದ್ದು, ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕೇಜ್ ನಿಂದ ಕೇಜ್ ಗೆ ಸುಲಭವಾಗಿ ಹೋಗಲು ಸಾಧ್ಯವಿರುವುದಿಲ್ಲ. ಆದ್ರೂ ಬಿಳಿ ಹುಲಿ ಹೋದಾಗ ಅಧಿಕಾರಿಗಳು ಕ್ರಮವಹಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಈ ಘಟನೆ ನಡೆದಿದೆ.

    2 ತಿಂಗಳ ಹಿಂದಷ್ಟೇ ಗುಂಡಿಯೊಂದನ್ನು ತೋಡಿ ಅದರಲ್ಲಿ ಝೀಬ್ರಾವೊಂದು ಬಿದ್ದು ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಅದೇ ಡಿಎಫ್‍ಓನಿಂದ ಮತ್ತೊಂದು ಎಡವಟ್ಟು ಎದುರಾಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಇಸ್ರೇಲ್ ನಿಂದ ತಂದಿದ್ದ ಗರ್ಭಿಣಿ ಜೀಬ್ರಾ ಸಾವು

    https://www.youtube.com/watch?v=8sATYADYfzc&feature=youtu.be

    ಇದನ್ನೂ ಓದಿ: ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!