Tag: National Monetisation Pipeline policy

  • ದೇಶದ ಆಸ್ತಿ ಬಿಜೆಪಿ, ಮೋದಿಯ ಸ್ವಂತದ್ದಲ್ಲ: ಮಮತಾ ಬ್ಯಾನರ್ಜಿ

    ದೇಶದ ಆಸ್ತಿ ಬಿಜೆಪಿ, ಮೋದಿಯ ಸ್ವಂತದ್ದಲ್ಲ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ರಾಷ್ಟ್ರೀಯ ನಗದೀಕರಣ ಯೋಜನೆಯ ಮೂಲಕ ದೇಶದ ಆಸ್ತಿ ಮಾರಾಟಕ್ಕೆ ಇಳಿದಿರುವ ನರೇಂದ್ರ ಮೋದಿ ಇದು ಅವರ ಸ್ವಂತ ಆಸ್ತಿಯಲ್ಲ ಎಂಬ ವಿಷಯ ಅರಿವಿರಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

    ಎನ್‍ಎಂಪಿ ಯೋಜನೆಯ ಮೂಲಕ ದೇಶದ ಆಸ್ತಿಯನ್ನು ಮಾರಾಟಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಆಘಾತಕಾರಿಯಾಗಿದೆ. ಬಿಜೆಪಿ ಸರ್ಕಾರ ಆಸ್ತಿ ಮಾರಾಟದಿಂದ ಬರುವ ಹಣವನ್ನು ಚುನಾವಣೆಗಳಲ್ಲಿ ಬಳಸುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ

    ದೇಶಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎಲ್ಲರೂ ಒಟ್ಟಾಗಿ ಸೇರಿ ವಿರೋಧಿಸಲಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅಥವಾ ಮೋದಿಗೆ ಬೇಕಾದಹಾಗೆ ಆಸ್ತಿ ಮಾರಾಟ ಮಾಡಲು ಇದು ಇವರ ಮನೆಯ ಸ್ವತ್ತಲ್ಲ. ಇವರಿಗೆ ನಾಚಿಕೆ ಆಗಬೇಕು ದೇಶದ ಆಸ್ತಿಯನ್ನು ಈ ರೀತಿಯಾಗಿ ಬಳಸಿಕೊಳ್ಳುತ್ತಿರುವುದಕ್ಕೆ. ಇವರಿಗೆ ಮನಸ್ಸು ಬಂದಂತೆ ಮಾರಾಟಮಾಡಲು ಯಾರು ಕೂಡ ಅಧಿಕಾರ ನೀಡಿಲ್ಲ. ಜನ ಈ ನಿರ್ಧಾರದ ವಿರುದ್ಧ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
    ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ – 130 ಕೋಟಿ ರೂ. ನಿರೀಕ್ಷೆ