Tag: National Leaders

  • ಮಂತ್ರಿ ಸ್ಥಾನಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಪಡುತ್ತಿಲ್ಲ: ವಿಜಯೇಂದ್ರ

    ಮಂತ್ರಿ ಸ್ಥಾನಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಪಡುತ್ತಿಲ್ಲ: ವಿಜಯೇಂದ್ರ

    ಶಿವಮೊಗ್ಗ: ನಾವಾಗಿಯೇ ಮಂತ್ರಿ ಆಗಬೇಕು. ರಾಜ್ಯಾಧ್ಯಕ್ಷ ಆಗಬೇಕು ಎನ್ನುವಂತಹ ಪ್ರಶ್ನೆ ಇಲ್ಲ. ಅದಕ್ಕಾಗಿ ಪ್ರಯತ್ನ ಸಹ ಪಡುತ್ತಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಇದ್ದಾರೆ. ಯಾವಾಗ ಯಾವ ಸ್ಥಾನಮಾನ ಕೊಡಬೇಕು ಎಂಬುದನ್ನು ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಈ ಹಿಂದೆ ಅನೇಕ ಹೋರಾಟ ಮಾಡಿದ್ದರು. ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೋರಾಟ ಮಾಡಲಿಲ್ಲ. ನಾವು ಮಾಡುತ್ತಿರುವ ಕೆಲಸವನ್ನು ಜನ ಗುರುತಿಸಬೇಕು. ನನ್ನ ಸಹೋದರ ರಾಘವೇಂದ್ರ ಅವರಾಗಲಿ, ನಾನಾಗಲಿ ಯಾವುದೇ ಸ್ಥಾನ ಗುರುತಿಸಿಕೊಂಡು ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.

    ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಈಡಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗುತ್ತದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರಿಗೆ ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬ ಅಪೇಕ್ಷೆ ಅವರದ್ದಾಗಿದೆ. ಕೆ.ಆರ್.ಪೇಟೆ, ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದೆ. ಆ ಭಾಗದಲ್ಲಿ ಪಕ್ಷವನ್ನು ಇನ್ನು ಗಟ್ಟಿಗೊಳಿಸಲು ಅವಕಾಶ ಇದೆ ಎಂದು ಹೇಳಿದ್ದಾರೆ.

    ಈ ಹಿಂದೆ ನಡೆದ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ 104, 110 ಸ್ಥಾನಕ್ಕೆ ಬಂದು ನಿಂತಿತ್ತು. ಹೀಗಾಗಿಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬುದು ಯಡಿಯೂರಪ್ಪ ಹಾಗು ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರ ಕನಸು ಸಹ ಅದೇ ಆಗಿದೆ. ಆ ಕನಸು ನನಸು ಆಗಬೇಕು ಅಂದರೆ ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡಬೇಕಿದೆ. ಹಾಗಾಗಿಯೇ ಆ ಭಾಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ:3.5 ಕೋಟಿ ಜನರಿಗೆ ಸ್ಮಾರ್ಟ್ ಹೆಲ್ತ್ ಕಾರ್ಡ್ ಘೋಷಿಸಿದ ಒಡಿಶಾ ಸಿಎಂ

  • ಆರ್ಡರ್ ಕೊಟ್ಟ ಗ್ರಾಹಕರು ತಿರುಗಿ ಬಂದಿಲ್ಲ- ಧೂಳು ಹಿಡಿಯುತ್ತಿವೆ ರಾಷ್ಟ್ರ ನಾಯಕರ ಪ್ರತಿಮೆಗಳು

    ಆರ್ಡರ್ ಕೊಟ್ಟ ಗ್ರಾಹಕರು ತಿರುಗಿ ಬಂದಿಲ್ಲ- ಧೂಳು ಹಿಡಿಯುತ್ತಿವೆ ರಾಷ್ಟ್ರ ನಾಯಕರ ಪ್ರತಿಮೆಗಳು

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಜೀ, ಯುವಕರ ಆದರ್ಶ ಪುರುಷ ಸ್ವಾಮಿ ವಿವೇಕಾನಂದ. ಇವ್ರ ಹೆಸರನ್ನ ಹೇಳುವುದಕ್ಕೆ ಹೆಮ್ಮೆ ಆಗುತ್ತೆ. ಆದ್ರೆ ಇಂತಹ ಶ್ರೇಷ್ಠ ನಾಯಕರ ಪ್ರ್ರತಿಮೆಗಳು ಪ್ರತಿಷ್ಠಾಪನೆಯಾಗದೆ ಧೂಳು ಹಿಡಿಯುತ್ತಿವೆ.

    ಹೌದು. ಮಹಾತ್ಮ ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮತ್ತಿತರ ಗಣ್ಯರ ಜಯಂತಿಗಳನ್ನ ಸಡಗರದಿಂದ ಆಚರಿಸ್ತೀವಿ. ಒಂದು ದಿನ ಜೈ ಅಂದು ಸುಮ್ಮನಾಗ್ತೀವಿ. ಮತ್ತೆ ಆ ಪ್ರತಿಮೆಗಳು ನೆನಪಾಗೋದೇ ಮುಂದಿನ ವರ್ಷ ಅವ್ರ ಜಯಂತಿ ಬಂದಾಗ. ಇದು ಒಂದೆಡೆಯಾದ್ರೆ ಬೆಂಗಳೂರಿನ ಹೆಬ್ಬಾಳ ಬಳಿ ಇಂತಹ ಪ್ರತಿಮೆಗಳನ್ನ ಮಾಡುವ ಜಾಗವಿದೆ. ಇಲ್ಲಿಗೆ ಬರುವ ಗ್ರಾಹಕರು ಗಣ್ಯರ ಪ್ರತಿಮೆ ಬೇಕು ಅಂತ ಆರ್ಡರ್ ಕೊಟ್ಟು ಹೋಗ್ತಾರೆ. ಆದ್ರೆ ಪ್ರತಿಮೆಗಳನ್ನ ರೆಡಿ ಮಾಡಿ ಅವು ಧೂಳು ಹಿಡೀತಿದ್ರೂ ಇತ್ತ ತಿರುಗಿ ನೋಡೋದಿಲ್ಲ ಎಂದು ಪ್ರತಿಮೆ ತಯಾರಕ ರಮಣ್ ಹೇಳುತ್ತಾರೆ.+

    16 ಅಡಿಯ ಅಂಬೇಡ್ಕರ್ ಪ್ರತಿಮೆಯೊಂದನ್ನು ಬೆಂಗಳೂರಿನ ಆನಂದ್ ರಾವ್ ಸರ್ಕಲ್‍ನಲ್ಲಿ ಇಡ್ತೀವಿ ಅಂತ ಆರ್ಡರ್ ಕೊಟ್ಟು ಹೋದವ್ರು ಮತ್ತೆ ತಿರುಗಿ ಬಂದಿಲ್ಲ. ಇದನ್ನ ತಯಾರಿಸಿದ ಕಲಾವಿದನಿಗೆ ಈ ಪ್ರತಿಮೆಗಳನ್ನ ಇಟ್ಟುಕೊಳ್ಳಲು ಸ್ಥಳವಿಲ್ಲ. ಎಲ್ಲೆಂದರಲ್ಲಿ ಇಡುವಂತೆಯೂ ಇಲ್ಲ. ಇವ್ರ ಪ್ರತಿಮೆ ಮಾಡಿದ ನಮಗೆ ಬೆಲೆಯೇ ಇಲ್ವಾ ಅಂತಾ ಕಲಾವಿದ ರಮಣ್ ಪ್ರಶ್ನಿಸುತ್ತಾರೆ.