Tag: National Institute of Technology

  • ಹಾಸ್ಟೆಲ್‌ನಲ್ಲೇ ನೇಣುಬಿಗಿದುಕೊಂಡ ವಿದ್ಯಾರ್ಥಿನಿ- ಕಾರಣ ಮಾತ್ರ ಸಸ್ಪೆನ್ಸ್

    ಹಾಸ್ಟೆಲ್‌ನಲ್ಲೇ ನೇಣುಬಿಗಿದುಕೊಂಡ ವಿದ್ಯಾರ್ಥಿನಿ- ಕಾರಣ ಮಾತ್ರ ಸಸ್ಪೆನ್ಸ್

    ಚೆನ್ನೈ: ತಮಿಳುನಾಡಿನ ತಿರುಚ್ಚಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಲ್ಲಿರುವ ತನ್ನ ಹಾಸ್ಟೆಲ್ ಕೋಣೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

    ಮೃತಳನ್ನು ಸೌಮ್ಯಾದೇವಿ (21) ಎಂದು ಗುರುತಿಸಲಾಗಿದ್ದು, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ-ಟೆಕ್ ಓದುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ತೆಲಂಗಾಣದ ಮಾಜಿ ಶಾಸಕನ ಪುತ್ರಿ ಆತ್ಮಹತ್ಯೆ

    crime

    ನಡೆದಿದ್ದೇನು?: ಗುರುವಾರ ತಮಿಳುನಾಡಿನ ಹೊಸ ವರ್ಷದ ರಜಾದಿನವಾಗಿದ್ದರಿಂದ, ನಾನು ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದೆ. ಸಂಜೆ ವಾಪಸ್ ಬಂದಾಗ ಹಾಸ್ಟೆಲ್ ರೂಮಿಗೆ ಬೀಗ ಹಾಕಿತ್ತು. ಬಾಗಿಲು ತಳ್ಳಿ ನೋಡಿದಾಗ, ಸೌಮ್ಯಾದೇವಿ ಸೀಲಿಂಗ್ ಫ್ಯಾನ್‌ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಘಾತವಾಗಿ ಹಾಸ್ಟೆಲ್ ವಾರ್ಡನ್ ಹಾಗೂ ಕಾಲೇಜು ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದೆ ಎಂದು ಸಹವರ್ತಿ ದೇಕ್ಷಣಾಶ್ರೀ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಸಿಡಿ ಕೇಸ್, ಸಂತೋಷ್ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ರಮೇಶ್ ಜಾರಕಿಹೊಳಿ

    ಮಾಹಿತಿ ತಿಳಿದ ತುವಕುಡಿ ಪೊಲೀಸರು, ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಆಕೆಗೆ ಲವ್ ಸಮಸ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.