Tag: National Highways Authority

  • Bengaluru Mysuru Expressway- ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

    Bengaluru Mysuru Expressway- ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಬೆಂಗಳೂರು – ಮೈಸೂರು ದಶಪಥ ರಸ್ತೆ (Mysuru Bengaluru Expressway) ಅಪಘಾತ ವಿಚಾರ ಸದ್ದು ಮಾಡಿದೆ. ಹೆದ್ದಾರಿಯಲ್ಲಿ ಬೈಕ್ ಹಾಗೂ ತ್ರಿಚಕ್ರ ವಾಹನಗಳ ಓಡಾಟ ನಿಷೇಧ ಮಾಡುವಂತೆ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ನಾಯಕ ಮರಿತಿಬ್ಬೇಗೌಡ (Marithibbe Gowda) ಒತ್ತಾಯಿಸಿದ್ದಾರೆ.

    ದಶಪಥ ರಸ್ತೆ ಸಾವಿನ ಹೆದ್ದಾರಿಯಾಗಿದೆ. 6 ತಿಂಗಳಲ್ಲಿ 512 ಅಪಘಾತಗಳಾಗಿವೆ. ಅದರಲ್ಲಿ ಇಲ್ಲಿಯ ವರೆಗೂ 123 ಜನ ಮೃತಪಟ್ಟಿದ್ದಾರೆ. 575 ಜನರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಅನೇಕ ಪ್ರಾಣಿಗಳು ಸತ್ತಿವೆ. ಈ ಹೆದ್ದಾರಿಯಲ್ಲಿ ಫೆನ್ಸಿಂಗ್ ಸರಿಯಾಗಿ ಆಗಿಲ್ಲ. ಮೇಲ್ಸೇತುವೆ ಮಳೆ ಬಂದರೆ ಸೋರುತ್ತಿದೆ. ಹೆದ್ದಾರಿ ಕೆಲಸ ಇನ್ನು 30% ಬಾಕಿ ಇದೆ. ಮದ್ದೂರು ಬಳಿ ಈಗ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಆದರೆ ಸುರಕ್ಷಿತ ಕ್ರಮಗಳು ಸರಿಯಾಗಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ – ಪರಿಷತ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಜಟಾಪಟಿ

    ಹೆದ್ದಾರಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲ. ಅಪಘಾತವಾದರೆ ಅಂಬುಲೆನ್ಸ್ ವ್ಯವಸ್ಥೆ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದಿದ್ದಾರೆ.

    ಇದಕ್ಕೆ ಉತ್ತರ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority) ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಕೇಂದ್ರದ ಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಅಧಿಕಾರಿಗಳು ಸಭೆ ಮಾಡಿ ಕ್ರಮಗಳನ್ನು ಸೂಚಿಸಿದ್ದಾರೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಸರಿ ಮಾಡಿಸುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಶಪಥ ಹೆದ್ದಾರಿ ತಡೆದು ಪ್ರತಿಭಟನೆ – ಲಾಠಿ ಬೀಸಿದ ಪೊಲೀಸರು

    ದಶಪಥ ಹೆದ್ದಾರಿ ತಡೆದು ಪ್ರತಿಭಟನೆ – ಲಾಠಿ ಬೀಸಿದ ಪೊಲೀಸರು

    ಮಂಡ್ಯ: ಮೈಸೂರು-ಬೆಂಗಳೂರು (Mysuru-Bengaluru) ಹೆದ್ದಾರಿಯಲ್ಲಿ ಅಂಡರ್ ಪಾಸ್‌ ನಿರ್ಮಾಣ ಮಾಡದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ (Lathi charge) ಮಾಡಿದ ಘಟನೆ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮಸ್ಥರು ಅಂಡರ್ ಪಾಸ್‍ನ್ನು ತಮ್ಮೂರ ಬಳಿಯೇ ನಿರ್ಮಿಸಬೇಕು ಎಂದು ಈ ಹಿಂದೆ ಸಹ ಪ್ರತಿಭಟನೆ ಮಾಡಿದ್ದರು. ಆದರೆ ಗ್ರಾಮದ ಹೊರಗೆ ಅಂಡರ್ ಪಾಸ್ (Underpass) ನಿರ್ಮಾಣವಾಗಿತ್ತು. ಇದರ ವಿರುದ್ಧ ತಿರುಗಿಬಿದ್ದ ಊರಿನ ಗ್ರಾಮಸ್ಥರು ಇಂದು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಡರ್ ಪಾಸ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದಿಂದ (National Highways Authority) ಅನುಮತಿ ಕೊಡಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.  ಇದನ್ನೂ ಓದಿ: ನನ್ನ ವಿರುದ್ಧ ಡಿಕೆ ಸಹೋದರರಿಬ್ಬರು ಸ್ಪರ್ಧಿಸಲಿ: ಮುನಿರತ್ನ

    ಗ್ರಾಮಸ್ಥರು ರಸ್ತೆಗಳಿಗೆ ಎತ್ತಿನಗಾಡಿಗಳನ್ನು ನುಗ್ಗಿಸಿ, ಬೈಕ್, ಕಾರು, ಆಟೋಗಳನ್ನು ನಿಲ್ಲಿಸಿ ರಸ್ತೆ ವಾಹನಗಳನ್ನು ತಡೆದಿದ್ದಾರೆ. ಪ್ರತಿಭಟನೆಗೆ ರೈತ ಸಂಘ ಸಹ ಬೆಂಬಲ ಕೊಟ್ಟಿದ್ದು ಪ್ರತಿಭಟನೆ ಕಾವು ಹೆಚ್ಚಾಗಿತ್ತು. ಪ್ರತಿಭಟನೆಯಿಂದ ಕಿಲೋ ಮೀಟರ್‍ಗಟ್ಟಲೇ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆದು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ತೆರವುಗೊಳಿಸುವಂತೆ ಪೊಲೀಸರು ಮನವಿ ಮಾಡಿಕೊಂಡರು ಬಗ್ಗದ ಗ್ರಾಮಸ್ಥರ ಮೇಲೆ ಲಾಠಿ ಬೀಸಿ ಗ್ರಾಮಸ್ಥರನ್ನು ಚದುರಿಸಿ ರಸ್ತೆಗೆ ಅಡ್ಡಲಾಗಿರಿಸಿದ್ದ ವಾಹನಗಳು ಹಾಗೂ ಶಾಮಿಯಾನವನ್ನು ತೆರುವುಗೊಳಿಸಿದ್ದಾರೆ. ಗ್ರಾಮಸ್ಥರ ಬೇಡಿಕೆಯನ್ನು ಅಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ಎಸ್ಪಿ ಎನ್.ಯತೀಶ್ ನೀಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ರೈತ (Farmers) ಮುಖಂಡ ಮಧುಚಂದನ್ ಅವರನ್ನು ಬಲವಂತವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ: ಕೆಸಿ ವೇಣುಗೋಪಾಲ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k