Tag: National Heritage Monument

  • ಪಾರಂಪರಿಕ ಸ್ಮಾರಕವಾಗುತ್ತಾ ರಾಮ ಸೇತು? – ಜುಲೈ 26ಕ್ಕೆ ಸುಪ್ರೀಂ ವಿಚಾರಣೆ

    ಪಾರಂಪರಿಕ ಸ್ಮಾರಕವಾಗುತ್ತಾ ರಾಮ ಸೇತು? – ಜುಲೈ 26ಕ್ಕೆ ಸುಪ್ರೀಂ ವಿಚಾರಣೆ

    ನವದೆಹಲಿ: ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈ 26ರಂದು ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿ ನೀಡಿದೆ.

    ಇಂದು ಸುಬ್ರಮಣಿಯನ್‌ ಸ್ವಾಮಿ, ಇದೊಂದು ಸಣ್ಣ ವಿಷಯ. ತುರ್ತು ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾ.ಕೃಷ್ಣ ಮುರಾರಿ ಹಾಗೂ ನಾ. ಹಿಮಾ ಕೊಯ್ಲಿ ಅವರಿದ್ದ ಪೀಠಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ಈ ಮನವಿಗೆ ಸಿಜೆಐ ರಮಣ, ನನ್ನ ನಿವೃತ್ತಿಯ ನಂತರ ವಿಚಾರಣೆಗೆ ಪಟ್ಟಿ ಮಾಡೋಣ ಎಂದು ಹೇಳಿದಾಗ ಕೋರ್ಟ್‌ ಹಾಲ್‌ನಲ್ಲಿ ಕ್ಷಣ ಕಾಲ ನಗೆಯ ವಾತಾವರಣ ಮೂಡಿತು. ನಂತರ ನ್ಯಾ. ರಮಣ ಈ ಅರ್ಜಿಯನ್ನು ಜು.26ಕ್ಕೆ ವಿಚಾರಣೆ ನಡೆಸಲು ಪಟ್ಟಿ ಮಾಡುವಂತೆ ಸೂಚಿಸಿದರು. ಇದನ್ನೂ ಓದಿ: ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವೆಗೆ ಯಾವುದೇ ಹಾನಿ ಮಾಡಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ

    ಅರ್ಜಿ ಸಲ್ಲಿಸಿದ್ದು ಯಾಕೆ?
    ಹಿಂದೂ ಪುರಾಣಗಳಲ್ಲಿ ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸಂಯೋಜನೆಯನ್ನು ರಾಮ ಸೇತು ಕರೆಯಲಾಗುತ್ತದೆ. ಯುಪಿಎ-1 ಅವಧಿಯಲ್ಲಿನ ವಿವಾದಿತ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    2018ರಲ್ಲಿ ಸೇತುಸಮುದ್ರಂ ಯೋಜನೆಗಾಗಿ ಮೊದಲು ನಿಗದಿಯಾಗಿದ್ದ ಮಾರ್ಗಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗುವುದು. ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವೆಗೆ ಯಾವುದೇ ಹಾನಿ ಮಾಡದಂತೆ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಫಿಡವಿಟ್‍ನಲ್ಲಿ ಸುಪ್ರೀಂಗೆ ತಿಳಿಸಿತ್ತು.

    ಕೇಂದ್ರದಿಂದ ಈ ನಿರ್ಧಾರ ಬಂದ ಕೂಡಲೇ ಸುಬ್ರಮಣಿಯನ್‌ ಸ್ವಾಮಿ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವಂತೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]