Tag: National Herald Illegal Case

  • ರಾಹುಲ್‍ಗೆ 11 ಗಂಟೆ ಇಡಿ ಡ್ರಿಲ್‌ – ಇಂದು ಹಾಜರಾಗುವಂತೆ ಸೂಚನೆ

    ರಾಹುಲ್‍ಗೆ 11 ಗಂಟೆ ಇಡಿ ಡ್ರಿಲ್‌ – ಇಂದು ಹಾಜರಾಗುವಂತೆ ಸೂಚನೆ

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಂಸದ ರಾಹುಲ್ ಗಾಂಧಿಗೆ ಸೋಮವಾರ ಸುಮಾರು 11 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕವೂ ಇಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

    RAHUL GANDHI

    ಇಡಿ ಸಮನ್ಸ್ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಇಡಿ ಅಧಿಕಾರಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರೂ ಹಲವು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಸಮರ್ಪಕ ಉತ್ತರ ನೀಡಿಲ್ಲ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ತಳ್ಳಿದ ಪೊಲೀಸರು – ಮೂಳೆ ಮುರಿತಕ್ಕೊಳಗಾದ ಪಿ.ಚಿದಂಬರಂ

    ರಾಹುಲ್ ಗಾಂಧಿ ಹಲವು ಪ್ರಶ್ನೆಗಳಿಗೆ ಪಕ್ಷದ ಹಿರಿಯ ನಾಯಕರು ಹಾಗೂ ಸಂಬಂಧಿಸಿದ ಸಿಬ್ಬಂದಿ ಕೇಳಿ ಉತ್ತರಿಸುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಉತ್ತರದಿಂದ ಸಮಾಧಾನ ಆಗದ ಇಡಿ ಅಧಿಕಾರಿಗಳು ಇಂದು ದಾಖಲೆಗಳ ಸಹಿತ ವಿಚಾರಣೆಗೆ ಬನ್ನಿ ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ರಾಹುಲ್ ಗಾಂಧಿಗೆ ಸಂಕಷ್ಟ – ಇಂದು 2 ಹಂತಗಳಲ್ಲಿ ಇಡಿ ಡ್ರಿಲ್

    ಸೋಮವಾರ ವಿಚಾರಣೆ ವೇಳೆ ಇಡಿ ರಾಹುಲ್ ಗಾಂಧಿಯಿಂದ ಏನೆಲ್ಲಾ ಮಾಹಿತಿ ಪಡೆದಿರಬಹುದು.
    * ಇಡಿ ಅಧಿಕಾರಿಗಳು ಮೊದಲು ರಾಹುಲ್ ಗಾಂಧಿ ಅವರ ಬ್ಯಾಂಕ್ ಅಕೌಂಟ್‍ಗಳ ಮಾಹಿತಿ ಪಡೆದುಕೊಂಡಿದೆ.
    * ನಿಮ್ಮ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್‍ಗಳಿದೆ, ಯಾವ್ಯಾವ ಬ್ಯಾಂಕ್ ಮತ್ತು ಅವುಗಳ ಬ್ರ್ಯಾಂಚ್ ಎಲ್ಲಿದೆ.
    * ವಿಶೇಷವಾಗಿ ವಿದೇಶಿ ಬ್ಯಾಂಕುಗಳ ಬಗ್ಗೆ ಇಡಿ ಮಾಹಿತಿ ಪಡೆದುಕೊಂಡಿದೆ.
    * ಅಲ್ಲದೇ ವಿದೇಶಗಳಲ್ಲಿರುವ ಒಟ್ಟು ಆಸ್ತಿ ಮತ್ತು ಅದರ ಮೌಲ್ಯದ ಬಗ್ಗೆಯೂ ಇಡಿ ಮಾಹಿತಿ ಪಡೆದುಕೊಂಡಿದೆ.
    *ಯಂಗ್ ಇಂಡಿಯಾದಲ್ಲಿ ರಾಹುಲ್ ಗಾಂಧಿ ಅವರ ಪಾತ್ರದ ಬಗ್ಗೆ ಅಧಿಕಾರಿಗಳು ಸುದೀರ್ಘ ಮಾಹಿತಿ ಪಡೆದುಕೊಂಡಿದ್ದಾರೆ.
    * ಯಂಗ್ ಇಂಡಿಯಾದಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಷೇರುಗಳನ್ನು ಹೊಂದಿದ್ದೀರಿ? ಇತರರಿಗೆ ಯಾಕೆ ನೀಡಿಲ್ಲ?
    * ನ್ಯಾಷನಲ್ ಹೆರಾಲ್ಡ್ ಖರೀದಿಗೂ ಮುನ್ನ ಎಜಿಎಲ್ ಷೇರುದಾರರ ಜೊತೆಗೆ ಮಾತುಕತೆ ನಡೆಸಿದ್ದೀರಾ?
    * ನ್ಯಾಷನಲ್ ಹೆರಾಲ್ಡ್ ಅನ್ನು ಮತ್ತೆ ಆರಂಭಿಸಲು ಕಾಂಗ್ರೆಸ್ ಏಕೆ ಬಯಸಿತು?
    * ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮತ್ತು ನ್ಯಾಷನಲ್ ಹೆರಾಲ್ಡ್‌ ಆಸ್ತಿಗಳ ವಿವರಗಳನ್ನು ನೀಡಬಹುದೇ? ಅಕ್ರಮ ಹಣ ವರ್ಗಾವಣೆ ಅನುಮಾನದ ಮೇಲೆ ಯಂಗ್ ಇಂಡಿಯಾ ಜೊತೆಗೆ ನಂಟಿರುವ ಹಲವು ಶೆಲ್ ಕಂಪನಿಗಳ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.
    * ಶೆಲ್ ಕಂಪನಿಗಳು ಯಾವುವು ಮತ್ತು ಅವುಗಳಿಂದ ಯಂಗ್ ಇಂಡಿಯಾದ ಬಂದಿರುವ ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಶೆಲ್ ಕಂಪನಿಗಳು ಮತ್ತು ಸಾಲದ ವಹಿವಾಟುಗಳ ಬಗ್ಗೆ ರಾಹುಲ್ ಗಾಂಧಿ ಪೂರ್ಣ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಸಂಸ್ಥೆಯಲ್ಲಿರುವ ಇತರೆ ಸದಸ್ಯರಿಂದ ಮಾಹಿತಿ ಪಡೆದು ಉತ್ತರಿಸುವ ಭರವಸೆ ನೀಡಿದ್ದಾರೆ.
    * ವಿಚಾರಣೆ ವೇಳೆ ಕೇವಲ ಪ್ರಾಥಮಿಕ ಹಂತದ ಮಾಹಿತಿಯನ್ನು ಮಾತ್ರ ಕಲೆ ಹಾಕಿರುವ ಇಡಿ ವಿದೇಶಿ ಬ್ಯಾಂಕ್ ಖಾತೆ, ಆಸ್ತಿ ಹಾಗೂ ಶೆಲ್ ಕಂಪನಿಗಳ ಹಣಕಾಸು, ಹಾಗೂ ಎರಡು ಸಂಸ್ಥೆಗಳ ನಡುವೆ ನಡೆದ ಸಾಲದ ವಹಿವಾಟುಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ದಾಖಲೆಗಳೊಂದಿಗೆ ನೀಡುವಂತೆ ಸೂಚಿಸಿದ್ದಾರೆ.