Tag: national green tribunal

  • ಬ್ರಿಜ್ ಭೂಷಣ್ ವಿರುದ್ಧ ಅಕ್ರಮ ಗಣಿಗಾರಿಕೆ ತೂಗುಗತ್ತಿ – ತನಿಖೆಗೆ ಆದೇಶಿಸಿದ ನ್ಯಾಯಾಲಯ

    ಬ್ರಿಜ್ ಭೂಷಣ್ ವಿರುದ್ಧ ಅಕ್ರಮ ಗಣಿಗಾರಿಕೆ ತೂಗುಗತ್ತಿ – ತನಿಖೆಗೆ ಆದೇಶಿಸಿದ ನ್ಯಾಯಾಲಯ

    ನವದೆಹಲಿ: ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಇದೀಗ ಹೊಸ ಕಾನೂನು ತೊಂದರೆಗೆ ಸಿಲುಕಿದ್ದಾರೆ. ಗೊಂಡಾದಲ್ಲಿದಲ್ಲಿರುವ ಅವರ ಕಂಪನಿಯು ಅಕ್ರಮ ಮರಳು ಗಣಿಗಾರಿಕೆ (Illegal Mining) ಮತ್ತು ಖನಿಜಗಳ ಸಾಗಾಣಿಕೆ ನಡೆಸಿ ಸರಯು ನದಿಗೆ ಹಾನಿ ಉಂಟು ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ.

    ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠವು (National Green Tribunal) ಅರಣ್ಯ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್, ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗೊಂಡ ಜಿಲ್ಲಾ ಮ್ಯಾಜಿಸ್ಟ್ರೇಟ್‍ನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಿದೆ. ಪ್ರಕರಣದ ಬಗ್ಗೆ ಒಂದು ವಾರದೊಳಗೆ ಸಮಿತಿಯ ಸಭೆ ನಡೆಸುವಂತೆ ಸೂಚಿಸಿದೆ. ಬಳಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ಡಾ. ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ದೆಹಲಿಯ ಎನ್‍ಜಿಟಿಯ ಪ್ರಧಾನ ಪೀಠವು ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ‌

    ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕಂಪನಿ ಮಜರತ್, ಜೈತ್‍ಪುರ, ನವಾಬ್‍ಗಂಜ್, ತಹಸಿಲ್ ತರಬ್‍ಗಂಜ್ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಪ್ರತಿದಿನ ಓವರ್‌ಲೋಡ್ ಮಾಡಿದ 700 ಕ್ಕೂ ಹೆಚ್ಚು ಟ್ರಕ್‍ಗಳ ಮೂಲಕ ಅಕ್ರಮವಾಗಿ 20 ಲಕ್ಷ ಕ್ಯೂಬಿಕ್ ಮೀಟರ್ ಅಳತೆಯ ಮರಳು ಮತ್ತು ಖನಿಜಗಳನ್ನು ಸಾಗಿಸಲಾಗಿದೆ. ಇದರಿಂದ ಪಟ್ಪರ್ ಗಂಜ್ ಸೇತುವೆ ಮತ್ತು ರಸ್ತೆಗೆ ಹಾನಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಮಿತಿಯು ಎರಡು ತಿಂಗಳೊಳಗೆ ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

    ಬ್ರಿಜ್ ಭೂಷಣ್ ವಿರುದ್ಧ ಕೊಲೆ ಯತ್ನ, ಗಲಭೆ, ಭೂಮಾಫಿಯಾ ಮತ್ತು ಇತರ ಗಂಭೀರ ಆರೋಪಗಳನ್ನು ಒಳಗೊಂಡಂತೆ 38 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದ್ದರು. ಅವರು 2019ರ ಲೋಕಸಭೆ ಚುನಾವಣೆಗೆ ಮೊದಲು ಸಲ್ಲಿಸಿದ ಅಫಿಡವಿಟ್ ಪ್ರಕಾರ ಈ ಪ್ರಕರಣಗಳಲ್ಲಿ ಖುಲಾಸೆಗೊಂಡಿರುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಕೇರಳದ ಕೊಚ್ಚಿಯಲ್ಲಿ ಕರ್ನಾಟಕ ಪೊಲೀಸರ ಅರೆಸ್ಟ್‌ – ಲಂಚಕ್ಕೆ ಬೇಡಿಕೆಯಿಟ್ಟು ಲಾಕ್‌ ಆದ ಬೆಂಗಳೂರು ಪೊಲೀಸರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಲ್ಲದ ಕಾರ್ಖಾನೆಯಿಂದ ಮಾಲಿನ್ಯ ಆರೋಪ – ಅರ್ಜಿದಾರನಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್

    ಇಲ್ಲದ ಕಾರ್ಖಾನೆಯಿಂದ ಮಾಲಿನ್ಯ ಆರೋಪ – ಅರ್ಜಿದಾರನಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್

    ನವದೆಹಲಿ: ಇಲ್ಲದೇ ಇರುವ ಕಾರ್ಖಾನೆ ವಿರುದ್ಧ ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿಯ (Delhi) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) 25,000 ರೂ. ದಂಡ ವಿಧಿಸಿದೆ.

    ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‍ನಲ್ಲಿರುವ ಭಾರತ್ ಬ್ರಾಸ್ ಇಂಟರ್‌ನ್ಯಾಷನಲ್ ಕಾರ್ಖಾನೆ (Bharat Brass International)‌ ಪರಿಸರಕ್ಕೆ ಹಾನಿಯಾಗುವಂತಹ ವಿಷಕಾರಿ ಪದಾರ್ಥಗಳನ್ನು ಹೊರಚೆಲ್ಲುತ್ತಿದೆ. ಇದು ಪರಿಸರ ನಿಯಮಕ್ಕೆ ವಿರುದ್ಧವಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ಅರ್ಜಿದಾರ ವಸೀಮ್ ಅಹ್ಮದ್ ಆರೋಪಿಸಿದ್ದರು. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಸಮನ್ಸ್ ಕೋರ್ಟ್ ಸಮನ್ಸ್

    ಮಾರ್ಚ್‍ನಲ್ಲಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ನ್ಯಾಯಾಲಯ ಮೊರಾದಾಬಾದ್ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಮೇ 9 ರಂದು ಸಮಿತಿಯು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು.

    ವರದಿ ಸಿಕ್ಕ ಬಳಿಕ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್, ಸುಧೀರ್ ಅಗರ್‍ವಾಲ್ ಹಾಗೂ ಪರಿಸರ ತಜ್ಞ ಸದಸ್ಯ ಪ್ರೊ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ, ಆರೋಪ ದೋಷಪೂರಿತವಾಗಿದೆ. ಅಲ್ಲದೆ ಸಮಿತಿ ನಡೆಸಿದ ತನಿಖೆಯ ವೇಳೆ ಆರೋಪಿಸಲಾದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಕಾರ್ಖಾನೆ ಇಲ್ಲ ಎಂದು ತಿಳಿದು ಬಂದಿದೆ. ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಅರ್ಜಿದಾರರು ಮಾಡಿದ್ದಾರೆ ಎಂದು ನ್ಯಾಯಾಲಯ ಗರಂ ಆಗಿದೆ.

    ಅರ್ಜಿದಾರರಿಗೆ ವಿಧಿಸಲಾದ ದಂಡವನ್ನು ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (Pollution Control Board) ಠೇವಣಿ ಇರಿಸಲು ಕೋರ್ಟ್ ಸೂಚಿಸಿದೆ. ದಂಡ ಪಾವತಿಗೆ ವಿಫಲವಾದರೆ ಮುಂದಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಡಿಕೆಶಿ ಒಬ್ಬರೇ ಕೆಲಸ ಮಾಡಿದ್ದರೆ ನಾನ್ಯಾಕೆ ಪ್ರಚಾರದಲ್ಲಿ ತೊಡಗಬೇಕಿತ್ತು?- ಸಿಎಂ ಕುರ್ಚಿಗೆ ಸಿದ್ದು ವಾದ

  • ಕಳಸಾ ಬಂಡೂರಿ ಯೋಜನೆಗೆ ವಿಘ್ನ ದೂರ- ಗೋವಾ ಫಾರ್ವರ್ಡ್ ಪಾರ್ಟಿಗೆ ಮುಖಭಂಗ

    ಕಳಸಾ ಬಂಡೂರಿ ಯೋಜನೆಗೆ ವಿಘ್ನ ದೂರ- ಗೋವಾ ಫಾರ್ವರ್ಡ್ ಪಾರ್ಟಿಗೆ ಮುಖಭಂಗ

    ನವದೆಹಲಿ: ಕಳಸಾ ಬಂಡೂರಿ ಯೋಜನೆಗೆ ಇದ್ದ ವಿಘ್ನಗಳು ದೂರಾಗಿವೆ. ಯೋಜನೆಗೆ ಖ್ಯಾತೆ ತೆಗೆದಿದ್ದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ)ಗೆ ಮುಖಭಂಗವಾಗಿದೆ.

    ಮಹದಾಯಿ, ಕಳಸಾ-ಬಂಡೂರಿ ನಾಲೆಗಳ ತಿರುವು ಯೋಜನೆಗೆ ಅನುಮತಿ ನೀಡಿ ಕೇಂದ್ರ ಸರ್ಕಾರದ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಜಿಎಫ್‍ಪಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ಸಲ್ಲಿಸಿತ್ತು.

    ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿದೆ. ಈ ಮೂಲಕ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಗೋವಾ ಪರ ನಿಲ್ಲದೆ ಕರ್ನಾಟಕ ಬೆಂಬಲ ನೀಡಿದೆ ಎಂದು ದೂರಿದ್ದರು. ಜೊತೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ದಾವಂತ್ ನೇತೃತ್ವದ ಸರ್ವ ಪಕ್ಷಗಳ ನಿಯೋಗವು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು.

    ಕುಡಿಯುವ ನೀರಿಗಾಗಿ ಯೋಜನೆಯೇ ಹೊರತು ವಿದ್ಯುತ್ ಉತ್ಪಾದನೆಗಲ್ಲ. ಹಾಗಾಗಿ ಇಐಎ (ಎನ್ವಿರಾನ್‍ಮೆಂಟ್ ಇಂಪ್ಯಾಕ್ಟ್ ಅಸೆಸ್‍ಮೆಂಟ್) ಅಗತ್ಯ ಇಲ್ಲ ಅಂತ ಅಕ್ಟೋಬರ್ 17ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹೇಳಿತ್ತು. ಆದರೆ ಕರ್ನಾಟಕ ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೆ ಯೋಜನೆ ಮಾಡುತ್ತಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ ದೂರಿತ್ತು.

    ಈ ಸಂಬಂಧ ವಿಚಾರಣೆ ನಡೆಸಿ ಇಂದು ಅರ್ಜಿ ವಜಾಗೊಳಿಸಿರುವ ಹಸಿರು ನ್ಯಾಯಾಧೀಕರಣ, ಈ ಹಂತದಲ್ಲಿ ಅರ್ಜಿಯ ವಿಚಾರಣೆ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಈ ಮೂಲಕ ಗೋವಾ ಫಾರ್ವರ್ಡ್ ಪಾರ್ಟಿಗೆ ಹಿನ್ನಡೆಯಾಗಿದೆ. ಇತ್ತ ಬೆಳಗಾವಿಯ ಖಾನಾಪೂರ ತಾಲೂಕಿನಲ್ಲಿ ಯೋಜನೆ ನಡೆಯುತ್ತಿದೆ.

  • ವಾಯುಮಾಲಿನ್ಯ ನಿಯಂತ್ರಣ ವಿಫಲ – ಎನ್‍ಜಿಟಿಯಿಂದ ದೆಹಲಿ ಸರ್ಕಾರಕ್ಕೆ 25 ಕೋಟಿ ರೂ. ಫೈನ್

    ವಾಯುಮಾಲಿನ್ಯ ನಿಯಂತ್ರಣ ವಿಫಲ – ಎನ್‍ಜಿಟಿಯಿಂದ ದೆಹಲಿ ಸರ್ಕಾರಕ್ಕೆ 25 ಕೋಟಿ ರೂ. ಫೈನ್

    – ಸರ್ಕಾರದ ಖಜಾನೆಯಿಂದ ದಂಡ ಕಟ್ಟುವಂತಿಲ್ಲ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್(ಎಎಪಿ) ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‍ಜಿಟಿ) 25 ಕೋಟಿ ರೂಪಾಯಿಯನ್ನು ದಂಡ ವಿಧಿಸಿದೆ.

    ದೆಹಲಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಾಯು ಮಾಲಿನ್ಯದ ಗುಣಮಟ್ಟವನ್ನು ಪರಿಶೀಲಿಸುವಲ್ಲಿಯೂ ಅಸಮರ್ಥವಾಗಿರುವ ಸರ್ಕಾರದ ವಿರುದ್ಧ ಎನ್‍ಜಿಟಿ ತೀವ್ರ ಅಸಮಾಧಾನ ಹೊರಹಾಕಿದೆ. ಅಲ್ಲದೇ ಸರ್ಕಾರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿಯ ದಂಡವನ್ನು ಸಹ ಹಾಕಿದೆ.

    ದಂಡದ ಹಣವನ್ನು ಸರ್ಕಾರ ಖಜಾನೆಯಿಂದ ನೀಡುವಂತಿಲ್ಲ. ಬದಲಾಗಿ ಸರ್ಕಾರಿ ಅಧಿಕಾರಿಗಳ ಸಂಬಳ ಹಾಗೂ ಮಾಲಿನ್ಯ ಮಾಡಿದ್ದವರಿಂದ ವಸೂಲಿ ಮಾಡಿ ನೀಡುವಂತೆ ಸೂಚನೆ ನೀಡಿದೆ. ಒಂದು ವೇಳೆ ದೆಹಲಿ ಸರ್ಕಾರ 25 ಕೋಟಿ ರೂಪಾಯಿಯನ್ನು ನೀಡಲು ವಿಫಲವಾದರೇ, ಪ್ರತಿ ತಿಂಗಳು 10 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕೆಂದು ಎನ್‍ಜಿಟಿ ಹೇಳಿದೆ.

    ದೆಹಲಿಯ ಗುರುಗ್ರಾಮ, ನೋಯ್ಡಾ, ಪರಿದಾಬಾದ್, ಗಾಜಿಯಾಬಾದ್ ಸೇರಿದಂತೆ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ ಜನರು ವಿಷಯುಕ್ತ ಗಾಳಿ ಸೇವನೆಯಿಂದಾಗಿ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಂಬಂಧ ದೆಹಲಿ ಸರ್ಕಾರದ ವಿರುದ್ಧ ಎನ್‍ಜಿಟಿಯಲ್ಲಿ 6ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಸೋಮವಾರ ಇದರ ವಿಚಾರಣೆ ನಡೆಸಿದ ಎನ್‍ಜಿಟಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಎಎಪಿ ಸರ್ಕಾರಕ್ಕೆ ಛೀಮಾರಿ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಶಿಕಲಾ ಪೊಲಿಟಿಕಲ್ ದರ್ಬಾರ್‍ಗೆ ಬ್ರೇಕ್- ಪ್ರಮಾಣವಚನ ಕಾರ್ಯಕ್ರಮ ರದ್ದು

    ಚೆನ್ನೈ: ತಮಿಳುನಾಡಿಗೆ ಸಿಎಂ ಆಗಬೇಕೆಂಬ ಶಶಿಕಲಾ ನಟರಾಜನ್ ಕನಸಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮ ರದ್ದಾಗಿದೆ.

    ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಒಂದು ವಾರಗಳ ಕಾಲ ತಮಿಳುನಾಡಿನಲ್ಲಿ ಇಲ್ಲದ ಕಾರಣ ಪ್ರಮಾಣವಚನ ಕಾರ್ಯಕ್ರಮವನ್ನ ರಾಜಭವನ ರದ್ದುಗೊಳಿಸಿದೆ. ಈ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿಯೂ ರವಾನೆಯಾಗಿದೆ.

    ತಮಿಳುನಾಡಿನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಂಬೈಗೆ ತೆರಳಿರೋ ರಾಜ್ಯಪಾಲ ವಿದ್ಯಾಸಾಗರ್ ರಾವ್, ಚುನಾವಣೆಯಲ್ಲಿ ಗೆಲ್ಲದೆ ಹಾಗೂ ಯಾವುದೇ ರಾಜಕೀಯ ಅನುಭವ ಇಲ್ಲದ ಶಶಿಕಲಾ ಆಕೆಯ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತೀರ್ಪು ಬಾಕಿ ಇರುವ ಈ ಹೊತ್ತಲ್ಲಿ ಸಿಎಂ ಆಗಬಹುದಾ ಎಂಬ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆದಾಯ ಮೀರಿ ಆಸ್ತಿ ಗಳಿಸಿರೋ ಕೇಸ್‍ನಲ್ಲಿ ಜಯಲಲಿತಾ ಜೊತೆ ಶಶಿಕಲಾ ಹೆಸರು ಇದ್ದು, ಮುಂದಿನ ವಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಬರಲಿದೆ.

  • ಸುಪ್ರೀಂನಲ್ಲಿ ಇಂದಿನಿಂದ ಕಾವೇರಿ ಅರ್ಜಿ ವಿಚಾರಣೆ

    – ಎತ್ತಿನಹೊಳೆ ಬಗ್ಗೆ ಟ್ರಿಬ್ಯುನಲ್ ಅಂತಿಮ ತೀರ್ಪು

    ನವದೆಹಲಿ: ಇಂದಿನಿಂದ ರಾಜ್ಯಕ್ಕೆ ಅಗ್ನಿ ಪರೀಕ್ಷೆ ಶುರುವಾಗಲಿದೆ. ಕಾವೇರಿ ಮೇಲ್ಮನವಿ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂಲ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ.

    ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧೀಕರಣದ ಮೇಲ್ಮನವಿ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿದ್ದ ಮೂಲ ಅರ್ಜಿಗಳನ್ನ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಇಂದಿನಿಂದ ಪ್ರತಿನಿತ್ಯ ಮಧ್ಯಾಹ್ನ ಕಾವೇರಿ ವಿಚಾರಣೆ ನಡೆಯಲಿದ್ದು ಕೆಲವೇ ತಿಂಗಳಲ್ಲಿ ವಿವಾದಕ್ಕೆ ತೆರೆಬಿಳುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಪರಿಣಾಮಕಾರಿ ವಾದ ಮಂಡಿಸಲು ಸಜ್ಜಾಗಿದೆ. ಈ ಸಂಬಂಧ, ರಾಜ್ಯದ ಕಾನೂನು ತಂಡದ ಹಿರಿಯ ವಕೀಲ ನಾರಿಮನ್ ಜೊತೆ ಕಳೆದ ಹದಿನೈದು ದಿನಗಳ ಹಿಂದೆಯೇ ನೀರಾವರಿ ಸಚಿವ ಎಂಬಿ ಪಾಟೀಲ್ ಹಾಗೂ ಕಾನೂನು ಸಚಿವ ಟಿಬಿ ಜಯಚಂದ್ರ ಚರ್ಚೆ ನಡೆಸಿದ್ದಾರೆ.

    ಬೆಂಗಳೂರಿಗೆ ಸಿಗುತ್ತಾ ಕುಡಿಯುವ ನೀರು?: ನ್ಯಾಯಾಧೀಕರಣದ ತೀರ್ಪಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ವಿಚಾರ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಈ ಅಂಶವನ್ನು ಪರಿಗಣಿಸಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿಯೂ ಈ ಬಾರಿ ಕಾನೂನು ಹೋರಾಟ ನಡೆಯಲಿದೆ. ಟ್ರಿಬ್ಯುನಲ್‍ನಲ್ಲಾದ ಎಡವಟ್ಟುಗಳು ಮತ್ತೆ ಮರುಕಳಿಸದೆ ಈ ಬಾರಿಯಾದ್ರು ರಾಜ್ಯದ ರೈತರ ಕಣ್ಣೀರು ನಿಲ್ಲಲಿ ಎಂಬುದು ಎಲ್ಲರ ಆಶಯವಾಗಿದೆ.

    ಏನಾಗಲಿದೆ ಎತ್ತಿನಹೊಳೆ ಭವಿಷ್ಯ?: ಬಯಲು ಸೀಮೆಗೆ ನೀರುಣಿಸೋ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಇಂದು ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಸೋಮವಾರದಂದು ವಿಚಾರಣೆ ನಡೆಸಿದ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಧಿಕರಣ, ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡಿತ್ತು. ಷರತ್ತಿನೊಂದಿಗೆ ಕಾಮಗಾರಿ ಆರಂಭಿಸಲು ಚೆನ್ನೈ ಹಸಿರು ಪೀಠ ಅವಕಾಶ ನೀಡಿದೆ. ಇದ್ರಲ್ಲಿ ಮೂಗು ತೂರಿಸಲ್ಲ ಅಂತ ಹೇಳಿತ್ತು. ಇದ್ರಿಂದ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಿದೆ. ಆದ್ರೆ ಇಂದಿನ ತೀರ್ಪು ಏನಿರಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

    ಅತ್ತ ಮಂಗಳೂರಿನಲ್ಲಿ ಎತ್ತಿನಹೊಳೆ ವಿರೋಧಿ ಹೋರಾಟ ಹೆಚ್ಚಾಗ್ತಿದೆ. ಅಧಿವೇಶನದಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ನಿಲುವಳಿ ಸೂಚನೆ ಮಂಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಜೊತೆಗೆ ಫೆಬ್ರವರಿ 10ರಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ನಿಲುವಳಿ ಮಂಡನೆಗೆ ಸಚಿವರು, ಶಾಸಕರಿಗೆ ತಿಳಿಸಿದ್ದೇವೆ. ಹೋರಾಟ ಹತ್ತಿಕ್ಕಲು ಮುಂದಾದರೆ ಮಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಬಂದ್ ಮಾಡೋದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಎತ್ತಿನಹೊಳೆ ಹೋರಾಟದ ಭವಿಷ್ಯ ಇಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್ ಪೀಠದಲ್ಲಿ ನಿರ್ಧಾರವಾಗಲಿದೆ.