Tag: national flag

  • ಬಿಜೆಪಿ ಸಂಸದರಿಗೆ ಗುಲಾಬಿ ಜೊತೆಗೆ ತ್ರಿವರ್ಣ ಧ್ವಜ ನೀಡಿದ ವಿಪಕ್ಷಗಳು

    ಬಿಜೆಪಿ ಸಂಸದರಿಗೆ ಗುಲಾಬಿ ಜೊತೆಗೆ ತ್ರಿವರ್ಣ ಧ್ವಜ ನೀಡಿದ ವಿಪಕ್ಷಗಳು

    ನವದೆಹಲಿ: ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ತನ್ನ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಮುಂದುವರೆಸಿದೆ. ಜಾಕೆಟ್‌ಗಳು, ಮುಖವಾಡಗಳು ಮತ್ತು ಕಪ್ಪು ಬ್ಯಾಗ್‌ಗಳ ಪ್ರದರ್ಶನದ ನಂತರ ಕಾಂಗ್ರೆಸ್ ನಾಯಕರು ಇಂದು ಬಿಜೆಪಿ ಸಂಸದರಿಗೆ ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡುತ್ತಿರುವುದು ಕಂಡು ಬಂದಿದೆ.

    ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಲೋಕಸಭೆ ಪ್ರವೇಶಿಸಲು ತಮ್ಮ ಕಾರಿನಿಂದ ಇಳಿದ ತಕ್ಷಣ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡಿದರು. ಸಂಸತ್ ಭವನದ ಪ್ರವೇಶ ದ್ವಾರದಲ್ಲಿ ಭಾರತ ಬ್ಲಾಕ್ ನಾಯಕರು ಗುಲಾಬಿಗಳು ಮತ್ತು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿರುವುದು ಕಂಡುಬಂದಿತು. ಇದನ್ನೂ ಓದಿ: ದೆಹಲಿ ಚುನಾವಣೆಗೆ ಕಾಂಗ್ರೆಸ್ ಜೊತೆ ಆಪ್ ಮೈತ್ರಿ ಇಲ್ಲ – ಅರವಿಂದ್ ಕೇಜ್ರಿವಾಲ್

    ನಾವು ಬಿಜೆಪಿ ಸ್ನೇಹಿತರಿಗಾಗಿ ಕಾಯುತ್ತಿದ್ದೇವೆ. ಅವರಿಗೆ ಭಾರತೀಯ ಧ್ವಜ ಮತ್ತು ಗುಲಾಬಿ ಇರುವ ಕಾರ್ಡ್ ನೀಡಲು ನಾವು ಬಯಸಿದ್ದೇವೆ. ರಾಷ್ಟ್ರವು ಅತ್ಯಂತ ಮುಖ್ಯವಾದ ಸಂದೇಶವನ್ನು ಕಳುಹಿಸಲು ನಾವು ಬಯಸಿದ್ದೇವೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ.

    ಅಮೆರಿಕದಲ್ಲಿ ಅದಾನಿ ವಿರುದ್ಧದ ಲಂಚದ ಆರೋಪದ ಕುರಿತು ಚರ್ಚೆಗಳನ್ನು ಕೇಂದ್ರ ಸರ್ಕಾರ ತಪ್ಪಿಸುತ್ತಿದೆ ಎಂದು ಆರೋಪಿಸಿ ಸಂಸತ್ತಿನ ಹೊರಗೆ ಪ್ರತಿಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ, ಉಭಯ ಸದನಗಳು ವಿವಿಧ ವಿಷಯಗಳ ಮೇಲೆ ನಿರಂತರ ಪ್ರತಿಭಟನೆ ನಡೆಸುತ್ತಿವೆ. ಇದನ್ನೂ ಓದಿ: ಯುದ್ಧಪೀಡಿತ ಸಿರಿಯಾದಿಂದ 75 ಭಾರತೀಯರು ಸ್ಥಳಾಂತರ

    ಅದಾನಿ ವಿಷಯದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಒತ್ತಾಯಿಸಿದರೆ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಕೋಟ್ಯಧಿಪತಿ ಲೋಕೋಪಕಾರಿ ಜಾರ್ಜ್ ಸೊರೊಸ್ ಅವರೊಂದಿಗೆ ಸಂಪರ್ಕ ಹೊಂದಿವೆ ಎಂದು ಬಿಜೆಪಿ ಆರೋಪಿಸಿತು. ಸೋರಸ್ ಫೌಂಡೇಶನ್‌ನಿಂದ ಅನುದಾನಿತ ಸಂಸ್ಥೆಯೊಂದಿಗೆ ಒಡನಾಟವಿದೆ ಎಂದು ಆರೋಪಿಸಿ ಚರ್ಚೆಗೆ ಆಗ್ರಹಿಸಿದೆ.

  • ಮಾನವ ಸರಪಳಿ: ಗಡಿ ಜಿಲ್ಲೆಯಲ್ಲಿ 1 ಕಿಮೀ ಧ್ವಜ, ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಅನಾವರಣ

    ಮಾನವ ಸರಪಳಿ: ಗಡಿ ಜಿಲ್ಲೆಯಲ್ಲಿ 1 ಕಿಮೀ ಧ್ವಜ, ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಅನಾವರಣ

    ಚಾಮರಾಜನಗರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ (International Democracy Day) ಅಂಗವಾಗಿ ಹಮ್ಮಿಕೊಂಡಿರುವ ಬೀದರ್‌ನಿಂದ (Bidar) ಚಾಮರಾಜನಗರದವರೆಗೆ (Chamarajnagar) ರಾಜ್ಯದ ಅತಿ ಉದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಧ್ವಜವನ್ನು ಹಿಡಿದು ಏಕತೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ.

    ಚಾಮರಾಜನಗರ ಮತ್ತು ಮೈಸೂರು (Mysuru) ಗಡಿ ಭಾಗವಾದ ಮೂಗೂರು ಕ್ರಾಸ್‌ನಲ್ಲಿ ಆರಂಭಗೊಂಡ ಮಾನವ ಸರಪಳಿ ಚಾಮರಾಜನಗರದ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆ ಬಳಿ ಕೊನೆಗೊಂಡಿತು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾನವ ಸರಪಳಿ ಹಾದು ಹೋಗಿದ್ದ ಮಾರ್ಗದಲ್ಲಿ ಭಾರತದ ಒಂದೊಂದು ರಾಜ್ಯದ ಸಾಂಸ್ಕೃತಿಕ ಧಿರಿಸು ಧರಿಸಿ ವಿವಿಧೆತೆಯಲ್ಲಿ ಏಕತೆಯನ್ನು ಮೆರೆದಿದ್ದಾರೆ.ಇದನ್ನೂ ಓದಿ: ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಾರಿಯಲ್ಲಿ ಸಾಗುತ್ತಿದೆ: ಸಿಎಂ

    ಮಾನವ ಸರಪಳಿಯ ಪ್ರಮುಖ ವೃತ್ತಗಳಲ್ಲಿ ಜಾನಪದ ನೃತ್ಯ ಪ್ರಸ್ತುತ ಪಡಿಸಲಾಯಿತು. ಸೋಲಿಗರ ಗೊರುಕನ, ಜೇನುಕುರುಬರ ನೃತ್ಯ, ಗೊರವರ ಕುಣಿತ, ಹುಲಿ ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು. ಪ್ರಜಾಪ್ರಭುತ್ವದ ಸಂಭ್ರಮಾಚರಣೆ ಹಿನ್ನೆಲೆ ಸರ್ಕಾರಿ ನೌಕರರು, ಕಾಲೇಜಿನ ಉಪನ್ಯಾಸಕರು, ಸಾರ್ವಜನಿಕರು, ರೈತರು, ಕನ್ನಡಪರ ಹೋರಾಟಗಾರರು ಪ್ರತಿನಿಧಿಸಿದರು. ಮಹಿಳೆಯರು ಹಸಿರು ಸೀರೆ, ಪುರುಷರು ಬಿಳಿ ಪಂಚೆ, ಶರ್ಟ್, ಶಲ್ಯ ಧರಿಸಿ ಮಿಂಚಿದರು. ರೈತರು ಹಸಿರು ಟವೆಲ್, ಕನ್ನಡಪರ ಹೋರಾಟಗಾರರು ನಾಡ ಧ್ವಜ, ಹೋರಾಟಗಾರರು ನೀಲಿ ಶಲ್ಯ ಹೊದ್ದಿದ್ದರು. ರಾಮಸಮುದ್ರದಲ್ಲಿ 1 ಕಿಮೀ ಉದ್ದದ ಭಾರತ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಿದ್ದು ಎಲ್ಲರ ಮನ ಗೆದ್ದಿತು. ಗಡಿ ಜಿಲ್ಲೆ ಚಾಮರಾಜನಗರಲ್ಲಿ 25 ಕಿಮೀ ಉದ್ದದ ಮಾನವ ಸರಪಳಿ 19,700 ಮಂದಿ ಸೇರುತ್ತಾರೆ ಎನ್ನಲಾಗಿತ್ತು. ಆದರೆ, ಜಿಲ್ಲಾಡಳಿತದ ನಿರೀಕ್ಷೆ ಹುಸಿಯಾಗಿ ಮಾನವ ಸರಪಳಿ ಅಲ್ಲಲ್ಲಿ ನಿರೀಕ್ಷಿತ ಪ್ರಮಾಣದ ಜನರು ಸೇರದೇ ಇದ್ದದ್ದು ಕಂಡುಬಂದಿತು.ಇದನ್ನೂ ಓದಿ: ‘ಗಿಚ್ಚಿ ಗಿಲಿಗಿಲಿ’ ಫಿನಾಲೆಯಲ್ಲಿ ರಿವೀಲ್ ಆಗ್ತಿದೆ Bigg Boss ಬಿಗ್ ಅಪ್‌ಡೇಟ್- ಏನದು?

  • ಹಾಸನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ – 2,500 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ

    ಹಾಸನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ – 2,500 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ

    ಹಾಸನ: 78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಅಂಗವಾಗಿ ನಗರದಲ್ಲಿ 2,500 ಅಡಿ ಉದ್ದದ ರಾಷ್ಟ್ರಧ್ವಜವನ್ನು (National Flag) ಪ್ರದರ್ಶನ ಮಾಡಲಾಯಿತು.

    ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸ್ವಾತಂತ್ರ್ಯ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಡಿಸಿ ಕಚೇರಿ ಮುಂಭಾಗದಿಂದ ಎನ್.ಆರ್ ವೃತ್ತ, ಹೇಮಾವತಿ ಪ್ರತಿಮೆ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೂ ನಗರದ ಪ್ರಮುಖ ರಸ್ತೆಗಳಲ್ಲಿ 3,000 ವಿದ್ಯಾರ್ಥಿಗಳು (Hassan Students) ಭಾರತದ ಬಾವುಟ ಹಿಡಿದು ಸಾಗಿದರು. ಇದನ್ನೂ ಓದಿ: Independence Day | ರಾಜಸ್ಥಾನಿ ಲೆಹರಿಯಾ ಪೇಟ ಧರಿಸಿ ಗಮನ ಸೆಳೆದ ಮೋದಿ

    ಇತ್ತ ಬೆಂಗಳೂರಿನ ತಮ್ಮ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಗೆ ಶುಭ ಕೋರಿದ್ದಾರೆ. ಇದೇ ವೇಳೆ ಅವರು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ್ದಾರೆ. ನಂತರ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದನ್ನೂ ಓದಿ: ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ

  • ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಬೆಂಗಳೂರು: ಹನುಮಧ್ವಜ (Hanuma Flag) ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು (Keragodu Mandya) ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜ ಗಲಾಟೆ ಕಾಲಿಟ್ಟಿದೆ.

    ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ್ರು. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದ ಜನರು ಪ್ರಶ್ನೆ ಮಾಡ್ತಾ ಇದ್ರು. ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ರು.

    ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ರು. ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲದೇ ಚಾಂದಿನಿ ಚೌಕ್ ನ ಸರ್ಕಲ್ ಗೆ ಪೂರ ತ್ರಿವರ್ಣ ಧ್ವಜ ಹಾರಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಅಕ್ಮಲ್ ಎಂಬವರು ಪ್ರತಿಕ್ರಿಯೆ ನೀಡಿದ್ದು, ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

    ಘಟನೆ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‍ಸಿ ರವಿಕುಮಾರ್ ಕಿಡಿಕಾರಿದ್ದು, ಹನುಮ ಧ್ವಜ ತೆಗೆಸಿದ್ರಿ. ಇದಕ್ಕೆ ಹೇಗೆ ಅನುಮತಿ ಕೊಟ್ಟಿರಿ. ಇದು ಮುಲ್ಲಾ, ಮೌಲ್ವಿ ಸರ್ಕಾರ ಎಂದು ಟೀಕಿಸಿದ್ರು. ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜ ಇಳಿಸಿರೋದನ್ನ ಬಿಜೆಪಿ ಖಂಡಿಸಲಿದೆ. ಹಿಂದೂ ದೇವಸ್ಥಾನಗಳ ಹಣ ಬೇಕು, ಹಿಂದೂ ಎಂಎಲ್‍ಎ ಬೇಕು, ಹಿಂದೂ ಎಂಪಿ ಬೇಕು. ಆದರೆ ಹಿಂದೂ ದೇವರ ಧ್ವಜ ಹಾರಿಸೋದು ಬೇಡ ಅಂತಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 12 ಪ್ರಶ್ನೆ ಕೇಳ್ತಿದ್ದೀವಿ ಎಂದರು.

  • ರಾಷ್ಟ್ರಧ್ವಜಕ್ಕೆ ಅಪಮಾನ – ಮುಸ್ಲಿಂ ಯುವಕನ ಬಂಧನ

    ರಾಷ್ಟ್ರಧ್ವಜಕ್ಕೆ ಅಪಮಾನ – ಮುಸ್ಲಿಂ ಯುವಕನ ಬಂಧನ

    ಕಾರವಾರ: ರಾಷ್ಟ್ರಧ್ವಜಕ್ಕೆ (National Flag) ಅಪಮಾನ ಮಾಡಿದ ಯುವಕನನ್ನು ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

    ಶಿರಸಿ ನಗರದ ರಾಮನ್ ಬೈಲ್‌ನ ಉಮರ್ ಫಾರೂಕ್ (38 ) ಬಂಧಿತ ಯುವಕನಾಗಿದ್ದಾನೆ. ಈದ್ ಮಿಲಾದ್ ಹಬ್ಬದಂದು ರಾಷ್ಟ್ರಧ್ವಜದಲ್ಲಿದ್ದ ಅಶೋಕ ಚಕ್ರ ತೆಗೆದು ಮದೀನ ಗುಂಬಜಿನ ಚಿತ್ರ ಅಳವಡಿಸಿ ಮುಸ್ಲಿಂ (Muslim) ಧರ್ಮದ ಘೋಷಣೆಯ ಅಕ್ಷರದಲ್ಲಿ ಬರೆದು ಮನೆಯ ಮೇಲೆ ಸಾರ್ವಜನಿಕರಿಗೆ ಕಾಣುವಂತೆ ಹಾರಿಸಿದ್ದ. ಇದನ್ನೂ ಓದಿ: 84 ಬ್ಯಾಂಕ್ ಅಕೌಂಟ್, 854 ಕೋಟಿ ವಹಿವಾಟು – ಬೃಹತ್ ಸೈಬರ್ ಕ್ರೈಂ ಜಾಲ ಬೆಳಕಿಗೆ

    ಇದನ್ನು ಗಮನಿಸಿದ ನಗರ ಠಾಣೆಯ ಬೀಟ್ ಪೊಲೀಸರು ಈತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • INDIA ಒಕ್ಕೂಟಕ್ಕೆ ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜ ಬಳಕೆಗೆ ಚಿಂತನೆ

    INDIA ಒಕ್ಕೂಟಕ್ಕೆ ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜ ಬಳಕೆಗೆ ಚಿಂತನೆ

    ನವದೆಹಲಿ: ಇದೇ ಆಗಸ್ಟ್ 31 ರಂದು INDIA ಒಕ್ಕೂಟದ 3ನೇ ಸಭೆ ಮುಂಬೈನಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಒಕ್ಕೂಟಕ್ಕೆ ಸಾಮಾನ್ಯ ಧ್ವಜ (National Flag) ಹೊಂದುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

    ಮೂಲಗಳ ಪ್ರಕಾರ, ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜವನ್ನು ಆಯ್ಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳು ತಮ್ಮದೇ ಆದ ಚಿಹ್ನೆ ಮತ್ತು ಧ್ವಜವನ್ನ ಹೊಂದಿವೆ. ಆದರೆ ಒಕ್ಕೂಟಕ್ಕೆ ಒಂದು ಸಾಮಾನ್ಯ ಧ್ವಜ ಹೊಂದಿವ ಬಗ್ಗೆ ಚರ್ಚೆ ನಡೆದಿದೆ. ಒಕ್ಕೂಟದ ಹೆಸರು INDIA ಆಗಿರುವ ಹಿನ್ನೆಲೆ ಅದಕ್ಕೆ ಪೂರಕ ಎನ್ನುವಂತೆ ರಾಷ್ಟ್ರಧ್ವಜವನ್ನೇ ಹೋಲುವ ಧ್ವಜದ ಮೇಲೆ ಆಸಕ್ತಿ ಹೆಚ್ಚಿದೆ. ಇದನ್ನೂ ಓದಿ: ಯುವತಿ ಪ್ರಕರಣ ವಾಪಸ್ ಪಡೆಯದ್ದಕ್ಕೆ ಆಕೆಯ ತಾಯಿಯನ್ನೇ ವಿವಸ್ತ್ರಗೊಳಿಸಿ ಥಳಿಸಿದ್ರು!

    ಮುಂಬೈ ಸಭೆಯ ನಂತರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರವ್ಯಾಪಿ ರ‍್ಯಾಲಿಗಳು ಪ್ರಾರಂಭವಾಗಲಿದ್ದು, ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 6 ರಿಂದ 7 ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ರ‍್ಯಾಲಿಗಳು ಮತ್ತು ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ವೈಯಕ್ತಿಕ ಗುರಿಯಾಗಿಸುವ ಬದಲು ಸರ್ಕಾರದ ನೀತಿಗಳು, ಜಾತಿ ಆಧಾರಿತ ಜನಗಣತಿ, ಹಣದುಬ್ಬರ, ನಿರುದ್ಯೋಗ ಮತ್ತು ಇತರ ಸಾಮಾಜಿಕ ಕಾಳಜಿಗಳಂತಹ ವಿವಿಧ ವಿಷಯಗಳ ಮೇಲೆ ಟಾರ್ಗೆಟ್‌ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಬಾಲಕಿಯ ಮೇಲೆ ಸರ್ಕಾರಿ ಅಧಿಕಾರಿ ಅತ್ಯಾಚಾರ – ಸ್ವಯಂ ದೂರು ದಾಖಲಿಸಿಕೊಂಡ ದೆಹಲಿ ಹೈಕೋರ್ಟ್

    ವಿರೋಧ ಪಕ್ಷಕ್ಕೆ ಅಧ್ಯಕ್ಷರು, ಒಬ್ಬರು ಮುಖ್ಯ ಸಂಯೋಜಕರು ಮತ್ತು 4 ರಿಂದ 5 ಪ್ರಾದೇಶಿಕ ಸಂಯೋಜಕರನ್ನ ನೇಮಿಸುವ ಪ್ರಸ್ತಾವನೆ ಇದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 40 ಸ್ಥಾನಗಳಿಗೆ ಬೇಡಿಕೆಯಿಟ್ಟಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ನಿಲುವಿನ ಬಗ್ಗೆ ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಚರ್ಚಿಸಲಿದ್ದಾರೆ. ಕೆಲವು ಸಣ್ಣ ಪಕ್ಷಗಳನ್ನ ವಿರೋಧ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

    INDIA ಒಕ್ಕೂಟದ ಮೊದಲ ಸಭೆ ಜೂನ್‌ನಲ್ಲಿ ಪಾಟ್ನಾದಲ್ಲಿ ನಡೆದರೆ, 2ನೇ ಸಭೆ ಜುಲೈ ಮಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನ (NDA) ಎದುರಿಸಲು 26 ಪಕ್ಷಗಳು ಒಟ್ಟಾಗಿ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲಯನ್ಸ್‌ (INDIA) ಒಕ್ಕೂಟ ಸ್ಥಾಪಿಸಿಕೊಂಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    ಕೇಪ್‌ಟೌನ್: ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಕ್ಷಿಣ ಆಫ್ರಿಕಾದ (South Africa) ಜೋಹನ್ಸ್‌ಬಗ್‌ಗೆ (Johannesburg) ತೆರಳಿದ್ದಾರೆ. ಪ್ರವಾಸದಲ್ಲಿರುವ ಮೋದಿಯವರು ಭಾರತದ ತ್ರಿವರ್ಣ ಧ್ವಜಕ್ಕೆ (Tricolor) ಗೌರವ ತೋರಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

    ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ನಾಯಕರನ್ನು ಗ್ರೂಪ್ ಫ್ರೋಟೋ ಕ್ಲಿಕ್ಕಿಸಿಕೊಳ್ಳಲು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರು ವೇದಿಕೆಯ ನೆಲದ ಮೇಲೆ ತಾವು ನಿಲ್ಲಬೇಕಾಗಿದ್ದ ಸ್ಥಳದಲ್ಲಿ ಪುಟ್ಟ ತ್ರಿವರ್ಣ ಧ್ವಜವನ್ನು ಗಮನಿಸಿದ್ದಾರೆ.

    ತಕ್ಷಣ ಮೋದಿ ಧ್ವಜದ ಮೇಲೆ ತಾವು ಕಾಲಿಡದಂತೆ ನೋಡಿಕೊಂಡು, ಪುಟ್ಟ ರಾಷ್ಟ್ರ ಧ್ವಜವನ್ನು ಕೈಗೆತ್ತಿಕೊಂಡು, ತಮ್ಮ ಜೇಬಿನಲ್ಲಿ ಇರಿಸಿಕೊಂಡರು. ಇದನ್ನು ಗಮನಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲೆ ರಾಮಾಫೋಸಾ ಕೂಡಾ ಮೋದಿಯವರನ್ನು ಅನುಸರಿಸಿ, ನೆಲದ ಮೇಲೆ ಇಡಲಾಗಿದ್ದ ದಕ್ಷಿಣ ಆಫ್ರಿಕಾದ ಧ್ವಜವನ್ನು ಎತ್ತಿಕೊಂಡರು. ಇದನ್ನೂ ಓದಿ: ಆ.26ಕ್ಕೆ ಬೆಂಗಳೂರಿಗೆ ಮೋದಿ – ಇಸ್ರೋ ಕೇಂದ್ರ ಕಚೇರಿಗೆ ಭೇಟಿ

    ಇದಾದ ಬಳಿಕ ಮೋದಿ ಅವರು ವೇದಿಕೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

    ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ರಾಷ್ಟ್ರಧ್ವಜಕ್ಕೆ ತೋರಿದ ಗೌರವದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • #HarGharTiranga: ಮೋದಿ ಕರೆಗೆ ಓಗೊಟ್ಟು ಡಿಪಿ ಬದಲಿಸಿ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್‌ ಕಳೆದುಕೊಂಡ BCCI

    #HarGharTiranga: ಮೋದಿ ಕರೆಗೆ ಓಗೊಟ್ಟು ಡಿಪಿ ಬದಲಿಸಿ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್‌ ಕಳೆದುಕೊಂಡ BCCI

    ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ʻಹರ್‌ ಘರ್‌ ತಿರಂಗಾʼ (HarGharTiranga) ಅಭಿಯಾನ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಚಿತ್ರದಲ್ಲಿ ರಾಷ್ಟ್ರ ಧ್ವಜ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಓಗೊಟ್ಟು, ಡಿಪಿ ಬದಲಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟ್ವಿಟ್ಟರ್‌ (X)‌ ಖಾತೆಯಲ್ಲಿ ಬ್ಲೂ ಟಿಕ್‌ ಕಳೆದುಕೊಂಡಿದೆ.

    ಆಗಸ್ಟ್ 15 ರಂದು ದೇಶಾದ್ಯಂತ ಆಚರಿಸಲಾಗುವ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ, ಮೋದಿ (NarendraModi) ಅವರು ತಮ್ಮ ಪ್ರೊಫೈಲ್ ಚಿತ್ರಗಳ ಬದಲಿಗೆ ರಾಷ್ಟ್ರ ಧ್ವಜದ ಚಿತ್ರ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅದರಂತೆ ವೆಸ್ಟ್‌ ಇಂಡೀಸ್‌ ವಿರುದ್ಧ ಅಂತಿಮ ಟಿ20 ಪಂದ್ಯಕ್ಕೂ ಮುನ್ನ ಬಿಸಿಸಿಐ ಟ್ವಿಟ್ಟರ್‌ ಡಿಪಿಯಲ್ಲಿ ಬಿಸಿಸಿಐ ಲೋಗೋ ಬದಲಿಗೆ ರಾಷ್ಟ್ರ ಧ್ವಜದ ಚಿತ್ರ ಹಾಕಿಕೊಂಡಿತು. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್‌ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ

    ಈ ಕಾರಣಕ್ಕೆ ಬಿಸಿಸಿಐ ತನ್ನ ಟ್ವಿಟ್ಟರ್‌ ಹ್ಯಾಂಡಲ್​​ನಲ್ಲಿ ತನ್ನ ಬ್ಲೂ ಟಿಕ್ ಕಳೆದುಕೊಂಡಿತು. ಎಕ್ಸ್​​ನ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಎಕ್ಸ್ ಮ್ಯಾನೇಜ್ಮೆಂಟ್​ನ ಈಗ ಬಿಸಿಸಿಐನ ಪ್ರೊಫೈಲ್ ಅನ್ನು ಪರಿಶೀಲನೆ ನಡೆಸಬೇಕಾಗಿದೆ. ಬಿಸಿಸಿಐ ತನ್ನ ಲೋಗೋ ಬದಲಿಸಿದ ಬಳಿಕ ಎಲ್ಲ ಮಾರ್ಗಸೂಚಿಗಳನ್ನ ಪೂರೈಸಿದರೆ ಮಾತ್ರ ಬ್ಲ್ಯೂಟಿಕ್ ಮರುಸ್ಥಾಪನೆಯಾಗಲಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರ, ಬಿಸಿಸಿಐ ತನ್ನ ಮೂಲ ಲೋಗೋಗೆ ಮರಳಲಿದೆ. ಇದನ್ನೂ ಓದಿ: ನಾಟೌಟ್‌ ಅನ್ನು ಔಟ್‌ ಅಂತಾ ಬಿಟ್ಟುಕೊಟ್ರಾ? – DRS ತೆಗೆದುಕೊಳ್ಳದೇ ವಿಂಡೀಸ್‌ ವಿರುದ್ಧ ಮಕ್ಕರ್‌ ಆದ ಗಿಲ್‌

    ವಿಂಡೀಸ್‌ ವಿರುದ್ಧ ಸರಣಿ ಸೋಲು:
    5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 166 ರನ್‌ಗಳ ಗುರಿ ಪಡೆದ ವಿಂಡೀಸ್ 18 ಓವರ್‌ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 171 ರನ್ ಚಚ್ಚಿ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೊಫೈಲ್ ಫೋಟೋದಲ್ಲಿ ತಿರಂಗಾ ರಾರಾಜಿಸಲಿ – ಭಾರತೀಯರಿಗೆ ಪ್ರಧಾನಿ ಮೋದಿ ಕರೆ

    ಪ್ರೊಫೈಲ್ ಫೋಟೋದಲ್ಲಿ ತಿರಂಗಾ ರಾರಾಜಿಸಲಿ – ಭಾರತೀಯರಿಗೆ ಪ್ರಧಾನಿ ಮೋದಿ ಕರೆ

    ನವದೆಹಲಿ: ಸ್ವಾತಂತ್ರ್ಯ ದಿನದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ (Har Ghar Tiranaga movement) ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತೀಯರಿಗೆ ಕರೆ ನೀಡಿದ್ದಾರೆ.

    ಸಾಮಾಜಿಕ ಮಾಧ್ಯಮಗಳ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು (DP) ತ್ರಿವರ್ಣ ಧ್ವಜವಾಗಿ (Tricolor) ಬದಲಾಯಿಸಲು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ದೇಶ ಹಾಗೂ ಭಾರತೀಯರ ನಡುವೆ ಬಾಂಧವ್ಯವನ್ನು ಗಾಢವಾಗಿಸೋಣ ಎಂದು ಅವರು ಹೇಳಿದ್ದಾರೆ.

    ಆಗಸ್ಟ್ 13ರಿಂದ 15ರ ನಡುವೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸಿ. ತಿರಂಗಾ ಜೊತೆಗಿನ ಫೋಟೋ ತೆಗೆದು ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ (harghartiranga.com.) ಅಪ್‌ಲೋಡ್ ಮಾಡಿ. ಪ್ರತಿಯೊಬ್ಬ ಭಾರತೀಯನೂ ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ಇದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: BMTC ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ- ಫ್ರೀ ಟಿಕೆಟ್ ನೀಡಲು ನಿರಾಕರಿಸಿ ನಿಂದನೆ

    ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನ ಇಂದಿನಿಂದ (ಭಾನುವಾರ) ಪ್ರಾರಂಭವಾಗುತ್ತದೆ. ಹಾಗೂ 77ನೇ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರ ವರೆಗೆ ಮುಂದುವರಿಯುತ್ತದೆ. ನಾಗರಿಕರಲ್ಲಿ ದೇಶಭಕ್ತಿಯ ಪ್ರಜ್ಞೆಯನ್ನು ಬಲಪಡಿಸಲು ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಸ್ಮರಿಸುವ ಸಲುವಾಗಿ ಸಂಸೃತಿ ಸಚಿವಾಲಯ ಈ ಅಭಿಯಾನವನ್ನು ಆಯೋಜಿಸಿದೆ. ಇದನ್ನೂ ಓದಿ: ಲೋಕಸಭಾ ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ, ರಾಷ್ಟ್ರ ಸಮಿತಿಯವರು ತೀರ್ಮಾನ ಮಾಡ್ತಾರೆ: ಈಶ್ವರಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಳಕಲ್‌ ಸೀರೆಯಲ್ಲಿ ಅರಳಿತು ರಾಷ್ಟ್ರಧ್ವಜ, ಚಂದ್ರಯಾನ -3

    ಇಳಕಲ್‌ ಸೀರೆಯಲ್ಲಿ ಅರಳಿತು ರಾಷ್ಟ್ರಧ್ವಜ, ಚಂದ್ರಯಾನ -3

    ಬಾಗಲಕೋಟೆ: ನೇಕಾರ ಕಲಾವಿದ ಮೇಘರಾಜ್ ಗುದಟ್ಟಿ (Meghraj Gudatti) ಅವರು ಇಳಕಲ್‌ ಸೀರೆಯಲ್ಲಿ ರಾಷ್ಟ್ರಧ್ವಜ (National Flag) ಮತ್ತು ಚಂದ್ರಯಾನ-3 (Chandrayaan-3) ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ನಾನು ನನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸಿ ನೇಯ್ಗೆಯ ಮೂಲಕ ಇಸ್ರೋ ವಿಜ್ಞಾನಿಗಳಿಗೆ (ISRO Scientist) ಗೌರವ ಸಲ್ಲಿಸಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಲ ವಾಂತಿ ವಶ – ಇಬ್ಬರು ಅರೆಸ್ಟ್‌

    ದೇಶದಲ್ಲೇ ಪ್ರಖ್ಯಾತಿ ಹಾಗೂ ಪ್ರಸಿದ್ದಿಯನ್ನು ಪಡೆದಿರುವ ಇಳಕಲ್ ಸೀರೆಯ (Ilkal Saree) ಮೇಲೆ ಮೇಘರಾಜ್ ಅವರು ಕಲಾ ನೈಪುಣ್ಯ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಅಯೋಧ್ಯೆಯ ರಾಮಮಂದಿರದ (Ram mandir) ಅಡಿಗಲ್ಲು ಹಾಕುವಾಗ ಸೀರೆಯಲ್ಲಿ ರಾಮಮಂದಿರದ ನೀಲನಕ್ಷೆಯನ್ನು ಬಿಡಿಸಿ ಅಭಿಮಾನ ಮೆರೆದಿದ್ದರು.

    ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಕೊನೆಯ ಜೇಮ್ಸ್‌ (James) ಚಿತ್ರಕ್ಕೆ ವಿಶೇಷ ಶುಭಾಶಯಗಳನ್ನು ಕೋರಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದ್ದರು. ಅಲ್ಲದೇ ಕಾಂತಾರ (Kantara) ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಸೀರೆಯಲ್ಲಿ ಶುಭ ಕೋರಿದ್ದರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]