Tag: national falg

  • ಒಡೆದ ಕಾರಿನ ಹೆಡ್‌ಲೈಟ್‌ಗಳನ್ನು ತ್ರಿವರ್ಣ ಧ್ವಜದಿಂದ ಮುಚ್ಚಿದ- ಮುಂದೇನಾಯ್ತು..?

    ಒಡೆದ ಕಾರಿನ ಹೆಡ್‌ಲೈಟ್‌ಗಳನ್ನು ತ್ರಿವರ್ಣ ಧ್ವಜದಿಂದ ಮುಚ್ಚಿದ- ಮುಂದೇನಾಯ್ತು..?

    ಕೋಲ್ಕತ್ತಾ: ತನ್ನ ಕಾರಿನ ಹೆಡ್‌ಲೈಟ್‌ಗಳನ್ನು ಮುಚ್ಚಲು ತ್ರಿವರ್ಣ ಧ್ವಜವನ್ನು ಬಳಸಿದ್ದಕ್ಕಾಗಿ ಪಶ್ಚಿಮ ಬಂಗಾಳ (West Bengal) ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ವ್ಯಕ್ತಿಯ ಬಳಿ ಧ್ವಜವನ್ನು (Tri Color Flag) ತೆಗೆಯುವಂತೆ ಕೇಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜನವರಿ 3 ರಂದು ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಕಾರಿನ ಹೆಡ್‌ಲೈಟ್‌ಗಳು ಡ್ಯಾಮೇಜ್‌ (Car’s Broken Headlights) ಆಗಿತ್ತು. ಈ ಹಿನ್ನೆಲೆಯಲ್ಲಿ ಆತ ರಾಷ್ಟ್ರಧ್ವಜದಿಂದ ಅವುಗಳನ್ನು ಮುಚ್ಚಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕಾರನ್ನು ತಡೆದಿದ್ದಾರೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ತೋರಿಸುವಂತೆ ಕೇಳಿದ್ದಾರೆ.

    ಬಳಿಕ ಹೆಡ್‌ಲೈಟ್‌ಗಳ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆಯುವಂತೆ ಪೊಲೀಸರು ವ್ಯಕ್ತಿಗೆ ಗದರಿದ್ದಾರೆ. ಆದರೆ ಆತ ನಿರಾಕರಿಸಿದ್ದಾನೆ. ಈ ವೇಳೆ ಪೊಲೀಸರೇ ರಾಷ್ಟ್ರಧ್ವಜವನ್ನು ತೆಗೆದು ಮಡಚಿ ಸುರಕ್ಷಿತವಾಗಿ ಇರಿಸಿದರು. ತ್ರಿವರ್ಣ ಧ್ವಜವನ್ನು ಗೌರವಿಸದಿದ್ದಕ್ಕಾಗಿ ವ್ಯಕ್ತಿಗೆ ಪೊಲೀಸರು ಚೆನ್ನಾಗಿ ಥಳಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪುತ್ರನ ಹತ್ಯೆಗೈದ ಬೆಂಗ್ಳೂರು ಸಿಇಓ ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ

    ಉಲುಬೇರಿಯಾ ಉಪವಿಭಾಗಾಧಿಕಾರಿ ಕಚೇರಿಯ ಹೊರಗೆ ಈ ಘರ್ಷಣೆ ನಡೆದಿದೆ. ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸುವುದು ಅಥವಾ ಅಗೌರವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.

  • ಸ್ವಾತಂತ್ರ್ಯೋತ್ಸವಕ್ಕೆ ಒತ್ತಾಯದಿಂದ ಧ್ವಜ ಮಾರಾಟ ಆರೋಪ

    ಸ್ವಾತಂತ್ರ್ಯೋತ್ಸವಕ್ಕೆ ಒತ್ತಾಯದಿಂದ ಧ್ವಜ ಮಾರಾಟ ಆರೋಪ

    ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಲವಂತವಾಗಿ ಬಡವರಿಗೆ ಧ್ವಜ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

    ಹರಿಯಾಣದ ಕರ್ನಾಲ್‍ನ ಪಡಿತರ ಡಿಪೋಗಳಲ್ಲಿ ಬಲವಂತವಾಗಿ ಧ್ವಜ ಮಾರಾಟ ಮಾಡಲಾಗ್ತಿದೆ. ಧ್ವಜ ಖರೀದಿ ಮಾಡಲೇಬೇಕು, ಇಲ್ಲ ಅಂದ್ರೆ ಈ ತಿಂಗಳ ಪಡಿತರ ನೀಡಲ್ಲ ಎಂಬ ಬೆದರಿಕೆಯನ್ನು ಹಾಕಲಾಗುತ್ತಿದೆ. ಈ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:  RSS ಕಚೇರಿಗೆ ತೆರಳಿ ರಾಷ್ಟ್ರಧ್ವಜ ನೀಡಿದ ಕಾಂಗ್ರೆಸ್ ಯುವ ಕಾರ್ಯಕರ್ತರು

    ಎಐಸಿಸಿ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಬಿಜೆಪಿ ರಾಷ್ಟ್ರೀಯತೆಯನ್ನು ಮಾರಾಟ ಮಾಡುತ್ತಿದೆ. ಬಡವರ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಎಲ್ಲರಲ್ಲಿಯೂ ಅಭಿಮಾನ ಇರುತ್ತೆ. ಆದರೆ ಬಡವರ ಪಡಿತರ ಕಿತ್ಕೊಂಡು ತ್ರಿವರ್ಣ ಧ್ವಜವನ್ನು ಮಾರಾಟ ಮಾಡ್ತಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಇತ್ತ ಡಿಕೆ ಶಿವಕುಮಾರ್ ಕೂಡ, 25 ರೂಪಾಯಿಗೆ ಬಾವುಟ ಮಾರಿ ಮನೆ ಮೇಲೆ ಹಾರಿಸಲು ಹೇಳ್ತಿರೋದು ನಾಚಿಕೆಗೇಡಿನ ವಿಚಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಕರ್ನಾಲ್ ಜಿಲ್ಲಾಡಳಿತ ಡಿಪೋ ಮಾಲೀಕನ ಪರವಾನಗಿ ರದ್ದು ಮಾಡಿ ಕ್ರಮದ ನಾಟಕವಾಗಿದೆ. ಈ ಮಧ್ಯೆ ಹುಬ್ಬಳ್ಳಿಯ RSS ಕಚೇರಿ ಕೇಶವಕುಂಜಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು, ಆರ್‍ಎಸ್‍ಎಸ್ ಮುಖಂಡರ ಕೈಗೆ ರಾಷ್ಟ್ರಧ್ವಜ ಕೊಟ್ಟು ಜೈಹಿಂದ್ ಎಂದು ಹೇಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]