Tag: National Emblem

  • ರಾಷ್ಟ್ರ ಲಾಂಛನಕ್ಕೆ ಅಗೌರವ – ಕೊಳಚೆ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ಅಶೋಕ ಚಕ್ರ

    ರಾಷ್ಟ್ರ ಲಾಂಛನಕ್ಕೆ ಅಗೌರವ – ಕೊಳಚೆ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ಅಶೋಕ ಚಕ್ರ

    ಯಾದಗಿರಿ: 1950ರಲ್ಲಿ ಅಶೋಕ ಚಕ್ರವನ್ನು (Ashoka Chakra) ರಾಷ್ಟ್ರ ಲಾಂಛನವನ್ನಾಗಿ ಮಾಡಲಾಗಿದೆ. ರಾಷ್ಟ್ರ ಲಾಂಛನಕ್ಕೆ ಗೌರವ ಕೊಡಬೇಕಿರುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವೂ ಕೂಡಾ. ಆದರೆ ಯಾದಗಿರಿ (Yadagiri) ಜಿಲ್ಲೆಯ ವಡಗೇರಾದಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರಾಷ್ಟ್ರ ಲಾಂಛನ ಅನಾಥವಾಗಿ ಬೀದಿಯಲ್ಲಿ ನಿಲ್ಲಿಸಲಾಗಿದೆ. ಕೊಳಚೆ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ರಾಷ್ಟ್ರ ಲಾಂಛನವನ್ನು ತಂದಿಡಲಾಗಿದೆ.

    1996ರಲ್ಲಿ ಗ್ರಾಮದಲ್ಲಿ 50-60 ಸಾವಿರ ರೂ. ಖರ್ಚು ಮಾಡಿ ವಡಗೇರಾದ ಮುಖ್ಯದ್ವಾರಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರ ಲಾಂಛನವನ್ನು ಅಳವಡಿಸಲಾಗಿತ್ತು. ಆದರೆ ಕಳೆದ 4-5 ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ವೇಳೆ ರಾಷ್ಟ್ರ ಲಾಂಛನ ತೆಗೆದು ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ಕೊಳಚೆ ಪ್ರದೇಶದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಸ್ವಪಕ್ಷೀಯರ ವಿರುದ್ಧ ರೇಣುಕಾಚಾರ್ಯ ಗರಂ- ಕಾಂಗ್ರೆಸ್ ಜೊತೆ ಸಭೆ ಮಾಡಿದ್ರಾ?

    ಅಂದಿನಿಂದ ಇಂದಿನವರೆಗೂ ರಾಷ್ಟ್ರ ಲಾಂಛನ ಅನಾಥವಾಗಿ ಬಿದ್ದಿರೋದು ಅಧಿಕಾರಿಗಳ ಅವಿವೇಕತನವನ್ನು ಎತ್ತಿ ತೋರಿಸುತ್ತಿದೆ. ಕೂಡಲೇ ರಾಷ್ಟ್ರ ಲಾಂಛನವನ್ನ ಸೂಕ್ತ ಸ್ಥಳದಲ್ಲಿರಿಸಿ, ಗೌರವ ಸೂಚಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಲಿಗೆ ಪೆಟ್ಟಾಗಿದ್ರೂ ಜೈಲಿನ ಗೋಡೆ ಹಾರಿ ಅತ್ಯಾಚಾರಿ ಪರಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣಪತಿ ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ

    ಗಣಪತಿ ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ

    ಶಿವಮೊಗ್ಗ: ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ವೇಳೆ ರಾಷ್ಟ್ರೀಯ ಲಾಂಛನಕ್ಕೆ (National Emblem) ಅಪಮಾನ ನಡೆದಿದೆ.

    ರಾಷ್ಟ್ರೀಯ ಲಾಂಚನದ ಮೇಲೆ ಹಿಂದೂ ಸಂಘಟನೆಗಳು ಕೇಸರಿ ಧ್ವಜ (Saffron Flag) ಹಾರಿಸಿವೆ. ನಗರದ ಅಶೋಕ ರಸ್ತೆಯಲ್ಲಿರುವ ಅಶೋಕ ಸ್ಥಂಭವನ್ನೇ ಕೇಸರಿಮಯ ಮಾಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕೇಸರಿ ಧ್ವಜ ತೆರವು ಮಾಡಿದ್ದಾರೆ. ಈ ಮಧ್ಯೆ, ಬಿಗಿಭದ್ರತೆ ನಡುವೆ ಶೋಭಾ ಯಾತ್ರೆ ನಡೆಯಿತು. ಇದನ್ನೂ ಓದಿ: ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

    ಸಾವಿರಾರು ಮಂದಿ ಶೂಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯರಾತ್ರಿ 12 ಗಂಟೆಗೆ ತುಂಗಾ ನದಿಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ಅತ್ತ ರಾಯಚೂರಿನ ದಡೇಸುಗೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಘರ್ಷಣೆ ನಡೆದಿದೆ. ಮದ್ಯದ ನಶೆಯಲ್ಲಿ ಜಗಳ ಆಗಿ, ಯುವಕರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಮೂರ್ನಾಲ್ಕು ಜನ ಗಾಯಗೊಂಡಿದ್ದಾರೆ. ಇದನ್ನೂ ಓದಿ: ರೇವಣ್ಣನನ್ನು ಹಿಟ್ಲರ್‌ಗೆ ಹೋಲಿಸಿದ ಶಾಸಕ ಪ್ರೀತಂ ಗೌಡ

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರೀಯ ಲಾಂಛನ ಹೊಸ ಶಿಲ್ಪ : ಪ್ರಕಾಶ್ ರೈ ವಿರೋಧ, ಅನುಪಮ್ ಖೇರ್ ಬೆಂಬಲ

    ರಾಷ್ಟ್ರೀಯ ಲಾಂಛನ ಹೊಸ ಶಿಲ್ಪ : ಪ್ರಕಾಶ್ ರೈ ವಿರೋಧ, ಅನುಪಮ್ ಖೇರ್ ಬೆಂಬಲ

    ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪವನ್ನು ಅನಾವರಣಗೊಳಿಸಿದ್ದಾರೆ. ಈ ಶಿಲ್ಪ ಅನಾವರಣಗೊಳ್ಳುತ್ತಿದ್ದಂತೆಯೇ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಲಾಂಛನವು ಸೌಮ್ಯ ರೂಪದಲ್ಲಿತ್ತು. ಇದೀಗ ಮೋದಿ ಅನಾವರಣಗೊಳಿಸಿರುವ ಶಿಲ್ಪವು ಉಗ್ರರೂಪದಲ್ಲಿದೆ ಎಂದು ಟೀಕಿಸಲಾಗುತ್ತಿದೆ. ಮೋದಿ ವಿರೋಧಿಗಳೆಲ್ಲ ರಾಷ್ಟ್ರ ಲಾಂಛನ ವಿರೂಪಗೊಳಿಸಲಾಗಿದೆ ಎಂದರೆ, ಮೋದಿ ಪರವಾಗಿದ್ದವರು ಸರಿಯಾಗಿದೆ ಎಂದು ಬೆಂಬಲಿಸುತ್ತಿದ್ದಾರೆ.

    ಈ ಕುರಿತಂತೆ ನಟ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿ ಪ್ರಶ್ನೆ ಮಾಡಿದ್ದು, ‘ನಾವು ಎತ್ತ ಸಾಗುತ್ತಿದ್ದೇವೆ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯ ಜೊತೆಗೆ ಬದಲಾವಣೆಯಾದ ರಾಮನ, ಹನುಮಂತನ ಫೋಟೋಗಳನ್ನು ಹಾಕಿದ್ದಾರೆ. ಪ್ರಕಾಶ್ ರೈ ಟ್ವಿಟ್ ಮಾಡುತ್ತಿದ್ದಂತೆಯೇ ಮೋದಿ ಪರವಾಗಿದ್ದವರು ಪ್ರಕಾಶ್ ರೈ ಅವರನ್ನು ತರಾಟೆಗೆ ತಗೆದುಕೊಂಡಿದ್ದರೆ, ಪ್ರಕಾಶ್ ರೈ ಪರವಾಗಿದ್ದವರು ರಾಷ್ಟ್ರೀಯ ಲಾಂಛನಕ್ಕೆ ಅವಮಾನ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಇತ್ತ ಬಾಲಿವುಡ್ ನಟ ಅನುಪಮ್ ಖೇರ್, ಹೊಸ ಶಿಲ್ಪವನ್ನು ತಯಾರಿಸಿದವರ ಪರವಾಗಿ ಮಾತನಾಡಿದ್ದು, ಸಿಂಹಕ್ಕೆ ಹಲ್ಲುಗಳಿರುವುದರಿಂದಲೇ ಅದರ ಪ್ರದರ್ಶನ ಸಹಜ ಎಂದು ವ್ಯಂಗ್ಯವಾಡಿದ್ದಾರೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದೂ, ಘರ್ಜಿಸಿದ ಸಿಂಹಗಳು ನಮಗಿಂದು ಬೇಕಾಗಿವೆ ಎಂದು ಹೇಳಿದ್ದಾರೆ. ಒಂದು ವಾರದಿಂದ ಈ ಚರ್ಚೆ ನಡೆಯುತ್ತಿದ್ದು, ಇದೀಗ ಸಿನಿಮಾ ರಂಗಕೂಡ ಅದರಲ್ಲಿ ಭಾಗಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?

    ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?

    ನವದೆಹಲಿ: ಹೊಸ ಸಂಸತ್ ಭವನವಾದ ಸೆಂಟ್ರಲ್ ಮೇಲ್ಛಾವಣಿಯಲ್ಲಿ ಕಂಚಿನಿಂದ ನಿರ್ಮಿಸಲಾದ 9,500 ಕೆ.ಜಿ ತೂಕದ ಅಶೋಕ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅನಾವರಣಗೊಳಿಸಿದರು.

    ಏನಿದರ ವಿಶೇಷ?
    6.5 ಮೀಟರ್ ಎತ್ತರವಿರುವ ಈ ಲಾಂಛನವು 9,500 ಕೆ.ಜಿ.ತೂಕವಿದೆ. ಸಂಪೂರ್ಣ ಕಂಚಿನಿಂದ ತಯಾರಿಸಲ್ಪಟ್ಟಿದ್ದು, ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ. ಲಾಂಚನಕ್ಕೆ ಸಹಕಾರಿಯಾಗಿ ನಿಲ್ಲುವಂತೆ 6,500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ನಿರ್ಮಿಸಲಾಗಿದೆ. ಎಂಟು ವಿಭಿನ ಹಂತಗಳಲ್ಲಿ ತಯಾರಿಕಾ ಕಾರ್ಯ ನಡೆದಿದ್ದು, ರಾಷ್ಟ್ರೀಯ ಲಾಂಛನದ ಸ್ಕೆಚ್ ಮತ್ತು ಎರಕಹೊಯ್ದ ಪ್ರಕ್ರಿಯೆಯು ಕ್ಲೇ ಮಾಡೆಲಿಂಗ್/ಕಂಪ್ಯೂಟರ್ ಗ್ರಾಫಿಕ್‌ನಿಂದ ಕಂಚಿನ ವರೆಗೆ ಸಾಗಿದೆ. ಇದನ್ನೂ ಓದಿ: ಮದ್ಯದ ದೊರೆ ವಿಜಯ್‌ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು

    ಹೊಸ ಸಂಸತ್ ಭವನದ ಕೆಲಸವನ್ನು ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ಗೆ ವಹಿಸಲಾಗಿದೆ. 60,000 ಚ.ಮೀ. ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದೆ. ಮಾಸ್ಟರ್ ಪ್ಲಾನ್ ಪ್ರಕಾರ, ಈಗಿರುವ ವೃತ್ತಾಕಾರದ ಸಂಸತ್ ಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಹಿಂದೆ ಈ ಹೊಸ ತ್ರಿಕೋನ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ಸಂಸತ್ತಿನ ಕಲಾಪದಲ್ಲಿ ಇದು 888 ಲೋಕಸಭಾ ಸದಸ್ಯರು, 384 ರಾಜ್ಯಸಭಾ ಸದಸ್ಯರ ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಲೋಕಸಭೆಯ ಸಭಾಂಗಣದಲ್ಲಿ 1,272 ಆಸನಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಉಭಯ ಸದನಗಳ ಜಂಟಿ ಅಧಿವೇಶನವೂ ಸಾಧ್ಯವಾಗಲಿದೆ. ಇದನ್ನೂ ಓದಿ: ಗೋವಾದಲ್ಲೂ ಆಪರೇಷನ್ ಕಮಲ ಸದ್ದು – ಇಬ್ಬರು ಕಾಂಗ್ರೆಸ್ ಶಾಸಕರ ಅನರ್ಹತೆ ಕೋರಿ ಸ್ಪೀಕರ್‌ಗೆ ಮನವಿ

    ಹೊಸ ಸಂಸತ್ ಕಟ್ಟಡದ ಯೋಜನೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ 2019 ರಲ್ಲಿ ಘೋಷಿಸಲಾಯಿತು. 2020ರ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಯ ಅಡಿಗಲ್ಲು ಹಾಕಿದರು.

    Live Tv
    [brid partner=56869869 player=32851 video=960834 autoplay=true]