Tag: National Doctors Day

  • ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

    ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

    ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health And Family Welfare) ವತಿಯಿಂದ ವಿಧಾನ ಸೌಧದಲ್ಲಿ (Vidhana Soudha) ರಾಷ್ಟ್ರೀಯ ವೈದ್ಯರ ದಿನಾಚರಣೆ (National Doctors Day) ಆಚರಿಸಲಾಯಿತು.

    ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ವೈದ್ಯರೂ ಆಗಿದ್ದ ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥವಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಮಾಡಲಾಯಿತು. ಇದನ್ನೂ ಓದಿ: ಸೇವಾ ಮನೋಭಾವದ ವೈದ್ಯರನ್ನ ಸಮಾಜ ಸದಾ ಸ್ಮರಿಸುತ್ತೆ: ದಿನೇಶ್ ಗುಂಡೂರಾವ್

    ಕಾರ್ಯಕ್ರಮಕ್ಕೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಡಾ. ಬಿ.ಸಿ ರಾಯ್ ಅವರಿಗೆ ಭಾವಚಿತ್ರಕ್ಕೆ ಪುಷ್ಟ ಅರ್ಪಿಸುವ ಮೂಲಕ ನಮನ ಸಲ್ಲಿಸಿದರು. ಇದನ್ನೂ ಓದಿ: ಅಕ್ಕಿ ರಾಜಕೀಯದ ನಡುವೆ ರಾಜ್ಯದಲ್ಲಿ ಪಂಚೆ ಪಾಲಿಟಿಕ್ಸ್

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಆರೋಗ್ಯ ಆಯುಕ್ತ ರಂದೀಪ್, ಎನ್.ಎಚ್.ಎಮ್ ಎಂ.ಡಿ ನವೀನ್ ಭಟ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.‌ ಇದನ್ನೂ ಓದಿ: ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿಯ ಫೋಟೋ ಹಂಚಿಕೊಂಡು ವೈದ್ಯರ ದಿನಕ್ಕೆ ಶುಭ ಕೋರಿದ ಸಂಜನಾ

    ಪತಿಯ ಫೋಟೋ ಹಂಚಿಕೊಂಡು ವೈದ್ಯರ ದಿನಕ್ಕೆ ಶುಭ ಕೋರಿದ ಸಂಜನಾ

    ಬೆಂಗಳೂರು: ಇಂದು ದೇಶದೆಲ್ಲಡೆ ವೈದ್ಯರ ದಿನಾಚರಣೆ ಆಚರಿಸುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದ ವೈದ್ಯರನ್ನು ಸ್ಮರಿಸಲಾಗುತ್ತಿದೆ. ಅದೇ ರೀತಿ ನಟಿ ಸಂಜನಾ ಗಲ್ರಾನಿ ತಮ್ಮ ಪತಿಯ ಫೋಟೋ ಹಂಚಿಕೊಂಡು ವೈದ್ಯರ ದಿನಕ್ಕೆ ಶುಭ ಕೋರಿದ್ದಾರೆ.

    ಪತಿಯ ಜೊತೆ ತಾವಿರುವ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕ ಸಂಜನಾ ವೈದ್ಯರ ದಿನದ ಶುಭಾಶಯ ತಿಳಿಸಿದ್ದಾರೆ. ವೈದ್ಯರೇ ‘ರಿಯಲ್ ಹೀರೋ’ಗಳು, ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಇದನ್ನು ಅವರು ನಿರೂಪಿಸಿದ್ದಾರೆ ಸಹ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇವರಂತೆ ಇತರರ ಪ್ರಾಣ ಉಳಿಸಿದ್ದಾರೆ ಎಂದು ಹೇಳಿದ್ದಾರೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಸಾವಿರಾರು ವೈದ್ಯರು, ನರ್ಸ್‍ಗಳು ಜೀವ ತ್ಯಾಗ ಮಾಡಿದ್ದಾರೆ. ವ್ಯಾಸ್ಕಲರ್ ಸರ್ಜನ್ ಪತ್ನಿಯಾದ ನಾನು, ಕೊರೊನಾ ಪೀಕ್‍ನಲ್ಲಿದ್ದಾಗ ತಿಂಗಳಿಗೆ ಒಮ್ಮೆಯಾದರೂ ರಜೆ ತೆಗೆದುಕೊಳ್ಳಿ ಎಂದು ಹಲವು ಬಾರಿ ನನ್ನ ಪತಿಗೆ ಹೇಳುತ್ತಿದ್ದೆ. ಈ ಕುರಿತು ಹಲವು ಬಾರಿ ವಾಗ್ವಾದಗಳನ್ನೂ ಮಾಡಿಕೊಂಡಿದ್ದೇವೆ. ಈ ವೇಳೆ ಅವರು ಸ್ಪಷ್ಟವಾಗಿ ನನಗೆ ಹೇಳಿದ್ದರು. ನನ್ನ ಜೀವ ಇರುವುದು ಜನರ ಸೇವೆ ಮಾಡಲು, ಇದೇ ನನ್ನ ಪ್ರಮುಖ ಆದ್ಯತೆ. ಇದು ನನ್ನ ಕುಟುಂಬಕ್ಕಿಂತಲೂ ಮಿಗಿಲಾದದ್ದು ಎಂದಿದ್ದರು.

    ಇತರ ಮಹಿಳೆಯರಂತೆ ಕುಟುಂಬವೇ ನನ್ನ ಮೊದಲ ಆದ್ಯತೆ, ನಂತರ ಬೇರೆಯವರ ವಿಷಯ ಎಂಬುದು ನನ್ನ ವಾದವಾಗಿತ್ತು. ಜೀವನ, ಮದುವೆ ಹಾಗೂ ಸಹಭಾಗಿತ್ವ ಅರ್ಥೈಸಿಕೊಳ್ಳುವುದರ ಮೇಲೆ ನಿಂತಿದೆ. ಪರಸ್ಪರರ ಆಲೋಚನಾ ಪ್ರಕ್ರಿಯೆಯನ್ನು ಸರಿಹೊಂದಿಸುವುದು ಹಾಗೂ ಅವರ ನಿರ್ಧಾರಗಳನ್ನು ಗೌರವಿಸುವುದಾಗಿದೆ ಎಂದು ಸಂಜನಾ ಬರೆದುಕೊಂಡಿದ್ದಾರೆ.

    ಡಾ.ಅಜೀಜ್ ಪಾಶಾ ನೀವು ನನ್ನ ಪ್ರೇರಣೆ ಮಾತ್ರವಲ್ಲ, ಸಾಂಕ್ರಾಮಿಕ ರೋಗದ ಭಯವನ್ನು ಹೋಗಲಾಡಿಸಿ, ಫ್ರಂಟ್‍ಲೈನ್ ಕೆಲಸಗಾರ್ತಿಯಾಗಿ ಸೇವೆ ಸಲ್ಲಿಸಲು ನನ್ನನ್ನು ಉತ್ತೇಜಿಸಿದಿರಿ. ಲಾಕ್‍ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಪ್ರತಿ ದಿನ ಸಹಾಯ ಮಾಡಲು ಪ್ರೇರಣೆ ನೀಡಿದಿರಿ ಎಂದಿದ್ದಾರೆ.

    ಈ ದಿನ ರಿಯಲ್ ಹೀರೋಗಳಿಗೆ ಶುಭ ಕೋರಲು ನಾನು ಇಚ್ಛಿಸುತ್ತೇನೆ. ವೆರಿ ಹ್ಯಾಪಿ ಡಾಕ್ಟರ್ಸ್ ಡೇ, ಕೋಟ್ಯಂತರ ಜನರ ಪ್ರಾಣ ಉಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಇತರರಿಗಿಂತ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು, ನಿಮ್ಮ ಪತ್ನಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಡಾಕ್ಟರ್ ಸಾಬ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

  • ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

    ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

    -ಆಸ್ಪತ್ರೆ ಬಿಟ್ಟು ಹಳ್ಳಿಗಳಿಗೆ ತೆರಳಿ ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ವೈದ್ಯರ ಸೇವೆ ಮಹತ್ವ ಎಷ್ಟೆಂಬುದು ಎಲ್ಲರಿಗೂ ಅರಿವಾಗಿದೆ. ಆದ್ರೂ ಇಂತಹ ಸಂದರ್ಭದಲ್ಲೂ ಕೆಲ ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆ ಲಾಕ್ ಮಾಡಿದ್ದು ಉಂಟು. ಆದ್ರೆ ಇಲ್ಲೊಬ್ಬ ಖಾಸಗಿ ಆಸ್ಪತ್ರೆ ವೈದ್ಯರು ಮಾತ್ರ ತಮ್ಮ ಆಸ್ಪತ್ರೆ ಮುಚ್ಚಿ ನೇರವಾಗಿ ಜನರ ಬಳಿಯೇ ಹಳ್ಳಿಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ಕೊಡ್ತಿದ್ದಾರೆ. ರಾಷ್ಟ್ರೀಯ ವೈದ್ಯರ ದಿನದಿಂದ ಸಮಾಜಮುಖಿ ಮಾದರಿ ವೈದ್ಯರ ಕಾರ್ಯ ನೆನೆಯುವ ವರದಿ ಇದಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಪೀಪಲ್ಸ್ ಖಾಸಗಿ ಆಸ್ಪತ್ರೆಯ ವೈದ್ಯ ಅನಿಲ್ ಕುಮಾರ್ ಕೋವಿಡ್-19 ಸಂಕಷ್ಟದ ಸಮಯದಲ್ಲಿ ತಮ್ಮ ತಾಲೂಕಿನ ಬಡ ಜನರ ಆರೋಗ್ಯ ಕಾಯೋಕೆ ಮುಂದಾಗಿದ್ದಾರೆ. ಕೊರೊನಾ ಆರಂಭದಿಂದ ಹಾಗೂ ಲಾಕ್‍ಡೌನ್ ಆದ ನಂತರ ಖುದ್ದು ತಾವೇ ಪ್ರತಿದಿನ 2-3 ಹಳ್ಳಿಗಳಂತೆ ಹಳ್ಳಿ ಹಳ್ಳಿಗೂ ಹೋಗಿ ಜನರ ಆರೋಗ್ಯ ತಪಾಸಣೆ ಮಾಡುತ್ತಾ ಬರುತ್ತಿದ್ದಾರೆ.

    ಕೇವಲ ಆರೋೀಗ್ಯ ತಪಾಸಣೆ ಅಷ್ಟೇ ಅಲ್ಲದೆ ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಲಹೆ ಸೇವೆ ಮಾಡುತ್ತಾ ಉಚಿತವಾಗಿ ಔಷಧಿಗಳನ್ನ ಕೊಡುತ್ತಿದ್ದಾರೆ. ಲಾಕ್‍ಡೌನ್ ಇರುವವರೆಗೂ ಹಳ್ಳಿ ಹಳ್ಳಿಗಳಿಗೂ ತೆರಳಿ ಸೇವೆ ನೀಡಿದ್ದ ವೈದ್ಯ ಅನಿಲ್ ಕುಮಾರ್, ಈಗ ಜನ ನರೇಗಾ ಮೂಲಕ ಕೆಲಸ ಮಾಡುವ ಆಯಕಟ್ಟಿನ ಸ್ಥಳಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಬಡ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಕೋವಿಡ್ 19 ವಿರುದ್ಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಇಷ್ಟು ದಿನ ಬಾಗೇಪಲ್ಲಿ ತಾಲೂಕಿನಲ್ಲಿ ಮಾಡುತ್ತಿದ್ದ ಸೇವೆಯನ್ನ ಈಗ ಪಕ್ಕದ ಗುಡಿಬಂಡೆ ಗೌರಿಬಿದನೂರು ತಾಲೂಕಿಗೆ ವಿಸ್ತರಿಸುತ್ತಿದ್ದು, ವೈದ್ಯರ ಈ ಸೇವೆಯನ್ನ ಜನ ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಬಾಗೇಪಲ್ಲಿಯ ಪೀಪಲ್ಸ್ ಆಸ್ಪತ್ರೆ ಅಂದ್ರೆ ಜನಸಾಮಾನ್ಯರ ವೈದ್ಯ ಅಂತಲೇ ಪ್ರಖ್ಯಾತ ಪಡೆದಿರುವ ವೈದ್ಯ ಅನಿಲ್ ಕುಮಾರ್ ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಸೇವೆಯನ್ನ ಕರ್ತವ್ಯ ಅಂತ ಭಾವಿಸಿ ಬಡ ಜನರ ಸೇವೆ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯವೇ ಸರಿ. ರಾಷ್ಟ್ರೀಯ ವೈದ್ಯರ ದಿನದಂದು ಈ ವೈದ್ಯರಿಗೆ ನಮ್ಮದೊಂದು ಸಲಾಂ.