Tag: National Crush

  • ರಶ್ಮಿಕಾ ಮಂದಣ್ಣರ ‘ನ್ಯಾಷನಲ್ ಕ್ರಶ್’ ಪಟ್ಟ ಕಿತ್ತುಕೊಂಡ ಮೃಣಾಲ್

    ರಶ್ಮಿಕಾ ಮಂದಣ್ಣರ ‘ನ್ಯಾಷನಲ್ ಕ್ರಶ್’ ಪಟ್ಟ ಕಿತ್ತುಕೊಂಡ ಮೃಣಾಲ್

    ನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ನ್ಯಾಷನಲ್ ಕ್ರಶ್ ಎಂದು ಹೆಮ್ಮೆಯಿಂದ ಅಭಿಮಾನಿಗಳು ಕರೆಯುತ್ತಿದ್ದರು. ಸಾಲು ಸಾಲು ಚಿತ್ರಗಳು ಹಿಟ್ ಆದ ಹಿನ್ನೆಲೆಯಲ್ಲಿ 2020ರಲ್ಲಿ ಗೂಗಲ್ ನ್ಯಾಷನಲ್ ಕ್ರಶ್ (National Crush) ಟ್ರೆಂಡಿಂಗ್ ಪಟ್ಟವನ್ನು ರಶ್ಮಿಕಾಗೆ ನೀಡಿತ್ತು. ಇದೀಗ  ಆ ಪಟ್ಟವನ್ನು ಮತ್ತೋರ್ವ ನಟಿ ಕಸಿದುಕೊಂಡಿದ್ದಾರೆ.

    ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಮೃಣಾಲ್ (Mrunal Thakur) ಭಾಗಿಯಾಗಿದ್ದಾರೆ. ಕಾನ್ ಫೆಸ್ಟಿವೆಲ್ ನಲ್ಲಿ ಭಾಗಿಯಾದ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಮೃಣಾಲ್ ಗೆ ನ್ಯಾಷನಲ್ ಕ್ರಶ್ ಎಂದು ಕರೆದಿದ್ದಾರೆ. ಅದು ಟ್ರೆಂಡ್ ಕೂಡ ಆಗಿದೆ. ಹೀಗಾಗಿ ರಶ್ಮಿಕಾ ಹೆಸರಿನಲ್ಲಿದ್ದ ಆ ಹೊಗಳಿಕೆ ಇದೀಗ ಮೃಣಾಲ್ ಗೆ ಸಿಕ್ಕಿದೆ.

    ಟಾಲಿವುಡ್ ನ ಸೀತಾ ರಾಮಂ  ಸಿನಿಮಾದ ಮೂಲಕ ಗಮನ ಸೆಳೆದವರು ಮೃಣಾಲ್. ಇದು ಇವರ ಮೊದಲ ಚಿತ್ರವಾದರೂ, ಸಾಕಷ್ಟು ಹೆಸರು ತಂದುಕೊಟ್ಟಿತು. ಈ ಸಿನಿಮಾದಲ್ಲಿನ ನಟನೆಗೆ ಬಹುತೇಕರು ಫಿದಾ ಆಗಿದ್ದರು. ಆ ಸಿನಿಮಾನೇ ಇಂದು ಕಾನ್ ಚಿತ್ರೋತ್ಸವಕ್ಕೆ ಹೋಗುವಂತೆ ಮಾಡಿದೆ. ಅಲ್ಲದೇ, ಮೃಣಾಲ್ ಧರಿಸಿದ್ದ ಕಾಸ್ಟ್ಯೂಮ್ ಕೂಡ ಟ್ರೆಂಡ್ ಆಗಿದೆ. ಟಾಲಿವುಡ್ (Tollywood) ನಲ್ಲೇ ರಶ್ಮಿಕಾ ಮತ್ತು ಮೃಣಾಲ್ ಗೆ ಪೈಪೋಟಿ ಏರ್ಪಟ್ಟಿದೆ.

    ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ಆನಂತರ ತಮಿಳು, ತೆಲುಗಿನಲ್ಲೂ ಹಲವು ಚಿತ್ರಗಳನ್ನು ಮಾಡಿದರು. ಕೇವಲ ದಕ್ಷಿಣದ ಸಿನಿಮಾಗಳಲ್ಲಿ ಮಾತ್ರವಲ್ಲ, ಹಿಂದಿಯಲ್ಲೂ ಇದೀಗ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ನಲ್ಲೂ ಅವರು ಬ್ಯುಸಿಯಾಗಿದ್ದಾರೆ.

  • ರಶ್ಮಿಕಾ ಮಂದಣ್ಣ ಕುರಿತು ಕೆಟ್ಟ ಭವಿಷ್ಯ ನುಡಿದ ಕಮಲ್ ಖಾನ್

    ರಶ್ಮಿಕಾ ಮಂದಣ್ಣ ಕುರಿತು ಕೆಟ್ಟ ಭವಿಷ್ಯ ನುಡಿದ ಕಮಲ್ ಖಾನ್

    ಬಾಲಿವುಡ್ ನ ವಿವಾದಾತ್ಮಕ ವಿಮರ್ಶಕ, ನಟ ಕಮಲ್ ಆರ್ ಖಾನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕುರಿತು ಅಚ್ಚರಿಯ ಭವಿಷ್ಯಯೊಂದನ್ನು ಹೇಳಿದ್ದಾರೆ. ಈ ಭವಿಷ್ಯವು ರಶ್ಮಿಕಾ ಮಂದಣ್ಣರ ಅಭಿಮಾನಿಗಳಿಗೆ ಕಣ್ಣು ಕೆಂಪಾಗಿಸಿದೆ. ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಕಮಲ್, ಬಾಲಿವುಡ್ ನಲ್ಲಿ ರಶ್ಮಿಕಾ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಭೋಜ್ ಪುರಿ ಸಿನಿಮಾಗೆ ಲಯಕ್ಕು ಎಂದು ನುಡಿದಿದ್ದಾರೆ.

    ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ರಿಲೀಸ್ ಆದ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಗುಡ್ ಬೈ ಸಿನಿಮಾ ಬಾಲಿವುಡ್ ನಲ್ಲಿ ರಶ್ಮಿಕಾ ಭರ್ಜರಿ ಹೆಸರು ತಂದು ಕೊಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಅದು ಆಗಲಿಲ್ಲ. ಇನ್ನಷ್ಟೇ ಮಿಷನ್ ಮಜ್ನು ಸಿನಿಮಾ ರಿಲೀಸ್ ಆಗಬೇಕಿದೆ. ಅದು ಹೇಗಿದೆಯೋ ಗೊತ್ತಿಲ್ಲ. ಹಾಗಾಗಿ ಇಂಥದ್ದೊಂದು ಭವಿಷ್ಯ ನುಡಿದಿದ್ದಾರೆ ಖಾನ್. ಇದನ್ನೂ ಓದಿ:ಸುಶಾಂತ್ ಶವ ಪರೀಕ್ಷೆ ಸಿಬ್ಬಂದಿ ಬೆನ್ನಿಗೆ ನಿಂತ ನಟನ ಸಹೋದರಿ

    ಕಮಲ್ ಖಾನ್ ಈ ರೀತಿ ಬರೆಯುವುದು ಹೊಸದೇನೂ ಅಲ್ಲ. ಮೊನ್ನೆಯಷ್ಟೇ ರಣ್ವೀರ್ ಸಿಂಗ್ ಬಗ್ಗೆಯೂ ಟ್ವಿಟ್ ಮಾಡಿದ್ದರು. ಸರ್ಕಸ್ ಸೋಲಿನ ಬಗ್ಗೆ ಕಟು ಟೀಕೆ ಮಾಡಿದ್ದರು. ಇಂತಹ ಟೀಕೆಯ ಕಾರಣದಿಂದಾಗಿಯೇ ಅವರು ಜೈಲಿಗೂ ಕೂಡ ಹೋಗಿ ಬಂದಿದ್ದಾರೆ. ಜೈಲಿನಿಂದ ಬಂದ ನಂತರ ಇನ್ಮುಂದೆ ಯಾರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಲ್ಲ ಎಂದು ಹೇಳಿದ್ದರು. ಆದರೆ, ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ ಖಾನ್.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೆಸರು ಉಲ್ಟಾ ಹಾಕಿದ ರಶ್ಮಿಕಾ ಮಂದಣ್ಣ

    ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೆಸರು ಉಲ್ಟಾ ಹಾಕಿದ ರಶ್ಮಿಕಾ ಮಂದಣ್ಣ

    ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಪೇಜ್ ನೋಡಿದವರು ಅಚ್ಚರಿ ಮತ್ತು ಕುತೂಹಲದಿಂದ ಆ ಪೋಸ್ಟ್ ಅನ್ನು ನೋಡಿದ್ದರು. ರಶ್ಮಿಕಾ ತಮ್ಮ ಹೆಸರನ್ನು ಉಲ್ಟಾ ಬರೆಯುವುದರ ಮೂಲಕ ಎಲ್ಲರಲ್ಲೂ ಪ್ರಶ್ನೆ ಮೂಡಿಸಿದ್ದರು. ಈ ರೀತಿ ಪೋಸ್ಟ್ ಮಾಡಲು ಕಾರಣ ಏನಿರಬಹುದು ಎನ್ನುವ ಚರ್ಚೆ ಕೂಡ ನಡೆಯಿತು. ಒಪ್ಪಿಕೊಂಡ ಸಿನಿಮಾಗಳು ದಬ್ಬಾಕಿಕೊಂಡವು ಅಂತ ಹಾಗೆ ಮಾಡಿದ್ರಾ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇನ್ನೂ ಕೆಲವರು ಟ್ರೋಲ್‍ ಗೆ ವ್ಯಂಗ್ಯ ಮಾಡಲು ಆ ರೀತಿ ಮಾಡಿದ್ರಾ ಎಂದು ಹೇಳಲಾಗಿತ್ತು.

    ಆದರೆ, ರಶ್ಮಿಕಾ ತಮ್ಮ ಹೆಸರನ್ನು ಉಲ್ಟಾ ನೇತು ಹಾಕಿದ್ದಕ್ಕೆ ಕಾರಣ ಬೇರೆ ಇದೆ. ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳುವ ಅಭಿಯಾನವನ್ನು ಆರಂಭಿಸಿದ್ದು. ಅಕ್ಷರ ಬಾರದ ಹೆಣ್ಣುಮಕ್ಕಳಿಗೆ ಅಕ್ಷರಗಳು ಉಲ್ಟಾ ಕಾಣುತ್ತವೆ ಎಂದು ಹೇಳುವುದಕ್ಕಾಗಿ ಅವರು ತಮ್ಮ ಹೆಸರನ್ನು ಉಲ್ಟಾ ಬರೆದಿದ್ದರು. ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಬಗ್ಗೆ ಟ್ರೋಲ್ ಮಾಡುತ್ತಿದ್ದವರೂ ಈಗ ಮೆಚ್ಚಿಕೊಂಡಿದ್ದಾರೆ.

    ಹೌದು, ಓದು ಬಾರದ ಹೆಣ್ಣು ಮಕ್ಕಳ ಪರ ರಶ್ಮಿಕಾ ಅಭಿಯಾನ ಶುರು ಮಾಡಿದ್ದಾರೆ. ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಕೊಡಿ ಎಂದು ಸಾರುತ್ತಾರೆ. ಈ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ರಶ್ಮಿಕಾ ಅವರ ಈ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಕೆಲಸಗಳಿಗಾಗಿ ನಾವು ನಿಮ್ಮನ್ನು ಮೆಚ್ಚಿಕೊಳ್ಳುತ್ತೇವೆ ಎಂದು ವಿರೋಧಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಸಲ್ಲದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದ್ದರು. ಕಳೆದೊಂದು ತಿಂಗಳಿನಿಂದ ಸಿನಿಮಾ ರಂಗದಿಂದ ಬ್ಯಾನ್ ಮಾಡಿ ಅನ್ನುವ ಒತ್ತಾಯವೂ ಕೇಳಿ ಬಂತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು ರಶ್ಮಿಕಾ. ಇದೀಗ ಹೆಣ್ಣು ಮಕ್ಕಳ ಶಿಕ್ಷಣ ಅಭಿಯಾನದ ಮೂಲಕ ಎಲ್ಲರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ

    ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ

    ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲವನ್ನೂ ಗಮನಿಸಿರುವ ಸಾಹಿತಿ ಗುರುರಾಜ ಕೊಡ್ಕಣಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಉಳಿದ ಎಷ್ಟೊ ನಟಿಯರಿಗೆ ಹೋಲಿಸಿದರೆ ನಟಿ ರಶ್ಮಿಕಾ ಮಂದಣ್ಣ  ಕಳಪೆ ನಟಿ ಮತ್ತು ಪಡೆದ ಹೆಸರಿನಷ್ಟು ಮಹಾ ಸುಂದರಿಯಲ್ಲ ಎನ್ನುವುದು ನನ್ನ ತೀರ ವೈಯಕ್ತಿಕ ಅಭಿಪ್ರಾಯ. ಆದರೆ ಆಕೆಯ  ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದಾಗ ನನಗೆ ರಕ್ಷಿತ್ ಮನಸ್ಥಿತಿಯ ಬಗ್ಗೆ ಸಣ್ಣ ಅನುಮಾನವೇ. ಹಿಂದಿನ ಬಾರಿ ಅಂತದ್ದೊಂದು ಪೋಸ್ಟ್ ಹಾಕಿದ ಮೇಲೆ ಜನರಿಂದ ಆತನ ‘ಅಮರ ಪ್ರೇಮ’ದ ಪ್ರಶಂಸೆ, ಜೊತೆಗೆ ರಶ್ಮಿಕಾಗೆ ಹೆಚ್ಚುಕಡಿಮೆ ವೇಶ್ಯೆಯ ಪಟ್ಟ ಕಟ್ಟಿದ್ದನ್ನೂ ನೋಡಿದ ಮೇಲೂ ಮರು ವರ್ಷ ಆತ ಮತ್ತದೇ ಪೋಸ್ಟ್ ಹಾಕಿದಾಗ ,’ಈತನಿಗೆಲ್ಲೊ ಇದರಲ್ಲೊಂದು ಸಣ್ಣ ವಿಕೃತಾನಂದವಿರಬಹುದಾ’ ಎನ್ನಿಸಿದ್ದೂ ಇದೆ.

    ಅದರಾಚೆಗೂ ರಶ್ಮಿಕಾ ಅವರಿವರಿಂದ ಅನುಭವಿಸಿದ ಟೀಕೆಗಳು, ಮನೋವಿಕಾರಗಳು ಕಡಿಮೆಯೇನೂ ಅಲ್ಲ. ಅದ್ಯಾವುದೋ ಟ್ರಾಲ್ ಪೇಜಿನವನು ಆಕೆಯ ಬಾಲ್ಯದ ಚಿತ್ರವನ್ನಿಟ್ಟು ,’ಮುಂದೊಂದು ದಿನ ಈಕೆ —— ಆಗುತ್ತಾಳೆಂದು ಯಾರಿಗೆ ಗೊತ್ತಿತ್ತು’ ಎಂಬ ಅತಿವಿಕಾರದ ಪೋಸ್ಟ್ ಹಾಕಿದ್ದು, ಅದಕ್ಕಾಕೆ ನೊಂದುಕೊಂಡು ಪ್ರತಿಕ್ರಿಯೆ ನೀಡಿದ್ದೆಲ್ಲವೂ ಇನ್ನೂ ಕಣ್ಣೆಗೆ ಕಟ್ಟಿದಂತಿದೆ. ಈ ಎಲ್ಲ ಹೀನಾತಿಹೀನ ವರ್ತನೆಗಳ ನಂತರವೂ, ಟೀಕೆಗಳ ನಂತರವೂ ಇಂದು ಆಕೆ ಬೆಳೆದು ನಿಂತ ಬಗೆಗೆ ಖಂಡಿತವಾಗಿಯೂ ನನ್ನಲ್ಲೊಂದು ಅಚ್ಚರಿ ಬೆರಗು ಮೆಚ್ಚುಗೆಗಳ ಮಿಶ್ರಭಾವವಿರುವುದು ಸಹ ಸುಳ್ಳಲ್ಲ ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಆದರೆ ಇದರೆಲ್ಲದರಾಚೆಗೂ ರಶ್ಮಿಕಾ ಮಾಡಿದ್ದೆಲ್ಲವೂ ಸರಿಯೆನ್ನುವುದು ನನ್ನ ಮಾತಿನ ತಾತ್ಪರ್ಯವಲ್ಲ. ಆಕೆಯೆಡೆಗಿನ ಎಲ್ಲ ವೈಯಕ್ತಿಕ ವಿಕಾರ ವ್ಯಂಗ್ಯಗಳನ್ನು ವಿರೋಧಿಸುತ್ತಲೇ ಈ ಬಾರಿಯ ಆಕೆಯ ವರ್ತನೆಗೆ ನನ್ನ ವಿರೋಧವಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ವೃತ್ತಿ ಬದುಕಿನುದ್ದಕ್ಕೂ ವ್ಯಂಗ್ಯ ವಿಕಾರಗಳನ್ನೇ ಎದುರಿಸುತ್ತ ಬಂದ ಆಕೆಗೆ  ತನ್ನನ್ನು ಮೊದಲ ಬಾರಿಗೆ ಜನರೆದುರು ಪರಿಚಯಿಸಿದ ನಿರ್ಮಾಪಕರ ಬಗೆಗಿನ ವ್ಯಂಗ್ಯ ಬೇಕಿರಲಿಲ್ಲ. ಅನಿಲ್ ಕಪೂರ್ ರಂತಹ ನಟ ಇಂದಿಗೂ ‘ತಾನು ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನುಪಲ್ಲವಿ’ ಎಂದೇ ಹೇಳಿಕೊಳ್ಳುತ್ತಾರೆ. ಹೇಳಿಕೊಳ್ಳದಿದ್ದರೂ ದೊಡ್ಡ ವ್ಯತ್ಯಾಸವಾಗದಿದ್ದರೂ ಅದೊಂದು ಸೌಜನ್ಯದ ಮಾತು. ಹಾಗಿರುವಾಗ ತನ್ನ ಮೊಟ್ಟ ಮೊದಲ ನಿರ್ಮಾಪಕರ ಹೆಸರು ಹೇಳುವಾಗ ಸುಮ್ಮನೇ ಕೈಬೆರಳೆತ್ತಿ ” This Production House ” ಎಂದದ್ದು ಸಾಮಾನ್ಯ ಪ್ರೇಕ್ಷಕನಿಗೆ ಅಹಮಿಕೆಯ ಭಾವವಾಗಿಯೇ ಗೋಚರಿಸುತ್ತದೆ. ಈಗ ಆಕೆ ಎದುರಿಸುತ್ತಿರುವ ಟೀಕೆಗಳಿಗೆ ಆ ಅಹಮಿಕೆಯ ಭಾವವೇ ಕಾರಣವೇ ಹೊರತು ಮತ್ತೇನಲ್ಲ.

    ಗಾಜಿನ ಮನೆಯಲ್ಲಿ ಕೂತು ಮತ್ತೊಬ್ಬರ ಮನೆಯತ್ತ ಕಲ್ಲೆಸೆಯಬಾರದಂತೆ. ರಶ್ಮಿಕಾ ಇಷ್ಟು ಕಾಲ ಗಾಜಿನ ಮನೆಯಲ್ಲೇನೂ ಇರಲಿಲ್ಲ. ಆದರೆ ಇಂಥದ್ದೊಂದು ಅನಗತ್ಯದ ವರ್ತನೆಯಿಂದ ಗಾಜಿನ ಮನೆಯನ್ನು ಸೃಷ್ಟಿಸಿಕೊಂಡಿದ್ದಲ್ಲದೇ ಕಲ್ಲನ್ನೂ ಸಹ ಎತ್ತೆಸೆದಳು. ಪರಿಣಾಮವಾಗಿ ಒಂದಷ್ಟು ಕಲ್ಲುಗಳು ಆಕೆಯತ್ತ ತೂರಿ ಬರುವಾಗ ‘ಅಯ್ಯಯ್ಯೊ ಬಿಟ್ಬಿಡಿ ಪಾಪದ ಹುಡುಗಿ’ ಎನ್ನುವುದರಲ್ಲಿ ಅರ್ಥವೇನೂ ಇಲ್ಲ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನ ಬೆಡಗಿ ಈಗ ‘ನ್ಯಾಷನಲ್ ಕ್ರಶ್’!

    ಕೊಡಗಿನ ಬೆಡಗಿ ಈಗ ‘ನ್ಯಾಷನಲ್ ಕ್ರಶ್’!

    ಬೆಂಗಳೂರು: ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಮನೆಮಾತಾಗಿದ್ದ ಕೊಡಗಿನ ಬೆಡಗಿ, ಇದೀಗ ತಮಿಳು- ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ದೇಶದ ಜನ ರಶ್ಮಿಕಾ ಮುಗ್ಧತೆಗೆ ಮನಸೋತಿದ್ದಾರೆ.

    ಹೌದು, ಒಂದು ಕಾಲದಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ರಶ್ಮಿಕಾ, ಇದೀಗ ದೇಶದ ಕ್ರಶ್ ಆಗಿದ್ದಾರೆ. ಹೀಗಂತ ನಾವು ಹೇಳ್ತಿಲ್ಲ. ಗೂಗಲ್ ನಲ್ಲಿ ‘ನ್ಯಾಷನಲ್ ಕ್ರಶ್ ಆಫ್ ಇಂಡಿಯಾ’ ಅಂತ ಹುಡುಕಿದ್ರೆ ರಶ್ಮಿಕಾ ಮಂದಣ್ಣ ಅವರ ಹೆಸರು, ಫೋಟೋ ಬರುತ್ತಿದೆ. ಹೀಗಾಗಿ ಕೊಡಗಿನ ಬೆಡಗಿ ಇಡೀ ದೇಶದ ಹಾಟ್ ಫೇವರೆಟ್ ಆಗಿದ್ದಾರೆ ಎಂಬುದು ಬಯಲಾಗಿದೆ.

    ನ್ಯಾಷನಲ್ ಕ್ರಶ್ ಎಂದೆನಿಸಿಕೊಳ್ಳುವ ಮೂಲಕ ರಶ್ಮಿಕಾ, ಈ ಹಿಂದೆ ಇದ್ದಂತಹ ಪ್ರಿಯಾ ಪ್ರಕಾಶ್ ವಾರಿಯರ್, ದಿಶಾ ಪಟಾನಿ ಅವರುಗಳನ್ನು ಹಿಂದಿಕ್ಕಿ, ತಾವು ಅತೀ ವೇಗದಲ್ಲಿ ಮುಂದೆ ಬಂದಿದ್ದಾರೆ ಎಂದರೆ ತಪ್ಪಾಗಲಾರದು.

    ರಶ್ಮಿಕಾ ಅವರು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಮಾತ್ರ ನಟಿಸಿದ್ದಾದರೂ ಅವರ ನಟನೆಯ ಹಲವು ಚಿತ್ರಗಳು ಹಿಂದಿಯಲ್ಲಿ ಡಬ್ ಆಗಿವೆ. ಹೀಗಾಗಿ ಈ ಸಿನಿಮಾವನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವುದರೊಂದಿಗೆ ದೇಶದ ಕ್ರಶ್ ಆಗಿದ್ದಾರೆ.

    ರೂಪದರ್ಶಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿರುವ ನಟಿ ರಶ್ಮಿಕಾ ಮಂದಣ್ಣ, ನಂತರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದು ಬೀಗಿದರು. ಸದ್ಯ ಇಡೀ ದಕ್ಷಿಣ ಭಾರತ ಸಿನಿಮಾರಂಗದ ಬ್ಯುಸಿ ನಟಿಯರಲ್ಲಿ ತಾವು ಕೂಡ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ರಾಜ್ಯದ ಜನರ ಅಚ್ಚುಮೆಚ್ಚಿನ ನಟಿಯಾಗಿದ್ದ ಈಕೆ ಇದೀಗ ಇಡೀ ದೇಶದ ಜನರೇ ತಮ್ಮತ್ತ ಸೆಳೆಯುವಂತಾಗಿದ್ದಾರೆ.

  • ನ್ಯಾಷನಲ್ ಕ್ರಶ್ ಪ್ರಿಯಾ ಪ್ರಕಾಶ್‍ಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ ಪ್ರಥಮ್!

    ನ್ಯಾಷನಲ್ ಕ್ರಶ್ ಪ್ರಿಯಾ ಪ್ರಕಾಶ್‍ಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ ಪ್ರಥಮ್!

    ಬೆಂಗಳೂರು: ಒಂದೇ ಒಂದು ಕಣ್ಣಸನ್ನೆಗೆ ಪ್ರಿಯಾ ಪ್ರಕಾಶ್ ನ್ಯಾಷನಲ್ ಕ್ರಶ್ ಆಗಿದ್ದು, ಇದೀಗ ಬಿಗ್ ಬಾಸ್ ವಿಜೇತ ಪ್ರಥಮ್ ಪ್ರಿಯಾ ಅವರಿಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ.

    ಒಂದು ಹಾಡಿನ ಮೂಲಕ ಖ್ಯಾತಿ ಪಡೆದ ಪ್ರಿಯಾ ಪ್ರಕಾಶ್ ಅವರನ್ನು ಕನ್ನಡಕ್ಕೆ ಕರೆತರಲು ಯೋಚಿಸುತ್ತಿದ್ದಾರೆ. ಹೀಗಿರುವಾಗ ಬಿಗ್ ಬಾಸ್ ವಿಜೇತ ಪ್ರಥಮ್ ತಮ್ಮ ಫೇಸ್ ಬುಕ್ ಅಕೌಂಟ್‍ ನಲ್ಲು ನ್ಯಾಶನಲ್ ಕ್ರಶ್ ಪ್ರಿಯಾ ಎಂದು ಬರೆದುಕೊಂಡು ಅದಕ್ಕೆ, “ನಮಸ್ಕಾರ. ನಾನು ನೋಡುತ್ತಾನೆ ಇದೀನಿ ಪ್ರಿಯಾ ಪ್ರಕಾಶ್ ವಾರಿಯರ್ ನ ನ್ಯಾಷನಲ್ ಕ್ರಶ್ ಎಂದು ಕೊಂಡಾಡಿದ್ದೇ ಕೊಂಡಾಡಿದ್ದು.. ಸ್ವಲ್ಪ ಕಾಯಿರಿ ನಾಳಿದ್ದು ನನ್ನ ಹುಟ್ಟುಹಬ್ಬ. ಅದಕ್ಕೆ ಇಂಟರ್ ನ್ಯಾಷನಲ್ ಕ್ರಶ್ ನ ಕರೆದುಕೊಂಡು ಬರುತ್ತೀನಿ. ಎಲ್ಲಾ ಹುಡುಗರು ಎದೆ ಹೊಡೆದುಕೊಂಡು ಸಾಯೋದು ಗ್ಯಾರಂಟಿ” ಎಂದು ಪ್ರಥಮ್ ತಿಳಿಸಿದ್ದಾರೆ.

    ಈ ಹಿಂದೆ ಪ್ರಥಮ್ ಈ ರೀತಿ ಸಾಕಷ್ಟು ಬಾರಿ ಮಾಡಿದ್ದಾರೆ. ತನ್ನ ‘ಬಿಲ್ಡಪ್’ ಚಿತ್ರಕ್ಕೆ ದೇಶದ ಪ್ರಮುಖ ವ್ಯಕ್ತಿಯ ಹತ್ತಿರ ಸಿನಿಮಾ ಕ್ಲಾಪ್ ಮಾಡಿಸುತ್ತೇನೆ ಎಂದು ಹೇಳಿದ್ದರು. ನಂತರ ಹಾಗೆಯೇ ಮಾಡಿ ತೋರಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ಹತ್ತಿರ ಕ್ಲಾಪ್ ಮಾಡಿಸಿ, ಚಿತ್ರವನ್ನು ಶುಭಾರಂಭ ಮಾಡಿದ್ದರು. ಹೀಗಾಗಿ ಪ್ರಥಮ್ ಈ ಬಾರಿ ಯಾವ ಇಂಟರ್‍ ನ್ಯಾಷನಲ್ ಕ್ರಶ್ ಕರೆತಲಿದ್ದಾರೆಂದು ಕಾದು ನೋಡಬೇಕಿದೆ.