Tag: national bird

  • ರಾಷ್ಟ್ರಗೀತೆ ಹಾಡಿ ಗ್ರಾಮಸ್ಥರಿಂದ ನವಿಲಿನ ಅಂತ್ಯಸಂಸ್ಕಾರ

    ರಾಷ್ಟ್ರಗೀತೆ ಹಾಡಿ ಗ್ರಾಮಸ್ಥರಿಂದ ನವಿಲಿನ ಅಂತ್ಯಸಂಸ್ಕಾರ

    ಧಾರವಾಡ: ಅನಾರೋಗ್ಯ ಪೀಡಿತ ರಾಷ್ಟ್ರ ಪಕ್ಷಿ ನವಿಲು ಮೃತಪಟ್ಟ ಹಿನ್ನೆಲೆ ಧಾರವಾಡದ ಗ್ರಾಮವೊಂದರಲ್ಲಿ ಅದಕ್ಕೆ ಸಕಲ ಗೌರವ ನೀಡಿ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

    ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ನೀರಿನ ಟ್ಯಾಂಕ್‍ನ ಮೇಲೆ ಅಸ್ವಸ್ಥಗೊಂಡಿದ್ದ ನವಿಲೊಂದು ಪತ್ತೆಯಾಗಿತ್ತು. ಇದನ್ನು ನೋಡಿದ ಗ್ರಾಮಸ್ಥರು ಅದಕ್ಕೆ ಆರೈಕೆ ಮಾಡಿ ನೀರು ಕುಡಿಸಿ, ಆಹಾರ ಕೊಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಪಂದಿಸದ ನವಿಲು ಕೆಲ ಸಮಯದ ನಂತರ ಅಸುನೀಗಿದೆ.

    ನವಿಲು ರಾಷ್ಟ್ರ ಪಕ್ಷಿಯಾದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಅದಕ್ಕೆ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ, ಅದರಂತೆ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರೆಲ್ಲರು ಸೇರಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಈ ವೇಳೆ ರಾಷ್ಟ್ರಗೀತೆಯನ್ನು ಹೇಳಿ ನವಿಲಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.

  • ನವಿಲು ಬೇಟೆಯಾಡ್ತಿದ್ದವರನ್ನ ಅಟ್ಟಾಡಿಸಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ನವಿಲು ಬೇಟೆಯಾಡ್ತಿದ್ದವರನ್ನ ಅಟ್ಟಾಡಿಸಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ತುಮಕೂರು: ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೆ.ರಾಮಪುರದಲ್ಲಿ ನಡೆದಿದೆ.

    ಬಂಧಿತರು ಆಂಧ್ರದ ಕಂಬದೂರು ಗ್ರಾಮದವರಾಗಿದ್ದು, ನವಿಲುಗಳನ್ನು ಬೇಟೆಯಾಡಿ ಕೊಂದು ಜೋಳಿಗೆಯಲ್ಲಿ ಹೊತ್ತೊಯ್ಯತ್ತಿದ್ದರು. ಹನುಮನ ಬೆಟ್ಟ ನವಿಲು ಸಂರಕ್ಷಣಾ ಗುಡ್ಡದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಬೇಟೆಯಾಡಿದ್ದರು.

    ಇದನ್ನು ಗಮನಿಸಿದ ಕೆ. ರಾಮಪುರ ಗ್ರಾಮಸ್ಥರು ಬೇಟೆಗಾರರನ್ನು ಅಟ್ಟಾಡಿಸಿ ಹಿಡಿದು ವೈ.ಎನ್. ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

     

     

     

  • ವಿಧಾನಸೌಧ ಆವರಣದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನ ತಂದು ಬಿಡಲು ಚಿಂತನೆ

    ವಿಧಾನಸೌಧ ಆವರಣದಲ್ಲಿ ರಾಷ್ಟ್ರಪಕ್ಷಿ ನವಿಲುಗಳನ್ನ ತಂದು ಬಿಡಲು ಚಿಂತನೆ

    ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಇನ್ಮುಂದೆ ನವಿಲುಗಳ ನರ್ತನ ಕಾಣಬಹುದಾದ ನಿರೀಕ್ಷೆ ಇದೆ. ವಿಧಾನಸೌಧದ ಮುಂದೆ ರಾಷ್ಟ್ರಪಕ್ಷಿ ನವಿಲು ತಂದು ಬಿಡುವ ಯೋಜನೆ ಕುರಿತು ಚಿಂತನೆ ನಡೆದಿದೆ.

    ದಿಲ್ಲಿಯ ಸಂಸತ್ ಭವನ, ರಾಷ್ಟ್ರಪತಿ ಭವನದ ಮಾದರಿಯಲ್ಲಿ ನವಿಲುಗಳನ್ನ ತಂದು ಬಿಡುವ ಬಗ್ಗೆ ಯೋಚಿಸಲಾಗಿದ್ದು, ಪರಿಷತ್ ಸದಸ್ಯ ಉಗ್ರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

    ವಿಧಾನಸೌಧವನ್ನ ಆಕರ್ಷಣೀಯ ತಾಣವನ್ನಾಗಿಸಲು ಪರಿಷತ್ ಸದಸ್ಯ ಉಗ್ರಪ್ಪರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನದ ಆವರಣಗಳ ಬಳಿ ಈ ಯೋಜನೆ ಇದೆ.

    ನವಿಲು ವಾಸಿಸಲು ಅನುಕೂಲವಾಗುವ ಈಚಲು ಗಿಡ ನೆಡಲು ತೋಟಗಾರಿಕೆ ಇಲಾಖೆ ನಿರ್ಧಾರ ಮಾಡಿದೆ. ನವಿಲಿಗೆ ತಾತ್ಕಾಲಿಕ ವಾತಾವರಣ ನಿರ್ಮಿಸಲು ತೋಟಗಾರಿಕಾ ಇಲಾಖೆ ಭರವಸೆ ನೀಡಿದ್ದು, ವಿಧಾನಸೌಧದ ನಾಲ್ಕು ಭಾಗಗಳಲ್ಲಿ ಈಚಲು ಗಿಡ ನೆಡಲು ನಿರ್ಧಾರಿಸಲಾಗಿದೆ ಎಂದು ತಿಳಿದುಬಂದಿದೆ.