Tag: National Award Winner

  • ಹುಟ್ಟೂರಿನಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್‌ ಶೆಟ್ಟಿ ಫೋಟೋ ವೈರಲ್

    ಹುಟ್ಟೂರಿನಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್‌ ಶೆಟ್ಟಿ ಫೋಟೋ ವೈರಲ್

    ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ ಚಾಪ್ಟರ್ 1’ರ (Kantara Chapter 1) ಸಿನಿಮಾದಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕುಂದಾಪುರದಲ್ಲಿ ನಟ ರಿಷಬ್ ಶೆಟ್ಟಿ ಮೀನಿಗೆ ಗಾಳ ಹಾಕುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ‘ಕಾಂತಾರ ಚಾಪ್ಟರ್ 1’ಕ್ಕಾಗಿ ಇಡೀ ಚಿತ್ರತಂಡ ಕುಂದಾಪುರದಲ್ಲಿಯೇ ಬೀಡು ಬಿಟ್ಟಿದೆ. ಬಿಡುವಿನ ಸಮಯದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ‌ ತಮ್ಮ ತಂಡದ ಜೊತೆ ಸೇರಿಕೊಂಡು ಕಾಡು ಮೇಡು ಅಲೆದುಕೊಂಡು ಮೀನಿಗೆ ಗಾಳ ಹಾಕುವ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಭಜರಂಗಿ ಲೋಕಿ

     

    View this post on Instagram

     

    A post shared by Arvind S Kashyap, ISC (@arvindskash)

    ಇನ್ನೂ ರಾತ್ರಿ ಹೊತ್ತು ರಿಷಬ್ ಮೀನಿಗೆ ಗಾಳ ಹಾಕುತ್ತಿರುವ ವಿಶೇಷ ಫೋಟೋವೊಂದನ್ನು ಡಿಓಪಿ ಅರವಿಂದ್ ಕಶ್ಯಪ್ ಹಂಚಿಕೊಂಡು, ಇವರಿಗೆ ಮೀನು ಸಿಗ್ಲಿಲ್ಲ. ಆದರೆ ಎರಡು ರಾಷ್ಟ್ರ ಪ್ರಶಸ್ತಿ ಬುಟ್ಟಿಗೆ ಬಿತ್ತು ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ. ರಿಷಬ್ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಅಂದಹಾಗೆ, ಹೊಂಬಾಳೆ ಸಂಸ್ಥೆಯ ನಿರ್ಮಾಣದ ಈ ಚಿತ್ರವು ಮುಂದಿನ ವರ್ಷ ರಿಲೀಸ್ ಆಗಲಿದೆ. ರಿಷಬ್‌ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ.

  • ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‍ಗೆ ಕೋವಿಡ್ ಪಾಸಿಟಿವ್

    ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‍ಗೆ ಕೋವಿಡ್ ಪಾಸಿಟಿವ್

    ಚೆನ್ನೈ: ದಕ್ಷಿಣ ಭಾರತದ ಮಹಾನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

    ಕೀರ್ತಿ ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಎಲ್ಲರಿಗೂ ನಮಸ್ಕಾರ. ನಾನು ಕೋವಿಡ್-19 ಪಾಸಿಟಿವ್ ದೃಢವಾಗಿದೆ. ನಾನು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಸೋಂಕಿನ ಸೌಮ್ಯ ರೋಗಲಕ್ಷಣಗಳು ನನಗೆ ಕಾಣಿಸಿಕೊಂಡಿತು. ಇತ್ತೀಚೆಗೆ ಈ ವೈರಸ್ ಹರಡುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ದಯವಿಟ್ಟು ಎಲ್ಲರೂ ಕೋವಿಡ್ ನ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್

    ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷಿಸಿಕೊಳ್ಳಿ. ನೀವು ಇನ್ನೂ ಲಸಿಕೆ ಹಾಕಿಸಿಕೊಳ್ಳದಿದ್ದರೆ, ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ. ಲಸಿಕೆಯಿಂದ ಸೋಂಕಿನ ತೀವ್ರತೆ ಕಮ್ಮಿ ಇರುತ್ತೆ. ಬೇಗ ಗುಣಮುಖರಾಗಬಹುದು. ನಿಮ್ಮ ಆರೋಗ್ಯಕ್ಕಾಗಿ ದಯವಿಟ್ಟು ಲಸಿಕೆಗಳನ್ನು ಬೇಗ ತೆಗೆದುಕೊಳ್ಳಿ. ನೀವು ಮತ್ತು ನಿಮ್ಮ ಪ್ರೀತಿಪಾತ್ರರು. ನಾನು ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಕೀರ್ತಿ ತೆಲುಗು ಚಿತ್ರ ‘ಮಹಾನಟಿ’ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದು, ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಮೂವೀ ‘ಪೆಂಗ್ವಿನ್’ ಸಿನಿಮಾದ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

    ಕೀರ್ತಿ ಬೆಳ್ಳಿತೆರೆ ಮೇಲೆ ಕೊನೆಯಾದಾಗಿ ರಜನಿಕಾಂತ್ ನಟಿಸಿದ ‘ಅಣ್ಣಾತ್ತೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ‘ಮರಕ್ಕರ್ ಚಿತ್ರದಲ್ಲಿಯೂ ಈ ನಟಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

    ನಿರ್ಮಾಪಕ ಜಿ.ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಪುತ್ರಿ ಕೀರ್ತಿ ಹಲವಾರು ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. 2013 ರ ಮಲಯಾಳಂ ‘ಗೀತಾಂಜಲಿ’ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪೂರ್ಣಪ್ರಮಾಣದ ನಟಿಯಾಗಿ ಪಾದರ್ಪಣೆ ಮಾಡಿದರು. ನಂತರ ರಿಂಗ್ ಮಾಸ್ಟರ್, ಮನ್ಮಧುಡು 2, ಸಂದಕೋಜಿ 2, ರಜಿನಿ ಮುರುಗನ್, ರೆಮೋ ಮತ್ತು ನೇನು ಸೈಲಜಾ ಮುಂತಾದ ಚಿತ್ರಗಳಲ್ಲಿ ನಟಿಸಿದರು.