Tag: National Award

  • ಮೈಸೂರಿನ ವಿಜ್ಞಾನ ಶಿಕ್ಷಕ ಮಧುಸೂದನ್‌ಗೆ ರಾಷ್ಟ್ರ ಪ್ರಶಸ್ತಿ

    ಮೈಸೂರಿನ ವಿಜ್ಞಾನ ಶಿಕ್ಷಕ ಮಧುಸೂದನ್‌ಗೆ ರಾಷ್ಟ್ರ ಪ್ರಶಸ್ತಿ

    ಮೈಸೂರು: ಜಿಲ್ಲೆಯ ವಿಜ್ಞಾನ ಶಿಕ್ಷಕ ಕೆ.ಎಸ್‌.ಮಧುಸೂದನ್‌ (Madhusudan) ಅವರಿಗೆ ಈ ಬಾರಿಯ  ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ (National Teachers’ Award) ಬಂದಿದೆ.

    ಮೈಸೂರಿನ ಹಿನಕಲ್ ಸರ್ಕಾರಿ ಶಾಲೆಯಲ್ಲಿ ಮಧುಸೂದನ್ ವಿಜ್ಞಾನ ಶಿಕ್ಷಕರಾಗಿದ್ದಾರೆ. ವರ್ಚುಯಲ್ ರಿಯಾಲಿಟಿ, ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು ಸರ್ಕಾರಿ ಶಾಲೆ ಬಲವರ್ಧನೆಗೆ ಪಣತೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

    ಕೆ.ಎಸ್‌.ಮಧುಸೂದನ್‌ ನವೋದಯ ಶಾಲೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ನವೋದಯ ಶಾಲೆಯಲ್ಲಿ ಸಿಗುವ ರಾಷ್ಟ್ರಮಟ್ಟದ ಶಿಕ್ಷಣ ರಾಜ್ಯಮಟ್ಟದ ಶಾಲೆಗಳಿಗೂ ಸಿಗಬೇಕೆಂದು ಪಣ ತೊಟ್ಟಿದ್ದಾರೆ. ಈ ಬಾರಿ ದೇಶದ 45 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದ್ದು ಇದರಲ್ಲಿ ರಾಜ್ಯದಿಂದ ಆಯ್ಕೆಯಾದ ಏಕೈಕ ಶಿಕ್ಷಕ ಮಧುಸೂದನ್‌ ಆಗಿರುವುದು ವಿಶೇಷ. ಇದನ್ನೂ ಓದಿ: 99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

    ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಲ್ಯಾಬ್ ರೂಪಿಸಿದ್ದು ಹಿನಕಲ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 7ನೇ ತರಗತಿವರೆಗಿನ ಮಕ್ಕಳಿಗಾಗಿ ಒಂದು ವಿಜ್ಞಾನ ಲ್ಯಾಬ್‌ ನಿರ್ಮಾಣ ಮಾಡಿದ್ದಾರೆ.

    ಬೇಸಿಕ್‌ ಎಲೆಕ್ಟ್ರಾನಿಕ್ಸ್‌ ಕಲಿಕೆ, ಲರ್ನಿಂಗ್‌ ಮ್ಯಾನೇಜ್‌ಮೆಂಟ್‌, ಇಂಗ್ಲಿಷ್‌ ಶಿಕ್ಷಣ, ಕೃತಕ ಬುದಿಮತ್ತೆ, ರೋಬೊಟಿಕ್ಸ್‌ ತಂತ್ರಜ್ಞಾನದ ಶಿಕ್ಷಣ, 1 ಮತ್ತು 2ನೇ ತರಗತಿ ಮಕ್ಕಳಿಗೆ ಪ್ರೊಜೆಕ್ಟರ್‌ ಮೂಲಕ ಸ್ಮಾರ್ಟ್‌ ಕ್ಲಾಸ್‌. ಕ್ಯೂಆರ್‌ ಕೋಡ್‌ ಮತ್ತು ಸ್ಕ್ಯಾ‌ನರ್‌ ಬಳಸಿ ಮಕ್ಕಳ ದಾಖಲಾತಿ ನಮೂದು, ಮಕ್ಕಳ ಹಾಜರಾತಿ ಮಾಹಿತಿಯು ಪಾಲಕರ ಮೊಬೈಲ್‌ಗೆ ರವಾನೆ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ವೆಬ್‌ಸೈಟ್‌ ಮುಖಾಂತರ ಪಡೆದುಕೊಳ್ಳುವ ರೀತಿಯಲ್ಲಿ ಮಧುಸೂದನ್‌ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡಿದ್ದಾರೆ.

  • ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ ಆಗಿದ್ದಾರೆ. ಅವರಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಈ ವೇಳೆ, ಅವರು ದೈವರಾಧನೆಯ ಬಗ್ಗೆ ಮಾತನಾಡಿದ್ದಾರೆ. ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಹೋಗಲು ಸಾಧ್ಯವೇ ಇರಲಿಲ್ಲ ಎಂದು ರಿಷಬ್ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ

    ರಿಷಬ್ ಶೆಟ್ಟಿ ಮಾತನಾಡಿ, ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಈ ಚಿತ್ರವು ದೈವದ ಬಗ್ಗೆ ಹಾಗೂ ದೈವ ನರ್ತಕರ ಸಮುದಾಯದ ಬಗ್ಗೆ ಇರುವ ಸಿನಿಮಾವಾಗಿದೆ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ಅನ್ನು ದೈವ ನರ್ತಕ ಸಮುದಾಯಕ್ಕೆ ಸೇರಬೇಕು. ದೈವದ ಆಶೀರ್ವಾದ ಇಲ್ಲದೇ ಇದ್ದರೆ ನಾವು ಈ ಮಟ್ಟಕ್ಕೆ ಹೋಗಲು ಸಾಧ್ಯವೇ ಇರಲಿಲ್ಲ. ದೈವದ ಆಶೀರ್ವಾದದಿಂದ ಕಾಂತಾರ ಚಿತ್ರ ಇಲ್ಲಿ ತನಕ ಬಂದಿದೆ. ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಸಲ್ಲಿಸುತ್ತೇನೆ ಎಂದು ಮಾತನಾಡಿದ್ದಾರೆ. ‘ಕಾಂತಾರ’ ಸಿನಿಮಾ ಮಾಡುವಾಗ ಅವಾರ್ಡ್ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಎಲ್ಲಾ ಅಭಿಮಾನಿಗಳ ಪ್ರೀತಿಯಿಂದ ಸಾಧ್ಯವಾಗಿದೆ ಎಂದಿದ್ದಾರೆ.

    ಈ ವೇಳೆ, ಕಾಂತಾರ ಚಾಪ್ಟರ್ 1ರ (Kantara Chapter 1) ಬಗ್ಗೆ ಮಾತನಾಡಿ, ಕಾಂತಾರ ಶೂಟಿಂಗ್ ನಡೆಯುತ್ತಿದೆ. ಆದಷ್ಟು ಬೇಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಾರೆ. ‘ಕಾಂತಾರ 1’ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಹಿಂದೆ ‘ಕಾಂತಾರ’ ಚಿತ್ರ ನೋಡಿ ಅದೆಷ್ಟು ಹೆಮ್ಮೆಪಟ್ಟಿದ್ದೀರೋ ಚಿತ್ರದ ಪ್ರೀಕ್ವೆಲ್‌ಗೆ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರಾ ಎಂದಿದ್ದಾರೆ.

    ‘ಕಾಂತಾರ’ ಮಂಗಳೂರಿನಲ್ಲಿ ಶುರುವಾದ ಸಿನಿಮಾ ಆಗಿದೆ. ಪ್ರಶಸ್ತಿ ತಗೊಂಡು ಇಲ್ಲಿಗೆ ಬರುವ ರೀತಿ ಆಗಿದೆ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಇಲ್ಲಿಯೇ ಕಥೆ ಶುರುವಾಗಿದ್ದು, ಪ್ರಶಸ್ತಿಯೂ ಇಲ್ಲಿಗೆ ಬಂದಿದೆ ಎಂದಿದ್ದಾರೆ. ಕಾಂತಾರದ ಇಡೀ ತಂಡವಾಗಿ ನಾವು ಕುಂದಾಪುರದಲ್ಲಿ ನೆಲೆಸಿದ್ದೇವೆ. ಈ ಪ್ರಶಸ್ತಿಯನ್ನ ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್‌ಗೆ ಸಮರ್ಪಿಸುತ್ತೇನೆ. ಯಾವ ಮೂಲದಿಂದ ಬಂದಿದ್ದೇವೋ ಅದನ್ನ ಮರೆಯಬಾರದು ಎಂದು ರಿಷಬ್ ಸ್ಮರಿಸಿದ್ದಾರೆ. ಈ ಪ್ರಶಸ್ತಿಯನ್ನ ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.

  • ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ಗೆ ಕೇಂದ್ರ ಸರ್ಕಾರ ಬಿಗ್ ಶಾಕ್ – ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರದ್ದು

    ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ಗೆ ಕೇಂದ್ರ ಸರ್ಕಾರ ಬಿಗ್ ಶಾಕ್ – ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರದ್ದು

    ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ಗೆ (Jani Master) ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಿದೆ. ಅವರಿಗೆ ನೀಡಲಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (National Film Awards) ರದ್ದುಗೊಳಿಸಿದೆ.

    ಇತ್ತೀಚೆಗೆ ಜಾನಿ ಮಾಸ್ಟರ್‌ ವಿರುದ್ಧ ತಮ್ಮ ಸಹಾಯಕ ನೃತ್ಯ ಸಂಯೋಜಕಿ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದೆ. ಇದನ್ನೂ ಓದಿ: ಜಾನಿ ಮಾಸ್ಟರ್ ಬಂಧನ: ಠಾಣೆ ಮುಂದೆ ಪತ್ನಿ ಹೈಡ್ರಾಮಾ

    2022ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಆಗಸ್ಟ್ ತಿಂಗಳಿನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ. ತಮಿಳಿನ `ತಿರುಚಿತ್ರಂಬಲಂʼ ಚಿತ್ರದ ʻಮೇಘಂ ಕರುಕಥʼ ಗೀತೆಗಾಗಿ ಜಾನಿ ಮಾಸ್ಟರ್ ಮತ್ತು ಸತೀಶ್ ಮಾಸ್ಟರ್ ಅವರಿಗೆ ಉತ್ತಮ ನೃತ್ಯ ಸಂಯೋಜನೆ ವಿಭಾಗದಲ್ಲಿ ಜಂಟಿಯಾಗಿ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಅಕ್ಟೋಬರ್‌ 8 ರಂದು ದೆಹಲಿಯಲ್ಲಿ ಆಯೋಜನೆಯಾಗಿದೆ. ರಾಷ್ಟ್ರಪತಿಗಳು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.

    ಅಕ್ಟೋಬರ್‌ 8ರ ಸಮಾರಂಭಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿವೆ. ಈ ನಡುವೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾನಿ ಮಾಸ್ಟರ್ ಜೈಲಿನಲ್ಲಿದ್ದಾರೆ. ಪೋಕ್ಸೊ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಇದು ಬಹಳ ಗಂಭೀರವಾದ ಪ್ರಕರಣ ಎಂದು ಸರ್ಕಾರ ಮತ್ತು ನ್ಯಾಯಾಲಯ ಪರಿಗಣಿಸಿ ರಾಷ್ಟ್ರ ಪ್ರಶಸ್ತಿಯನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್‌

  • ಭಾರತ ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಎರಡು ಪ್ರತಿಷ್ಠಿತ ಪ್ರಶಸ್ತಿ ಘೋಷಣೆ

    ಭಾರತ ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಎರಡು ಪ್ರತಿಷ್ಠಿತ ಪ್ರಶಸ್ತಿ ಘೋಷಣೆ

    ಬೆಂಗಳೂರು: ಭಾರತ ಚುನಾವಣಾ ಆಯೋಗ (Election Commission of India) ಅತ್ಯುತ್ತಮ ಚುನಾವಣಾ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ (Voter’s Day) ಅಂಗವಾಗಿ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ (National Award) ನಮ್ಮ ರಾಜ್ಯದ (ಕರ್ನಾಟಕ) ಇಬ್ಬರು ಅಧಿಕಾರಿಗಳು ಭಾಜನರಾಗಿದ್ದಾರೆ.

    2023ನೇ ಸಾಲಿನ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಸಾಮಾನ್ಯ ಪ್ರಶಸ್ತಿ ವರ್ಗದಡಿಯಲ್ಲಿ ಚಿತ್ರದುರ್ಗ (Chitradurga) ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾ ಪ್ರಭು (Divya Prabhu) ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಶಿಖಾ.ಸಿ (Shikha C) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ಬಂದ ಹಣ ನಿದ್ರೆಯಲ್ಲಿರುವ ಸಿದ್ದರಾಮಯ್ಯಗೆ ಕಾಣಿಸುತ್ತಿಲ್ಲ: ಬೊಮ್ಮಾಯಿ

    ದಿವ್ಯಾ ಅವರು ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ, ವಿಶೇಷ ಮತದಾರರ ನೋಂದಣಿ ಹೆಚ್ಚಳ ಸೇರಿದಂತೆ ಅವರು ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮರಾಗಿ ಗುರುತಿಸಿಕೊಂಡಿದ್ದನ್ನು ಆಯೋಗ ಪ್ರಶಸ್ತಿಗೆ ಪರಿಗಣಿಸಿದೆ. ಇದನ್ನೂ ಓದಿ: ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ ಪ್ರಯಾಣಿಕರು – ಇಂಡಿಗೋಗೆ 1.2 ಕೋಟಿ ದಂಡ

    ಶಿಖಾ ಅವರು ಕಳೆದ 2023ರ ಸಾಲಿನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಆಯೋಗ ಅವರನ್ನು ಹಾಗೂ ಇಲಾಖೆಯನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ. ಇದನ್ನೂ ಓದಿ: ಅಮಿತ್‌ ಶಾ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ಮಾಜಿ ಸಿಎಂ ಹೆಚ್‌ಡಿಕೆ

    ಆಯೋಗವು ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರನ್ನು ಅಭಿನಂದಿಸಲು ಪ್ರತಿ ವರ್ಷ ಸಾಮಾನ್ಯ ವರ್ಗ, ವಿಶೇಷ ವರ್ಗ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳು ಹಾಗೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಇದನ್ನೂ ಓದಿ: ಪ್ರತಿಭಾವಂತ ಆಟಗಾರ ಪ್ರಖರ್ ಚತುರ್ವೇದಿಯನ್ನು ಅಭಿನಂದಿಸಿದ ಸಿಎಂ

    ಆಯೋಗ ಪ್ರತಿ ವರ್ಷ ನವದೆಹಲಿಯಲ್ಲಿ ಜನವರಿ 25 ರಂದು ಹಮ್ಮಿಕೊಳ್ಳುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾ ದಿನದಂದು ರಜೆ ನೀಡುವಂತೆ ವಕೀಲರ ಸಂಘ ಮನವಿ

  • ರಾಷ್ಟ್ರಪತಿ ಮುರ್ಮು ಅವರಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

    ರಾಷ್ಟ್ರಪತಿ ಮುರ್ಮು ಅವರಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  (National Award) ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ದೆಹಲಿಯಲ್ಲಿ ನಡೆಯಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ರಾಷ್ಟ್ರಪತಿಗಳಾದ ದ್ರೌಪತಿ ಮುರ್ಮು ಅವರು ಪ್ರದಾನ ಮಾಡಿದರು.

    ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777  (Charlie 777) ಚಿತ್ರಕ್ಕೆ ದೊರೆತಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ (Bale bangara) ಪ್ರಶಸ್ತಿ ಪಡೆದಿದೆ.

    ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯು ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (Subramanya Badoor) ಅವರಿಗೆ ದೊರೆತಿದೆ. ಇವರೆಲ್ಲರೂ ಇಂದು ಉಪಸ್ಥಿತರಿದ್ದು ಪ್ರಶಸ್ತಿಗಳನ್ನು ಸ್ವೀಕರಿಸಿದರು.

    ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ (Cinema) ಪ್ರಶಸ್ತಿಯನ್ನು ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡಿ, ಪ್ರದಾನ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ ಕಾಶ್ಮೀರ್ ಫೈಲ್ಸ್: ರಾಷ್ಟ್ರ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರ ಹಾಕಿದ ಅನುಪಮ್ ಖೇರ್

    ದಿ ಕಾಶ್ಮೀರ್ ಫೈಲ್ಸ್: ರಾಷ್ಟ್ರ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರ ಹಾಕಿದ ಅನುಪಮ್ ಖೇರ್

    ಮೊನ್ನೆಯಷ್ಟೇ ಕೇಂದ್ರ ಸರಕಾರ 69ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಈ ಪ್ರಶಸ್ತಿಗಳ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ (The Kashmir Files) ಚಿತ್ರದ ನಟನೆಗಾಗಿ ತಮಗೆ ರಾಷ್ಟ್ರ ಪ್ರಶಸ್ತಿ (National Award) ಬರಬೇಕಿತ್ತು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಚಿತ್ರಕ್ಕೆ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಸಂದಿದ್ದರೆ, ಈ ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕಿ ನಟಿ ಪ್ರಶಸ್ತಿ ಕೂಡ ಚಿತ್ರ ಪಡೆದುಕೊಂಡಿದೆ. ಆದರೆ, ಅನುಪಮ್ ಖೇರ್ (Anupam Kher) ಅವರಿಗೆ ಈ ಸಿನಿಮಾದ ನಟನೆಗಾಗಿ ಪ್ರಶಸ್ತಿ ಬರಬೇಕಿತ್ತು ಎನ್ನುವುದು ನಟನ ವಾದ.

    ದಿ ಕಾಶ್ಮೀರ್ ಫೈಲ್ಸ್  ಸಿನಿಮಾಗೆ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಬಂದಿರುವುದಕ್ಕೆ ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್  ಟೀಕೆ ಮಾಡಿದ್ದರು. ಭಾವೈಕ್ಯತೆಯನ್ನು ಹಾಳು ಮಾಡುವ ಚಿತ್ರಕ್ಕೆ ಅಂಥದ್ದೊಂದು ಪ್ರಶಸ್ತಿ ಕೊಟ್ಟಿರುವುದಕ್ಕೆ ಅವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಕೂಡ ಅಸಮಾಧಾನ ಹೊರ ಹಾಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಿರಿಯ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು)ಗೆ ರಾಷ್ಟ್ರೀಯ ಗರಿ

    Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಿರಿಯ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು)ಗೆ ರಾಷ್ಟ್ರೀಯ ಗರಿ

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  (National Award) ಪ್ರಶಸ್ತಿ ಘೋಷಣೆಯಾಗಿವೆ. ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ  (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯು ಕನ್ನಡದ ಚಲನಚಿತ್ರ ಪತ್ರಕರ್ತರ ಪಾಲಾಗಿದೆ. ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (Subramanya Badoor) ಅವರಿಗೆ ದೊರೆತಿದೆ. ಕನ್ನಡ ಸಿನಿಮಾ ರಂಗಕ್ಕೆ ಬಾ.ನಾ.ಸುಬ್ರಮಣ್ಯ ಎಂದೇ ಖ್ಯಾತರಾಗಿರುವ ಅವರು ಹಲವು ದಶಕಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಈ ಹಿಂದೆ ಎರಡು ಬಾರಿ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯು ಕನ್ನಡಿಗರ ಪಾಲಾಗಿತ್ತು,  ಬ್ಯಾಂಕ್ ಉದ್ಯೋಗಿಯಾಗಿದ್ದ ಎನ್.ಕೆ ರಾಘವೇಂದ್ರ, ಉಪನ್ಯಾಸಕರಾಗಿದ್ದ ಮನು ಚಕ್ರವರ್ತಿ ಅವರು ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಹಲವು ದಶಕಗಳ ಕಾಲ ಕೆಲಸ ಮಾಡಿದ ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಸಂದಿದೆ.

     2021ನೇ ಸಾಲಿ ಅತ್ಯುತ್ತಮ ಸಿನಿಮಾ ಮಾಧವನ್ ನಟನೆಯ ‘ ರಾಕೆಟ್- ದಿ ನಂಬಿ ಎಫೆಕ್ಟ್’ ಅತ್ಯುತ್ತಮ ನಟ ಪ್ರಶಸ್ತಿಯು ತೆಲುಗಿನ ಪುಷ್ಪ (Pushpa) ಚಿತ್ರಕ್ಕಾಗಿ ಅಲ್ಲು ಅರ್ಜುನ್  (Allu Arjun) ಪಡೆದುಕೊಂಡಿದ್ದರೆ, ಅತ್ತುತ್ತಮ ನಟಿ ಪ್ರಶಸ್ತಿ ಇಬ್ಬರ ಪಾಲಾಗಿದೆ. ಗಂಗೂಬಾಯಿ ಕಾಟಿಯಾ ಚಿತ್ರಕ್ಕಾಗಿ ಆಲಿಯಾ ಭಟ್ (Alia Bhatt) ಮತ್ತು ಮಿಮಿ ಚಿತ್ರಕ್ಕಾಗಿ ಕೀರ್ತಿ ಸನನ್ (Keerthy Sanan) ಪಡೆದುಕೊಂಡಿದ್ದಾರೆ.

    ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ (Rakshit Shetty)  ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777  (Charlie 777) ಚಿತ್ರಕ್ಕೆ ದೊರೆತಿದೆ.  ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ (Bale bangara ) ಪ್ರಶಸ್ತಿ ಪಡೆದಿದೆ.  ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.

    ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ (Cinema) ಪ್ರಶಸ್ತಿಯನ್ನು ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅತ್ಯುತ್ತಮ ನಟ ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಮತ್ತು ಕೀರ್ತಿ ಸನನ್

    Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅತ್ಯುತ್ತಮ ನಟ ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಮತ್ತು ಕೀರ್ತಿ ಸನನ್

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  (National Award) ಪ್ರಶಸ್ತಿ ಘೋಷಣೆಯಾಗಿದೆ.  2021ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯು ತೆಲುಗಿನ ಪುಷ್ಪ (Pushpa) ಚಿತ್ರಕ್ಕಾಗಿ ಅಲ್ಲು ಅರ್ಜುನ್  (Allu Arjun) ಪಡೆದುಕೊಂಡಿದ್ದರೆ, ಅತ್ತುತ್ತಮ ನಟಿ ಪ್ರಶಸ್ತಿ ಇಬ್ಬರ ಪಾಲಾಗಿದೆ. ಗಂಗೂಬಾಯಿ ಕಾಟಿಯಾ ಚಿತ್ರಕ್ಕಾಗಿ ಆಲಿಯಾ ಭಟ್ (Alia Bhatt) ಮತ್ತು ಮಿಮಿ ಚಿತ್ರಕ್ಕಾಗಿ ಕೀರ್ತಿ ಸನನ್ (Keerthy Sanan) ಪಡೆದುಕೊಂಡಿದ್ದಾರೆ.

    ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ (Rakshit Shetty)  ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777  (Charlie 777) ಚಿತ್ರಕ್ಕೆ ದೊರೆತಿದೆ.  ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ (Bale bangara ) ಪ್ರಶಸ್ತಿ ಪಡೆದಿದೆ.  ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.

    ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ (Cinema) ಪ್ರಶಸ್ತಿಯನ್ನು ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡುತ್ತಿದೆ.

    ಸಿನಿಮಾ ರಂಗಕ್ಕೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ರಾಷ್ಟ್ರ ಪತಿಗಳೇ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ರಾಷ್ಟ್ರೀಯ ಪ್ರಶಸ್ತಿಗಳ ಚಿತ್ರಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ಚಿತ್ರಗಳು ಸ್ಪರ್ಧಾ ಕಣದಲ್ಲಿ ಇರಲಿವೆ. ಅಲ್ಲದೇ, ಪ್ರಾದೇಶಿಕ ಸಿನಿಮಾಗಳಿಗೆ ನೀಡುವ ಪ್ರಶಸ್ತಿಗಳಿಗೂ ತನ್ನದೇ ಆದ ಘನತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಚಾರ್ಲಿ 777 ಅತ್ಯುತ್ತಮ ಪ್ರಾದೇಶಿಕ ಚಿತ್ರ

    Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಚಾರ್ಲಿ 777 ಅತ್ಯುತ್ತಮ ಪ್ರಾದೇಶಿಕ ಚಿತ್ರ

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  (National Award) ಪ್ರಶಸ್ತಿ ಘೋಷಣೆಯಾಗಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ (Rakshit Shetty)  ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777  (Charlie 777) ಚಿತ್ರಕ್ಕೆ ದೊರೆತಿದೆ.  ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ (Bale bangara ) ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ಪಾಲಾಗಿದೆ. ಉಳಿದಂತೆ ಪ್ರಶಸ್ತಿಗಳು ಘೋಷಣೆ ಆಗುತ್ತಿವೆ. ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.

    ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ (Cinema) ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡುತ್ತಿದೆ.

    ಸಿನಿಮಾ ರಂಗಕ್ಕೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ರಾಷ್ಟ್ರಪತಿಗಳೇ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ರಾಷ್ಟ್ರೀಯ ಪ್ರಶಸ್ತಿಗಳ ಚಿತ್ರಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ಚಿತ್ರಗಳು ಸ್ಪರ್ಧಾ ಕಣದಲ್ಲಿ ಇರಲಿವೆ. ಅಲ್ಲದೇ, ಪ್ರಾದೇಶಿಕ ಸಿನಿಮಾಗಳಿಗೆ ನೀಡುವ ಪ್ರಶಸ್ತಿಗಳಿಗೂ ತನ್ನದೇ ಆದ ಘನತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ‘ಬಾಳೆ ಬಂಗಾರ’ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ

    Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ‘ಬಾಳೆ ಬಂಗಾರ’ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  (National Award) ಪ್ರಶಸ್ತಿ ಘೋಷಣೆಯಾಗಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ಪಾಲಾಗಿದೆ. ಉಳಿದಂತೆ ಪ್ರಶಸ್ತಿಗಳು ಘೋಷಣೆ ಆಗುತ್ತಿವೆ. ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.