Tag: national anthem

  • ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ

    ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ

    ಲಕ್ನೋ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯು ತರಗತಿಗಳು ಪ್ರಾರಂಭವಾಗುವ ಮೊದಲು ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

    ಅಲ್ಪಸಂಖ್ಯಾತರಿಗೆ ಮದರಸಾ ಶಿಕ್ಷಣ ನಿರ್ಣಾಯಕ. ರಾಷ್ಟ್ರಗೀತೆಯನ್ನು ಹಾಡಿದಾಗ ವಿದ್ಯಾರ್ಥಿಗಳು ಸಮಾಜದ ಮೌಲ್ಯಗಳನ್ನು ಕಲಿಯುತ್ತಾರೆ. ಮದರಸಾ ಶಿಕ್ಷಣದ ಉನ್ನತಿಗೆ ಸರ್ಕಾರ ಶ್ರಮಿಸುತ್ತಿದೆ. ಈಗ ಮದರಸಾ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ಜೊತೆಗೆ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಾರೆ ಎಂದು ಸಚಿವ ದ್ಯಾನಿಶ್‌ ಆಜಾದ್‌ ಅನ್ಸಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ನೀವು ಕೋರ್ಟ್ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ: ತಾಜ್ ಮಹಲ್ ಕುರಿತ ಅರ್ಜಿ ತಿರಸ್ಕರಿಸಿದ ಕೋರ್ಟ್

    ಮಾರ್ಚ್ 24 ರಂದು ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ, ಹೊಸ ಶೈಕ್ಷಣಿಕ ವರ್ಷದಿಂದ ತರಗತಿಗಳು ಪ್ರಾರಂಭವಾಗುವ ಮೊದಲು ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಿಸಲು ನಿರ್ಧರಿಸಲಾಯಿತು.

    ರಂಜಾನ್ ಪ್ರಯುಕ್ತ ಮಾರ್ಚ್ 30ರಿಂದ ಮೇ 11ರವರೆಗೆ ಮದರಸಾಗಳನ್ನು ಮುಚ್ಚಲಾಗಿತ್ತು. ಗುರುವಾರದಿಂದ ತರಗತಿಗಳು ಪುನರಾರಂಭಗೊಂಡಿವೆ. ಈಗ ಉತ್ತರ ಪ್ರದೇಶದ ಮದರಸಾಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳು ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಹಾಡಬೇಕು ಎನ್ನಲಾಗಿದೆ. ಇದನ್ನೂ ಓದಿ: ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ: ಕೋರ್ಟ್‌

  • ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

    ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

    ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ತತ್ತರಿಸಿದೆ. ಇದರ ಮಧ್ಯೆ ಉಕ್ರೇನ್ ಪ್ರಜೆಗಳು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ರಾಷ್ಟ್ರಭಕ್ತಿಯನ್ನು ತೋರಿಸುತ್ತಿರವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

    ರಷ್ಯಾ, ಉಕ್ರೇನ್‍ನ ಮೇಲೆ ಕ್ಷೀಪಣಿ ದಾಳಿ ನಡೆಸಿದ ಪರಿಣಾಮ ಉಕ್ರೇನಿನ ಕಟ್ಟಡಕ್ಕೆ ಹಾನಿಯಾಗಿತ್ತು. ಈ ವೇಳೆ ಮಹಿಳೆಯೊಬ್ಬಳು ಉಕ್ರೇನ್‍ನ ರಾಷ್ಟ್ರಗೀತೆ ಹಾಡುತ್ತಾ ಮನೆ ಸ್ವಚ್ಛಗೊಳಿಸುತ್ತಿರುವ ಮನಮಿಡಿಯುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಮಹಿಳೆಯು ಕಣ್ಣೀರಿಡುತ್ತಾ ಉಕ್ರೇನ್ ರಾಷ್ಟ್ರಗೀತೆ ಹಾಡುತ್ತಿದ್ದಾಳೆ. ನಂತರ ಕ್ಷಿಪಣಿಯಿಂದ ಹಾನಿಗೊಳಗಾದ ಕಿಟಕಿಯ ಗಾಜಿನ ಚೂರನ್ನು ತೆಗೆಯುತ್ತಿರುವುದನ್ನು ಕಾಣಬಹುದಾಗಿದೆ. ನಿನ್ನೆ ರಾಜಧಾನಿ ಕೈವ್‍ನ ಹೊರವಲಯದಲ್ಲಿ ಉಕ್ರೇನಿಯನ್ ರಾಷ್ಟ್ರಗೀತೆಯನ್ನು ಕಹಳೆಯಲ್ಲಿ ನುಡಿಸುತ್ತಿದ್ದರು. ನೆರೆಹೊರೆಯ ಜನರು ಉಕ್ರೇನ್‍ನ ವೈಭವ ಎಂದು ಕೂಗುವುದರ ವೀಡಿಯೋವೊಂದು ವೈರಲ್ ಆಗಿತ್ತು. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಉಕ್ರೇನ್‍ನ ರಸ್ತೆಗಳಲ್ಲಿ ಬಾಂಬ್ ದಾಳಿ, ಅಪಾರ್ಟ್‍ಮೆಂಟ್‍ಗಳ ಮೇಲೆ ರಷ್ಯಾ ಸೈನಿಕರು ಮಿಸೈಲ್ ದಾಳಿ ಮಾಡುತ್ತಿದ್ದಾರೆ. ಬಂಕರ್‌ಗಳ ಹೊರಗೆ ಬಾಂಬ್ ಸದ್ದು ಕೇಳಿಸುತ್ತಿದ್ದು, ಜನ ಜೀವ ಭಯದಲ್ಲಿದ್ದಾರೆ. ಉಕ್ರೇನ್‍ನ ಕಾರ್ಕೀವ್ ಹಾಗೂ ಕೀವ್‍ನಲ್ಲಿ ರಾತ್ರಿಯೂ ಗುಂಡಿನ ಮೊರೆತ ಕೇಳಿಸಿತ್ತು. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು

  • ಖಾರವಾದ ಕಮೆಂಟ್ ನೋಡಿ ತಪ್ಪನ್ನು ಒಪ್ಪಿಕೊಂಡ ಕಿಚ್ಚನಿಗೆ ಮೆಚ್ಚುಗೆಯ ಚಪ್ಪಾಳೆ

    ಖಾರವಾದ ಕಮೆಂಟ್ ನೋಡಿ ತಪ್ಪನ್ನು ಒಪ್ಪಿಕೊಂಡ ಕಿಚ್ಚನಿಗೆ ಮೆಚ್ಚುಗೆಯ ಚಪ್ಪಾಳೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಷ್ಟ್ರ ಗೀತೆಯನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ರಾಷ್ಟ್ರಗೀತೆಯನ್ನು 48-52 ಸೆಕೆಂಡ್ ಒಳಗೆ ಹಾಡಬೇಕು ಎಂಬ ಕಾಮನ್ ಸೆನ್ಸ್ ಇಲ್ವಾ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದು, ಕಿಚ್ಚ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗಿತ್ತು. ಈ ಮಧ್ಯೆ ಸೆಲೆಬ್ರಿಟಿಗಳು ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ನಡುವೆ ಕಿಚ್ಚ ಸುದೀಪ್‍ರವರು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ರಾಷ್ಟ್ರಗೀತೆಯನ್ನು 48 ರಿಂದ 52 ಸೆಕೆಂಡ್ ಒಳಗೆ ಹಾಡಬೇಕು ಆದರೆ ಸುದೀಪ್ 65 ಸೆಕೆಂಡ್‍ಗಳವರೆಗೆ ಹಾಡಿದ್ದಾರೆ.

    ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಸರಿಯಾಗಿ ರಾಷ್ಟ್ರಗೀತೆ ಹಾಡಿ ಸರ್, ನಿಮ್ಮನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ನೀವು ಟಾಪ್ ನಟ ಆಗಿರಬಹುದು ಆದರೆ 48-52 ಸೆಕೆಂಡ್‍ಗಳ ಒಳಗೆ ರಾಷ್ಟ್ರ ಗೀತೆಯನ್ನು ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಇಲ್ವಾ ಎಂದು ಪ್ರಶ್ನಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ಇದಕ್ಕೆ ಸುದೀಪ್ ಇದು ತುಂಬ ಒರಟಾಗಿದೆ ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ಏನು ಅನಿಸಿತೋ ಅದನ್ನು ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕಿಚ್ಚ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಮ್ಮದು ದೊಡ್ಡ ಗುಣ, ನೀವು ನಿಜವಾದ ಜಂಟಲ್ ಮ್ಯಾನ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ನೆಟ್ಟಿಗರ ಕಮೆಂಟ್ ಸಂಬಂಧ ಸುದೀಪ್ ಮಾಡಿದ ಟ್ವೀಟ್‍ಗೆ 3 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ – ಅಭಿಮಾನಿಗಳಲ್ಲಿ ಅರವಿಂದ್ ಮನವಿ

  • ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಿದ ಡಿವೈಎಸ್‍ಪಿ

    ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಿದ ಡಿವೈಎಸ್‍ಪಿ

    ಚಾಮರಾಜನಗರ: ಮತಾಂತರ ವಿರೋಧಿ ಹೋರಾಟ ಸಮಿತಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ನಗರ ಮಂಡಲದ ವತಿಯಿಂದ ಇಂದು ಚಾಮರಾಜನಗರದಲ್ಲಿ ಮತಾಂತರ ವಿರೋಧಿಸಿ ಜಾಗೃತಿ ಜಾಥಾ ನಡೆಯಿತು.

    ನಗರದ ಮಾರೀಗುಡಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮತಾಂತರ ನಿಲ್ಲಿಸುವಂತೆ ಘೋಷಣೆ ಕೂಗುತ್ತಾ ಅಲ್ಲಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ-209 ಹಾದುಹೋಗಿರುವ ಶ್ರೀ ಭುವನೇಶ್ವರಿ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ರಚಿಸಿ ಮತಾಂತರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ಬಳಿಕ ವಾಹನದಲ್ಲಿ ಮೈಕ್ ಕಟ್ಟಿಕೊಂಡು ಘೋಷಣೆ ಕೂಗುತ್ತಾ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹೊರಟ ಜಾಗೃತಿ ಜಾಥಾ ಜಿಲ್ಲಾಡಳಿತದ ಭವನ ತಲುಪಲು ಮುಂದಾಯಿತು. ಈ ವೇಳೆ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲೇ ಮೈಕ್ ಮೂಲಕ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರನ್ನು ಹಾಗೂ ಮೈಕ್ ಕಟ್ಟಿದ್ದ ವಾಹನವನ್ನು ತಡೆಯುತ್ತಿದ್ದಂತೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು.

    ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ಬೇರೆ ಸ್ವರೂಪ ಪಡೆದುಕೊಳ್ಳುತ್ತಿರುವ ಪರಿಸ್ಥಿತಿಯನ್ನು ಅರಿತ ಚಾಮರಾಜನಗರ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಪ್ರತಿಭಟನಾಕಾರರಿಂದ ಮೈಕ್ ಕಿತ್ತುಕೊಂಡು ರಾಷ್ಟ್ರಗೀತೆ ಆರಂಭಿಸಿದರು. ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಕೂಗಾಟವನ್ನು ಬಿಟ್ಟು ಡಿವೈಎಸ್‍ಪಿ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು.

    ಬಳಿಕ ಪ್ರತಿಭಟನಾಕಾರರು ಜಿಲ್ಲಾಡಳಿತ ಪ್ರವೇಶದ್ವಾರದ ಒಳಗೆ ಪ್ರವೇಶಿಸಿ ರಸ್ತೆ ಬದಿಯಲ್ಲೇ ಕುಳಿತು ಮತಾಂತರಿಗಳು ಹಾಗೂ ಜಿಲ್ಲಾಡಳಿತದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

  • ನೆಲಮಂಗಲದಲ್ಲಿ ಬಿಹಾರಿಗಳ ಗಲಾಟೆ ತಡೆಯಲು ರಾಷ್ಟ್ರಗೀತೆ ಹಾಡಿದ ಸಿಪಿಐ

    ನೆಲಮಂಗಲದಲ್ಲಿ ಬಿಹಾರಿಗಳ ಗಲಾಟೆ ತಡೆಯಲು ರಾಷ್ಟ್ರಗೀತೆ ಹಾಡಿದ ಸಿಪಿಐ

    ಬೆಂಗಳೂರು: ಬಿಹಾರಿ ಕಾರ್ಮಿಕರ ಗಲಾಟೆಯನ್ನು ತಡೆಯವುದು ಹರಸಾಹಸವನ್ನೇ ಪಟ್ಟಿದ್ದರು. ನಂತರ ಗಲಾಟೆ ಹತೋಟಿಗೆ ಬಂದಿತ್ತು. ಗಲಾಟೆ ನಿಯಂತ್ರಣದ ವಿಡಿಯೋ ಇದೀಗ ವೈರಲ್ ಆಗಿದ್ದು, ಗಲಾಟೆ ಸಮಯದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಗಲಾಟೆ ಕಡಿಮೆ ಮಾಡಲು ಇನ್ಸ್ ಪೆಕ್ಟರ್ ಪ್ಲಾನ್ ಮಾಡಿ, ಮಾದನಾಯಕನಹಳ್ಳಿ ಠಾಣೆ ಸಿಪಿಐ ಸತ್ಯನಾರಾಯಣ ಅವರು ಗಲಾಟೆ ಸಮಯದಲ್ಲಿ ಜನಗಣ ಮನ ಹಾಡಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ರೊಂದಿಗೆ ಬಿಹಾರಿ ವಲಸೆ ಕಾರ್ಮಿಕರು ಸಹ ರಾಷ್ಟ್ರಗೀತೆ ಹಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಲಸೆ ಕಾರ್ಮಿಕರ ಗಲಾಟೆ ನಿಯಂತ್ರಿಸಿದ ಪರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಮೂರು ದಿನಗಳ ಹಿಂದೆ ನೆಲಮಂಗಲ ಸಮೀಪದ ಮಾದಾವಾರದ ಬಿಐಇಸಿ ಬಳಿ ಬಿಹಾರಿ ವಲಸೆ ಕಾರ್ಮಿಕರ ಗಲಾಟೆ ನಡೆದಿತ್ತು. ನಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಿ ಎಂದು ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಪೀಣ್ಯ ಇನ್ಸ್‍ಪೆಕ್ಟರ್ ಮುದ್ದುರಾಜ್ ಮೇಲೆ ಬಿಹಾರಿಗಳು ಹಲ್ಲೆ ಮಾಡಿದ್ದರು. ನಂತರ ಗಲಾಟೆ ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

  • ರಾಷ್ಟ್ರಗೀತೆ ಹಾಡಿ ಪೊಲೀಸರಿಗೆ ಗುಲಾಬಿ ಕೊಟ್ಟ ಪ್ರತಿಭಟನಾಕಾರರು

    ರಾಷ್ಟ್ರಗೀತೆ ಹಾಡಿ ಪೊಲೀಸರಿಗೆ ಗುಲಾಬಿ ಕೊಟ್ಟ ಪ್ರತಿಭಟನಾಕಾರರು

    ಧಾರವಾಡ: ರಾಷ್ಟ್ರಗೀತೆ ಹಾಡಿ, ಪೊಲೀಸರಿಗೆ ಗುಲಾಬಿ ಹೂವು ನೀಡಿ ಪ್ರತಿಭಟನಾಕಾರರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು.

    ಧಾರವಾಡ ಹ್ಯುಮಾನಿಟಿ ಫೌಂಡೇಶನ್ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಂಧಿ ಪ್ರತಿಮೆ ಎದುರು ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿತು. ಈ ವೇಳೆ ಕಾರ್ಯಕರ್ತರು ರಾಷ್ಟ್ರಗೀತೆ ಹಾಡಿ, ಪೋಲೀಸ್ ಸಿಬ್ಬಂದಿಗೆ ಗುಲಾಬಿ ಹೂವುಗಳನ್ನು ನೀಡಿ ಎಲ್ಲರ ಗಮನ ಸೆಳೆದರು.

    ಪ್ರತಿಭಟನೆ ಮಧ್ಯೆ ರಾಷ್ಟ್ರಗೀತೆ ಹಾಡಿ ರಾಷ್ಟ್ರ ಪ್ರೇಮ ಮೆರೆದ ಪ್ರತಿಭಟನಾಕರರು, ಜಿಲ್ಲಾಧಿಕಾರಿಗಳ ಮೂಲಕ ಸುಪ್ರೀಂ ಕೊರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು. ಈ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಹಿಂಪಡೆಯಬೇಕು. ಇದು ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆಯಾಗಿದ್ದು, ಸರ್ಕಾರ ಈ ಕಾಯ್ದೆ ಜಾರಿಯಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿಕೊಂಡರು.

  • ಪ್ರತಿಭಟನೆಯಲ್ಲಿ ರಾಷ್ಟ್ರಗೀತೆ ಹಾಡಿದ ಕಾರಣ ಬಿಚ್ಚಿಟ್ಟ ಡಿಸಿಪಿ ಚೇತನ್ ಸಿಂಗ್ ರಾಥೋಡ್

    ಪ್ರತಿಭಟನೆಯಲ್ಲಿ ರಾಷ್ಟ್ರಗೀತೆ ಹಾಡಿದ ಕಾರಣ ಬಿಚ್ಚಿಟ್ಟ ಡಿಸಿಪಿ ಚೇತನ್ ಸಿಂಗ್ ರಾಥೋಡ್

    ಬೆಂಗಳೂರು: ಕರುನಾಡಿನಲ್ಲಿ ಪೌರತ್ವದ ಜ್ವಾಲೆ ಉರಿಯುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದರೂ ಪ್ರತಿಭಟನೆಯ ಕಾವು ಜೋರಾಗಿದೆ. ಅದ್ರಂತೆ ಬೆಂಗಳೂರಿನ ಟೌನ್‍ಹಾಲ್ ನಲ್ಲಿಯೂ ನಿನ್ನೆ ಪ್ರತಿಭಟನೆ ನಡೆಯಿತು. ಈ ವೇಳೆ ಭದ್ರತೆಯ ನೇತೃತ್ವವಹಿಸಿದ್ದ ಡಿಸಿಪಿ ಚೇತನ್ ಸಿಂಗ್ ರಾಥೋಢ್ ಪ್ರತಿಭಟನಾನಿರತರನ್ನು ರಾಷ್ಟ್ರಗೀತೆ ಹಾಡುವ ಮೂಲಕ ಮನವೊಲಿಸಿದ ವಿಡಿಯೋ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು.

    ಈ ಬಗ್ಗೆ ಇಂದು ಟೌನ್ ಹಾಲ್‍ನಲ್ಲಿ ಮಾತನಾಡಿದ ಚೇತನ್ ಸಿಂಗ್, ರಾಷ್ಟ್ರಗೀತೆ ಹಾಡಲು ಕಾರಣವೇನು ಎಂಬುದನ್ನ ಬಿಚ್ಚಿಟ್ಟಿದ್ದಾರೆ. ನಿನ್ನೆ ಪರಿಸ್ಥಿತಿಯನ್ನ ನಿಭಾಯಿಸುವಲ್ಲಿ ನಮ್ಮ ಸಿಬ್ಬಂದಿ ಸಾಕಷ್ಟು ಶ್ರಮಪಟ್ಟಿದ್ದಾರೆ. ನಿನ್ನೆಯ ಪ್ರತಿಭಟನೆಯ ವೇಳೆ ಕೆಲ ಕಿಡಿಗೇಡಿಗಳು ಶಾಂತಿ ಸುವ್ಯವಸ್ಥೆ ಕದಡಲು ಸಂಚು ರೂಪಿಸಿದ್ದರು. ಈ ವೇಳೆ ನಾನು ಪ್ರತಿಭಟನಾಕಾರ ಜೊತೆ ಮಾತುಕತೆ ಮುಂದಾದೆ ಎಂದರು.

    ಪ್ರತಿಭಟನೆ ವೇಳೆ ಬಹಳಷ್ಟು ಜನರ ಕೈಯಲ್ಲಿ ರಾಷ್ಟ್ರಧ್ವಜಗಳನ್ನು ನೋಡಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ರಾಷ್ಟ್ರಗೀತೆಯ ಬಗ್ಗೆ ಗೌರವ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ ನಾನು ರಾಷ್ಟ್ರಗೀತೆ ಹಾಡಿದೆ. ಇದಕ್ಕೆ ಎಲ್ಲರು ಎದ್ದು ನಿಂತು ಗೌರವ ಸೂಚಿಸಿದರು. ಕೆಲ ಪ್ರತಿಭಟನಾಕಾರರು ಪೊಲೀಸರನ್ನೇ ಟ್ಯಾಕಲ್ ಮಾಡಲು ಮುಂದಾಗಿದ್ದರು. ಮಕ್ಕಳನ್ನ ಪ್ರತಿಭಟನೆಗೆ ಕರೆದಂತು ಪೊಲೀಸರನ್ನು ಟ್ಯಾಕಲ್ ಮಾಡಲು ಮುಂದಾಗಿದ್ದರು ಎಂದು ಚೇತನ್ ಸಿಂಗ್ ತಿಳಿಸಿದರು.

    ನಡೆದಿದ್ದೇನು?
    ಬೆಂಗಳೂರು ಕೇಂದ್ರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಗುರುವಾರ ಟೌನ್ ಹಾಲ್‍ನಲ್ಲಿ ಪ್ರತಿಭಟನಾಕಾರರನ್ನು ಸ್ಥಳದಿಂದ ಕಳುಹಿಸಲು ರಾಷ್ಟ್ರಗೀತೆ ಹಾಡಿದ್ದರು. ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಸ್ಥಳದಿಂದ ಎದ್ದು ನಿಂತರು. ಬಳಿಕ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು.

    ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡಿದ ಕೆಲವೇ ಕ್ಷಣದಲ್ಲಿ ಪೌರತ್ವ ಕಾಯ್ದೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಬಳಿ ವಾದ ಮಾಡದೆ ತಾವು ಇದ್ದ ಸ್ಥಳವನ್ನು ಖಾಲಿ ಮಾಡಿದ್ದರು. ಡಿಸಿಪಿ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗಿತ್ತು ಜೊತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

  • ಠಾಣೆಯ ಮುಂದೆಯೇ ನಮಾಜ್ – ಪ್ರತಿಭಟನಾಕಾರರನ್ನು ಶಾಂತಗೊಳಿಸಲು ರಾಷ್ಟ್ರಗೀತೆ ಹಾಡಿದ ಎಸ್‍ಪಿ, ಡಿಸಿ

    ಠಾಣೆಯ ಮುಂದೆಯೇ ನಮಾಜ್ – ಪ್ರತಿಭಟನಾಕಾರರನ್ನು ಶಾಂತಗೊಳಿಸಲು ರಾಷ್ಟ್ರಗೀತೆ ಹಾಡಿದ ಎಸ್‍ಪಿ, ಡಿಸಿ

    ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಾವಣಗೆರೆ ಮುಸ್ಲಿಂ ಮುಖಂಡರು ಅಜಾದ್ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ್ದರು. ಅಲ್ಲದೆ ನಮಾಜ್ ಮಾಡಿ ಪ್ರತಿಭಟನೆ ಮಾಡಿದರು. ಆಗ ಪ್ರತಿಭಟನಾಕಾರರನ್ನು ಮನವೊಲಿಸುವ ಎಸ್‍ಪಿ ಹಾಗೂ ಜಿಲ್ಲಾಧಿಕಾರಿಗಳು ರಾಷ್ಟ್ರಗೀತೆಯನ್ನು ಹಾಡಿ ಮುಸ್ಲಿಂ ಮುಖಂಡರನ್ನು ಮನವೊಲಿಸಿದ್ದಾರೆ.

    ನಗರದ ಅಜಾದ್ ನಗರ ಪೊಲೀಸ್ ಠಾಣೆಗೆ ಮುಸ್ಲಿಂ ಸಂಘಟನೆ ಹಾಗೂ ಮುಖಂಡರು ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲು ಅನುಮತಿಯನ್ನು ಪಡೆಯಲು ಬಂದಿದ್ದರು. ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಇರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಪ್ರತಿಭಟನಾ ರ‍್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದರು. ಇದನ್ನು ವಿರೋಧಿಸಿ ಠಾಣೆಯ ಮುಂಭಾಗ ನೂರಾರು ಮುಸ್ಲಿಂ ಬಾಂಧವರು ಆಗಮಿಸಿ ರ‍್ಯಾಲಿಗೆ ಅನುಮತಿ ನೀಡಬೇಕೆಂದು ಪಟ್ಟು ಹಿಡಿದರು. ಅಲ್ಲದೆ ಠಾಣೆಯ ಮುಂದೆಯೇ ನಮಾಜ್ ಮಾಡಲು ಮುಂದಾದರು. ಆಗ ಪೊಲೀಸರು ಅವರಿಗೆ ಚಾಪೆಗಳನ್ನು ನೀಡಿ ನಮಾಜ್ ಮಾಡಲು ಸಹಕರಿದರು. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ

    ನಮಾಜ್ ಬಳಿಕ ಎಸ್.ಪಿ ಹನುಮಂತರಾಯ ಅವರು ಮುಸ್ಲಿಂ ಮುಖಂಡರನ್ನು ಮನವೊಲಿಸಲು ಪ್ರಯತ್ನಿಸಿದರು. ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು ನಿಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂದು ಸಮಾಧಾನ ಪಡಿಸಲು ಮುಂದಾದರು. ಅದನ್ನು ಕೇಳದ ಮುಸ್ಲಿಂ ಮುಖಂಡರು ಅನುಮತಿಗಾಗಿ ಪಟ್ಟು ಹಿಡಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರನ್ನು ಕೂಡ ಸುತ್ತುವರೆದರು.

    ಆದ್ದರಿಂದ ಮುಸ್ಲಿಂ ಮುಖಂಡರ ಮನವಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಎಸ್‍ಪಿ ಅವರು ಸ್ವಿಕರಿಸಿದ್ದು, ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಅವರು ರಾಷ್ಟ್ರಗೀತೆ ಹಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ

    ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ

    ಬೆಂಗಳೂರು: ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಡಿಸಿಪಿ ರಾಷ್ಟ್ರಗೀತೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಬೆಂಗಳೂರು ಕೇಂದ್ರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಗುರುವಾರ ಟೌನ್ ಹಾಲ್‍ನಲ್ಲಿ ಪ್ರತಿಭಟನಾಕಾರರನ್ನು ಸ್ಥಳದಿಂದ ಕಳುಹಿಸಲು ರಾಷ್ಟ್ರಗೀತೆ ಹಾಡಿದರು. ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಸ್ಥಳದಿಂದ ಎದ್ದು ನಿಂತರು. ಬಳಿಕ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು.

    ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡಿದ ಕೆಲವೇ ಕ್ಷಣದಲ್ಲಿ ಪೌರತ್ವ ಕಾಯ್ದೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಬಳಿ ವಾದ ಮಾಡದೆ ತಾವು ಇದ್ದ ಸ್ಥಳವನ್ನು ಖಾಲಿ ಮಾಡಿದ್ದರು. ಸದ್ಯ ಡಿಸಿಪಿ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುವ ಹಿನ್ನೆಲೆಯಲ್ಲಿ ಇಂದು ಸಹ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಮುಂದುವರಿಯಲಿದೆ. ಗುರುವಾರ ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಹಲವಾರು ಮಂದಿ ಪ್ರತಿಭಟನೆ ನಡೆಸಿದರು.

    ಗುರುವಾರ 244 ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು 8 ಎಫ್‍ಐಆರ್ ಗಳನ್ನು ದಾಖಲಿಸಿದ್ದರು. ನಗರದಲ್ಲಿ ಇಂದು ಸಹ ಕೆಲವರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡುಕೊಂಡಿರುವ ಪೊಲೀಸರು ಪ್ರತಿಭಟನೆ ಮಾಡದಂತೆ ಕರೆ ನೀಡಿದ್ದಾರೆ.

  • ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ.

    ಸಾಮಾನ್ಯವಾಗಿ ಅಂತಾರಾಷ್ಟೀಯ ಮಟ್ಟದ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುತ್ತಾರೆ. ಆದರೆ ಐಪಿಎಲ್ ಕೂಡ ವಿಶ್ವದ ನಂಬರ್ ಒನ್ ಕ್ರಿಕೆಟ್ ಲೀಗ್ ಆಗಿದೆ. ಆದ್ದರಿಂದ ಐಪಿಎಲ್ ಪ್ರತಿ ಪಂದ್ಯದ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಹಾಡಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಅತ್ಯುತ್ತಮ ನಡೆ. ಸಮಾರಂಭಕ್ಕೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಬದಲು ಪಂದ್ಯ ಮತ್ತು ಕ್ರೀಡಾ ಕೂಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

    ನಾನು ಈ ವಿಚಾರವಾಗಿ ಈ ಮುಂಚೆಯೇ ಬಿಸಿಸಿಐಗೆ ಪತ್ರ ಬರೆದಿದ್ದೆ. ಆದರೆ ಈಗ ನೇರವಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರಗೀತೆಯನ್ನು ನಮ್ಮ ದೇಶದಲ್ಲಿ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಮತ್ತು ಪ್ರೊ-ಕಬ್ಬಡಿ ಲೀಗ್ ಪಂದ್ಯಗಳ ಆರಂಭಕ್ಕೂ ಮುನ್ನ ಹಾಡಿಸುತ್ತಾರೆ. ಹೊರ ದೇಶಗಳಲ್ಲೂ ಕೂಡ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ ಐಪಿಎಲ್ ಲೀಗ್‍ನಲ್ಲೂ ಈ ವಿಧಾನ ಜಾರಿಗೆ ತರಬೇಕು ಎಂದು ವಾಡಿಯಾ ಮನವಿ ಮಾಡಿದ್ದಾರೆ.

    ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಪ್ರತಿ ಐಪಿಎಲ್ ಆವೃತ್ತಿ ಆರಂಭದ ಸಮಯದಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆ ಆಗುತಿತ್ತು. ಈ ಉದ್ಘಾಟನಾ ಸಮಾರಂಭಕ್ಕೆ ಸೌರವ್ ಗಂಗೂಲಿ ಬ್ರೇಕ್ ಹಾಕಿದ್ದಾರೆ. ಇಲ್ಲಿಯವರೆಗೆ ಬಿಸಿಸಿಐ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರಲಿಲ್ಲ. ಗಂಗೂಲಿ ಅಧ್ಯಕ್ಷರಾದ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಗಲು ರಾತ್ರಿ ಪಂದ್ಯ ಬಾಂಗ್ಲಾ ವಿರುದ್ಧ ನ.22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ.