Tag: nation chief

  • ನಾಳೆ ಬಳ್ಳಾರಿಗೆ ಬರಲಿದ್ದಾರೆ ಚುನಾವಣಾ ಚಾಣಕ್ಯ ಅಮಿತ್ ಶಾ!

    ನಾಳೆ ಬಳ್ಳಾರಿಗೆ ಬರಲಿದ್ದಾರೆ ಚುನಾವಣಾ ಚಾಣಕ್ಯ ಅಮಿತ್ ಶಾ!

    ಬಳ್ಳಾರಿ: ಬಿಜೆಪಿ ನಡೆಸುತ್ತಿರುವ ಕರುನಾಡ ಯಾತ್ರೆ ಅಂಗವಾಗಿ ನಾಳೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಣಿನಗರಿ ಬಳ್ಳಾರಿಗೆ ಭೇಟಿ ನೀಡಲಿದ್ದಾರೆ.

    ಈ ಕುರಿತು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಅಮಿತ್ ಶಾ ಅವರು ನಾಳೆ ಬೆಳಗ್ಗೆ 10.30ರ ಸುಮಾರಿಗೆ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

    ತದನಂತರ ಕನಕದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆವರೆಗೆ ನಡೆಯುವ ರೋಡ್ ಶೋನಲ್ಲಿ ಭಾಗಿಯಾಗಿ ಬಿಜೆಪಿ ಪರ ಮತ ಯಾಚನೆ ನಡೆಸಲಿದ್ದಾರೆ. ಈ ಸಂದರ್ಭ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಜಿಲ್ಲಾ ಬಿಜೆಪಿ ಮುಖಂಡರು, ನಗರ ಕ್ಷೇತ್ರದ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಸಣ್ಣಫಕೀರಪ್ಪ ಸಾಥ್ ನೀಡಲಿದ್ದಾರೆ.

    ತದನಂತರ ಅಮಿತ್ ಶಾ ಮತ್ತು ಬಿಎಸ್ ವೈ ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ಜಿಲ್ಲೆಯ ಕುಕನೂರಿನಲ್ಲಿ ಮಧ್ಯಾಹ್ನ 4 ಗಂಟೆಗೆ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

    https://twitter.com/BSYBJP/status/989300581993984000

  • ನವ ಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ- ಜನತೆಗೆ ಯುಗಾದಿ ಶುಭಾಶಯ ಕೋರಿದ ಶಾ, ಮೋದಿ

    ನವ ಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ- ಜನತೆಗೆ ಯುಗಾದಿ ಶುಭಾಶಯ ಕೋರಿದ ಶಾ, ಮೋದಿ

    ಬೆಂಗಳೂರು: ಇಂದು ನಾಡಿನಾದ್ಯಂತ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ- ಸಡಗರದಿಂದ ಆಚರಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನತೆಗೆ ಶುಭಾಶಯ ತಿಳಿಸಿದ್ದಾರೆ.

    ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆಯುರಾರೋಗ್ಯವನ್ನು ಆ ದೇವರು ಕರುಣಿಸಲಿ ಅಂತ ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ಪ್ರಧಾನಿ ವಿಶ್ ಮಾಡಿದ್ದಾರೆ.

    ರಾಜ್ಯದ ಜನತೆಗೆ ಕನ್ನಡದಲ್ಲೇ ಶಭಾಶಯ ತಿಳಿಸಿದ ಅಮಿತ್ ಶಾ, ನವ ಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ ಅಂತ ಹೇಳಿದ್ದಾರೆ. ತಮ್ಮ ಟ್ವೀಟ್ ನಲ್ಲಿ `ಚಾಂದ್ರಮಾನ ಯುಗಾದಿಯ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಮಸ್ತ ನಾಗರಿಕರ ಬದುಕು ಸುಖ, ಶಾಂತಿ, ಸಮೃದ್ಧಿ ಮತ್ತು ಆಯುರಾರೋಗ್ಯದಿಂದ ಕೂಡಿರಲಿ ಎಂದು ಆಶಿಸುತ್ತೇನೆ. ಬನ್ನಿ, ನವಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಅಂತ ಹೇಳಿದ್ದಾರೆ.