Tag: Nathan Lyon

  • WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

    WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

    ಲಂಡನ್‌: ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ (WTC) 2ನೇ ಆವೃತ್ತಿಯಲ್ಲಿ ಮೊದಲಬಾರಿಗೆ ಆಸ್ಟ್ರೇಲಿಯಾ (Australia) ಚಾಂಪಿಯನ್‌ ಪಟ್ಟಕೇರಿದೆ. ಅಗ್ರಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ (Team India) ಸತತ ಎರಡನೇ ಬಾರಿ ಫೈನಲ್‌ನಲ್ಲಿ ಸೋತು ರನ್ನರ್‌ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    2019ರಲ್ಲಿ ಆರಂಭಗೊಂಡ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲೇ ನ್ಯೂಜಿಲೆಂಡ್‌ (New Zealand) ತಂಡ ಭಾರತದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2ನೇ ಆವೃತ್ತಿಯಲ್ಲಿ ಆಸೀಸ್‌ ಬೌಲರ್‌ಗಳ ದಾಳಿಗೆ ತುತ್ತಾದ ಭಾರತ ಮತ್ತೊಮ್ಮೆ ಹೀನಾಯ ಸೋಲನುಭವಿಸಿ ಹೊರನಡೆದಿದೆ.

    2ನೇ ಇನ್ನಿಂಗ್ಸ್‌ನಲ್ಲಿ 444 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 4ನೇ ದಿನದ ಅಂತ್ಯಕ್ಕೆ 40 ಓವರ್‌ಗಳಲ್ಲಿ 164 ರನ್‌ ಗಳಿಸಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಕೊನೆಯ ದಿನದಂದು ಭಾರತದ ಗೆಲುವಿಗೆ 280‌ ರನ್‌ಗಳ ಅಗತ್ಯವಿತ್ತು. ಆದರೆ ಇಂದು 22.3 ಓವರ್‌ಗಳಲ್ಲಿ 70 ರನ್‌ ಗಳಿಸಿದ ಭಾರತ ಅಂತಿಮವಾಗಿ 63.3 ಓವರ್‌ಗಳಲ್ಲಿ 234 ರನ್‌ ಗಳಿಗೆ ಸರ್ವಪತನ ಕಂಡಿತು. 209 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಸೀಸ್‌ ಮೊದಲ ಬಾರಿಗೆ ಚಾಂಪಿಯನ್‌ಶಿಪ್‌ ಜಯಿಸಿತು.

    5ನೇ ದಿನದ ಇನ್ನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ (Virat Kohli) ಹಾಗೂ ಅಜಿಂಕ್ಯಾ ರಹಾನೆ (Ajinkya Rahane) ಅವರ ವಿಕೆಟ್‌ ಕಳೆದುಕೊಳ್ಳುವುದರೊಂದಿಗೆ ಭಾರತದ ಪತನ ಆರಂಭವಾಯಿತು. ಕೊನೆಯ ದಿನ 22.3 ಓವರ್‌ಗಲ್ಲಿ 70 ರನ್‌ ಗಳಿಸುವಷ್ಟರಲ್ಲೇ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ಹೀನಾಯ ಸೋಲನುಭವಿಸಿತು.

    173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 4ನೇ ದಿನದಾಟದಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಉಳಿದ ಒಂದೂವರೆ ದಿನದಲ್ಲಿ ಭಾರತಕ್ಕೆ ಗೆಲ್ಲಲು 444 ರನ್‌ಗಳ ಬೃಹತ್ ಗುರಿ ನೀಡಿತು. ಭಾರತ 4ನೇ ದಿನದ ಅಂತ್ಯಕ್ಕೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿತ್ತು.

    ನಾಲ್ಕನೇ ದಿನದಾಟದಲ್ಲಿ ಭಾರತದ ಪರ ಶುಭಮನ್‌ ಗಿಲ್‌ (Shubman Gill) ಹಾಗೂ ನಾಯಕ ರೋಹಿತ್‌ ಶರ್ಮಾ (Rohit Sharma) ಜೋಡಿ ಮೊದಲ ವಿಕೆಟ್‌ಗೆ 41 ರನ್‌ ಜೊತೆಯಾಟವಾಡಿದರೆ, ರೋಹಿತ್‌ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ 2ನೇ ವಿಕೆಟ್‌ಗೆ 51 ರನ್‌ ಜೊತೆಯಾಟವಾಡಿತು. ನಂತರ ಜೊತೆಗೂಡಿದ ರಹಾನೆ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಮುರಿಯದ 4ನೇ ವಿಕೆಟ್‌ಗೆ 71 ರನ್‌ ಜೊತೆಯಾಟ ನೀಡಿತು.

    ಭಾನುವಾರ ಕೊನೆಯದಿನದ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆಸೀಸ್‌ ಬೌಲರ್‌ಗಳ ದಾಳಿ ಎದುರಿಸುವಲ್ಲಿ ವಿಫಲವಾಯಿತು. ವಿರಾಟ್‌ ಕೊಹ್ಲಿ ಹಾಗೂ‌ ಅಜಿಂಕ್ಯಾ ರಹಾನೆ ಜೋಡಿ ಔಟಾಗುತ್ತಿದ್ದಂತೆ ತಂಡದ ಒಂದೊಂದೆ ವಿಕೆಟ್‌ ಪತನಗೊಂಡಿತು. ಅಂತಿಮವಾಗಿ ಭಾರತ 234 ರನ್‌ಗಳಿಗೆ ಸರ್ವಪತನಕಂಡಿತು. ವಿರಾಟ್‌ ಕೊಹ್ಲಿ 49 ರನ್‌ (78 ಎಸೆತ, 7 ಬೌಂಡರಿ), ಅಜಿಂಕ್ಯಾ ರಹಾನೆ 46 ರನ್‌ (108 ಎಸೆತ, 7 ಬೌಂಡರಿ), ಶ್ರೀಕಾರ್‌ ಭರತ್‌ 23 ರನ್‌, ಮೊಹಮ್ಮದ್‌ ಶಮಿ 13 ರನ್‌ ಗಳಿಸಿದರು.

    ಆಸೀಸ್ ಪರ ಸ್ಪಿನ್‌ ದಾಳಿ ನಡೆಸಿದ ನಥಾನ್‌ ಲಿಯಾನ್‌ 4 ವಿಕೆಟ್‌ ಪಡೆದರೆ, ಸ್ಕಾಟ್ ಬೋಲ್ಯಾಂಡ್ 3 ವಿಕೆಟ್‌, ಮಿಚೆಲ್‌ ಸ್ಟಾರ್ಕ್‌ 2 ವಿಕೆಟ್‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ 1 ವಿಕೆಟ್‌ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌: 469/10
    ಭಾರತ ಮೊದಲ ಇನ್ನಿಂಗ್ಸ್‌: 296/10
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌: 270/8d
    ಭಾರತ ಎರಡನೇ ಇನ್ನಿಂಗ್ಸ್‌: 234/10

  • ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

    ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

    ಇಂದೋರ್: 2ನೇ ದಿನದಾಟದಲ್ಲಿ ನಥನ್ ಲಿಯಾನ್ (Nathan Lyon) ಸ್ಪಿನ್ ಬೌಲಿಂಗ್ ದಾಳಿಗೆ ಪಲ್ಟಿ ಹೊಡೆದ ಭಾರತ (Team India) 163 ರನ್‌ಗಳಿಗೆ ಸರ್ವಪತನ ಕಂಡಿದ್ದು ಆಸ್ಟ್ರೇಲಿಯಾಗೆ (Australia) 76 ರನ್ ಗುರಿಯನ್ನು ನೀಡಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕಾರ್ ಟ್ರೋಫಿ 3ನೇ ಪಂದ್ಯದಲ್ಲಿ 2ನೇ ದಿನ 16 ವಿಕೆಟ್ ಪತನಗೊಂಡಿದೆ. ಎರಡು ದಿನದಲ್ಲಿ 30 ವಿಕೆಟ್ ಉರುಳಿದೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    ಮೊದಲ ದಿನದ ಅಂತ್ಯಕ್ಕೆ 54 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡ 2ನೇ ದಿನದಲ್ಲಿ ಕೇವಲ ಹೆಚ್ಚುವರಿ 41 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೊನೆಯ 11 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಪರಿಣಾಮ 197 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಭಾರತದ ಪರ ವಿಶೇಷ ಸಾಧನೆಗೈದ ಜಡೇಜಾ

    ನಂತರ ತನ್ನ ಸರದಿ ಆರಂಭಿಸಿದ ರೋಹಿತ್ ಪಡೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾದ ರೋಹಿತ್ ಶರ್ಮಾ (Rohit Sharma), ಶುಭಮನ್ ಗಿಲ್ ಜೋಡಿ ಉತ್ತಮ ಶುಭಾರಂಭ ನೀಡುವಲ್ಲಿ ವಿಫಲವಾಯಿತು. ರೋಹಿತ್ 12 ರನ್‌ಗಳಿಸಿದ್ರೆ, ಗಿಲ್ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ಈ ವೇಳೆ ತಂಡಕ್ಕೆ ನೆರವಾದ ಚೇತೇಶ್ವರ್ ಪೂಜಾರ 142 ಎಸೆತಗಳಲ್ಲಿ 59 ರನ್ ಬಾರಿಸಿ ಭಾರತ 150 ರನ್‌ಗಳ ಗಡಿ ದಾಟಲು ನೆರವಾದರು. ಶ್ರೇಯಸ್ ಅಯ್ಯರ್ 26 ರನ್ ಗಳಿಸಿದರು. ನಂತರ ಭಾರತ ಒಂದೊಂದೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡೂ ದಿನಗಳಲ್ಲೂ ಅಕ್ಷರ್ ಪಟೇಲ್ ಕ್ರಮವಾಗಿ 12, 15 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 2ನೇ ದಿನದ ಅಂತ್ಯಕ್ಕೆ 60.3 ಓವರ್‌ಗಳಲ್ಲಿ 163 ರನ್‌ಗಳಿಗೆ ಭಾರತ ಸರ್ವಪತನ ಕಂಡಿತು.

    ಟೀಂ ಇಂಡಿಯಾ ಪರ ಆರ್.ಅಶ್ವಿನ್ (Ravichandran Ashwin) 3 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 689 ವಿಕೆಟ್ ಪಡೆಯುವ ಮೂಲಕ 687 ವಿಕೆಟ್ ಪಡೆದ ಟೀಂ ಇಂಡಿಯಾ ಲೆಜೆಂಡರಿ ಕಪಿಲ್ ದೇವ್ ಅವರ ದಾಖಲೆ ಮುರಿದರು. ರವೀಂದ್ರ ಜಡೇಜಾ (Ravindra Jadeja) 4 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮೂರು ವಿಕೆಟ್ ಕಬಳಿಸಿದರು.

    ಮೂರನೇ ಟೆಸ್ಟ್ ಪಂದ್ಯದಲ್ಲೂ ಮಿಂಚಿದ ಆಸ್ಟ್ರೇಲಿಯಾ ಕ್ರಿಕೆಟಿಗ ನಥನ್ ಲಿಯಾನ್ ಸ್ಪಿನ್ ದಾಳಿಯ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳನ್ನ ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾದರು. 23.1 ಓವರ್‌ಗಳಲ್ಲಿ 64 ರನ್ ನೀಡಿ, ಶುಭಮನ್ ಗಿಲ್, ರೋಹಿತ್, ಜಜೇಡಾ, ಭರತ್, ಅಶ್ವಿನ್, ಪೂಜಾರ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ವಿಕೆಟ್ ಉರುಳಿಸುವ ಮೂಲಕ ಟೀಂ ಇಂಡಿಯಾವನ್ನು 163 ರನ್‌ಗಳಿಗೆ ಕಟ್ಟಿಹಾಕಿದರು. ಮ್ಯಾಥಿವ್ ಕುಹ್ನೆಮನ್, ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

  • ಕಪಿಲ್‍ದೇವ್ ಸಾಧನೆ ಹಿಂದಿಕ್ಕಿದ ರವಿಚಂದ್ರನ್ ಅಶ್ವಿನ್

    ಕಪಿಲ್‍ದೇವ್ ಸಾಧನೆ ಹಿಂದಿಕ್ಕಿದ ರವಿಚಂದ್ರನ್ ಅಶ್ವಿನ್

    ಇಂದೋರ್: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಇಂದು ಮೂರು ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಪೀಟರ್ ಹ್ಯಾಂಡ್ಸಕೊಂಬ್ (Peter Handscomb), ಅಲೆಕ್ಸ್ ಕಾರೈ (Alex Carey) ಮತ್ತು ನಾಥನ್ ಲಿಯಾನ್ (Nathan Lyon) ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಗೈದಿದ್ದಾರೆ. ಅಂತರಾಷ್ಟ್ರೀಯ ಪಂದ್ಯದಲ್ಲಿ ಇಂದಿನ ಮೂರು ವಿಕೆಟ್‍ಗಳು ಸೇರಿ 689 ವಿಕೆಟ್ ಅಶ್ವಿನ್‌ ಪಡೆದಿದ್ದಾರೆ.

    ಅನಿಲ್ ಕುಂಬ್ಳೆ (Anil Kumble) 953 ವಿಕೆಟ್ ಹಾಗೂ ಹರ್ಬಜನ್ ಸಿಂಗ್ 7ಂ7 ವಿಕೆಟ್ ಪಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ. ಈ ಮೊದಲು ಕಪಿಲ್‍ದೇವ್ 687 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

    ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ (Australia) ಇಂದು 88 ರನ್ ಮುನ್ನಡೆ ಪಡೆದು 197 ರನ್‍ಗಳಿಗೆ ಆಲೌಟ್ ಆಯ್ತು.  ಇದನ್ನೂ ಓದಿ: ನಾಗಾಲ್ಯಾಂಡ್‍ಗೆ ಮೊದಲ ಶಾಸಕಿಯಾಗಿ NDPP ಅಭ್ಯರ್ಥಿ ಎಂಟ್ರಿ

  • ಜಡೇಜಾ ಜಾದು – ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ

    ಜಡೇಜಾ ಜಾದು – ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ

    ನವದೆಹಲಿ: ಜಡೇಜಾ (Ravindra Jadeja) ಸ್ಪಿನ್ ಜಾದುವಿನಿಂದಾಗಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 6 ವಿಕೆಟ್‌ಗಳ ಜಯ ಸಾಧಿಸಿ ಬಾರ್ಡರ್ ಗಾವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

    ಇಂದು ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ರವೀಂದ್ರ ಜಡೇಜಾ ಬೌಲಿಂಗ್ ದಾಳಿಗೆ ಪಲ್ಟಿ ಹೊಡೆಯಿತು. ನಿನ್ನೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ (Travis Head) 43 ರನ್, ಲಾಬುಶೇನ್ 35 ರನ್‌ಗಳಿಗೆ ಔಟಾದರು. ಪರಿಣಾಮ ಆಸ್ಟ್ರೇಲಿಯಾ 31.1 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಬೌಲರ್‌ಗಳ ಆಟಕ್ಕೆ ಕಂಗಾಲು – ಮೊದಲ ದಿನವೇ ಆಸೀಸ್ ಸರ್ವಪತನ

    Team India 3

    114 ರನ್‌ಗಳ ಸುಲಭ ಗುರಿ ಪಡೆದ ಭಾರತ 26.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 118 ರನ್‌ಗಳಿಸಿ ಭರ್ಜರಿ ಜಯ ಸಾಧಿಸಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ (Rohit Sharma) 20 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 31 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಇದನ್ನೂ ಓದಿ: ಲಿಯಾನ್ ಬೌಲಿಂಗ್‌ಗೆ ಭಾರತ ಪಲ್ಟಿ – ಆಸ್ಟ್ರೇಲಿಯಾಗೆ 62 ರನ್‌ಗಳ ಮುನ್ನಡೆ

    Axar Patel

    ಕೆ.ಎಲ್ ರಾಹುಲ್ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗೆ ಗುರಿಯಾದರು. ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ವಿರಾಟ್ ಕೊಹ್ಲಿ (Virat Kohli) 31 ಎಸೆತಗಳಲ್ಲಿ 20 ರನ್ ಗಳಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶ್ರೀಕರ್ ಭರತ್ ಹಾಗೂ ಚೇತೇಶ್ವರ ಪೂಜಾರ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ತಾಳ್ಮೆಯ ಆಟವಾಡಿದ ಪೂಜಾರ ಅಜೇಯ 31 ರನ್ (74 ಎಸೆತ, 4 ಬೌಂಡರಿ) ಗಳಿಸಿದರೆ, 22 ಎಸೆತ ಎದುರಿಸಿದ ಶ್ರೀಕರ್ ಭರತ್ 3 ಬೌಂಡರಿ, 1 ಸಿಕ್ಸರ್ ನೊಂದಿಗೆ 23 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    Australia 2

    2ನೇ ಟೆಸ್ಟ್ ಪಂದ್ಯದಲ್ಲೂ ಅದ್ಭುತ ಫಾರ್ಮ್ ಮುಂದುವರಿಸಿದ ಜಡೇಜಾ 7 ವಿಕೆಟ್ ಪಡೆದು ಮಿಂಚಿದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಆಸ್ಟ್ರೇಲಿಯಾ ತಂಡದ ಪರ ನಥನ್ ಲಿಯಾನ್ (Nathan Lyon) 2 ವಿಕೆಟ್, ಟಾಡ್ ಮರ್ಫಿ 1 ವಿಕೆಟ್ ಪಡೆದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಿಯಾನ್ ಬೌಲಿಂಗ್‌ಗೆ ಭಾರತ ಪಲ್ಟಿ – ಆಸ್ಟ್ರೇಲಿಯಾಗೆ 62 ರನ್‌ಗಳ ಮುನ್ನಡೆ

    ಲಿಯಾನ್ ಬೌಲಿಂಗ್‌ಗೆ ಭಾರತ ಪಲ್ಟಿ – ಆಸ್ಟ್ರೇಲಿಯಾಗೆ 62 ರನ್‌ಗಳ ಮುನ್ನಡೆ

    ನವದೆಹಲಿ: 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ (Australia) ಆಟಗಾರ ನಥನ್ ಲಿಯಾನ್ (Nathan Lyon) ಸ್ಪಿನ್ ದಾಳಿಗೆ ಭಾರತ ಪಲ್ಟಿ ಹೊಡೆದಿದ್ದು, 262 ರನ್‌ಗಳಿಗೆ ಆಲೌಟ್ ಆಗಿದೆ.

    2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದ ಅಂತ್ಯಕ್ಕೆ 12 ಓವರ್‌ಗಳಲ್ಲಿ 61 ರನ್‌ಗಳಿಸಿ 62 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದ 2ನೇ ದಿನದಾಟದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದ್ದು, ಮೂರನೇ ದಿನದಾಟಕ್ಕೆ ರೋಚಕ ತಿರುವು ಪಡೆದುಕೊಂಡಿದೆ.

    ಇಂದು ಇನ್ನಿಂಗ್ಸ್ ಆರಂಭಿಸಿದ್ದ ಭಾರತ ನಥನ್ ಲಿಯಾನ್ ಸ್ಪಿನ್ ದಾಳಿಗೆ ಪಲ್ಟಿಹೊಡೆಯಿತು. ಘಟಾನುಘಟಿಗಳಾದ ರೋಹಿತ್ ಶರ್ಮಾ (Rohit Sharma), ಕೆ.ಎಲ್.ರಾಹುಲ್ (KL Rahul), ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ ಲಿಯಾನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಪರಿಣಾಮ ಭಾರತ 262 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಬೌಲರ್‌ಗಳ ಆಟಕ್ಕೆ ಕಂಗಾಲು – ಮೊದಲ ದಿನವೇ ಆಸೀಸ್ ಸರ್ವಪತನ

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ 32 ರನ್‌ಗಳಿಗೆ, ಕೆ.ಎಲ್.ರಾಹುಲ್ 17 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಶ್ರೇಯಸ್ ಅಯ್ಯರ್ 4 ರನ್, ಶ್ರೀಕರ್ ಭರತ್ 6 ರನ್‌ಗಳಿಸಿ ಪೆವಿಲಿಯನ್ ಸೇರಿದ್ರೆ, ಚೇತೇಶ್ವರ್ ಪೂಜಾರ ಶೂನ್ಯಕ್ಕೆ ನಿರ್ಗಮಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಜೋಡಿ ಉತ್ತಮ ಇನ್ನಿಂಗ್ಸ್ಕಟ್ಟಲು ಪ್ರಯತ್ನಿಸಿದರು. ಕೊಹ್ಲಿ 44 ರನ್ (84 ಎಸೆತ, 4 ಬೌಂಡರಿ) ಗಳಿಸಿದ್ರೆ, ಜಡೇಜಾ 26 ರನ್‌ಗಳಿಸಿದ್ದರು. ಅಷ್ಟರಲ್ಲಿ ಆಸೀಸ್ ಬೌಲರ್‌ಗಳು ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿ, ಪೆವಿಲಿಯನ್ ದಾರಿ ತೋರಿಸಿದರು. ಇದನ್ನೂ ಓದಿ: ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ – ಸಿನಿ ತಾರೆ ಸಪ್ನಾ ಗಿಲ್ ಅರೆಸ್ಟ್

    ಅಕ್ಷರ್ ಪಟೇಲ್ ಫಿಫ್ಟಿ:
    ನಂತರ ಕಣಕ್ಕಿಳಿದ್ದ ಅಕ್ಷರ್ ಪಟೇಲ್ (Axar Patel) ಸಿಕ್ಸರ್, ಬೌಂಡರಿಗಳನ್ನು ಸಿಡಿಸುತ್ತಾ ಉತ್ತಮ ಬ್ಯಾಟಿಂಗ್ ಮಾಡಿದರು. 115 ಎಸೆತಗಳಲ್ಲಿ 74 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸಿ ಮಿಂಚಿದರು. ಇದಕ್ಕೆ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್ ಸಹ 71 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 37 ರನ್ ಗಳಿಸಿ ತಂಡಕ್ಕೆ ನೆರವಾದರು. ನಂತರ ಬಂದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಕ್ರಮವಾಗಿ 2, 1 ರನ್‌ಗಳಿಸಿ ಔಟಾದರು. ಇದಲ್ಲದೇ ತಂಡಕ್ಕೆ ಹೆಚ್ಚುವರಿಯಾಗಿ 19 ರನ್ ಸೇರ್ಪಡೆಯಾಯಿತು.

    ಅಂತಿಮವಾಗಿ 2ನೇ ದಿನದಾಟದ ಅಂತ್ಯಕ್ಕೆ ಭಾರತ 262 ರನ್‌ಗಳಿಗೆ ಆಲೌಟ್ ಆಯಿತು. ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 12 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್‌ಗಳಿಸಿ 62 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಆರಂಭಿಕರಾಗಿ ಕಣಕ್ಕಿಳಿದ ಉಸ್ಮಾನ್ ಖವಾಜ ಜಡೇಜಾ ಸ್ಪಿನ್ ದಾಳಿಗೆ ಔಟಾಗಿ ಪೆವಿಲಿಯನ್ ಸೇರಿದರು. ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್ 39 (40 ಎಸೆತ, 5 ಬೌಂಡರಿ, 1 ಸಿಕ್ಸ್) ಗಳಿದರೆ, ಮಾರ್ನಸ್ ಲಾಬುಶೇನ್ 16 ರನ್ (19 ಎಸೆತ, 3 ಬೌಂಡರಿ) ಗಳಿಸಿದ್ದು, ಭಾನುವಾರ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

    ಆಸ್ಟ್ರೇಲಿಯಾ ತಂಡದ ಪರ ನಥನ್ ಲಿಯಾನ್ 5 ವಿಕೆಟ್ ಕಬಳಿಸಿದರೆ, ಮ್ಯಾಥ್ಯೂ ಕುಹ್ನೆಮನ್, ಟಾಡ್ ಮರ್ಫಿ ತಲಾ 2 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿನಗಿನ್ನು ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್‍ ಕಂಡು ಲಯನ್ ಪ್ರಶ್ನಿಸಿದ್ದು ಹೀಗೆ!

    ನಿನಗಿನ್ನು ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್‍ ಕಂಡು ಲಯನ್ ಪ್ರಶ್ನಿಸಿದ್ದು ಹೀಗೆ!

    ಸಿಡ್ನಿ: ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಮಹತ್ವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದು, ಆದರೆ ಪೂಜಾರನ್ನು ಔಟ್ ಮಾಡಲು ಆಸೀಸ್ ಬೌಲರ್ ಗಳು ಪರದಾಟ ನಡೆಸಿದ್ದಾರೆ. ಈ ನಡುವೆ ಆಸೀಸ್ ಬೌಲರ್ ನಾಥನ್ ಲಯನ್ ಕೂಡ ನೇರ ಪೂಜಾರ ಬಳಿ ತೆರಳಿ ನಿನಗೆ ಇನ್ನು ಬೋರ್ ಆಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಲಯನ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಮಾಧ್ಯಮವೊಂದು ಈ ಸಂಭಾಷಣೆಯನ್ನು ವರದಿ ಮಾಡಿದೆ. ನಾನ್ ಸ್ಟ್ರೈಕ್ ನಲ್ಲಿದ್ದ ಪೂಜಾರ ಶತಕ ಸಿಡಿಸಿದ ಸಂಭ್ರಮದಲ್ಲಿದ್ದರು. ಆ ವೇಳೆ ನಾಥನ್ ಲಯನ್ ಪ್ರಶ್ನೆ ಮಾಡಿದ್ದು, ಇದನ್ನು ಕೇಳಿಸಿಕೊಂಡ ಪೂಜಾರ ನಸು ನಕ್ಕು ಸುಮ್ಮನಾಗಿದ್ದಾರೆ.

    114 ಇನ್ನಿಂಗ್ಸ್ ಗಳಲ್ಲಿ ವೃತ್ತಿ ಜೀವನದ 18ನೇ ಶತಕ ಪೂರೈಸಿದ ಪೂಜಾರ ಟೀಂ ಇಂಡಿಯಾ ಪರ ವಿವಿಎಸ್ ಲಕ್ಷ್ಮಣ್ ಹಾಗೂ ದಿಲೀಪ್ ವೆಂಗ್‍ಸರ್ಕಾರ್ ದಾಖಲೆಯನ್ನು ಮುರಿದರು. ಅಲ್ಲದೇ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದರು. ವಿವಿಎಸ್ ಲಕ್ಷ್ಮಣ್, ದಿಲೀಪ್ ವೆಂಗ್‍ಸರ್ಕಾರ್ ತಲಾ 17 ಶತಕ ಸಿಡಿಸಿದ್ದಾರೆ. ಆಸೀಸ್ ಟೂರ್ನಿಯಲ್ಲಿ ಪೂಜಾರ ಅವರ 3ನೇ ಶತಕ ಇದಾಗಿದೆ.

    1 ಸಾವಿರ ಎಸೆತ: ಪೂಜಾರ ಕೇವಲ ರನ್ ಗಳಿಸುವುದರಲ್ಲಿ ಮಾತ್ರವಲ್ಲದೇ 1 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಆಸೀಸ್ ನೆಲದ ಟೆಸ್ಟ್ ಪಂದ್ಯದ ಸರಣಿಯಲ್ಲಿ ಎದುರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ, ವಿಜಯ್ ಹಜಾರೆ ಅವರ ಸಾಲಿಗೆ ಸೇರಿದರು.

    ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಪೂಜಾರ, 3ನೇ ಟೆಸ್ಟ್ ಮೊದಲ ದಿನ ಮತ್ತೆ ಶತಕ ಸಿಡಿಸಿದ್ದರು. ಆದರೆ 2ನೇ ಇನ್ನಿಂಗ್ಸ್ ನಲ್ಲಿ ಶೂನ್ಯ ಸುತ್ತಿ ನಿರಾಸೆ ಮೂಡಿಸಿದ್ದರು. ಸದ್ಯ ಅಂತಿಮ ಟೆಸ್ಟ್ ಪಂದ್ಯದಲ್ಲಿ 130 ರನ್ ಗಳಿಸಿರುವ ಪೂಜಾರ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡು ಆಸೀಸ್ ಬೌಲರ್ ಗಳಿಗೆ ತಲೆ ನೋವಾಗಿ ಪರಿಣಾಮಿಸಿದ್ದಾರೆ.

    https://twitter.com/narangmrinal/status/1080709940405096448?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv