Tag: Natasha

  • ಪಾಂಡ್ಯ ಜೊತೆ ಏನಿಲ್ಲ, ಏನೇನಿಲ್ಲ: ಡಿವೋರ್ಸ್ ವಿಚಾರ ವಾಪಸ್ಸು ಪಡೆದ ಪಾಂಡ್ಯ ಪತ್ನಿ

    ಪಾಂಡ್ಯ ಜೊತೆ ಏನಿಲ್ಲ, ಏನೇನಿಲ್ಲ: ಡಿವೋರ್ಸ್ ವಿಚಾರ ವಾಪಸ್ಸು ಪಡೆದ ಪಾಂಡ್ಯ ಪತ್ನಿ

    ತ್ತೀಚೆಗೆ ಕ್ರಿಕೆಟ್ (Cricket) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸುದ್ದಿ ಅಂದ್ರೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya) ದಾಂಪತ್ಯ ಜೀವನ ಮುರಿದ ಬೀಳುವ ಹಂತದಲ್ಲಿದ್ದ ಸಂಗತಿ. ಈ ಬಗ್ಗೆ ಹಾರ್ದಿಕ್ ಆಗಲಿ ಪತ್ನಿ ನತಾಶಾ (Natasha) ಆಗಲಿ ಯಾವ ವಿಚಾರವನ್ನೂ ಬಾಯ್ಬಿಟ್ಟು ಹೇಳದಿದ್ದರೂ ದಂಪತಿ ನಡವಳಿಕೆ, ಇನ್ಸ್ಟಾದಲ್ಲಿ ಹಾಕುತ್ತಿದ್ದ ಸ್ಟೋರಿಸ್ ಈ ಬಗ್ಗೆ ಸುಳಿವು ನೀಡಿತ್ತು. ಇದರಲ್ಲೂ ವಿಚ್ಛೇದನದ ಪರಿಹಾರವಾಗಿ ನತಾಶಾ, ಪತಿ ಹಾರ್ದಿಕ್ ಪಾಂಡ್ಯ ಆಸ್ತಿಯ ಶೇಕಡಾ 70ರಷ್ಟು ಭಾಗ ಕೇಳಿದ್ದಾರೆ ಅನ್ನೋ ವದಂತಿಯಂತೂ ಪಾಂಡ್ಯ ಅಭಿಮಾನಿಗಳನ್ನ ರೊಚ್ಚಿಗೇಳುವಂತೆ ಮಾಡಿತ್ತು. ಆದರೆ ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪಾಂಡ್ಯ ಫ್ಯಾನ್ಸ್ ನಿಟ್ಟುಸಿರು ಬಿಡುವಂತಹ ಬೆಳವಣಿಗೆಯಾಗಿದೆ.

    ಇನ್ನೇನು ಹಾರ್ದಿಕ್ ಪಾಂಡ್ಯ- ನತಾಶಾ ದೂರಾಗೇಬಿಟ್ಟರು ಎನ್ನುವ ವೇಳೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದಂಪತಿ ಮುನಿಸು ಮರೆತು ಒಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು ಎನ್ನುವಂತೆ ನತಾಶಾ ಸೋಷಿಯಲ್ ಮೀಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದ ಮದುವೆ ಫೋಟೋಗಳನ್ನ ಹಿಂಪಡೆದಿದ್ದಾರೆ. ಇತ್ತೀಚೆಗೆ ಮಾಧ್ಯಮದ ಮುಂದೆ ನತಾಶಾ ಕಾಣಿಸ್ಕೊಂಡಾಗ ಡಿವೋರ್ಸ್ ಬಗ್ಗೆ ಪ್ರಶ್ನೆ ಎದುರಾಗಿದ್ದರೂ ಏನನ್ನೂ ಹೇಳದೆ ಮುಂದೆ ಸಾಗಿದ್ದರು. ಅವರೊಟ್ಟಿಗೆ ಜಿಮ್ ಟ್ರೈನರ್ ಕೂಡ ಇದ್ರು. ಅವರನ್ನೇ ನತಾಶಾಳ ಹೊಸ ಬಾಯ್‌ಫ್ರೆಂಡ್ ಎಂದು ಅನುಮಾನಪಡಲಾಗಿತ್ತು. ಆದರೆ ನತಾಶಾ ನಡೆಗೆ ತೀವ್ರ ವಿರೋಧ ಬಂದ ಹಿನ್ನೆಲೆ ಹಾಗೂ ಮಗುವಿನ ಭವಿಷ್ಯಕ್ಕಾಗಿ ವಿಚ್ಛೇದನ ನಿರ್ಧಾರ ಹಿಂದಪಡೆದಿದ್ದಾರೆ ದಂಪತಿ ಎನ್ನಲಾಗುತ್ತಿದೆ.

    ಸೆರ್ಬಿಯನ್ ಮೂಲದ ಡಾನ್ಸರ್ ಕಂ ಮಾಡೆಲ್ ಆಗಿದ್ದ ನತಾಶಾ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. ಕನ್ನಡದ ದನಕಾಯೋನು ಚಿತ್ರದ ಹಾಡೊಂದಕ್ಕೂ ಹೆಜ್ಜೆ ಹಾಕಿದ್ದರು. ಹೀಗೆ ಸಿನಿಮಾರಂಗದಲ್ಲಿದ್ದಾಗಲೇ ಹಾರ್ದಿಕ್ ಪಾಂಡ್ಯ ಜೊತೆ ಪರಿಚಯ ಪ್ರೀತಿ ಬೆಳದಿತ್ತು. ಇಬ್ಬರೂ ಸಹಜೀವನ ನಡೆಸಿ ಮಗುವನ್ನೂ ಪಡೆದುಕೊಂಡ್ರು. ಈ ದಂಪತಿಗೆ ಅಗಸ್ತ್ಯ  ಹೆಸರಿನ ನಾಲ್ಕು ವರ್ಷದ ಗಂಡು ಮಗುವಿದೆ. ಮಗನಿಗೆ ಎರಡು ವರ್ಷವಿದ್ದಾಗ ಮಗುವಿನ ಮುಂದೇ ಈ ದಂಪತಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರ್ತಾರೆ. ನಟ ಯಶ್ ಸೇರಿ ಹಲವು ಬಾಲಿವುಡ್ ನಟ ನಟಿಯರು ಕ್ರಿಕೆಟ್ ತಾರೆಯರೂ ಅದ್ದೂರಿ ಮದುವೆಗೆ ಸಾಕ್ಷಿಯಾಗಿರ್ತಾರೆ. ಹೀಗೆ ವೈಯಕ್ತಿಕ ಜೀವನದಿಂದ ಈ ಜೋಡಿ ಬಹಳವೇ ಚರ್ಚೆಯಲ್ಲಿರುತ್ತೆ. ಹಾರ್ದಿಕ್ ಕುಟುಂಬದ ಜೊತೆ ನತಾಶಾ ಹೊಂದಿಕೊಂಡು ಕೂಡಿ ಬಾಳುವ ವಿಚಾರವನ್ನು ಇನ್ಸ್ಟಾದಲ್ಲಿ ದಂಪತಿ ಅಪ್‌ಲೋಡ್ ಮಾಡುತ್ತಿದ್ದ ಫೋಟೋಗಳು ಸಾಕ್ಷಿ ಹೇಳುತ್ತಿದ್ದವು. ಈ ನಡುವೆಯೇ ದಿಢೀರ್ ಎಂದು ವಿಚ್ಛೇದನದ ಸುದ್ದಿ ತೂರಿಬಂತು. ಇದೀಗ ವಿಚ್ಛೇದನ ಕೈಬಿಟ್ಟಿರುವ ವಿಚಾರವೂ ಚರ್ಚೆಯಾಗುತ್ತಿದೆ..

  • ತಂದೆಯಾಗುತ್ತಿದ್ದಾರೆ ನಟ ವರುಣ್ ಧವನ್: ಪತ್ನಿ ಜೊತೆ ಫೋಟೋ ಹಂಚಿಕೊಂಡ ನಟ

    ತಂದೆಯಾಗುತ್ತಿದ್ದಾರೆ ನಟ ವರುಣ್ ಧವನ್: ಪತ್ನಿ ಜೊತೆ ಫೋಟೋ ಹಂಚಿಕೊಂಡ ನಟ

    ಬಾಲಿವುಡ್ ಖ್ಯಾತ ನಟ ವರುಣ್ ಧವನ್ (Varun Dhawan) ತಂದೆಯಾಗುತ್ತಿದ್ದಾರೆ. ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡು ಈ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಅವರು ಶೇರ್ ಮಾಡಿದ್ದಾರೆ. ತಮ್ಮ ಕುಟುಂಬಕ್ಕೆ ಹಾರೈಕೆ ಇರಲಿ ಎಂದು ಕೇಳಿದ್ದಾರೆ.

    ವರ್ಷದ ಹಿಂದೆ ವರುಣ್ ಧವನ್ ತಮ್ಮ ಬಾಲ್ಯದ ಗೆಳತಿ ನತಾಶಾ ದಲಾಲ್ (Natasha) ಅವರನ್ನು ವಿವಾಹವಾಗಿದ್ದರು. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ವರುಣ್ ತಮ್ಮ ಪತ್ನಿ ನತಾಶಾ ಅವರೊಂದಿಗಿನ ಪೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

    ವರುಣ್ ಮತ್ತು ನತಾಶಾ ಆರನೇ ತರಗತಿಯಿಂದಲೇ ಪರಸ್ಪರ ಪರಿಚಿತರು. ಆದಾದ ಕೆಲ ವರ್ಷಗಳ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಮೊದಲಿಗೆ ಅವರು ಸಂಗೀತ ಕಚೇರಿಯಲ್ಲಿ ಭೇಟಿಯಾಗಿ, ಬಳಿಕ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು. ಅಂತಿಮವಾಗಿ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು.

     

    ವರುಣ್ ತನ್ನ ಬಾಲ್ಯದ ಪ್ರಿಯತಮೆ ನತಾಶಾ ಜೊತೆಗಿನ ಸಂಬಂಧದ ಬಗ್ಗೆ ಯಾರಲ್ಲೂ ಹೇಳಿರಲಿಲ್ಲ. ಆದರೆ, ಕಾಫಿ ವಿತ್ ಕರಣ್ 6 ಕಾರ್ಯಕ್ರಮದಲ್ಲಿ ನಾನು ನತಾಶಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂದು ಹೇಳಿದ್ದರು. ನಂತರ ಮದುವೆ ಆಗಿದ್ದರು.

  • 18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?

    18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?

    ಣ್ಣದ ಬದುಕಿನಲ್ಲಿ ಡಿವೋರ್ಸ್, ಲವ್, ಬ್ರೇಕಪ್ ಎಲ್ಲವೂ ಕಾಮನ್ ಆಗಿದೆ. ಸೆಲೆಬ್ರಿಟಿ ಬದುಕು ತೆರೆಯ ಮೇಲೆ ಚೆಂದ ಕಾಣುವ ಹಾಗೆ, ತೆರೆಹಿಂದಿನ ಬದುಕು ಅಷ್ಟು ಚೆನ್ನಾಗಿರಲ್ಲ. ವೃತ್ತಿರಂಗದಲ್ಲಿ ಗೆದ್ದರು ಕೂಡ, ವೈಯಕ್ತಿಕ ಬದುಕಿನಲ್ಲಿ ಪಲ್ಟಿ ಹೊಡೆದಿರುತ್ತಾರೆ ಎಂಬುದು ಮತ್ತೆ ಪ್ರೂವ್ ಆಗಿದೆ. ಚಿತ್ರರಂಗದಲ್ಲಿ ಸಾಲು ಸಾಲು ಡಿವೋರ್ಸ್ (Divorce) ಸುದ್ದಿಯಿಂದ ಬೆಸತ್ತಿರೋ ಫ್ಯಾನ್ಸ್‌ಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ನಟ ಫರ್ದೀನ್ ಖಾನ್ ಅವರು 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ ಎಂಬ ಸುದ್ದಿ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

    ಸಮಂತಾ(Samantha), ಐಶ್ವರ್ಯ- ಧನುಷ್, ನಿಹಾರಿಕಾ- ಚೈತನ್ಯ ಡಿವೋರ್ಸ್ ನಂತರ ಬಾಲಿವುಡ್ ನಟ ಫರ್ದೀನ್ ಖಾನ್ ಅವರು ತಮ್ಮ 18 ವರ್ಷಗಳ ವೈವಾಹಿಕ ಬದುಕಿಗೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಮೆಗಾಸ್ಟಾರ್ ಪುತ್ರಿ ನಿಹಾರಿಕಾ ಅವರು ತಮ್ಮ ಡಿವೋರ್ಸ್ ಬಗ್ಗೆ ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊರ್ವ ನಟನ ದಾಂಪತ್ಯ ಬದುಕು ಏರುಪೇರಾಗಿದೆ.

    ಫರ್ದೀನ್ ಖಾನ್ (Fardeen Khan) ಮತ್ತು ನತಾಶಾ ಮಾಧ್ವಾನಿ (Natasha Madhvani) ವಿಚ್ಛೇದನ ಪಡೆಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಫರ್ದೀನ್ ಅವರು ಮುಂಬೈನಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ರೆ, ನತಾಶಾ ಮಾಧ್ವಾನಿ ಅವರು ಲಂಡನ್‌ನಲ್ಲಿ ಮಕ್ಕಳ ಜೊತೆ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ. 2005ರಲ್ಲಿ ಫರ್ದೀನ್- ನತಾಶಾ ಮಾಧ್ವಾನಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಈ ಜೋಡಿಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ.

    ‘ನೋ ಎಂಟ್ರಿ’ (No Entry) ಸಿನಿಮಾದ ನಟ ಫರ್ದೀನ್ ಖಾನ್ (Fardeen Khan) ಅವರು ತಮ್ಮ ಪತ್ನಿಗೆ ಯಾವ ವಿಚಾರಕ್ಕೆ ಡಿವೋರ್ಸ್ (Divorce) ನೀಡ್ತಿದ್ದಾರೆ. ಇಬ್ಬರ ನಡುವೆ ಏನಾಗಿದೆ. ಸಮಸ್ಯೆ ಎನು ಎಂಬುದು ತಿಳಿದು ಬಂದಿಲ್ಲ. ಸದ್ಯ ಈ ನ್ಯೂಸ್ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. 18 ವರ್ಷಗಳು ಜೊತೆಯಾಗಿದ್ದು, ಈಗ ಬೇರೆಯಾಗುತ್ತಿರೋದು ಯಾಕೆ ಎಂಬ ಅನುಮಾನ ಅಭಿಮಾನಿಗಳನ್ನ ಕಾಡುತ್ತಿದೆ. ಎಲ್ಲದಕ್ಕೂ ಅಧಿಕೃತ ಘೋಷಣೆ ಆಗುವವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಅತ್ಯುತ್ತಮ ಗಿಫ್ಟ್’ – ಗೆಳತಿಗೆ ಹಾರ್ದಿಕ್ ಪಾಂಡ್ಯ ಧನ್ಯವಾದ

    ‘ಅತ್ಯುತ್ತಮ ಗಿಫ್ಟ್’ – ಗೆಳತಿಗೆ ಹಾರ್ದಿಕ್ ಪಾಂಡ್ಯ ಧನ್ಯವಾದ

    ಮುಂಬೈ: ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ಸಂತಸದಲ್ಲಿದ್ದು, ತಮ್ಮ ಮಗುವಿನ ಜೊತೆ ಕಾಲಕಳೆಯುತ್ತಿದ್ದಾರೆ. ಇದೀಗ ತಮಗೆ ಅತ್ಯುತ್ತಮ ಉಡುಗೊರೆ ನೀಡಿದ್ದಕ್ಕಾಗಿ ತಮ್ಮ ಗೆಳತಿ ನತಾಶಾ ಸ್ಟಾಂಕೋವಿಕ್‍ಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮಗನನ್ನ ಎತ್ತಿಕೊಂಡು ನೋಡುತ್ತಾ ನಗು ಬೀರಿದ ಹಾರ್ದಿಕ್ ಪಾಂಡ್ಯ

    ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್‍ನ ಮಾಜಿ ಸ್ಪರ್ಧಿ ಹಾಗೂ ಡಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿಗೆ ಗಂಡು ಮಗುವಾಗಿದೆ. ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಯಲ್ಲಿ ಗೆಳತಿ ನತಾಶಾ ಜೊತೆಯಿರುವ ಫೋಟೋವನ್ನು ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

    https://www.instagram.com/p/CDVV1ZCF7E0/?utm_source=ig_embed

    ಪಾಂಡ್ಯ ತಮ್ಮ ಗೆಳತಿ ನತಾಶಾ ಗುಲಾಬಿ ಹೂಗುಚ್ಛವನ್ನು ನೀಡಿದ್ದು, ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗೆ “ನನ್ನ ಗುಲಾಬಿಗಾಗಿ ಈ ಗುಲಾಬಿಗಳು” ಎಂದು ಹೇಳುವ ಮೂಲಕ ತಮ್ಮ ಗೆಳತಿ ನತಾಶಾರನ್ನು ಪ್ರೀತಿಯಿಂದ ರೋಸ್ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ “ನನಗೆ ಅತ್ಯುತ್ತಮ ಉಡುಗೊಡೆ ನೀಡಿದ್ದಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CDQx8yCF-SX/?utm_source=ig_embed

    ನತಾಶಾ ಗುರುವಾರ ಜುಲೈ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲಿಗೆ ತಾನು ಗಂಡು ಮಗುವಿನ ತಂದೆಯಾದ ಖುಷಿಯನ್ನು ಪಾಂಡ್ಯ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಮಗೆ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದುಕೊಂಡಿದ್ದರು. ಜೊತೆಗೆ ಪಾಂಡ್ಯ ತನ್ನ ಮಗುವಿನ ಕೈ ಹಿಡಿದುಕೊಂಡಿದ್ದು, ಪುತ್ರನ ಮುಖ ಕಾಣದ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ನಂತರ ಪಾಂಡ್ಯ ತಮ್ಮ ಮಗುವಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು.

    https://www.instagram.com/p/CDZBYk_lrLw/?utm_source=ig_embed

    ಆಸ್ಪತ್ರೆಯಲ್ಲಿ ತಮ್ಮ ಮಗನನ್ನು ಎರಡು ಕೈಗಳಿಂದ ಎತ್ತಿಕೊಂಡಿದ್ದು, ಮಗುವಿನ ಮುಖ ನೋಡುತ್ತಾ ಪಾಂಡ್ಯ ನಗುತ್ತಿದ್ದಾರೆ. ಈ ಫೋಟೋಗೆ “ದೇವರಿಂದ ಆಶೀರ್ವಾದ” ಎಂದು ಬರೆದಿದ್ದು, ನಮಸ್ಕಾರ ಮಾಡುವ ಮತ್ತು ಹಾರ್ಟ್ ಎಮೋಜಿಯನ್ನು ಹಾಕಿ ಖುಷಿಯನ್ನು ವ್ಯಕ್ತಪಡಿಸಿದ್ದರು.

  • ಮಗನನ್ನ ಎತ್ತಿಕೊಂಡು ನೋಡುತ್ತಾ ನಗು ಬೀರಿದ ಹಾರ್ದಿಕ್ ಪಾಂಡ್ಯ

    ಮಗನನ್ನ ಎತ್ತಿಕೊಂಡು ನೋಡುತ್ತಾ ನಗು ಬೀರಿದ ಹಾರ್ದಿಕ್ ಪಾಂಡ್ಯ

    ಮುಂಬೈ: ಟೀ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಹಾರ್ದಿಕ್ ಪಾಂಡ್ಯ ತಮ್ಮ ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್‍ನ ಮಾಜಿ ಸ್ಪರ್ಧಿ ಹಾಗೂ ಡಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿಗೆ ಗುರುವಾರ ಗಂಡು ಮಗುವಾಗಿದೆ. ಗಂಡು ಮಗುವಿನ ತಂದೆಯಾದ ಖುಷಿಯನ್ನು ಪಾಂಡ್ಯ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಮಗೆ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದುಕೊಂಡಿದ್ದರು. ಜೊತೆಗೆ ಪಾಂಡ್ಯ ಮಗುವಿನ ಕೈ ಹಿಡಿದುಕೊಂಡಿದ್ದು, ಪುತ್ರನ ಮುಖ ಕಾಣದ ಫೋಟೋವನ್ನು ಅಪ್ಲೋಡ್ ಮಾಡಿದ್ದರು.

    ಇಂದು ಹಾರ್ದಿಕ್ ಪಾಂಡ್ಯ ತಮ್ಮ ಮಗುವಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮ ಮಗನನ್ನು ಎರಡು ಕೈಗಳಿಂದ ಎತ್ತಿಕೊಂಡಿದ್ದು, ಮಗುವಿನ ಮುಖ ನೋಡುತ್ತಾ ಪಾಂಡ್ಯ ನಗುತ್ತಿದ್ದಾರೆ. ಈ ಫೋಟೋಗೆ “ದೇವರಿಂದ ಆಶೀರ್ವಾದ” ಎಂದು ಬರೆದಿದ್ದು, ನಮಸ್ಕಾರ ಮಾಡುವ ಮತ್ತು ಹಾರ್ಟ್ ಎಮೋಜಿಯನ್ನು ಹಾಕಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ಪಾಂಡ್ಯ ಫೋಟೋ ಅಪ್ಲೋಡ್ ಮಾಡಿದ ಒಂದು ಗಂಟೆಯಲ್ಲಿ 13 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಜೊತೆ ಹಾರ್ದಿಕ್ ಪಾಂಡ್ಯಗೆ ಶುಭಾ ಕೋರುತ್ತಿದ್ದಾರೆ.

    https://www.instagram.com/p/CDVV1ZCF7E0/?igshid=ic8h14s09fe1

    ಬಹು ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಹೊಸ ವರ್ಷದ ಮೊದಲ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

    https://www.instagram.com/p/CDQx8yCF-SX/?igshid=ig4lrbzelwkj

    ಮೇ 31 ರಂದು ಸೋಶಿಯಲ್ ಮೀಡಿಯಾದ ಮೂಲಕ ಹಾರ್ದಿಕ್ ಪಾಂಡ್ಯ ತಾವು ತಂದೆಯಾಗುತ್ತಿರುವ ಬಗ್ಗೆ ರಿವೀಲ್ ಮಾಡಿದ್ದರು. ಈ ಕುರಿತು ಇನ್‍ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದ ಪಾಂಡ್ಯ, “ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಪ್ರಯಾಣವನ್ನು ಹೊಂದಿದ್ದೇವೆ. ಈ ಬಾಂಧವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ” ಎಂದು ಬರೆದುಕೊಂಡಿದ್ದರು.