Tag: natarajan

  • ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಪುಣೆ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಶಿಖರ್‌ ಧವನ್‌ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಸಂತೋಷಗೊಂಡು ಸಂಭ್ರಮಿಸಿ ನಮಸ್ಕರಿಸಲು ಕಾರಣ ಶಿಖರ್‌ ಧವನ್‌ ಹಿಡಿದ ಕ್ಯಾಚ್‌. ಅಪಾಯಕಾರಿ ಆಟಗಾರ ಬೆನ್‌ಸ್ಟೋಕ್ಸ್‌ ಅವರ ಕ್ಯಾಚ್‌ ಹಿಡಿದಿದ್ದಕ್ಕೆ ಸಂಭ್ರಮಿಸಿ ಪಾಂಡ್ಯ ನಮಸ್ಕರಿಸಿದ್ದಾರೆ.

    https://twitter.com/viratian18183/status/1376163494203023367

    ಕ್ಯಾಚ್‌ ಡ್ರಾಪ್‌:
    ಭುವನೇಶ್ವರ್‌ ಕುಮಾರ್‌ ಎಸೆದ 5ನೇ ಓವರಿನಲ್ಲಿ 14 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ ಬಲವಾಗಿ ಬೀಸಿದ್ದರು. ಈ ವೇಳೆ ಮಿಡ್‌ ಆಫ್‌ನಲ್ಲಿದ್ದ ಪಾಂಡ್ಯ ಕ್ಯಾಚ್‌ ಹಿಡಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಾಂಡ್ಯ ಸುಲಭವಾಗಿ ಹಿಡಿಯಬೇಕಿದ್ದ ಕ್ಯಾಚ್‌ ಕೈ ಚೆಲ್ಲಿದರು. ಇದನ್ನು ನೋಡಿ ಆಟಗಾರರ ಜೊತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಟೀಂ ಇಂಡಿಯಾ ಸದಸ್ಯರು ಶಾಕ್‌ ಆದರು.

    https://twitter.com/j_dhillon7/status/1376155566045757440

    ಕಷ್ಟದ ಕ್ಯಾಚ್‌ ಕೈ ಚೆಲ್ಲಿದರೆ ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ ಬಿಟ್ಟದ್ದಕ್ಕೆ ಆಟಗಾರ ಕೈ ತಲೆ ಮೇಲೆ ಹೋಗಿತ್ತು.

    ಕ್ರೀಸಿನಲ್ಲಿ ತಳವುರಲು ಆರಂಭಿಸಿದ್ದ ಬೆನ್‌ಸ್ಟೋಕ್ಸ್‌ ನಟರಾಜ್‌ ಎಸೆದ ಇನ್ನಿಂಗ್ಸ್‌ನ 11ನೇ ಓವರಿನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಬಾಲ್‌ ನೇರವಾಗಿ ಸ್ಕ್ವಾರ್‌ ಲೆಗ್‌ನಲ್ಲಿದ್ದ ಶಿಖರ್‌ ಧವನ್‌ ಕೈ ಸೇರಿತು. ಈ ಮೂಲಕ 35 ರನ್‌(39 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ಸ್ಟೋಕ್ಸ್‌ ಔಟಾದರು. ಸ್ಟೋಕ್ಸ್‌ ಔಟಾಗುತ್ತಿದ್ದಂತೆ ಪಾಂಡ್ಯ ಕೈ ಮುಗಿದು, ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು.

  • ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸಿದ ಕ್ರಿಕೆಟಿಗ ನಟರಾಜನ್

    ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸಿದ ಕ್ರಿಕೆಟಿಗ ನಟರಾಜನ್

    ಚೆನ್ನೈ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಆಸ್ಟ್ರೇಲಿಯಾ ಸರಣಿಯಲ್ಲಿ ತನ್ನ ಬೌಲಿಂಗ್ ದಾಳಿಯಿಂದ ಆಸ್ಟ್ರೇಲಿಯದ  ಬ್ಯಾಟ್ಸ್‌ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಭಾರತದ ಭವಿಷ್ಯದ ಭರವಸೆಯ ವೇಗಿ ಟಿ. ನಟರಾಜನ್ ತನ್ನ ಮುಡಿಯನ್ನು ದೇವರಿಗೆ ಕೊಟ್ಟು ಹರಕೆ ತಿರಿಸಿಕೊಂಡಿದ್ದಾರೆ.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‍ನಲ್ಲಿ ನಟರಾಜನ್ ತನ್ನ ಯಾರ್ಕರ್ ಬೌಲಿಂಗ್ ಮೂಲಕ ಆಸ್ಟ್ರೇಲಿಯಾದಲ್ಲಿ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

    ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೂ ಮುಂಚೆ ತಾನು ಭಾರತ ತಂಡಕ್ಕೆ ಆಯ್ಕೆಯಾದರೆ ಮುರುಗಸ್ವಾಮಿಗೆ ತಲೆಯ ಮುಡಿ ಕೊಡುವುದಾಗಿ ಹರಕೆ ಹೇಳಿಕೊಂಡಿದ್ದರು. ಇದರಂತೆ ನಟರಾಜನ್ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ನಟರಾಜನ್ ಮಧುರೈ ಜಿಲ್ಲೆಯ ಪಳನಿಯ ದಂಡಾಯುಧಪಾಣಿ ದೇವಸ್ಥಾನದಲ್ಲಿರುವ ಮುರುಗಸ್ವಾಮಿಯ ದರ್ಶನ ಮಾಡಿ ಹರಕೆಯ ಪ್ರಕಾರ ತಲೆ ಬೋಳಿಸಿ ಮುಡಿಕೊಟ್ಟಿದ್ದಾರೆ.

    ನಟರಾಜನ್ ಶಿವಗಿರಿ ಪರ್ವತದಲ್ಲಿರುವ ರೋಪ್ ಕಾರ್ ಮೂಲಕ ದೇವಸ್ಥಾನ ಪ್ರವೇಶಿಸಿದರು. ದೇವಾಲಯಕ್ಕೆ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ನಟರಾಜನ್ ಬರುತ್ತಿದ್ದಂತೆ ಅಭಿಮಾನಿಗಳು ದೇವಸ್ಥಾನದಲ್ಲಿ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇತ್ತ ನಟರಾಜನ್ ಭಕ್ತಿಯಿಂದ ದೇವರಿಗೆ ಹರಕೆ ಪೂರೈಸಿ ಸಂತಸ ಪಟ್ಟರು.

  • ಭಾರತದ ಪರ ವಿಶೇಷ ದಾಖಲೆ ನಿರ್ಮಿಸಿದ ನಟರಾಜನ್‌

    ಭಾರತದ ಪರ ವಿಶೇಷ ದಾಖಲೆ ನಿರ್ಮಿಸಿದ ನಟರಾಜನ್‌

    – 5 ವಿಕೆಟ್‌ ನಷ್ಟಕ್ಕೆ ಆಸ್ಟ್ರೇಲಿಯಾ 274 ರನ್‌
    – ಶತಕ ಸಿಡಿಸಿ ತಂಡಕ್ಕೆ ಲಬುಶೇನ್‌ ಆಸರೆ

    ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‌ ನಟರಾಜನ್‌ ಭಾರತದ ಪರ ವಿಶೇಷ ದಾಖಲೆ ಬರೆದಿದ್ದಾರೆ.

    ಒಂದೇ ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ನೆಟ್ ಬೌಲರ್ ನಟರಾಜನ್ ಪಾತ್ರರಾಗಿದ್ದಾರೆ.

    ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಮಿಳುನಾಡು ಮೂಲದ 29 ವರ್ಷದ ನಟರಾಜನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಈಗ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾದ ಕಾರಣ ನಟರಾಜನ್‌ ಬ್ರಿಸ್ಟೇನ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯಕ್ಕೂ ಆಯ್ಕೆ ಆಗಿದ್ದಾರೆ.

    ಡಿ. 2 ರಂದು ಟಿ.ನಟರಾಜನ್ ತಮ್ಮ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. 10 ಓವರ್ ಗಳಲ್ಲಿ 70 ರನ್ ಗಳನ್ನು ನೀಡಿ 2 ವಿಕೆಟ್ ಪಡೆದಿದ್ದರು. ಟಿ-20 ಕ್ರಿಕೆಟ್‌ನಲ್ಲಿ 6 ವಿಕೆಟ್‌ ಪಡೆದಿದ್ದರು.

    ಟೆಸ್ಟ್ ಕ್ರಿಕೆಟ್ ಗೆ ಸ್ವಾಗತ…. ಒಂದೇ ಪ್ರವಾಸದಲ್ಲಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ ಆಡಿದ ಭಾರತದ ಮೊದಲ ಕ್ರಿಕೆಟಿಗ ತಂಗರಸು ನಟರಾಜನ್ ಎಂದು ಬರೆದು ಐಸಿಸಿ ಟ್ವೀಟ್ ಮಾಡಿದೆ.

    ಇಂದಿನ ಪಂದ್ಯದಲ್ಲಿ 20 ಓವರ್‌ ಎಸೆದ ನಟರಾಜನ್‌ 63 ರನ್‌ ನೀಡಿ 2 ವಿಕೆಟ್‌ ಪಡೆದಿದ್ದಾರೆ. ಇಂದು ನಟರಾಜನ್‌ ಜೊತೆ ವಾಷಿಂಗ್ಟನ್‌ ಸುಂದರ್‌ ಟೆಸ್ಟ್‌ ಕ್ಯಾಪ್‌ ಧರಿಸಿದ್ದಾರೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 87 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 274 ರನ್‌ ಗಳಿಸಿದೆ. ಮಾರ್ನಸ್‌ ಲಬುಶೇನ್‌ 108 ರನ್‌(204 ಎಸೆತ, 9 ಬೌಂಡರಿ), ಮ್ಯಾಥ್ಯು ವೇಡ್‌ 45 ರನ್‌(87 ಎಸೆತ, 6 ಬೌಂಡರಿ) ಹೊಡೆದು ಔಟಾಗಿದ್ದಾರೆ. ಕ್ಯಾಮರೂನ್‌ ಗ್ರೀನ್‌ 28 ರನ್‌, ನಾಯಕ ಟೀಮ್‌ ಪೈನೆ 38 ರನ್‌ ಗಳಿಸಿದ್ದು ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ

    ಭಾರತದ ಪರ ಸಿರಾಜ್‌, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಕಿತ್ತಿದ್ದಾರೆ.

  • 22 ಬಾಲಿಗೆ 42 ರನ್ – ಪಾಂಡ್ಯ ಸ್ಫೋಟಕ ಆಟ,  ಭಾರತಕ್ಕೆ ಸರಣಿ

    22 ಬಾಲಿಗೆ 42 ರನ್ – ಪಾಂಡ್ಯ ಸ್ಫೋಟಕ ಆಟ, ಭಾರತಕ್ಕೆ ಸರಣಿ

    – 6 ವಿಕೆಟ್‍ಗಳಿಂದ ಎರಡನೇ ಪಂದ್ಯ ಗೆದ್ದು ಬೀಗಿದ ಇಂಡಿಯಾ

    ಸಿಡ್ನಿ: ಇಂದು ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತ ತಂಡ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.

    ಇಂದು ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಾಯಕ ಮ್ಯಾಥ್ಯೂ ವೇಡ್ ಮತ್ತು ಸ್ಟೀವ್ ಸ್ಮಿತ್ ಅವರು ಭರ್ಜರಿ ಬ್ಯಾಟಿಂಗ್‍ನಿಂದ ನಿಗಧಿತ 20 ಓವರಿನಲ್ಲಿ ಭರ್ಜರಿ 194 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ತಂಡ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ ಎರಡು ಬಾಲ್ ಉಳಿದಂತೆ 195 ರನ್ ಹೊಡೆದು ಜಯ ಸಾಧಿಸಿತು.

    ಪಾಂಡ್ಯ ಸ್ಫೋಟಕ
    ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಆಗಿ ಬ್ಯಾಟ್ ಬೀಸಿದರು. ಕೊಹ್ಲಿ ಔಟ್ ಆದ ಬಳಿಕ ಬ್ಯಾಟಿಂಗ್ ಬಂದ ಪಾಂಡ್ಯ, 22 ಬಾಲಿನಲ್ಲಿ 3 ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿದರು. ಕೊನೆಯ ಓವರಿನಲ್ಲಿ 14 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವನ್ನು ತಂದಿಟ್ಟರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು.

    ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ ಐದನೇ ಓವರ್ ಎರಡನೇ ಬಾಲಿಗೆ 22 ಬಾಲಿಗೆ 30 ರನ್ ಸಿಡಿಸಿದ್ದ ಕೆಎಲ್ ರಾಹುಲ್ ಅವರು ಆಂಡ್ರ್ಯೂ ಟೈ ಅವರಿಗೆ ಔಟ್ ಅದರು. ಈ ವೇಳೆ 9 ಓವರಿಗೆ ಇಂಡಿಯಾ ಒಂದು ವಿಕೆಟ್ ಕಳೆದುಕೊಂಡು 81 ರನ್ ಗಳಸಿತ್ತು.

    ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದ ಶಿಖರ್ ಧವನ್ ಅವರು 36 ಬಾಲಿಗೆ 52 ರನ್ ಸಿಡಿಸಿ ಔಟ್ ಅದರು. ಶಿಖರ್ ಧವನ್ ನಂತರ ಬಂದು ಭರ್ಜರಿಯಾಗಿ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 10 ಬಾಲಿಗೆ 15 ರನ್ ಹೊಡೆದು ಔಟ್ ಅದರು. ನಂತರ ವಿರಾಟ್ ಕೊಹ್ಲಿಯವರು ಕೂಡ 24 ಬಾಲಿಗೆ 40 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

    ಆ ನಂತರ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟಕ್ಕೆ ಮುಂದಾಗಿ ಭಾರತವನ್ನು ಗೆಲುವಿನ ಹಂತಕ್ಕೆ ತಂದರು. ಕೊನೆಯ ಎರಡು ಓವರಿನಲ್ಲಿ 26 ರನ್‍ಗಳ ಅವಶ್ಯಕತೆ ಇತ್ತು. ಆಗ ಹಾರ್ದಿಕ್ ಪಾಂಡ್ಯ ಎರಡು ಬೌಂಡರಿ ಸಿಡಿಸಿ 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 14 ರನ್ ಬೇಕಿತ್ತು. ಆ ಓವರಿನಲ್ಲಿ ಎರಡು ಸಿಕ್ಸರ್ ಸಿಡಿಸಿದ ಪಾಂಡ್ಯ ಇನ್ನೂ ಎರಡು ಬಾಲ್ ಉಳಿದಂತೆ ಭಾರತಕ್ಕೆ ಗೆಲುವು ತಂದಿತ್ತರು.

  • ಅಸೀಸ್ ವಿರುದ್ಧ ಟಿ-20 ಸರಣಿ ವಶಪಡಿಸಿಕೊಳ್ಳಲು ಭಾರತಕ್ಕೆ 195ರನ್‍ಗಳ ಗುರಿ

    ಅಸೀಸ್ ವಿರುದ್ಧ ಟಿ-20 ಸರಣಿ ವಶಪಡಿಸಿಕೊಳ್ಳಲು ಭಾರತಕ್ಕೆ 195ರನ್‍ಗಳ ಗುರಿ

    ಸಿಡ್ನಿ: ಇಂದು ನಡೆಯುತ್ತಿರುವ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇಂಡಿಯಾಗೆ 195ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಮ್ಯಾಥ್ಯೂ ವೇಡ್ ಮತ್ತು ಡಿ ಆರ್ಸಿ ಶಾರ್ಟ್ ಉತ್ತಮ ಆರಂಭ ನೀಡಿದರು. ಆದರೆ 9 ರನ್ ಗಳಸಿದ್ದ ಡಿ ಆರ್ಸಿ ಶಾರ್ಟ್ ಟಿ ನಟರಾಜನ್ ಅವರ ಬೌಲಿಂಗ್‍ನಲ್ಲಿ ಐಯ್ಯರ್ ಗೆ ಕ್ಯಾಚ್ ನೀಡಿ ಹೊರನಡೆದರು. ಇದಾದ ನಂತರ ಭರ್ಜರಿಯಾಗಿ ಬ್ಯಾಟ್ ಬೀಸಿದ ವೇಡ್ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಕ್ಯಾಚ್ ಬಿಟ್ಟು ಕೊಹ್ಲಿ ಹೊಡೆದ ರನ್ ಔಟ್‍ಗೆ ವೇಡ್ 58 ರನ್‍ ಗಳಸಿ ಔಟ್ ಆದರು.

    ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರ ಆಟಕ್ಕೆ ಮುಂದಾದರು. ಫೋರ್ ಸಿಕ್ಸರ್ ಗಳ ಸುರಿಮಳೆಗೈಯುತ್ತಿದ್ದ ಈ ಜೋಡಿಗೆ 12ನೇ ಓವರ್ ನಾಲ್ಕನೇ ಬಾಲಿನಲ್ಲಿ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. 13 ಬಾಲಿಗೆ 22 ರನ್ ಗಳಸಿದ್ದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮ್ಯಾಕ್ಸ್ ವೆಲ್ ಅವರನ್ನು ಔಟ್ ಮಾಡಿದರು. ಈ ನಂತರ 38 ಬಾಲಿಗೆ 46 ರನ್ ಸಿಡಿಸಿದ್ದ ಸ್ಟೀವನ್ ಸ್ಮಿತ್ ಚಹಲ್ ಅವರ ಬೌಲಿಂಗ್‍ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ಹೊರನಡೆದರು.

    18ನೇ ಓವರಿನಲ್ಲಿ ದಾಳಿಗೆ ಬಂದ ನಟರಾಜನ್ ಅವರು ಮೂರನೇ ಬಾಲಿನಲ್ಲಿ 18 ಬಾಲಿಗೆ 26 ರನ್ ಗಳಿಸಿದ್ದ ಮೊಯಿಸಸ್ ಹೆನ್ರಿಕ್ಸ್ ಅವರನ್ನು ಬಲಿ ಪಡೆದುಕೊಂಡರು. ಆ ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಒಂದು ಹಂತದಲ್ಲಿ 200 ರನ್ ಗಡಿ ದಾಟುವ ಸನಿಹದಲ್ಲಿದ್ದ ಆಸೀಸ್ ಭಾರತ ಬಿಗಿ ಬೌಲಿಂಗ್ ದಾಳಿಯಿಂದ 194 ರನ್ ಗಳಸಿತು.

  • ಯಾರ್ಕರ್‌ನೊಂದಿಗೆ ಎಬಿಡಿ ವಿಕೆಟ್ ಕಿತ್ತ ನಟರಾಜನ್‍ಗೆ ಗುಡ್ ನ್ಯೂಸ್

    ಯಾರ್ಕರ್‌ನೊಂದಿಗೆ ಎಬಿಡಿ ವಿಕೆಟ್ ಕಿತ್ತ ನಟರಾಜನ್‍ಗೆ ಗುಡ್ ನ್ಯೂಸ್

    ಅಬುಧಾಬಿ: ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದ ಸನ್‍ರೈಸರ್ಸ್ ಆಟಗಾರ ನಟರಾಜನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 29 ವರ್ಷದ ಎಡಗೈ ವೇಗಿ ಟಿ.ನಟರಾಜನ್ ಪತ್ನಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಯಾರ್ಕರ್ ಎಸೆತದ ಮೂಲಕ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದ ನಟರಾಜನ್ ಪಂದ್ಯಕ್ಕೆ ತಿರುವು ನೀಡಿದ್ದರು. ಬೆಂಗಳೂರು ಪರ ಏಕಾಂಗಿ ಹೋರಾಟ ಮಾಡುತ್ತಿದ್ದ ಎಬಿಡಿ ಔಟಾಗುತ್ತಿದಂತೆ ಭಾರೀ ಸ್ಕೋರ್ ಗಳಿಸಿರುವ ಅವಕಾಶವನ್ನು ತಂಡ ಕಳೆದುಕೊಂಡಿತ್ತು.

    ಪಂದ್ಯದ ಬಳಿಕ ಮಾತನಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ನಟರಾಜನ್ ಹಾಗೂ ಅವರ ಪತ್ನಿಗೆ ಶುಭಾಶಯ ಕೋರಿದ್ದರು. ನಟರಾಜನ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟರಾಜನ್ ಮಗು ಜನಿಸಿದ ಸಂತಸದಲ್ಲಿದ್ದಾರೆ. ಅವರಿಗೆ ಫೈನಲ್ ಪಂದ್ಯಕ್ಕೂ ಮುನ್ನ ವಿಶೇಷ ಗಿಫ್ಟ್ ಲಭಿಸಿದೆ ಎಂದು ವಾರ್ನರ್ ತಿಳಿಸಿದ್ದರು.

    ತಮಿಳುನಾಡಿನ ಚೆನ್ನೈನಿಂದ ಸುಮಾರು 340 ಕಿಮೀ ದೂರದ ಸೇಲಂ ಜಿಲ್ಲೆಯ ಸಣ್ಣ ಹಳ್ಳಿ ಚೆನ್ನಪ್ಪಂಪಟ್ಟಿ ಗ್ರಾಮದವರು. ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಅಲ್ಲಿಯೇ ತಮ್ಮ ಬೌಲಿಂಗ್ ಕೌಶಲ್ಯಗಳನ್ನು ಮೆರೆಗುಗೊಳಿಸಿದ್ದರು. ಉಳಿದಂತೆ ನಟರಾಜನ್ ತಾಯಿ ಹಾಗೂ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ನಟರಾಜನ್ ಅವರನ್ನು  ಬಳಿಕ ಸನ್‍ರೈಸರ್ಸ್ ಹೈದಾರಾಬಾದ್ ತಂಡ ಖರೀದಿ ಮಾಡಿತ್ತು. ಸದ್ಯ ನಟರಾಜನ್ ಯಾರ್ಕರ್ ಗೆ ಫಿದಾ ಆಗಿರುವ ಕ್ರಿಕೆಟ್ ವಿಶ್ಲೇಷಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆತನನ್ನು ಯಾರ್ಕರ್ ನಟರಾಜನ್ ಎಂದು ಕರೆದರೆ ಉತ್ತಮವಾಗಿರುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ.

  • ಶಶಿಕಲಾ ಪತಿ ನಟರಾಜನ್ ನಿಧನ

    ಶಶಿಕಲಾ ಪತಿ ನಟರಾಜನ್ ನಿಧನ

    ಚೆನ್ನೈ: ಎಐಎಡಿಎಂಕೆ ಮುಖ್ಯಸ್ಥೆ ವಿಕೆ ಶಶಿಕಲಾ ಪತಿ ನಟರಾಜನ್ ನಿಧನರಾಗಿದ್ದಾರೆ.

    ಅನಾರೋಗ್ಯದ ಕಾರಣ ಮಾರ್ಚ್ 16 ರಂದು ನಟರಾಜನ್ ಚೆನ್ನೈನ ಗ್ಲೆನೀಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಬಹುಅಂಗಾಂಗ ವೈಫಲ್ಯದಿಂದ ಸೋಮವಾರ ರಾತ್ರಿ 1.30ರ ವೇಳೆಗೆ ನಟರಾಜನ್ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

    ಶಶಿಕಲಾ ಆಗಮನದ ಬಳಿಕ ಅಂತ್ಯಸಂಸ್ಕಾರ ನಡೆಯಲಿದ್ದು, ರಾಮಚಂದ್ರ ಆಸ್ಪತ್ರೆಯಲ್ಲಿ ನಟರಾಜನ್ ಮೃತದೇಹ ಸಂರಕ್ಷಣೆ ಮಾಡಲಾಗಿದೆ. ಶಶಿಕಲಾ ಈಗಾಗಲೇ ಪೆರೋಲ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

    ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.