Tag: Nasser Hussain

  • ದಲಿತರ ಮಕ್ಕಳು, ಮುಸ್ಲಿಮ್‌ ಮಹಿಳೆಯರು ಶಿಕ್ಷಣದಿಂದ ವಂಚಿತವಾಗಬಹುದಾದ ಸೂಚನೆಯಿದು: ಹನುಮಂತಯ್ಯ

    ದಲಿತರ ಮಕ್ಕಳು, ಮುಸ್ಲಿಮ್‌ ಮಹಿಳೆಯರು ಶಿಕ್ಷಣದಿಂದ ವಂಚಿತವಾಗಬಹುದಾದ ಸೂಚನೆಯಿದು: ಹನುಮಂತಯ್ಯ

    ನವದೆಹಲಿ: ದಲಿತರ ಮಕ್ಕಳು ಮತ್ತು ಮುಸ್ಲಿಮ್‌ ಮಹಿಳೆಯರು ಶಿಕ್ಷಣದಿಂದ ವಂಚಿತವಾಗಬಹುದಾದ ಸೂಚನೆಯಿದು ಎಂದು ಸಂಸದ ಎಲ್‌ ಹನುಮಂತಯ್ಯ ಕಳವಳ  ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕಾಂಗ್ರೆಸ್‌ ಸಂಸದರಾದ ಎಲ್‌ ಹನುಮಂತಯ್ಯ, ನಾಸೀರ್‌ ಹುಸೇನ್‌, ಮಾಜಿ ಸಚಿವ ಆರ್‌.ಬಿ ತಿಮ್ಮಾಪುರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನೀಲಿ ಶಾಲು ಹಾಕಿ ದಲಿತ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಹೀಗೆ ಎಲ್ಲರೂ ಅವರವರ ಧರ್ಮ ಲಾಂಛನ ಹಾಕಿಕೊಂಡು ಬರಲು ಶುರು ಮಾಡಿದ್ರೆ ನಮ್ಮ ಶಿಕ್ಷಣ ಎಲ್ಲಿಗೆ ತಲುಪುತ್ತದೆ? ವಿವಾದವನ್ನು ಆರಂಭದಲ್ಲಿ ತಡೆಯಬೇಕಿತ್ತು. ಬಿಜೆಪಿ ಇದರ ನೈತಿಕ ಹೊಣೆ ಹೊರಬೇಕು ಎಂದು ಹೇಳಿದರು.

    ಕರಾವಳಿ ಬಲಪಂಥಿಯ ರಾಜಕಾರಣದ ಪ್ರಯೋಗ ಶಾಲೆ. ಅಲ್ಲಿಂದ ಬೇರೆ ಜಿಲ್ಲೆಗಳಿಗೆ ಈಗ ಹರಡುತ್ತಿದೆ. ಈಗ ಶಾಂತಿ ಸಂಧಾನ ಸಭೆಗಳನ್ನು ನಡೆಸಿ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರಿಗೆ ತಿಳುವಳಿಕೆ ನೀಡಬೇಕು ಎಂದು ಹನುಮಂತಯ್ಯ ಆಗ್ರಹಿಸಿದರು.

    ಹಿಜಬ್‌ ಧಾರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಇದು ಕಳೆದು ಒಂದು ವಾರದಿಂದ ವಿವಾದ ಆಗಿರೋದ್ಯಾಕೆ ಎನ್ನುವುದು ಪ್ತಶ್ನಿಸಿಕೊಳ್ಳಬೇಕಿದೆ. ಸಂವಿಧಾನ ಧರ್ಮ ಪಾಲನೆಗೆ ಅವಕಾಶ ನೀಡಿದೆ. ಇನ್ನೊಂದು ಧರ್ಮಕ್ಕೆ ಧಕ್ಕೆ ಆಗದಂತೆ ಧರ್ಮಾಚರಣೆಗೆ ಅವಕಾಶ ಇದೆ. ಆದರೆ ಈ ವಿವಾದಕ್ಕೆ ಕಾರಣಕ್ಕೆ ರಾಜಕೀಯ ಹಿತಾಸಕ್ತಿ ಇದೆ. ಒಡೆದು ಆಳುವ ನಾಯಕರು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
    ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ರೆ ಇಡೀ ರಾಜ್ಯದ ಜನರಿಗೆ ಹಿಜಬ್ ಹಾಕಿಸುತ್ತಾರೆ: ಸುನಿಲ್ ಕುಮಾರ್

    ಮಕ್ಕಳಲ್ಲಿ ತಿಳುವಳಿಕೆ ಮಟ್ಟ ಕಡಿಮೆಯಿದ್ದು ಹಿಜಬ್‌ ಧರಿಸಿದ್ರೆ ನಾವು ಶಾಲು ಧರಿಸುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಇದರ ಹಿಂದೆ ದೊಡ್ಡ ಚಿತಾವಣೆ ಇದೆ. ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತಬಾರದು. ಸಿಖ್ಬರ್‌ ಟರ್ಬನ್‌ ಧರಿಸಬಾರದು. ಹಿಂದೂಗಳು ಮಾಂಗಲ್ಯ, ಬಿಂದಿ, ಬಳೆ ಹಾಕಿದವರು ಶಾಲೆ ಬರಬಾರದು ಎಂದು ಶುರುವಾದರೆ ಏನು ಆಗಬಹುದು? ಹಿಜಬ್‌ ಒಂದು ಮುನ್ಸೂಚನೆ. ಇದು ದೇಶದ ಸಮಗ್ರತೆಗೆ ದೊಡ್ಡ ಪೆಟ್ಟು ನೀಡಲಿದೆ ಎಂದರು. ದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ಪ್ರಕರಣ ಕೋರ್ಟ್‌ನಲ್ಲಿದ್ದು ಕೋರ್ಟ್ ಆದೇಶಕ್ಕೆ ನಾವೆಲ್ಲ ಬದ್ಧ. ಅಲ್ಲಿಯವರೆಗೂ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆ ಗಮನಿಸಬೇಕು. ಕೆಲವು ಸಂಸದರು ಶಾಸಕರು ದೇಶ ಒಡೆಯುವ ಮಾತುಗಳನ್ನು ಆಡುತ್ತಿದ್ದಾರೆ. ರಾಜಕಾರಣಿಗಳು ಕೂಡಲೇ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

  • ‘ಧೋನಿಯಂತಹ ಆಟಗಾರರು ಅನೇಕ ತಲೆಮಾರುಗಳ ಬಳಿಕ ಬರುತ್ತಾರೆ’

    ‘ಧೋನಿಯಂತಹ ಆಟಗಾರರು ಅನೇಕ ತಲೆಮಾರುಗಳ ಬಳಿಕ ಬರುತ್ತಾರೆ’

    – ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ

    ಲಂಡನ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಇಂಗ್ಲೆಂಡ್‍ನ ಮಾಜಿ ನಾಯಕ, ನಿರೂಪಕ ನಾಸಿರ್ ಹುಸೇನ್ ಮನವಿ ಮಾಡಿಕೊಂಡಿದ್ದಾರೆ.

    ಮಾಧ್ಯಮ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಎಂ.ಎಸ್.ಧೋನಿ ಒಮ್ಮೆ ನಿವೃತ್ತಿ ಘೋಷಿಸಿ ಬಿಟ್ಟರೆ ಅವರು ಹಿಂತಿರುಗುವುದಿಲ್ಲ. ಅವರಂತಹ ಆಟಗಾರರು ಅನೇಕ ತಲೆಮಾರುಗಳ ನಂತರ ಬರುತ್ತಾರೆ. ಧೋನಿ ಅವರನ್ನು ನಾನು ಗಮನಿಸಿದ ಪ್ರಕಾರ ಅವರು ಇನ್ನೂ ಭಾರತೀಯ ಕ್ರಿಕೆಟ್‍ಗೆ ಸಾಕಷ್ಟು ಕೊಡುಗೆ ನೀಡಬಲ್ಲರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ಧೋನಿ ಒಂದು ಅಥವಾ ಎರಡು ಬಾರಿ ಗುರಿಯನ್ನು ಬೆನ್ನಟ್ಟಲಿಲ್ಲ ಎಂಬುದು ನಿಜ. ವಿಶೇಷವಾಗಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾಗೆ ಆಗಿದೆ. ಆದರೆ ಅವರಿಗೆ ಇನ್ನೂ ಪ್ರತಿಭೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಕೇಳಿಕೊಂಡರು.

    ಇಷ್ಟು ಸುದೀರ್ಘ ವಿರಾಮದ ನಂತರ ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳುವುದು ಸುಲಭವಲ್ಲ ಎಂದು ಸುನಿಲ್ ಗವಾಸ್ಕರ್, ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್ ಅವರಂತಹ ಅನೇಕ ಟೀಂ ಇಂಡಿಯಾದ ಪ್ರಮುಖ ಮಾಜಿ ಆಟಗಾರರು ಹೇಳಿದ್ದಾರೆ. ಆದರೆ 1999ರಿಂದ 2003ರವರೆಗೆ ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಹುಸೇನ್ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಎಂ.ಎಸ್.ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ. ಇದು ಪ್ರತಿಯೊಬ್ಬ ಆಟಗಾರನಿಗೂ ಅನ್ವಯಿಸುತ್ತದೆ. ಧೋನಿಗೆ ಅವರ ಮಾನಸಿಕ ಸ್ಥಿತಿಯ ಅರಿವಿದೆ ಮತ್ತು ಅಂತಿಮವಾಗಿ ಆಯ್ಕೆದಾರರು ಅವರನ್ನು ಕೈಬಿಡಬಾರದು ಎಂದು ಹುಸೇನ್ ಹೇಳಿದ್ದಾರೆ.

    ಧೋನಿ ಕಮ್‍ಬ್ಯಾಕ್‍ಗೆ ಐಪಿಎಲ್ ಹೊಡೆತ:
    ಧೋನಿ ಕಳೆದ ವರ್ಷ ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿತ್ತು. ಅಂದಿನಿಂದ ಧೋನಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ಅವರನ್ನು ಒಪ್ಪಂದದ ಪಟ್ಟಿಯಿಂದ ಕೈಬಿಟ್ಟಿತ್ತು. ಅಂದಿನಿಂದ ಅವರ ನಿವೃತ್ತಿಯ ಬಗ್ಗೆ ಉಹಾಪೋಹಗಳು ಕೇಳಿ ಬಂದಿದ್ದವು. ಅದೇ ಸಮಯದಲ್ಲಿ ಎಂಎಸ್‍ಡಿ ಮರಳುವ ಏಕೈಕ ದಾರಿಯೆಂದರೆ ಐಪಿಎಲ್ ಆಗಿತ್ತು. ಆದರೆ ಅದು ಕೂಡ ಕೊರೊನಾ ವೈರಸ್‍ನಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ. ಬಿಸಿಸಿಐ ಈಗಾಗಲೇ ಏಪ್ರಿಲ್ 15 ರವರೆಗೆ ಮುಂದೂಡಿದೆ. ಈಗ ಏ.30ರವರೆಗೆ ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ಐಪಿಎಲ್ ನಡೆಯುವುದು ಅನುಮಾನ.

    ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಧೋನಿ ತಂಡಕ್ಕೆ ಮರಳುವುದು ಐಪಿಎಲ್‍ನಲ್ಲಿ ಅವರು ತೋರುವ ಪ್ರದರ್ಶನದ ಮೇಲೆ ಮಾತ್ರ ನಿರ್ಧಾರವಾಗುತ್ತದೆ ಎಂದು ಹೇಳಿದ್ದರು.