Tag: Nasir Ahmed Son

  • ಪೊಲೀಸರ ಮೇಲೆ ಕಾಂಗ್ರೆಸ್ ಎಂಎಲ್‍ಸಿ ಪುತ್ರನಿಂದ ಹಲ್ಲೆ

    ಪೊಲೀಸರ ಮೇಲೆ ಕಾಂಗ್ರೆಸ್ ಎಂಎಲ್‍ಸಿ ಪುತ್ರನಿಂದ ಹಲ್ಲೆ

    – ಗೆಳೆಯರ ಜೊತೆ ಸೇರಿ ಗೂಂಡಾಗಿರಿ

    ಬೆಂಗಳೂರು: ಕಾಂಗ್ರೆಸ್ ಎಂಎಲ್‍ಸಿ ನಾಸೀರ್ ಅಹ್ಮದ್ ಪುತ್ರ ಫಯಾಜ್ ಅಹ್ಮದ್ ಮತ್ತು ಆತನ ಗೆಳೆಯರು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

    ಭಾನುವಾರ ತಡರಾತ್ರಿ ಮದ್ಯ ಸೇವಿಸಿ ಫಯಾಜ್ ಅಹ್ಮದ್ ಮತ್ತು ಆತನ ಗೆಳೆಯರಾದ ಇಮ್ರಾನ್ ಶರೀಫ್, ಜೇನ್ ಶರೀಪ್ ಕಾರ್ ಚಲಾಯಿಸುತ್ತಿದ್ದರು. ನಗರದ ಹೆಬ್ಬಾಳದದ ಬಳಿಯ ಬಿಎಂಟಿಸಿ ಡಿಪೋ ಬಳಿ ಪೊಲೀಸರು ಕಾರ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಫಯಾಜ್ ಆ್ಯಂಡ್ ಗ್ಯಾಂಗ್ ಹಲ್ಲೆಗೆ ಮುಂದಾಗಿದೆ.

    ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದು, ರಹಸ್ಯ ಸ್ಥಳದಲ್ಲಿರಿಸಿದ್ದಾರೆ. ಠಾಣೆಗೆ ಹಿರಿಯ ಅಧಿಕಾರಿಗಳು ಬಂದ ಕೂಡಲೇ ಸ್ಟೇಶನ್ ಗೆ ಮೂವರನ್ನ ಕರೆ ತರಲಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.